ರೊಹಿಂಗ್ಯಾ ಗಡಿಪಾರು: ಭಾರತಕ್ಕೆ ಬೇಕಿರುವುದು ಬುದ್ಧನ ಕರುಣೆ


Team Udayavani, Sep 28, 2017, 6:00 AM IST

rohingya.jpg

ರೊಹಿಂಗ್ಯಾಗಳಿಗೆ ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಬಂಧವಿದೆ ಹೀಗಾಗಿ ದೇಶದ ಭದ್ರತೆಯ ದೃಷ್ಟಿಯಿಂದ ಅವರನ್ನು ಗಡಿಪಾರು ಮಾಡುತ್ತೇವೆ ಎನ್ನುತ್ತಿದೆ ಕೇಂದ್ರ. ಇದನ್ನು ಸಮರ್ಥಿಸುವವರು ಒಂದೆಡೆಯಾದರೆ, ಮಾನವೀಯತೆಯ ದೃಷ್ಟಿಯಿಂದ ರೊಹಿಂಗ್ಯಾಗಳಿಗೆ ನೆಲೆ ಒದಗಿಸಬೇಕು ಎನ್ನುವ ವರ್ಗ ಇನ್ನೊಂದೆಡೆ. ಇಂಥ ಎರಡು ದೃಷ್ಟಿಕೋನ ಇಲ್ಲಿವೆ…

ಮ್ಯಾನ್ಮಾರ್‌ ಅಥವಾ ಬರ್ಮಾ ದೇಶದ ಬಹುಸಂಖ್ಯಾತರ ಅನಾಗರಿಕತೆಯ ದುರಭಿಮಾನಿ ರಾಜಕಾರಣದ ಉತ್ಪನ್ನವೇ ಜಾಗತಿಕ ಮಟ್ಟದಲ್ಲಿ ಮುನ್ನೆಲೆಗೆ ಬಂದಿರುವ “ರೊಹಿಂಗ್ಯಾ ಬಿಕ್ಕಟ್ಟು’. ಮೂಲದಲ್ಲಿ ಮನು ಷ್ಯರನ್ನು ಮನುಷ್ಯರೆಂದು ಕರುಣೆಯಿಂದ ನೋಡಬೇಕೆಂಬ ಬೌದ್ಧ ದೃಷ್ಟಿಕೋನವನ್ನು ತ್ಯಜಿಸಿ ಜನಾಂಗೀಯ, ಧಾರ್ಮಿಕ ನೆಲೆಯಿಂದ ಗುರುತಿಸುವ ಹಾಗೂ ಸಹಮನುಷ್ಯರನ್ನು ನಾಗಾರಿಕರೆಂದೇ ಪರಿಗಣಿಸದೇ ಹೋದ ಪರಿ ಣಾಮ ಈ ಬಿಕ್ಕಟ್ಟಿನ ಹುಟ್ಟಿಗೆ ಕಾರಣ. ರೊಹಿಂಗ್ಯಾ ಜನಾಂಗೀಯ ಬಿಕ್ಕಟ್ಟಿನ ಸ್ವರೂಪ ವಾದರೂ ಏನು?

ಬರ್ಮಾದ ರಾಖೀನೆ ರಾಜ್ಯದ ರೊಹಿಂಗ್ಯಾ ಮುಸ್ಲಿಮರು-ಹಿಂದೂಗಳು ದೇಶದ ಪ್ರಜೆಗಳೇ ಅಲ್ಲವೆಂದು ಪ್ರಭುತ್ವವೇ 1982ರಲ್ಲಿ ತೀರ್ಮಾನಿಸಿ ಆ ಜನಾಂಗದ ಜನರಿಗೆ ಕನಿಷ್ಠ ನಾಗರಿಕ ಹಕ್ಕುಗಳನ್ನೂ ನಿರಾಕರಿಸ ಲಾಯಿತು. ಇದರಿಂದ ಇಡೀ ರೊಹಿಂಗ್ಯಾ ಜನರ ಬದುಕು ಮೂರಾಬಟ್ಟೆಯಾಗಿ ಉದ್ಯೋಗ ಸಿಗದೇ, ಯಾವುದೇ ಸೌಲಭ್ಯ ಸಿಗದೇ ಹೊತ್ತಿನ ಗಂಜಿಗೂ ತತ್ವಾರವಾಯಿತು. ಬರ್ಮಾದ ಬೌದ್ಧ ಮತೀಯರಲ್ಲಿ ರೊಹಿಂಗ್ಯಾ ಜನಾಂಗ ಒಂದು ಸಮಸ್ಯೆ ಎಂಬ, ಅವರನ್ನು ದೇಶದಿಂದ ಓಡಿಸಬೇಕು ಎಂಬ ಭಾವನೆ ಬೆಳೆಯಿತು. “ಬೌದ್ಧ’ ಕೋಮುವಾದಿ ಪಡೆಗಳು ರೊಹಿಂಗ್ಯಾ ಜನರ ಮೇಲೆ ದೌರ್ಜನ್ಯ, ಹÇÉೆ ನಡೆಸತೊಡಗಿದರು.

ಇತ್ತೀಚೆಗೆ ಈ ದೌರ್ಜನ್ಯ ದಲ್ಲಿ ಮ್ಯಾನ್ಮಾರ್‌ ಮಿಲಿಟರಿ ಪಡೆಗಳೂ ಸೇರಿಕೊಂಡು ರೊಹಿಂಗ್ಯಾ ಜನರು ವಾಸಿಸುವ ಹಳ್ಳಿ ಹಳ್ಳಿಗಳಿಗೇ ಬೆಂಕಿ ಹಚ್ಚುವ, ಜನರನ್ನು ಜೀವಂತವಾಗಿ ಸುಡುವ, ಮಹಿಳೆಯರ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸುವ, ಮಕ್ಕಳು ಮರಿಗಳನ್ನೂ ಕಗ್ಗೊಲೆ ನಡೆಸುವ “ಜನಾಂಗೀಯ ನರಮೇಧ’ ದೊಡ್ಡ ಮಟ್ಟದಲ್ಲಿ ನಡೆಯಿತು. ರೊಹಿಂಗ್ಯಾ ಜನರು ಜೀವ ಉಳಿಸಿಕೊಳ್ಳಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ನೆರೆಯ ಬಾಂಗ್ಲಾ, ಭಾರತಗಳಿಗೆ ವಲಸೆ ಹೊರಟರು.

ಕೆಲವು ರೊಹಿಂಗ್ಯಾ ಯುವಕರು ತಮ್ಮ ಮೇಲಿನ ದೌರ್ಜನ್ಯ ತಡೆಯುತ್ತೇವೆ ಎಂಬ ಭ್ರಮೆಯಲ್ಲಿ ಅರಾಕನ್‌ ರೊಹಿಂಗ್ಯಾ ಹೆಸರಿನಲ್ಲಿ ಸಂಘಟನೆ ಮಾಡಿಕೊಂಡು ಮಿಲಿಟರಿಯವರ ಮೇಲೂ ಪ್ರತಿದಾಳಿ ನಡೆಸಿದರು. ಇವರ ಸಂಖ್ಯೆ ಬೆರಳೆಣಿಕೆಯಲ್ಲಿದ್ದರೂ ಮ್ಯಾನ್ಮಾರ್‌ ಮಿಲಿ ಟರಿಗೆ ಅದನ್ನೇ ತೋರಿಸಿ ರೊಹಿಂಗ್ಯಾ ಜನರು ಉಗ್ರಗಾಮಿಗಳೆಂದೂ ಅವರನ್ನು ಹತ್ತಿಕ್ಕುತ್ತೇ ವೆಂದೂ ಮತ್ತಷ್ಟು ದೌರ್ಜನ್ಯದಲ್ಲಿ ತೊಡಗಿತು. ಅತ್ಯಂತ ವಿಪರ್ಯಾಸವೆಂದರೆ ಭಾರತ ಸರ್ಕಾರವೂ ಇದೇ ರೀತಿಯಲ್ಲಿ ವಾದಿಸಿ ರೊಹಿಂಗ್ಯಾ ನಿರಾಶ್ರಿತರನ್ನು ಹೊರದಬ್ಬಲು ಅಣಿಯಾಗಿರುವುದು.

ನಿಜ. ರೊಹಿಂಗ್ಯಾ ಬಿಕ್ಕಟ್ಟು ಸೃಷ್ಟಿಯಾಗಿರುವುದು ಮ್ಯಾನ್ಮಾರ್‌ ಪ್ರಭುತ್ವದ ನೀತಿಯಿಂದ. ಈಗ ಮ್ಯಾನ್ಮಾರ್‌ ಸರ್ಕಾರದ ಮೇಲೆ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಒತ್ತಡ ತಂದು ದೇಶ ಬಿಟ್ಟು ಹೋಗಿರುವ ಈ ಜನರನ್ನು ವಾಪಾಸು ಕರೆಸುವಂತೆ ಮಾಡ ಬೇಕಾಗಿದೆ. ವಿಶ್ವಸಂಸ್ಥೆಯೂ ಸೇರಿದಂತೆ ಹಲವಾರು ಪ್ರಮುಖ ದೇಶಗಳು ಈ ನಿಟ್ಟಿನಲ್ಲಿ ತೊಡಗಿವೆ. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್‌ ಸಾನ್‌ ಸೂಕಿಯವರ ಮೇಲೂ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಟೀಕೆ ವ್ಯಕ್ತವಾಗಿದೆ.

ಮುಂದಿನ ದಿನಗಳಲ್ಲಿ ಮ್ಯಾನ್ಮಾರ್‌ ಸರ್ಕಾರ ಮತ್ತು ಸೈನ್ಯ ಮಾನವೀಯವಾಗಿ ನಡೆದು ಕೊಳ್ಳದೇ ಹೋದರೆ ಇಡೀ ಪ್ರಪಂಚದ ದೇಶಗಳು ಅಸಹಕಾರ ತೋರಬೇಕಿದೆ. ಆದರೆ ಈಗ ಸದ್ಯದ ಮಟ್ಟಿಗೆ ಸಾವಿರಾರು ಸಂಖ್ಯೆ ಯಲ್ಲಿ ಬಾಂಗ್ಲಾ, ಭಾರತಕೆ ಬಂದಿರುವ ನಿರಾಶ್ರಿತರನ್ನು ಬೇಕಾದರೆ ಸಾಯಿರಿ ಎಂದು ಹೊರದಬ್ಬುವುದು ಧರ್ಮವಲ್ಲ, ನ್ಯಾಯವೂ ಅಲ್ಲ. ಆ ಜನರಿಗೆ ಕನಿಷ್ಠ ಊಟ, ವಸತಿ ಸೌಲಭ್ಯಗಳನ್ನು ಒದಗಿಸಿ ಆ ಮಕ್ಕಳು ಮರಿಗಳ ಜೀವ ಉಳಿಸುವುದು, ಮಹಿಳೆಯರ ಮಾನ ಕಾಪಾಡುವುದು ಭಾರತಕ್ಕೆ ಶ್ರೇಯವುಂಟು ಮಾಡಬಲ್ಲದು.

ಟಿಬೆಟ್‌ನ ಧರ್ಮಗುರು ಗಳು ದೇಶಭ್ರಷ್ಟರಾದಾಗ, ತಸ್ಲಿಮಾ ನಸ್ರಿನ್‌ರಂತಹ ದಿಟ್ಟ ಬರಹಗಾರ್ತಿ ದೇಶ ತೊರೆದು ಬಂದಾಗ ಅವರಿಗೆ ಸಕಲ ಗೌರವಗಳಿಂದ ಬರಮಾಡಿಕೊಂಡು ಆವಾಸವೊದಗಿಸಿದ ಹಿರಿತನ ಭಾರತದ್ದು. ಇದೇ ಹಿರಿತನವನ್ನು ರೊಹಿಂಗ್ಯಾ ನಿರಾತ, ಅಸಹಾಯಕ ಜನರ ವಿಷಯದಲ್ಲಿ ಮುಂದುವರೆಸಿ ಇತರರ ಕಷ್ಟಕ್ಕೆ ಆಗಿಬರುವ ಭಾರತದ ಪರಂಪರೆ ಯನ್ನು ಮುಂದುವರೆಸಬೇಕಿದೆ. ವಸುದೈವ ಕುಟುಂಬಕಂ ಎಂಬ ಶ್ರೇಷ್ಠ ನಂಬಿಕೆಗೆ ನ್ಯಾಯ ಸಲ್ಲಿಸಬೇಕಿದೆ. ಬುದ್ಧನ ಕರುಣೆ ನಮಗೆ ಬೇಕೇ ಬೇಕು.

ನಿರಾಶ್ರಿತರನ್ನು ಬೇಕಾದರೆ ಸಾಯಿರಿ ಎಂದು ಹೊರ ದಬ್ಬುವುದು ಧರ್ಮವಲ್ಲ. ಕನಿಷ್ಠ ಊಟ, ವಸತಿ ಒದಗಿಸಿ ಆ ಮಕ್ಕಳು ಮರಿಗಳ ಜೀವ ಉಳಿಸುವುದು, ಮಹಿಳೆಯರ ಮಾನ ಕಾಪಾಡುವುದು  ಶ್ರೇಯವುಂಟು ಮಾಡಬಲ್ಲದು. 
-ಹರ್ಷಕುಮಾರ್‌ ಕುಗ್ವೆ, ಪತ್ರಕರ್ತ

*****
ರೊಹಿಂಗ್ಯಾಗಳಿಗೆ ನೋ ಅನ್ನಲು ಕಾರಣಗಳಿವೆ
ವಿಶ್ವಸಂಸ್ಥೆ ರೊಹಿಂಗ್ಯಾಗಳನ್ನು “ವಿಶ್ವದಲ್ಲಿ ಅತಿಹೆಚ್ಚು ಹಿಂಸೆಗೊಳಗಾದ ಅಲ್ಪಸಂಖ್ಯಾತರಲ್ಲಿ ಒಬ್ಬರು’ ಎಂದು ಕರೆಯುತ್ತಿದೆ. ಆದರೆ ಇದೇ ವಿಶ್ವಸಂಸ್ಥೆ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದು ಕಳೆದ 50 ವರ್ಷಗಳಲ್ಲಿ ಅವರ ಸಂಖ್ಯೆ 33 ಪ್ರತಿಶತದಿಂದ 8 ಪ್ರತಿಶತಕ್ಕೆ ಕುಸಿದಿದ್ದರೂ ಅವರತ್ತ ಸಹಾನುಭೂತಿ ತೋರಿಸುವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಇಸ್ಲಾಮಿಕ್‌ ರಾಷ್ಟ್ರಗಳ ಸಹಕಾರ ಒಕ್ಕೂಟ (ಓಐಸಿ) ಒಳಗೊಂಡಂತೆ, ಪಾಕಿಸ್ತಾನ, ಇಂಡೋ ನೇಷ್ಯಾ, ಮಲೇಷ್ಯಾದಂಥ ಮುಸ್ಲಿಂ ಬಾಹುಳ್ಯದ ರಾಷ್ಟ್ರಗಳೂ ರೊಹಿಂಗ್ಯಾಗಳಿಗೆ ಆಶ್ರಯ ನೀಡಲು ನಿರಾಕರಿಸಿವೆ.

ಸತ್ಯ ವೇನೆಂದರೆ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯು 1989ರ ಟಿಯೆನ್ಮೆನ್‌ ಸ್ಕ್ವೇರ್‌ ಪ್ರತಿಭಟನೆಯ ನಂತರದ ಘಟನೆಗಳ ಬಗ್ಗೆಯಾಗಲಿ, 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡ, ಪಾಕಿಸ್ತಾನವು ಬಲೋಚಿಗಳು ಮತ್ತು ಹಿಂದೂಗಳ ಮೇಲೆ ನಡೆಸುತ್ತಿರುವ ಅತ್ಯಾಚಾರಗಳು ಕುರಿತು  ತುಟಿಪಿಟಕ್‌ ಅನ್ನಲೇ ಇಲ್ಲ. ಇರಾಕ್‌- ಸಿರಿಯಾದಲ್ಲಿ ಶಿಯಾಗಳು, ಅಲವೈಟ್‌ಗಳು, ಕ್ರಿಶ್ಚಿಯನ್ನರು ಮತ್ತು ಎಲ್ಲಕ್ಕಿಂತ ಯಾಜಿದಿಗಳ ಮೇಲಿನ ದೌರ್ಜನ್ಯದ ಬಗ್ಗೆಯಂತೂ ದಿವ್ಯ ಮೌನ ತಾಳಿಬಿಟ್ಟಿದೆ. ರೊಹಿಂಗ್ಯಾಗಳು ತಮ್ಮನ್ನು ಮ್ಯಾನ್ಮಾರ್‌ನ ನಾಗರಿಕರು ಎಂದು ಕರೆದುಕೊಳ್ಳುತ್ತಾರಾದರೂ, ಮ್ಯಾನ್ಮಾರ್‌ ಸರ್ಕಾರ ಇದನ್ನು ನಿರಾಕರಿಸುತ್ತದೆ.

ಅದು ಇವರನ್ನು ರೊಹಿಂಗ್ಯಾಗಳೆಂದು ಗುರುತಿಸುವುದೂ ಇಲ್ಲ. ಇವರೆಲ್ಲ ಬಾಂಗ್ಲಾ ದೇಶದಿಂದ ಬಂದ ಅಕ್ರಮ ವಲಸಿಗರು ಎನ್ನುತ್ತದೆ ಮ್ಯಾನ್ಮಾರ್‌.  ತಮ್ಮನ್ನು ರೊಹಿಂಗ್ಯಾ ಎಂದು ಕರೆದುಕೊಳ್ಳುವ ಈ ಜನರೆಲ್ಲ ಪೂರ್ವ ಬಂಗಾಳದ ಚಿತ್ತಗಾಂಗ್‌ನಿಂದ(ಈಗಿನ ಬಾಂಗ್ಲಾದೇಶ) ಮ್ಯಾನ್ಮಾರ್‌ಗೆ ವಲಸೆ ಹೋದವರು. ಮೊದಲ ಆಂಗ್ಲೋ-ಬರ್ಮಾ ಯುದ್ಧದ ನಂತರ ನಡೆದ ಯಾಂಡಬೋ ಒಪ್ಪಂದದ ತರುವಾಯ ಅರಾಕಾನ್‌ ಪ್ರದೇಶ ಬ್ರಿಟಿಷ್‌ ಆಡಳಿತದಡಿ ಬಂದಿತು. ಆಗ ಇವರೆಲ್ಲ ಅಲ್ಲಿಗೆ ವಲಸೆ ಹೋದರು. ಬ್ರಿಟಿಷ್‌ ದಾಖಲೆಗಳಲ್ಲಿ ಇವರನ್ನೆಲ್ಲ  “ಚಿತ್ತಗೋನಿಯನ್ಸ್‌’ (ಚಿತ್ತಗಾಂಗ್‌ನಿಂದ ಬಂದವರು) ಎಂದೇ ಕರೆಯಲಾಗಿದೆ. 

ಉಗ್ರ ಸಂಘಟನೆಗಳಾದ ಅಲ್‌-ಖೈದಾ, ಲಷ್ಕರ್‌ ಎ ತಯ್ಯಬಾ ಮತ್ತು ಐಸಿಸ್‌ ಜೊತೆಗೆ ರೊಹಿಂಗ್ಯಾಗಳಿಗೆ ನಂಟಿದೆ ಎಂದೆಚ್ಚರಿಸಿದೆ ಇಂಟರ್‌ನ್ಯಾಷನಲ್‌ ಕ್ರೈಸಿಸ್‌ ಗ್ರೂಪ್‌(ಐಸಿಜಿ)ನ ವರದಿ. ಆಗಸ್ಟ್‌ 25ರಂದು ಅರಾಕನ್‌ ರೊಹಿಂಗ್ಯಾ ಸಾಲ್ವೇಷನ್‌ ಆರ್ಮಿ ನಡೆಸಿದ ಘಾತಕ ದಾಳಿಯಲ್ಲಿ 71 ಜನ ಮೃತಪಟ್ಟರು. ದಾಳಿಗೆ ಪ್ರಾಣಬಿಟ್ಟವರಲ್ಲಿ ಮ್ಯಾನ್ಮಾರ್‌ನ ಭದ್ರತಾ ಸಿಬ್ಬಂದಿಯೂ ಇದ್ದರು. ರೊಹಿಂಗ್ಯಾಗಳಿಗೆ ಭಾರತದಲ್ಲಿ ಇರಲು ಅವಕಾಶ ಕೊಟ್ಟರೆ ಎದುರಾಗಬಹುದಾದ ಅಪಾಯದ ಬಗ್ಗೆ ಈ ಘಟನೆ ಮಾತನಾಡುತ್ತದೆ.  ಈಗ ಜಾಗತಿಕ ಸನ್ನಿವೇಶ ಬದಲಾಗಿದೆ.

ಇತ್ತೀಚೆಗಷ್ಟೇ ಸ್ವೀಡನ್‌ ರಾಷ್ಟ್ರ 106 ವರ್ಷದ ಆಘನ್‌ ವೃದ್ಧೆಗೆ ಆಶ್ರಯ ಕೊಡಲು ನಿರಾಕರಿಸಿದ್ದು ಈ ಮಾತಿಗೊಂದು ಉದಾಹರಣೆ. ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಇನ್ನೂ ಚೇತರಿಸಿಕೊಳ್ಳಲು ಹೆಣಗುತ್ತಿದೆ ಸ್ವೀಡನ್‌. ಹೀಗೆ ಹೇಳುವುದು ಸ್ವಲ್ಪ ಒರಟೆನಿಸಬಹು ದೇನೋ…ಮಾನವೀಯತೆಯ ಆಧಾರದಲ್ಲಿ ರೊಹಿಂಗ್ಯಾಗಳನ್ನು ಬೆಂಬಲಿಸುತ್ತಿರುವವರೆಲ್ಲ ವಿಷಯದ ಗಾಂಭೀರ್ಯತೆಯನ್ನು ಅರಿಯಲು ವಿಫ‌ಲವಾರಾತ್ತಿದ್ದಾರೆ.

ಇಂದಿನ ಕಾಲದಲ್ಲಿ ಯಾವ ಸಾರ್ವಭೌಮ ರಾಷ್ಟ್ರವೂ ಮಾನವೀಯತೆಯ ಮಾತನಾಡುವ ಭರದಲ್ಲಿ ತನ್ನ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದುಕೊಳ್ಳಬಾರದು. ಜರ್ಮನಿಯನ್ನೇ ನೋಡಿ. 2015-2016ರ ನಡುವೆ ಅಲ್ಲಿ ಅಪರಾಧ ಪ್ರಕರಣದ ಪ್ರಮಾಣ 117 ಪ್ರತಿಶತಕ್ಕೆ ಏರಿತು(92,000ದಿಂದ-2 ಲಕ್ಷಕ್ಕೆ). ಇದೇ ಅವಧಿಯಲ್ಲೇ ಜರ್ಮನಿ ಅತಿ ಹೆಚ್ಚು ನಿರಾಶ್ರಿತರನ್ನು ಒಳಬಿಟ್ಟುಕೊಂಡಿದೆ.

(ಆ ಅವಧಿಯಲ್ಲಿ ನಿರಾಶ್ರಿತರ ಸಂಖ್ಯೆ 440 ಪ್ರತಿಶತ ಏರಿಕೆ ಕಂಡಿತು). ಹೆಚ್ಚಾದ ನಿರಾಶ್ರಿತರ ಸಂಖ್ಯೆಗೆ ಮತ್ತು ಹೆಚ್ಚಿದ ಅಪರಾಧ ಪ್ರಕರಣಗಳಿಗೂ ತಳಕು ಹಾಕಬಾರದು ಎನ್ನುವಂತಿಲ್ಲ. ಇದು ಕಾಕತಾಳೀಯವೇನೂ ಅಲ್ಲ. ಇಸ್ಲಾಮಿಕ್‌ ಮೂಲಭೂತವಾದ, ಭಯೋ ತ್ಪಾದನೆ ಸಮಕಾಲೀನ ಭಾರತಕ್ಕೆ ಮತ್ತು ಪ್ರಪಂಚಕ್ಕೆ ಅತಿ ದೊಡ್ಡ ಅಪಾಯವಾಗಿದೆ. ಅದರಲ್ಲೂ ಪಾಕಿಸ್ತಾನದಂಥ ನೆರೆ ರಾಷ್ಟ್ರವನ್ನು ಹೊಂದಿರುವಂಥ ಭಾರತಕ್ಕೆ ಉಗ್ರವಾದ ಬಹು ದೊಡ್ಡ ಸವಾಲೊಡ್ಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ರೊಹಿಂಗ್ಯಾಗಳಿಗೆ “ನೋ’ ಎನ್ನಲು ಅನೇಕ ಕಾರಣಗಳು ಸಿಗುತ್ತವೆ.

ಭಾರತ ತನ್ನ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದುಕೊಳ್ಳಬಾರದು. ಇಂದು ಭಾರತಕ್ಕೆ ಬಹುದೊಡ್ಡ ಸವಾಲಾಗಿರು ವುದೇ ಭಯೋತ್ಪಾದನೆ. ಪರಿಸ್ಥಿತಿ ಹೀಗಿರುವಾಗ ರೊಹಿಂಗ್ಯಾಗಳಿಗೆ “ನೋ’ ಎನ್ನಲು ಅನೇಕ ಕಾರಣಗಳು ಸಿಗುತ್ತವೆ
-ಸಂಜು ವರ್ಮಾ, ಬಿಜೆಪಿ ವಕ್ತಾರೆ

ಟಾಪ್ ನ್ಯೂಸ್

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.