ಏರುತ್ತಿದೆ ಮೊಬೈಲ್ ರೀಚಾರ್ಜ್ ರೇಟ್
Team Udayavani, Nov 29, 2021, 6:25 AM IST
ಕಡಿಮೆ ದರ ಮೊಬೈಲ್ ರೀಚಾರ್ಜ್ ಕಾಲ ಮುಗಿಯುವ ಸಮಯ ಹತ್ತಿರಕ್ಕೆ ಬರುತ್ತಿದೆ. ಭಾರತದಲ್ಲಿ ಈಗಾಗಲೇ ಏರ್‌ಟೆಲ್ ಮತ್ತು ವೋಡಾಫೋನ್+ಐಡಿಯಾ ಕಂಪೆನಿಗಳು ಡಿ.1ರಿಂದ ದರ ಹೆಚ್ಚಳ ಮಾಡುವುದಾಗಿ ಘೋಷಿಸಿವೆ.
ರವಿವಾರ ಜಿಯೋ ಕೂಡ ಡಿ.1ರಿಂದ ಶೇ.20ರಷ್ಟು ದರ ಹೆಚ್ಚಳ ಮಾಡುವುದಾಗಿ ಹೇಳಿದೆ. ಈ ಮೂಲಕ ಡಿ.1ರಿಂದ ಮೊಬೈಲ್ ದರ ಗ್ರಾಹಕರ ಜೇಬು ಸುಡುವುದು ಗ್ಯಾರಂಟಿಯಾಗಿದೆ.
ಜೀಯೋದಿಂದಾಗಿ ದರ ಇಳಿಕೆ: ಭಾರತೀಯ ಟೆಲಿಕಾಂ ಮಾರುಕಟ್ಟೆಗೆ ಜಿಯೋ ಕಾಲಿಡುವ ಮುನ್ನ ಬಹುತೇಕ ಎಲ್ಲ ಕಂಪೆನಿಗಳ ಮೊಬೈಲ್ ಪ್ಲ್ರಾನ್‌ಗಳು ದುಬಾರಿಯಾಗಿದ್ದವು. ಆದರೆ ಜಿಯೋ ಕಾಲಿಟ್ಟು, ಕಡಿಮೆ ದರಕ್ಕೆ ಕರೆ ಮತ್ತು ಡೇಟಾ ಎರಡನ್ನೂ ನೀಡಿತು. ಇದರಿಂದಾಗಿ ಮಾರುಕಟ್ಟೆಯಲ್ಲಿ ಅಲ್ಲೋಲ-ಕಲ್ಲೋಲವಾಗಿ ಉಳಿದ ಕಂಪೆನಿಗಳೂ ದರ ಇಳಿಸುವ ನಿರ್ಧಾರಕ್ಕೆ ಬಂದವು.
ಶೇ.20ರಷ್ಟು ಹೆಚ್ಚಳ: ಡಿ.1ರಿಂದ ಬಹುತೇಕ ಏರ್‌ಟೆಲ್ ವಿಐ (ವೋಡಾಫೋನ್+ಐಡಿಯಾ), ಜಿಯೋ ಕಂಪೆನಿಗಳು ಶೇ.20ರಷ್ಟು ದರ ಹೆಚ್ಚಿಸು ತ್ತಿವೆ. ಅಂದರೆ ಈಗ 75 ರೂ. ಇರುವ ಪ್ಲ್ರಾನ್ 99 ರೂ.ಗಳಿಗೆ ಏರಿಕೆಯಾಗಬಹುದು. ಹಾಗೆಯೇ ಎಲ್ಲ ರೀಚಾರ್ಜ್ ಪ್ಲ್ರಾನ್‌ಗಳಿಗೂ ಈ ಶೇ.20ರ ಹೆಚ್ಚಳದ ದರ ಅನ್ವಯವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಆಕ್ಸ್‌ಫರ್ಡ್ ವಿವಿ ಪದವೀಧರೆಯಾದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ
ಈಗ ಏಕೆ ಏರಿಕೆ?
ಸದ್ಯದಲ್ಲೇ ದೇಶದ ಎಲ್ಲ ಟೆಲಿಕಾಂ ಕಂಪೆನಿಗಳು 5ಜಿ ತಂತ್ರಜ್ಞಾನ ಅಳವಡಿಕೆಯತ್ತ ಮನಸ್ಸು ಮಾಡುತ್ತಿವೆ. ಇದರ ನಡುವೆಯೇ ಸ್ಪೆಕ್ಟ್ರಂಗೆ ನೀಡುತ್ತಿರುವ ದರವೂ ದುಬಾರಿಯಾಗಿದೆ. ಹೀಗಾಗಿ ನಷ್ಟವನ್ನು ಸರಿದೂಗಿಸಿಕೊಳ್ಳುವ ಕಾರಣದಿಂದಾಗಿ ದರ ಹೆಚ್ಚಳಕ್ಕೆ ಮನಸ್ಸು ಮಾಡಿವೆ.
ಜಗತ್ತಿನಲ್ಲಿ ಮೊಬೈಲ್ ಸೇವಾ ದರ ಹೇಗಿದೆ?
ಇಡೀ ಜಗತ್ತಿಗೆ ಹೋಲಿಕೆ ಮಾಡಿ ಹೇಳುವುದಾದರೆ, ಇಸ್ರೇಲ್ ಅತೀ ಕಡಿಮೆ ದರದಲ್ಲಿ ಕರೆ ಮತ್ತು ಡೇಟಾ ಸೌಲಭ್ಯ ನೀಡುತ್ತಿದೆ. ಭಾರತ 28ನೇ ಸ್ಥಾನದಲ್ಲಿದೆ.
ದೇಶ ದರ (ಪ್ರತೀ1 ಜಿಬಿಗೆ)
- ಇಸ್ರೇಲ್ 3 ರೂ.
- ಕಿರ್ಗಿಸ್ಥಾನ್ 11 ರೂ.
- ಫಿಜಿ 14 ರೂ.
- ಇಟಲಿ 20 ರೂ.
- ಸೂಡಾನ್ 20 ರೂ.
- ರಷ್ಯಾ 21 ರೂ.
- ಮಾಲ್ಡೋವಾ 23 ರೂ.
- ಬಾಂಗ್ಲಾದೇಶ 25 ರೂ.
- ಶ್ರೀಲಂಕಾ 28 ರೂ.
- ಚಿಲಿ 29 ರೂ.
- ಭಾರತ 50 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.