ಇಂಗ್ಲೆಂಡ್ ನಲ್ಲಿ ಬಾದಾಮಿಯ ಗವಿಗಳ ನೆನಪು; ಕಾಲಗರ್ಭದಲ್ಲಿ ಅಡಗಿದ ಮರಳಿನ ಮಹಲ್


Team Udayavani, Mar 22, 2023, 2:29 PM IST

ಇಂಗ್ಲೆಂಡ್ ನಲ್ಲಿ ಬಾದಾಮಿಯ ಗವಿಗಳ ನೆನಪು; ಕಾಲಗರ್ಭದಲ್ಲಿ ಅಡಗಿದ ಮರಳಿನ ಮಹಲ್

The Elephant in the Room ಎನ್ನುವುದು ಆಂಗ್ಲಭಾಷೆಯಲ್ಲೊಂದು ಪ್ರಸಿದ್ಧ ನುಡಿಗಟ್ಟು. ಅದರರ್ಥ ಆನೆ ಎದುರಿಗೆ ಕಂಡರೂ ಕಾಣದವರಂತೆ ಜನ ವರ್ತಿಸುವ ಪರಿ ಎಂಬುದು. ಮರಳಿನ ಮನೆಗೂ ಈ ನುಡಿಗಟ್ಟಿಗೂ ಏನು ಸಂಬಂಧ ಎಂದೆನಿಸಬಹುದು. ಇಲ್ಲಿ ನಾನು ಹೇಳಲು ಹೊರಟಿದ್ದು ಡೋಂಕಾಸ್ಟರ್‌ ನಲ್ಲಿರುವ ಕಲ್ಲಿನ ಕೆತ್ತನೆಗಳಿಂದ ಕೂಡಿದ ಒಂದು ಅಪರೂಪದ ಮರಳುಗಲ್ಲಿನ ಅದ್ಭುತ ವಿಕ್ಟೋರಿಯನ್‌ ಕಾಲದ “ಸ್ಯಾಂಡ್‌ ಹೌಸ್‌’ ಎನ್ನುವ ಮಹಲಿನ ಬಗ್ಗೆ.

ಇದೊಂದು ಕಳೆದ ಶತಮಾನದ ಸ್ವಾರಸ್ಯಕರ ಇತಿಹಾಸದ ತುಣುಕು. ಈ ಮನೆಯನ್ನು ಬಾದಾಮಿಯ ಗವಿಗಳನ್ನು ಹೋಲುವ ಶೆರ್ವುಡ್‌ ಸ್ಯಾಂಡ್‌ ರಾಕ್‌ ಎನ್ನುವ ಮರಳು ಶಿಲೆಯಲ್ಲಿ ಕೊರೆದಂತೆ ಕೊರೆದು ತೆಗೆದಿದ್ದಾರೆ.

ಇದು ವಾಸಕ್ಕೆ ಮನೆಯಾಗಿತ್ತಲ್ಲದೆ ಅದಕ್ಕೆ ಹೊಂದಿಯೇ ತೋಟ, 900 ಫೀಟ್‌ ಉದ್ದದ ಸಿಂಗರಿಸಿದ ಸುರಂಗ ಮಾರ್ಗಗಳು (Grotto), ಪ್ರಾಂಗಣದ ಸುತ್ತಲಿನ ನೆಲ ಮಾಳಿಗೆ (cloisters), ಅದರ ಭಿತ್ತಿಗಳಲ್ಲಿ ತರಹೇವಾರಿ ಕೆತ್ತನೆಗಳು. ಮನುಷ್ಯನೆತ್ತರಕ್ಕೆ ನಿಂತ ಶಿಲ್ಪಗಳು, ವಿಕ್ಟೋರಿಯಾ ರಾಣಿ, ಮತ್ತಿತರ ಮುಖಗಳು, ಎಲ್ಲಕ್ಕಿಂತ ಕಳಶಪ್ರಾಯವಾಗಿ ಒಂದು ದೊಡ್ಡ ಶಿಲ್ಪ- ಜಂಬೋ ಸ್ತಂಭಕ್ಕೆ ಒರಗಿ ನಿಂತ ಮಾಹುತ ಮತ್ತು ಆತನ ಪಕ್ಕದಲ್ಲಿ ಹೆಚ್ಚು ಕಡಿಮೆ ಹತ್ತೂವರೆ ಅಡಿ ಎತ್ತರದ ಆನೆ! ಇವೆಲ್ಲವುಗಳೊಂದಿಗೆ ವೈಭವದಿಂದ ಮೆರೆದ ಈ ಭವನ ಈಗ ಪೂರ್ತಿಯಾಗಿ ಕಣ್ಮರೆಯಾಗಿರುವುದು ಒಂದು ಐತಿಹಾಸಿಕ ದುರಂತ ಎನ್ನಬೇಕು. ಅದರ ರೋಚಕ ಕಥೆ ಇಲ್ಲಿದೆ.

ಇಂಗ್ಲೆಂಡ್‌ನ‌ ಮಧ್ಯಭಾಗದಲ್ಲಿ ನಾಟಿಂಗಮ್ಮಿನಿಂದ ಪೂರ್ವಕ್ಕೆ ಸಮುದ್ರದ ವರೆಗೆ ಭೂಗರ್ಭದಲ್ಲಿ ಮರಳು ಶಿಲೆಯ ಹಾಸು ಹರಡಿದೆ. ಇದೊಂದು ತರಹ ಬಾದಾಮಿ ಬಣ್ಣದ ಸೆಡಿಮೆಂಟರಿ ರಾಕ್‌ ಅಂತ ಭೂಗರ್ಭಶಾಸ್ತ್ರಜ್ಞರು ಕರೆಯುತ್ತಾರೆ. ಅಲ್ಲಲ್ಲಿ ಇದನ್ನು ಉತ್ಖನನ ಮಾಡಿ (quarry) ಮಾರುವುದು ಲಾಭದಾಯಕ ವೃತ್ತಿಯಾಗಿತ್ತು.  ಸುಮಾರು 1845ರಲ್ಲಿ ಹೆನ್ರಿ ವಿಲಿಯಮ್‌ ಸೀನಿಯರ್‌ ಎನ್ನುವವ ಈ ಊರಿನ ದಕ್ಷಿಣ ಭಾಗದಲ್ಲಿ ಮರಳು ವ್ಯಾಪಾರ ಮಾಡಲು ಶುರು ಮಾಡಿದಾಗ ರೇಲ್ವೆಯ ಆಗಮನದಿಂದ ಈ ಊರು ಭರದಿಂದ ಬೆಳೆಯಲಾರಂಭಿಸಿತ್ತು. ಆತ ಕೊಂಡ ಮೂರು ಎಕರೆ ಭೂಮಿಯ ಮಧ್ಯದಲ್ಲಿ ಸಿಕ್ಕ ಒಂದು ವಿಶಾಲವಾದ ಮರಳು ಶಿಲೆಯ ಬ್ಲಾಕ್‌ ಅನ್ನು ಕೊರೆದು ಆ ಮರಳನ್ನು ಕಟ್ಟಡ ಕೆಲಸಗಳಿಗಾಗಿ ಮಾರುತ್ತಿದ್ದ. ಅದೇ ಸಮಯದಲ್ಲಿ ಒಂದು ಭಾಗದಲ್ಲಿ ತನಗಾಗಿ ಒಂದು ವಾಸಸ್ಥಾನವನ್ನೂ ಕಲ್ಲಿನಲ್ಲಿಯೇ ಕೊರೆದು ತೆಗೆದ. ತಾನು ಶ್ರೀಮಂತನಾದಂತೆ ಅದನ್ನು ಬೆಳೆಸುತ್ತ ಹೋಗಿದ್ದರಿಂದ ಆತನ ಸ್ವಗೃಹ ದೊಡ್ಡದಾಗಿ ಒಂದು ಬಾಲ್‌ ರೂಮು ಸಹ ಒಳಗೊಂಡ ಭವನವೇ ಆಗಿ ಮಾರ್ಪಾಡಾಯಿತು!

ಎರಡು ಅಂತಸ್ತಿನ ಮನೆಯ ಸುತ್ತ ತೋಟ ನಿರ್ಮಾಣವಾಯಿತು. ತನ್ನ ಮನೆಗೆ “ಡಾನ್‌ ಕಾಸಲ್‌ (ಕೋಟೆ)’ ಅಂತ ಹೆಸರಿಟ್ಟು ಹೊರ ಜನರಿಗೆ ಪ್ರದರ್ಶಿಸುತ್ತಿದ್ದ. An Englishman’s house is his castle ಅಲ್ಲವೇ? (ಇಂಗ್ಲಿಷ್‌ ಸಜ್ಜನನ ಮನೆಯೇ ಆತನ ಕೋಟೆ!).

ಸ್ಯಾಂಡ್‌ ಹೌಸ್‌ನ ಉಚ್ಛ್ರಾಯ ಸ್ಥಿತಿ, ಅವನತಿ

1870- 80ರ ಸುಮಾರಿಗೆ ಮರಳಿನ ಉದ್ಯಮದಲ್ಲಷ್ಟೇ ಅಲ್ಲ, ಭೂಮಿ, ಮನೆಗಳನ್ನು ಕೊಳ್ಳುವ ಮಾರುವ ಎಸ್ಟೇಟ್‌ ಬಿಸ್‌ನೆಸ್‌ನಲ್ಲೂ ಆತ ಕೈಹಾಕಿದ್ದ. ತಾನು ಕೊಂಡ ಒಂದು ಬ್ರೂವರಿಯಲ್ಲದೆ ಒಂದೆರಡು ಪಬ್‌ ಗಳನ್ನೂ ನಡೆಸುತ್ತಿದ್ದ. ತನ್ನ ಸಿರಿವಂತ ಅಂತಸ್ತಿಗೆ ತಕ್ಕ ಜೀವನ ಶೈಲಿಯಿಂದ ತನ್ನ ದೊಡ್ಡ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಶಿಲೆಯಲ್ಲೇ ಕೊರೆದಿದ್ದರಿಂದ ಗೋಡೆಗಳ ಗಾತ್ರ ಒಂದು ಕಡೆ ಮೂರರಿಂದ ಇನ್ನೊಂದೆಡೆ ಒಂಬತ್ತು ಫೀಟ್‌ನವರೆಗೆ ಇತ್ತು! ಇಡೀ ಮನೆಯ ಉದ್ದಗಲ 120×42 ಫೀಟ್‌ ಇದ್ದರೂ, ಒಂದು ಉದ್ದನೆಯ ಕೋಣೆಯೇ 30 ಫೀಟ್‌ ಇತ್ತು (ಲಾಂಗ್‌ ರೂಮ್).

ಬಾಲ್‌ ರೂಮು ಏಕಕಾಲಕ್ಕೆ 300 ಜನರು ಕೂಡಿ ನರ್ತಿಸುವಷ್ಟು ಭವ್ಯವಾಗಿತ್ತು. ಪ್ರೇಕ್ಷಣೀಯ ದೃಶ್ಯಗಳಲ್ಲಿ ಉಲ್ಲೇಖೀಸಬಹುದಾದ ಇನ್ನೊಂದು ವಿಷಯ ಅಂದರೆ ಸುರಂಗದ ಮೇಲ್ಛಾವಣಿಯಲ್ಲಿ ಆಕಸ್ಮಿಕವಾಗಿ ಹುಟ್ಟಿ ದೈತ್ಯಾಕಾರವಾಗಿ ಬೆಳೆದ ಶಿಲೀಂದ್ರ (Fungus) ಸಹ. ಇವೆಲ್ಲಕ್ಕೂ ಪ್ರವೇಶ ಶುಲ್ಕ ಇಡುವ ಜಾಣ್ಮೆ ಆತನಲ್ಲಿತ್ತು. ಆ ಮನೆಯಲ್ಲಿ ನಲವತ್ತು ವರ್ಷಗಳ ವಾಸದ ಅನಂತರ ಆತನ ತುಂಬು ಜೀವನದ 74ನೇ ವಯಸ್ಸಿನಲ್ಲಿ ಅಂದರೆ 1900ನೇ ಇಸವಿಯಲ್ಲಿ ಆತನನ್ನು ಮಣ್ಣು ಮಾಡಲಾಯಿತು.

ಇವೆಲ್ಲ ಐತಿಹಾಸಿಕ ವಿಷಯಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ನಮಗೆ ಕೊಟ್ಟವರು ಹೆನ್ರಿ ಸೀನಿಯರ್‌ ಮಹಾಶಯನ ಐದು ತಲೆಮಾರು ಕೆಳಗಿನ ಮೊಮ್ಮಗ ರಿಚರ್ಡ್‌ ಬೆಲ್. ಅವರು ಈ “ವಿಕ್ಟೋರಿಯನ್‌ ಮಾರ್ವೆಲ್’ ಬಗ್ಗೆ ತಾವು ಬರೆದ ಪುಸ್ತಕದಲ್ಲಿನ ಕೆಲವು ಚಿತ್ರಗಳನ್ನು ಈ ಲೇಖನದೊಂದಿಗೆ ಪ್ರಕಟಿಸಲು ಅನುಮತಿಯನ್ನೂ ಕೊಟ್ಟಿದ್ದಾರೆ.

ತನ್ನ ಪೂರ್ವಜರ ಆ ಮನೆಯನ್ನು ಸುರಂಗದಲ್ಲಿಳಿದು ಇನ್ನುಳಿದ ವಂಶಜರೊಂದಿಗೆ ಕೊನೆಯ ಸಲ ಕಂಡವರೂ ಅವರೇ. ಹೆನ್ರಿಯ ಮರಣಾನಂತರ ಆತನ ಮನೆಯನ್ನು ಮುನ್ಸಿಪಾಲಿಟಿಗೇ ಮಾರಲಾಯಿತು. ಅದನ್ನು ಅವರು ಸ್ಯಾನಿಟರಿ ಡಿಪಾರ್ಟ್ಮೆಂಟ್‌ ಗೆ ಕೊಟ್ಟರೂ 1940ರ ಹೊತ್ತಿಗೆ ಅದು ದುಃಸ್ಥಿತಿಯನ್ನು ಕಂಡಿತು. ಈ ಊರಿನ ಹೆಮ್ಮೆಯ ಅಪರೂಪದ ಐತಿಹಾಸಿಕ ಮನೆಯನ್ನು ಉಳಿಸಿಕೊಳ್ಳುವ ದೂರದೃಷ್ಟಿ ನಗರದ ಆಡಳಿತ ಮಂಡಳಿ ಹೊಂದಿರಲಿಲ್ಲ. ಒಂದು ತರದ ಅಂಧಗಜ ನ್ಯಾಯವೇ ಸೈ! ಅಲ್ಲಲ್ಲಿ ಬಿರುಕು ಬಿಟ್ಟು ಭೂ ಕುಸಿತವಾಗದಿರಲೆಂದು ಅದರ ಸುರಂಗಗಳಲ್ಲಿ ಕಾಂಕ್ರೀಟ್‌ ಪಂಪು ಮಾಡಿ, ಒಂದು ಕಾಲದಲ್ಲಿ ಡೌಲಾಗಿದ್ದ ಮನೆ ಮತ್ತು ಕುದುರೆ ಲಾಯಗಳನ್ನು ಭೂಗತ ಮಾಡಿ ಅದರ ಮೇಲೆ ಕಣ್ಣಿಗೆ ಕೀಸರವಾಗುವಂಥ ಮಲ್ಟಿ ಸ್ಟೋರಿ ಫ್ಲ್ಯಾಟುಗಳನ್ನು ಕಟ್ಟಿದ್ದಾರೆ.

ಈಗ ಆ ಮರಳಿನ ಮನೆ, ಅದರಲ್ಲಿಯ ಆನೆ ಮರಳಿ ಕಾಣುವಂತಿಲ್ಲ. ರಿಚರ್ಡ್‌ ಬೆಲ್‌ ಅವರಿಂದ ಸ್ಯಾಂಡ್‌ ಹೌಸ್‌ನ ವರ್ಣನೆ ಕೇಳುವಾಗ ನನಗೆ ಇದೇ ತರದ ಮರಳು ಶಿಲೆಯಲ್ಲಿ ಶತಮಾನಗಳ ಪೂರ್ವದಲ್ಲಿ ಕೊರೆದ ಬಾದಾಮಿಯ ಗವಿಗಳು ಮತ್ತು ಜೋರ್ಡನ್‌ನ ಪೆಟ್ರಾ ನೆನಪಾಗುತ್ತವೆ. ರಿಚರ್ಡ್‌ ಮಾತ್ರ ಈ ಮನೆಯ ಇತಿಹಾಸವನ್ನು ಸಚಿತ್ರ ವಿಡಿಯೋ ಉಪನ್ಯಾಸಗಳಲ್ಲಿ ವರ್ಣಿಸುತ್ತ ಜನಮಾನಸದಲ್ಲಿ ಅದರ ನೆನಪು ಉಳಿಯುವಂತೆ ಪ್ರಯತ್ನಿಸುತ್ತಿದ್ದಾರೆ. ಕಳೆದ ವಾರ ನಾನು ಎರಡನೇ ಬಾರಿ ಅವರ ಬಾಯಿಂದಲೇ ಕೇಳಿದ್ದು ಉಪನ್ಯಾಸ ನಂಬರ್‌ 198!

ಶ್ರೀವತ್ಸ ದೇಸಾಯಿ

ಟಾಪ್ ನ್ಯೂಸ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

books-colomn

Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

science-AI-2

ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

2(1)

Puttur: ವಿದ್ಯುತ್‌ ಕಂಬ ಏರುವ ತರಬೇತಿ!; ಪವರ್‌ಮನ್‌ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ

1(1)

Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.