ಈಗೀಗ ವಾಹನಾಪಘಾತ ಸಂಭವಿಸುವುದಲ್ಲ!


Team Udayavani, Apr 2, 2023, 6:15 AM IST

ಈಗೀಗ ವಾಹನಾಪಘಾತ ಸಂಭವಿಸುವುದಲ್ಲ!

ದ್ವಿಚಕ್ರ ವಾಹನ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದೆ, ಚಾಲಕನ ಎದುರು ಪುಟ್ಟ ಬಾಲಕ ಚಾಲಕನ ಹಿಂಬದಿ ಶಾಲಾ ಬ್ಯಾಗ್‌ ಹಾಕಿಕೊಂಡ ಬಾಲಕಿ ಆಕೆಯ ಹಿಂದೆ ಪುಟ್ಟ ಮಗು ಎತ್ತಿಕೊಂಡ ಮಹಿಳೆ. ಒಂದೇ ಕುಟುಂಬ ಅನ್ನುವುದು ಮೇಲ್ನೋಟಕ್ಕೆ ಅರಿವಾಗುತ್ತದೆ. ಹೆದ್ದಾರಿಯಲ್ಲಿ ಸಾಗುತ್ತಾ ಪಕ್ಕದ ಕೂಡು ರಸ್ತೆಯ ತಿರುವಿಗೆ ಈ ವಾಹನ ಇಳಿಯುವುದನ್ನು ಗಮನಿಸಿದಾಗ ಎದೆ ಝಲ್ಲೆನಿಸುತ್ತದೆ. ಬಹುತೇಕ ಹೆದ್ದಾರಿ ಯಾನಿಗಳು ಅಥವಾ ಇತರೆಡೆಯೂ ಸಾಮಾನ್ಯವಾಗಿ ನೋಡಬಹು ದಾದ ದೃಶ್ಯ ಇದು.

ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ಮಂದಿ ಈಗ ವಾಹನಾಪಘಾತದಲ್ಲಿ ಮೃತಪಡುತ್ತಿದ್ದಾರೆ. ಪ್ರತೀಕ್ಷಣ ಎಂಬಂತೆ ಜಗತ್ತಿನಲ್ಲಿ ವಾಹನಾಪ ಘಾತಗಳು ಸಂಭವಿಸುತ್ತಲೇ ಇರುತ್ತವೆ. ಅನೇಕರು ಅಸುನೀಗಿದರೆ ಅದರ ಮೂರ್‍ನಾಲ್ಕು ಪಟ್ಟು ಮಂದಿ ಗಾಯಾಳುಗಳಾಗುತ್ತಾರೆ. ಕೆಲವರು ಶಾಶ್ವತವಾಗಿ ಅಂಗ ವೈಕಲ್ಯಕ್ಕೆ ಈಡಾಗುತ್ತಾರೆ. ವಾಹನಾಪಘಾತಗಳನ್ನು ತಡೆಗಟ್ಟುವ ಬಗ್ಗೆ ವಾಹನ ಗಳ ಆವಿಷ್ಕಾರದ ದಿನಗಳಿಂದಲೇ ಎಚ್ಚರಿಕೆಯ ಕರೆಗಂಟೆ ಬಾರಿಸಲಾಗುತ್ತಿದೆ. ಆದರೆ ಇದು ಕೇವಲ ಸದ್ದಿನಲ್ಲಿ ಮಾತ್ರ ಉಳಿದುಕೊಂಡಿದೆ. ಅನುಷ್ಠಾನಕ್ಕೆ ಬರುವಂತಹ ಸಾಧ್ಯತೆಗಳು ಕ್ಷೀಣಿಸುತ್ತಲೇ ಇರುತ್ತದೆ. ದಿನದಿನ ಬಗೆಬಗೆಯ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೆ ಅಪಘಾತಗಳ ಸಂಖ್ಯೆ ಕ್ಷಣಕ್ಷಣಕ್ಕೆ ಏರುತ್ತಲೇ ಇದೆ.

ಕಳೆದ ವರ್ಷ ಜಗತ್ತಿನಲ್ಲಿ ಸರಾಸರಿ 17 ಲಕ್ಷ ಮಂದಿ ಅಸುನೀಗಿದ್ದರೆ ಅದರ ನಾಲ್ಕು ಪಟ್ಟು ಮಂದಿ ಗಾಯಾಳುಗಳು. ಭಾರತದಲ್ಲೂ ಪ್ರತೀ ವರ್ಷ ಸರಾಸರಿ 1.7 ಲಕ್ಷ ಮಂದಿ ಅಸು ನೀಗುತ್ತಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ ಪ್ರತೀ ತಾಸಿಗೆ 477 ಅಪಘಾತಗಳು ಸಂಭವಿಸುತ್ತವೆ. ಸರಾಸರಿ 18 ಮೃತ್ಯು ಸಂಭವಿಸುತ್ತವೆ. ಮಂಗಳೂರಿನಲ್ಲಿಯೇ ಕಳೆದೆರಡು ವಾರಗಳಲ್ಲಿ 5 ಮಂದಿ ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ.

ಈ ಎಲ್ಲ ಅಂಕಿಅಂಶಗಳು ಪರಿಪೂರ್ಣವಲ್ಲ. ಈ ಸರಾಸರಿಗಿಂತಲೂ ಅಧಿಕವಾಗಿರುತ್ತದೆ. ಏಕೆಂದರೆ ಅನೇಕ ಅಪಘಾತ ಪ್ರಕರಣಗಳು ವರದಿ ಯಾಗುವುದೇ ಇಲ್ಲ. ಇನ್ನು ಕೆಲವು ಅಪಘಾತಗಳನ್ನು ಫಿಕ್ಸ್‌ ಸ್ವರೂಪದಲ್ಲಿ ಬದಲಾಯಿಸಿಕೊಳ್ಳುವ ಘಟನೆಯೇ ಇರುತ್ತದೆ. ಲೈಸನ್ಸ್‌, ವಿಮೆ ಇತ್ಯಾದಿ ಇಲ್ಲದವರು ಇಂತಹ ತಂತ್ರಗಳಿಗೆ ಮೊರೆ ಹೋಗುತ್ತಾರೆ. ಅಮಾಯಕರು ಇದರಿಂದ ಸಂತ್ರಸ್ತರಾಗುತ್ತಾರೆ ಅಥವಾ ಅವರ ಕುಟುಂಬಿಕರು ಬಲಿಪಶುಗಳಾಗುತ್ತಾರೆ.

ವಾಹನಾಪಘಾತಗಳು ಕಳೆದ ಒಂದೂವರೆ ದಶಕದ ಸಮೀಕ್ಷೆಯ ಪ್ರಕಾರ ಚಾಲಕರ ನಿರ್ಲಕ್ಷದಿಂದಲೇ ಅಧಿಕವಾಗಿ ಸಂಭವಿಸುತ್ತದೆ. ಮೊಬೈಲ್‌ ಫೋನ್‌ಗಳ ಬಳಕೆ ಆರಂಭವಾದ ಮೇಲೆ ಇಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂಬುವುದು ಪೊಲೀಸ್‌ ಇಲಾಖೆಯ ಮಾಹಿತಿ. ಒಂದು ಕೈಯಲ್ಲಿ ಈ ಸೆಲ್‌ಫೋನ್‌ ಬಳಸುವುದು ಅಥವಾ ಹ್ಯಾಂಡ್ಸ್‌ಫ್ರೀ ಸ್ವರೂಪದಲ್ಲಿ ಇಟ್ಟುಕೊಳ್ಳುವುದು ಕೂಡ ಚಾಲಕರ ಏಕಾಗ್ರತೆಗೆ ತಡೆಯಾಗುತ್ತದೆ. ಸಿಗ್ನಲ್‌ ಬಳಿ ಅಥವಾ ಇತರ ಸಂದರ್ಭಗಳಲ್ಲಿ ಬ್ರೇಕ್‌ ಅನ್ವಯಿಸುವ ವೇಗ ಈ ಮೂಲಕ ಏರುಪೇ ರಾಗುತ್ತದೆ. ಪ್ರಕರಣ ಅಪಘಾತಕ್ಕೆ ಕಾರಣವಾಗುತ್ತದೆ. ಸುಸ್ಥಿತಿಯಲ್ಲಿ ಇರದ ವಾಹನಗಳು ಕೂಡ ಅಪಘಾತಕ್ಕೆ ಕಾರಣ. ಟ್ರಾಫಿಕ್‌ ನಿಯಮಾವಳಿಗಳ ಉಲ್ಲಂಘನೆ ಏಕಮುಖ ರಸ್ತೆಯ ದುರ್ಬಳಕೆ, ನಿರ್ಲಕ್ಷ್ಯದ ಚಾಲನೆ, ಟ್ರಾಫಿಕ್‌ ವೃತ್ತಗಳಲ್ಲಿ ಅಥವಾ ಪೂರಕ ರಸ್ತೆಗಳು ಸೇರುವಲ್ಲಿ ನಿರ್ಲಕ್ಷÂ ಹೀಗೆ ಅನೇಕ ಕಾರಣಗಳು ಇತ್ತೀಚೆಗಿನ ಅಪಘಾತಗಳಿಗೆ ಕಾರಣ.
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧಾರಣೆಯ ನಿಯಮ ಉಲ್ಲಂ ಸಿ ಮೃತ್ಯುವಿಗೆ ಈಡಾದ ಅಥವಾ ತಲೆಗೆ ಗಂಭೀರ ಏಟುಗಳಾದ ಪ್ರಕರಣಗಳಿವೆ. ಹಿಂಬದಿ ಸವಾರರು ಹೆಲ್ಮೆಟ್‌ ಬಳಸದೇ ಇದ್ದರೆ, ಹೆಲ್ಮೆಟನ್ನು ಅಲಂಕಾರಿಕವಾಗಿ ಕೈಗೆ ತೊಟ್ಟುಕೊಳ್ಳುವ ದಾಷ್ಟéì ಭೀಕರ ಅಪಘಾತಗಳ ಮೂಲವೂ ಹೌದು.

ಇತ್ತೀಚೆಗೆ ಬೇರೆ ಬೇರೆ ಕಡೆ ಸರಕಾರಿ ಅಥವಾ ಖಾಸಗಿ ಬಸ್‌ಗಳವರಿಗೆ, ಘನ ವಾಹನಗಳವರಿಗೆ, ಟ್ರಕ್‌ ಇತ್ಯಾದಿಗಳವರಿಗೆ ಪೊಲೀಸರು ಮತ್ತು ಸಾರಿಗೆ ಇಲಾಖೆಯವರು ಎಚ್ಚರಿಕೆ ನೀಡುತ್ತಲೇ ಬಂದಿರುತ್ತಾರೆ. ಖಾಸಗಿ ಬಸ್‌ಗಳಿಗೆ ಸಂಬಂಧಿಸಿ ಬಸ್‌ ಸ್ಟಾಪ್‌ ಅಲ್ಲದ ಕಡೆ ಅಲ್ಲಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವುದು, ಪ್ರಯಾಣಿಕರು ಬಸ್‌ ಏರುವ ಮೊದಲೇ ಬಸ್‌ ಚಾಲನೆ ಅಂತೆಯೇ ಫ‌ುಟ್‌ಬೋರ್ಡ್‌ ಅಥವಾ ಬಸ್‌ನ ಛಾವಣಿ ಏರು ವವರು ದುರಂತಕ್ಕೀಡಾದ ಪ್ರಕರಣಗಳು ಹೆಚ್ಚು. ಬ್ರೇಕ್‌ಫೇಲ್‌ ಮುಂತಾದ ತಾಂತ್ರಿಕ ಕಾರಣ ಗಳಿಂದ ಅಪಘಾತಗಳು ಸಂಭವಿಸುವ ಪ್ರಮಾಣ ಕಡಿಮೆ.

ಭಾರತದ ಮಹಾನಗರಗಳ ಪೈಕಿ ದಿಲ್ಲಿಯಲ್ಲಿ ಅತೀ ಹೆಚ್ಚು ಅಪಘಾತ ಈ ಹಿಂದೆ ನಡೆದಿದ್ದರೆ ಹೆದ್ದಾರಿಗಳಲ್ಲೇ ಮಾರಣಾಂತಿಕ ಅಪಘಾತಗಳ ಸಂಖ್ಯೆ ಹೆಚ್ಚು. ರಾತ್ರಿಯ ವೇಳೆ ಹೆಡ್‌ಲೈಟ್‌ ದುರ್ಬಳಕೆಯು ಎದುರಿನ ವಾಹನಕ್ಕೆ ತೊಂದರೆ ಉಂಟು ಮಾಡಬಹುದು. ಕೆಲವು ಕಡೆ ಇಲಾಖೆಯವರು ಹಾಕಿರುವ ಅವೈಜ್ಞಾನಿಕ ರಸ್ತೆ ಉಬ್ಬುಗಳು ಅಥವಾ ವೇಗ ತಡೆಗಳೇ ಅಪಘಾತಕ್ಕೆ ಕಾರಣವಾಗುತ್ತದೆ. ಒಂದು ಉದಾಹರಣೆ: ಅಪಘಾತ ಕಡಿಮೆ ಮಾಡಲೆಂದು ಪಡುಬಿದ್ರಿ- ಕಾರ್ಕಳ ರಸ್ತೆಯಲ್ಲಿ ಅಲ್ಲಲ್ಲಿ ಅಧಿಕ ಸಂಖ್ಯೆಯಲ್ಲಿ ನಿರ್ಮಿಸಲಾದ ರಸ್ತೆ ಉಬ್ಬುಗಳೇ ಅಪಘಾತಕ್ಕೆ ಕಾರಣವಾದ ನಿದರ್ಶನವಿದೆ. ಏಕೆಂದರೆ ರಸ್ತೆ ಉಬ್ಬು ಅಥವಾ ಹಂಪ್‌ಗ್ಳನ್ನು ರಚನೆ ಮಾಡಿದಾಗ ಎಚ್ಚರಿಕೆಯ ಸ್ವರೂಪದಲ್ಲಿ ಅದಕ್ಕೆ ನಿರ್ದಿಷ್ಟವಾದ ಬಣ್ಣ ಬಳಿದಿರಬೇಕು, ಸೂಚನಾ ಫ‌ಲಕಗಳಿರಬೇಕು. ಆದರೆ ಈ ಬಗ್ಗೆ ಇಲಾಖೆಗಳು ನಿರ್ಲಕ್ಷ್ಯವನ್ನೇ ತೋರುತ್ತಿವೆ. ಅಪಘಾತ ತಡೆಗಟ್ಟುವ ಕುರಿತು ವಾಹನ ಚಾಲಕರ ಕಾಳಜಿಯೂ ಅತೀ ಮುಖ್ಯ. ಒಂದೊಮ್ಮೆ ಅಪಘಾತವಾದಾಗ ಯಾರದ್ದೇ ತಪ್ಪಿರಲಿ ದೊಡ್ಡ ವಾಹನಗಳನ್ನು ಬೆಟ್ಟು ಮಾಡಿ ತೋರಿಸಲಾಗುತ್ತಿತ್ತು. ಈಗ ತಂತ್ರಜ್ಞಾನ ಬೆಳೆದಂತೆ ತಪ್ಪು ಮಾಡಿದವರನ್ನು ಸುಲಭವಾಗಿ ಗುರುತಿಸಬಹುದು. ಆದರೆ ವಾಹನ ಅಪಘಾತಗಳನ್ನು ಉಂಟು ಮಾಡುವವರನ್ನು ಶಿಕ್ಷಿಸುವ ಕುರಿತಾದ ಕಾನೂನು ದೇಶದಲ್ಲಿ ಅತ್ಯಂತ ದುರ್ಬಲವಾಗಿದೆ. ಬೆರಳೆಣಿಕೆಯ ಪ್ರಕರಣಗಳಲ್ಲಿ ಮಾತ್ರ ತಪ್ಪಿತಸ್ಥರಿಗೆ ಸಣ್ಣಪುಟ್ಟ ಶಿಕ್ಷೆಗಳನ್ನು ವಿಧಿಸಿರಬಹುದು. ಇಲ್ಲಿ ಕಠಿನ ಅಥವಾ ಕಟ್ಟುನಿಟ್ಟಿನ ಕಾನೂನು ಕ್ರಮಗಳು ಒಂದಿಷ್ಟು ಜಾಗೃತಿಯನ್ನು ಮೂಡಿಸ ಬಹುದು. ಅನೇಕ ಮಹಾನಗರಗಳಲ್ಲಿ ಒಂದು ವಾಹನ ವಿಶೇಷವಾಗಿ ದ್ವಿಚಕ್ರ ವಾಹನಗಳನ್ನು ಯುವಕರು ಖರೀದಿಸುವಾಗ ಅದರ ದಾಖಲೆ ಪತ್ರಗಳನ್ನು ಗಮನಿಸಿರುವುದಿಲ್ಲ ಅಥವಾ ಅವರೇ ಸ್ವತಃ ಚಾಲನೆಯ ಪರವಾನಿಗೆ ಹೊಂದಿರುವುದಿಲ್ಲ. ಇವೆಲ್ಲವೂ ನಿಯಂತ್ರಣವಾದಾಗ ಅಪಘಾತಗಳು ಇಳಿಮುಖವಾಗಬಹುದು.

ಹಾಗೆ ನೋಡಿದರೆ ರೈಲು, ವಿಮಾನ ಹಡಗು ಇತ್ಯಾದಿಗಳಲ್ಲೂ ಅಪಘಾತ ಸಂಭವಿಸುತ್ತವೆ. ಆದರೆ ಅದು ರಸ್ತೆ ಅಪಘಾತದ ಸ್ವರೂಪದಲ್ಲಿ ಅಲ್ಲ ಎಂಬುದು ಗಮನಿಸಬೇಕಾದ ಅಂಶ.

ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವಂತೆ, ಚಾಲಕರ ಸಂಖ್ಯೆ ಹೆಚ್ಚುತ್ತಿರುವಂತೆ ಅಪಘಾತಗಳನ್ನು ನಿಯಂತ್ರಿಸುವ ಕುರಿತಾದ ಕಠಿನ ಕ್ರಮಕ್ಕೆ ಇದು ಸಕಾಲ.

ಅಂದಹಾಗೆ: ಈ ಹಿಂದೆಲ್ಲ ವಾಹನ ಅಪಘಾತ ಉಂಟಾಗುತ್ತಿದೆ ಎನ್ನಲಾಗುತ್ತಿತ್ತು. ಈಗ ವಾಹನಾಪಘಾತಗಳನ್ನು ಉಂಟು ಮಾಡಲಾಗುತ್ತಿದೆ ಎನ್ನಬಹುದೋ ಏನೋ.

-ಮನೋಹರ ಪ್ರಸಾದ್‌

ಟಾಪ್ ನ್ಯೂಸ್

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ABV-Modi

A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಭದ್ರ ಬುನಾದಿ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.