ರಿಷಿ ಪಿಎಂ ಆಯ್ಕೆ: ಭಾರತೀಯರಲ್ಲಿ ಹೊಸ ನಿರೀಕ್ಷೆ

Team Udayavani, Oct 25, 2022, 5:30 AM IST

ರಿಷಿ ಪಿಎಂ ಆಯ್ಕೆ: ಭಾರತೀಯರಲ್ಲಿ ಹೊಸ ನಿರೀಕ್ಷೆ

ಅವರ್ಣನೀಯ ಅನುಭವ ಭಾರತ ಮೂಲದವರಾದ ರಿಷಿ ಅವರು ಯುನೈಟೆಡ್‌ ಕಿಂಗ್‌ಡಮ್‌ನ ಪ್ರಧಾನಿಯಾಗಿ ಆಯ್ಕೆಯಾಗುತ್ತಿರುವುದನ್ನು ನೋಡುವುದೇ ಅವರ್ಣನೀಯ ಅನುಭವ. ದೀಪಾವಳಿಯ ಪರ್ವಕಾಲದಲ್ಲೇ ಅವರು ಈ ಹುದ್ದೆಗೆ ಆಯ್ಕೆಯಾಗುತ್ತಿರುವುದು ಇನ್ನೂ ವಿಶೇಷ. ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿರುವ ಘೋಷಣೆಯು ಇಲ್ಲಿರುವ ಬ್ರಿಟಿಷ್‌-ಏಷ್ಯನ್‌ ಸಮುದಾಯಕ್ಕೊಂದು ಹೊಸ ಆಶಾಕಿರಣವನ್ನು ಮೂಡಿಸಿದೆ ಎನ್ನಬಹುದು, ಕನ್ನಡಿಗರು-ಯುಕೆ ಸಂಘಟನೆ ಹಾಗೂ ಎಲ್ಲ ಬ್ರಿಟಿಷ್‌ ಕನ್ನಡಿಗ ಸಮುದಾಯದ ಪರವಾಗಿ ರಿಷಿ ಅವರನ್ನು ಅಭಿನಂದಿಸುತ್ತೇನೆ.
– ಗಣಪತಿ ಭಟ್ , ಅಧ್ಯಕ್ಷರು,
ಕನ್ನಡಿಗರು ಯುಕೆ ಲಂಡನ್‌,

ಭಾರತೀಯರ ಹೆಮ್ಮೆಯ ಕ್ಷಣ
ಲಂಡನ್‌ನಲ್ಲಿದ್ದು ಭಾರತೀಯನಾಗಿ ನನಗೆ ವರ್ಣಿಸಲಾಗದ ಸಂದರ್ಭ. ಎಲ್ಲ ಭಾರತೀಯರ ಹೆಮ್ಮೆಯ ಕ್ಷಣ. ಇತಿಹಾಸದಲ್ಲೇ ಅತಿ ಕಿರಿಯ, ಭಾರತೀಯ ಮೂಲದ ಮೊದಲ ಪ್ರಧಾನಿ ಆಗಿ ಆಯ್ಕೆಯಾಗುವ ಮೂಲಕ ರಿಷಿ ಅವರು ಭಾರತೀಯರು ಅವಕಾಶ ಇದ್ದಲ್ಲಿ ಸಾಧಿಸಿ ತೋರಿಸಬಲ್ಲರು ಎಂದು ನಿರೂಪಿಸಿದವರು. ಈ ಮೂಲಕ ಬ್ರಿಟಿಷರ ದಾಸ್ಯದಲ್ಲಿದ್ದ ಭಾರತ ಎಂಬ ಗಾಜಿನ ಆವರಣದ ಕ್ಲೀಷೆ ಮಾತಿನಿಂದ ಹೊರಬಂದು ಬ್ರಿಟಿಷರನ್ನೇ ಆಳಿದ ಭಾರತೀಯ ಎಂಬ ನವ ಇತಿಹಾಸ ಬರೆಯುವವರು. ಈ ಹಿಂದೆ ಭಾರತೀಯರು ಎಂಪಿಗಳಾಗಿದ್ದರೂ ಪ್ರಧಾನಿ ಹುದ್ದೆಯ ಸನಿಹಕ್ಕೂ ಹೋಗಿರಲಿಲ್ಲ. ರಿಷಿ ಆ ನಿಟ್ಟಿನಲ್ಲಿ ಸ್ವರ್ಣಾಕ್ಷರದ ದಾಖಲೆ ಬರೆದಿದ್ದಾರೆ.
-ಪವನ್‌ ಕುಮಾರ್‌ ಮೂಡ್ಲಕಟ್ಟೆ
ಲಂಡನ್‌ನಲ್ಲಿ ಐಟಿ ಉದ್ಯೋಗಿ

ಅನಿವಾಸಿ ಭಾರತೀಯರಿಗೆ ಹೆಮ್ಮೆ
ಗೌರವಾನ್ವಿತ ಸಂಸದ ರಾದ ರಿಷಿ ಸುನಕ್‌ ರವರು ಪ್ರಧಾನಿ ಯಾಗಿರುವುದು ಹೆಮ್ಮೆಯ ವಿಚಾರ .ಬ್ರಿಟನ್‌ ರಾಜಕಾರಣವನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ.ಭಾರತೀಯ ಮೂಲ ಎಂಬ ಮಾತ್ರಕ್ಕೆ ರಿಷಿ ಯವರನ್ನು ಕಡೆಗಣಿಸದೆ ಇಂದು ಪ್ರಧಾನಿಯಾಗಿ ಆಯ್ಕೆಯಾಗಲು ಇಲ್ಲಿನ ಪ್ರಜಾ ಪ್ರಭುತ್ವ ವ್ಯವಸ್ಥೆ ಕಲ್ಪಿಸಿದೆ.ನಾನು ಅವರನ್ನು ಹಲವು ಸಲ ಭೇಟಿಯಾಗಿ ಮಾತನಾಡಿದ್ದೇನೆ. ಭಾರತೀಯ ಮೂಲದವರೆಂಬ ಮಾತ್ರಕ್ಕೆ ಅವರಿಂದ ಭಾರತ ಏನನ್ನು ಅಪೇಕ್ಷಿಸಬಾರದು. ಆದರೆ ರಾಜತಾಂತ್ರಿಕವಾಗಿ ಭಾರತ ಮತ್ತು ಬ್ರಿಟನ್‌ ದೇಶಗಳ ವ್ಯಾವಹಾರಿಕ ಹಾಗೂ ಸಾಂಸ್ಕೃತಿಕ ಪುನಶ್ಚೇತನಕ್ಕೆ ವಿಫ‌ುಲವಾದ ಅವಕಾಶ ಖಂಡಿತ ಇದೆ. ಇದನ್ನು ಎರಡು ರಾಷ್ಟ್ರಗಳ ನಾಯಕರು ಸರಿಯಾಗಿ ಉಪಯೋಗಿಸಿಕೊಳ್ಳಬೇಕು.
-ಕುಮಾರ್‌ ಕುಂಟಿಕಾನಮಠ
ಮಾಜಿ ಕೌನ್ಸಿಲರ್‌, ಫ್ಲೀಟ್‌ ಟೌನ್‌ ಕೌನ್ಸಿ
ಯುನೈಟೆಡ್‌ ಕಿಂಗ್‌ಡಮ್‌

ಕತ್ತಲೆ ಕಳೆಯಲಿದೆ
ಯುಕೆ ಈಗ ಆರ್ಥಿಕ ನಿರ್ವಹಣೆಯ ಸಂಕಷ್ಟದಲ್ಲಿದೆ. ದೀಪಾವಳಿ ಸಂದರ್ಭದಲ್ಲಿ ಆಯ್ಕೆಯಾದ ಮೊದಲ ಭಾರತೀಯ ಮೂಲದ, ಮೊದಲ ಹಿಂದೂ ಪ್ರಧಾನಿ ರಿಷಿ ಬ್ರಿಟನ್‌ನ ಆರ್ಥಿಕ ಕತ್ತಲೆಯನ್ನು ಕಳೆದು ಸುಧಾರಣೆಯ ದೀಪ ಬೆಳಗಲಿದ್ದಾರೆ ಎಂದು ಎಲ್ಲರ ನಂಬಿಕೆ. ತಂತ್ರಜ್ಞಾನ ಆಧಾರಿತ ಸುಧಾರಣೆಯ ಅರಿವಿರುವ ಅವರಿಂದ ಇದು ಸಾಧ್ಯ. ಆಗ ಮಗದೊಮ್ಮೆ ಭಾರತೀಯರ ಹೆಮ್ಮೆ ಧ್ವನಿಸಲಿದೆ.
-ಡಾ| ಆಸೋಡು ಅನಂತ್ರಾಮ ಶೆಟ್ಟಿ
ಖ್ಯಾತ ಶಸ್ತ್ರ ಚಿಕಿತ್ಸಾ ತಜ್ಞರು, ಲಂಡನ್‌

ದೀಪಾವಳಿ ಉಡುಗೊರೆ
ರಿಷಿ ಪ್ರಧಾನಿಯಾಗಿ ಆಯ್ಕೆಯಾದ ಸುದ್ದಿ, ಭಾರತೀಯ ಮೂಲದವರಿಗೆಲ್ಲರಿಗೂ ದೀಪಾವಳಿ ಉಡುಗೊರೆಯಾಗಿದೆ! ಮೊದಲ ಬಾರಿಗೆ ಅವರು ಚಾನ್ಸಲರ್‌ (ವಿತ್ತ ಮಂತ್ರಿ, ಅನ್ನಿ) ಅಂದ ನೇಮಕವಾದಾಗಲೇ ಅವರ ಪ್ರಾಮಾಣಿಕ ವ್ಯಕ್ತಿತ್ವ, ಗಾಂಭಿರ್ಯದ ಝಲಕ್‌ ಸಿಕ್ಕಿತ್ತು. ಕೋವಿಡ್‌ ಕಾಲದಲ್ಲಿ ತತ್ತರಿಸಿದ ಯುಕೆಗೆ ದಾರಿತೋರಿಸಿ ಉಪದೇಶಕೊಟ್ಟು ಜಯಿಸಿದವರು ಎಂದು ನನಗೆ ಹೆಮ್ಮೆ. ಸೆಪ್ಟೆಂಬರ್‌ನಲ್ಲಿ ಅವರ ತಂದೆ ತಾಯಿಯವರನ್ನು ಸುಧಾ ಮೂರ್ತಿಯವರೊಡನೆ ಭೇಟಿಯಾಗಿ ಮಾತನಾಡಲು ಸುಯೋಗ ಒದಗಿ ಬಂದಿತ್ತು. ನಿನ್ನೆ ರಾತ್ರಿಯಿಂದ ಕಾಣುತ್ತಿದ್ದ ಕನಸು ನನಸಾಗಿದೆ.
-ಶ್ರೀವತ್ಸ ದೇಸಾಯಿ, ಯುಕೆ

ಬ್ರಿಟನ್‌ ಪಾಲಿಗೆ ಐತಿಹಾಸಿಕ ದಿನ
ದೀಪಾವಳಿ ದಿನದಂದು ರಿಷಿ ಸುನಕ್‌ ಪ್ರಧಾನಿಯಾಗಿ ಆಯ್ಕೆಯಾಗಿರುವುದು ಬ್ರಿಟನ್‌ ಪಾಲಿಗೆ ಐತಿಹಾಸಿಕ ದಿನವಾಗಿದೆ. ಸುನಕ್‌ ಈ ದೇಶದ ಮೊದಲ ಏಷ್ಯಾ ಮೂಲದ ಪ್ರಧಾನಿಯಾಗಿದ್ದಾರೆ. ಯುಕೆಯಲ್ಲಿರುವ ಎಲ್ಲ ಅನಿವಾಸಿ ಭಾರತೀಯರಿಗೆ ಇದು ತುಂಬಾ ಹೆಮ್ಮೆಯ ಕ್ಷಣವಾಗಿದೆ. ಆರ್ಥಿಕತೆ ಸಂಬಂಧಿಸಿ ಪ್ರಸ್ತುತ ಯುಕೆಯಲ್ಲಿ ತುಂಬಾ ಸವಾಲಿನ ಪರಿಸ್ಥಿತಿ ಇದೆ ಮತ್ತು ರಿಷಿ ಬಹುಶಃ ಉನ್ನತ ಸ್ಥಾನದಲ್ಲಿ ಸ್ಥಿರತೆಯನ್ನು ಒದಗಿಸಲು ಸರಿಯಾದ ವ್ಯಕ್ತಿಯಾಗಿದ್ದಾರೆ. ಅವರು ಪರಿಸ್ಥಿತಿಯನ್ನು ತ್ವರಿತವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತೇನೆ. ಅವರು ಕರ್ನಾಟಕದೊಂದಿಗೂ ನಿಕಟ ಸಂಪರ್ಕ ಹೊಂದಿರುವುದರಿಂದ ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ.
-ಅನೂಪ್‌ ಭಟ್, ಸೀನಿಯರ್‌ ಟೆಕ್ನಿಕಲ್‌ ಮ್ಯಾನೇಜರ್‌ ಶ್ನಿàಡರ್‌ ಎಲೆಕ್ಟ್ರಿಕ್‌ ಸಿಸ್ಟಂ

ಟಾಪ್ ನ್ಯೂಸ್

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

Astronamy-moon

Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.