ಭಾರತೀಯ ಮೂಲದ ಶತಾಯುಷಿ ಯೋಗ ಸಾಧಕಿ
Team Udayavani, Jun 30, 2019, 5:00 AM IST
ಇವರು ಭಾರತೀಯ ಮೂಲದ ಮಹಿಳಾ ಯೋಗ ಶಿಕ್ಷಕಿ. ಇವರ ವಯಸ್ಸು 101. ಪ್ರಸ್ತುತ ಅಮೆರಿಕದಲ್ಲಿ ಪ್ರಸಿದ್ಧ ಯೋಗ ಗುರುಗಳು. ಬಿ.ಕೆ.ಎಸ್. ಅಯ್ಯಂಗಾರ್ ಅವರ ಶಿಷ್ಯೆಯಾದ ಇವರು ಈ ಶತಮಾನದ ಹಿರಿಯ ಯೋಗ ಸಾಧಕಿಯೂ ಹೌದು.
ಇಂಡೋ-ಫ್ರೆಂಚ್!
ಇವರ ಜೀವನವೇ ಒಂದು ಪ್ರೇರಣಗಾಥೆ. ಮೂಲತಃ ಪಾಂಡಿಚೇರಿಯವರಾದ ಇವರ ತಂದೆ ಫ್ರೆಂಚ್ ಪ್ರಜೆ, ತಾಯಿ ಭಾರತೀಯಳು. ಭಾರತದಲ್ಲಿ ಪಾಶ್ಚಿಮಾತ್ಯರ ಆಡಳಿತವಿದ್ದ ಕಾಲದಲ್ಲಿ ಪೋರ್ಚನ್ ಲಿಂಚ್ ಜನಿಸಿದ್ದರು. ಆದರೆ ತಾಯಿಯನ್ನು ಕೆಲವೇ ತಿಂಗಳಲ್ಲಿ ಕಳೆದುಕೊಂಡರು. ಬೆರಳೆಣಿಕೆಯಷ್ಟು ವಾರ ಜತೆಗಿದ್ದ ತಂದೆಯೂ ಕೆನಡಕ್ಕೆ ತೆರಳಿದರು. ತಂದೆ ತಾಯಿ ಪ್ರೀತಿಯಿಂದ ವಂಚಿತರಾಗಿ ಅತ್ತೆ ಮತ್ತು ಮಾವನ ಆಶ್ರಯದಲ್ಲಿ ಬೆಳೆದರು ಲಿಂಚ್.
ಗಾಂಧಿ ಜತೆ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗಿ ತನ್ನ 10ನೇ ವಯಸ್ಸಿಗೆ ಫ್ರೆಂಚ್‌ಗೆ ತೆರಳಿ ಹಿಂದಿರುಗಿದಾಗ ರೈಲ್ವೇ ಎಂಜಿನಿಯರ್ ಆಗಿದ್ದ ಅವರ ಮಾವ ಗಾಂಧೀಜಿ ಅವರನ್ನು ಪರಿಚಯಿಸಿದರು. ಬಳಿಕ ಲಿಂಚ್ ಗಾಂಧೀಜಿ ಅವರ ಕಾರ್ಯಕ್ರಮಗಳಲ್ಲಿ ಭಾಗ ವಹಿಸ ತೊಡಗಿದರು. ಗಾಂಧಿ ಅವರ ಸರಳತೆಯನ್ನು ಕಂಡು ಆಶ್ಚರ್ಯವಾಗಿತ್ತು ಎಂದಿದ್ದರು. 1930ರಲ್ಲಿ ಮಹಾತ್ಮ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಕೈಗೊಂಡಾಗ ಅದರಲ್ಲಿ 12 ವರ್ಷದ ಲಿಂಚ್ ಭಾಗವಹಿಸಿದ್ದು ವಿಶೇಷ. ಬಳಿಕ ಗಾಂಧಿ ತಣ್ತೀಗಳಿಗೆ ಮನಸೋತರು.
2ನೇ ಮಹಾಯುದ್ಧದ ಸಂದರ್ಭ ಫ್ರೆಂಚ್‌ಗೆ ತೆರಳಿದ ಲಿಂಚ್ ತಮ್ಮ ಸೈನಿಕರಿಗೆ ಸಹಾಯ ಮಾಡಿ ದ್ದರು. ಬಳಿಕ ಅವರು ಲಂಡನ್ ನೈಟ್‌ಕ್ಲಬ್ ಸೇರಿದ್ದರು. 1940ರ ಬಳಿಕ ಹಾಲಿವುಡ್ ಸಿನೆಮಾಗಳತ್ತ ಆಕರ್ಷಿತರಾಗಿದ್ದರು.
ನೋ ಎಂದಿದ್ದ ಅಯ್ಯಂಗಾರ್
ಲಂಡನ್‌ನಲ್ಲಿರಬೇಕಾದರೆ ಯೋಗ ಕ್ಷೇತ್ರ ಇವರನ್ನು ಆಕರ್ಷಿಸಿತು. ಬಿ.ಕೆ.ಎಸ್. ಐಯ್ಯಂಗಾರ್ ಅವರ ಬಳಿ ಯೋಗ ತರಗತಿಗಾಗಿ ಆಗಮಿಸಿದರು. ಆದರೆ ಅವರು ಸ್ತ್ರೀಗೆ ಯೋಗ ಕಲಿಸುವುದಿಲ್ಲ ಎಂದರು. ಮನವಿ ಮಾಡಿಕೊಂಡ ಬಳಿಕ ಒಪ್ಪಿದರು. 17 ವರ್ಷ ಅಯ್ಯಂಗಾರ್‌ರ ಶಿಷ್ಯೆ ಯಾಗಿದ್ದರು. ಆ ಬಳಿಕ ಅಷ್ಟಾಂಗ ಯೋಗದ ಕೆ. ಪಟ್ಟಾಭಿ ಜೋಷಿ ಬಳಿ ತೆರಳಿದರು.
ಇಂದು ಯೋಗ ಗುರು
ಹಲವು ದೇಶಗಳ ಗಾಳಿ ಸೇವಿಸಿದ್ದ ಲಿಂಚ್ ಇಂದು ನ್ಯೂಯಾರ್ಕ್ ನಲ್ಲಿ ನೆಲೆಸಿದ್ದಾರೆ. ಜತೆಗೆ ವಾರಕ್ಕೆ 5-7 ಯೋಗ ತರಗತಿಗಳನ್ನು ನಡೆಸಿ ಕೊಡುತ್ತಿದ್ದಾರೆ. ಹಾಂಕಾಂಗ್‌ನಲ್ಲೂ ಯೋಗ ತರಗತಿ ನಡೆ ಸುತ್ತಾರೆ. ತನ್ನ ಇಳಿ ವಯಸ್ಸಿನಲ್ಲಿ ಹಲವು ಟಿವಿ ರಿಯಾಲಿಟಿ ಶೋಗಳಲ್ಲಿ ಡಾನ್ಸರ್ ಆಗಿ ಭಾಗವಹಿಸಿ, ಸ್ಟಾಂಡಿಂಗ್ ಅವೇಶನ್ ಪಡೆದುಕೊಂಡ ಕೀರ್ತಿ ಲಿಂಚ್‌ರದ್ದು.
ತಂದೆ ಫ್ರೆಂಚ್-
ತಾಯಿ ಭಾರತೀಯೆ
ಟಾವೊ ಪೋರ್ಚ ನ್ ಲಿಂಚ್
ಜನನ: 13 ಅಗಸ್ಟ್ 1918
- ಕಾರ್ತಿಕ್ ಅಮೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.