ಆಪತ್‌ ಕಾಲಕ್ಕೆ ಇರಲಿ ಒಂದು ಉಳಿತಾಯ ನಿಧಿ


Team Udayavani, Jan 24, 2021, 7:25 AM IST

Untitled-1

ಪ್ರತೀ ತಿಂಗಳೂ ವೇತನ ಬರುತ್ತಿತ್ತು, ಅದರಲ್ಲಿ ಒಂದಿಷ್ಟು ಪಾಲು ಮನೆ ಖರ್ಚಿಗೆ, ಇನ್ನೊಂದಿಷ್ಟು ಪಾಲು ಸಾಲ ತೀರಿಸಲು, ಮತ್ತೂಂದಿಷ್ಟು ಪಾಲು ಸಿನೆಮಾ, ಸುತ್ತಾಟ, ಹೊಟೇಲ್‌ ಊಟ ಇತ್ಯಾದಿ ಮನರಂಜನೆಯ ಚಟುವಟಿಕೆಗಳಿಗೆ ಬಳಕೆಯಾಗುತ್ತಿತ್ತು. ಪ್ರತೀ ತಿಂಗಳು ಕೈಗೆ ಸಿಗುತ್ತಿದ್ದ ವೇತನದಲ್ಲಿ ಒಂದಿಷ್ಟು ದಿನಗಳು ಅತ್ತಿತ್ತ ಆದರೂ ಹಾಗೋ ಹೀಗೋ ಲೆಕ್ಕಾಚಾರ ಮಾಡಿ ಜನಸಾಮಾನ್ಯರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನಬಂಡಿ ಸಾಗುತ್ತಿತ್ತು. ಸಿಗುತ್ತಿದ್ದ ವೇತನಕ್ಕೇ ಕತ್ತರಿ ಬೀಳಬಹುದು ಎಂಬುದನ್ನು ಉದ್ಯೋಗಸ್ಥರು ಕನಸು-ಮನಸ್ಸಿ ನಲ್ಲೂ ಎಣಿಸಿರಲಿಲ್ಲ.

ಕೋವಿಡ್‌ ಪೂರ್ವದಲ್ಲಿ  ಆರ್ಥಿಕ ತಜ್ಞರು ಪ್ರತೀ ವ್ಯಕ್ತಿ ತನ್ನ ಮೂರು ತಿಂಗಳುಗಳ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಅಗತ್ಯವಿರುವಷ್ಟು ಹಣವನ್ನು ದಪತ್‌ ಕಾಲದ ಧನದ ರೂಪದಲ್ಲಿ ಇರಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದರು. ವ್ಯಕ್ತಿ ಉದ್ಯೋಗ ಕಳೆದುಕೊಂಡರೆ ಅಥವಾ ಇನ್ಯಾವುದೋ ಕಾರಣ ದಿಂದ ಆದಾಯ ಇಲ್ಲದಂತೆ ಆದರೆ ಹೊಸ ಉದ್ಯೋಗವನ್ನು, ಆದಾಯ ಮೂಲವನ್ನು ಹುಡುಕಿ ಕೊಳ್ಳಲು ಗರಿಷ್ಠ ಮೂರು ತಿಂಗಳು ಗಳು ಸಾಕಾಗಬಹುದು ಎಂಬ ಅಂದಾಜಿನಿಂದ ಆ ಸಲಹೆ ನೀಡುತ್ತಿದರು. ಆದರೆ ಈಗ  ಪ್ರತೀ ವ್ಯಕ್ತಿಯೂ ಕನಿಷ್ಠ ಆರು ತಿಂಗಳುಗಳ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಅಗತ್ಯವಿರುವ ಹಣವನ್ನು ಆಪತ್‌ ಕಾಲದ ಧನವಾಗಿ ತೆಗೆದಿರಿಸಬೇಕು ಎಂಬ ಸಲಹೆ ನೀಡುತ್ತಿದ್ದಾರೆ.  ಏಕೆಂದರೆ ಇಂದಿನ ಸಂಕಷ್ಟದ ಸಂದರ್ಭದಲ್ಲಿ ಮೂರು ತಿಂಗಳುಗಳಲ್ಲಿ ಹೊಸ ಉದ್ಯೋಗ ಹುಡುಕಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುತ್ತದೆ ಎನ್ನಲಾಗದು.

ಆಪತ್‌ ಕಾಲಕ್ಕೆ ಅಗತ್ಯವಿರುವ ಹಣವನ್ನು ಮಾಮೂಲಿ ಉಳಿ ತಾಯ ಖಾತೆಯಲ್ಲಿ ಇರಿಸುವುದು ತರವಲ್ಲ. ಆ ಹಣವನ್ನು ನಿಶ್ಚಿತ ಠೇವಣಿ ಯಾಗಿಯೂ ಇರಿಸಲಾಗದು. ಅದನ್ನು ಲಿಕ್ವಿಡ್‌ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಇರಿಸುವುದು ಸೂಕ್ತ. ಲಿಕ್ವಿಡ್‌ ಫ‌ಂಡ್‌ಗಳು ಹಣಕ್ಕೆ ಉಳಿತಾಯ ಖಾತೆಗಿಂತ ತುಸು ಹೆಚ್ಚಿನ ಬಡ್ಡಿ ನೀಡುತ್ತವೆ. ಹಣವನ್ನು ಯಾವಾಗ ಬೇಕಿದ್ದರೂ ಹಿಂಪಡೆಯಬಹುದು. ಆಪತ್‌ ಕಾಲಕ್ಕೆಂದು ನಿಧಿ ಇಲ್ಲದಿದ್ದರೆ, ಉಳಿತಾಯದ ಹಣ ಕರಗಿಸಬೇಕಾಗುತ್ತದೆ. ಪೇಟಿಎಂ ಮನಿ, ಫೋನ್‌ ಪೇ ತರಹದ ಹೊಸ ಕಾಲದ ಹಣಕಾಸು ನಿರ್ವಹಣ ಆ್ಯಪ್‌ಗ್ಳಲ್ಲಿ  ಕೂಡ ಲಿಕ್ವಿಡ್‌ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಹಣ ಇರಿಸಬಹುದು.

 

ಅಂಶಗಳು ನೆನಪಿನಲ್ಲಿರಲಿ :

  • ಆರು ತಿಂಗಳುಗಳ ಖರ್ಚು ನಿಭಾಯಿಸಲು ಬೇಕಿರುವಷ್ಟು ಹಣ ಪ್ರತ್ಯೇಕವಾಗಿ ತೆಗೆದಿರಿಸಿ.
  • ಸಾಧ್ಯವಾದರೆ ಈ ಹಣವನ್ನು ಲಿಕ್ವಿಡ್‌ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಇರಿಸಿ.
  • ಕಷ್ಟಕಾಲಕ್ಕೆಂದು ಹಣ ಇರಿಸದಿದ್ದರೆ ನಿಮ್ಮ ಉಳಿತಾಯ ಕರಗಿ ನೀರಾಗುತ್ತದೆ.
  • ಖರ್ಚಿಗೆ ಇನ್ನಷ್ಟು ಕಡಿವಾಣ ಹಾಕಿ ಉಳಿಕೆ ಮೊತ್ತವನ್ನು ಆಪತ್‌ ಕಾಲದ ನಿಧಿಯಲ್ಲಿ ಸಂಗ್ರಹಿಸಿ.
  • ಹಾಗೆಂದು ನಿಮ್ಮ ಹಾಲಿ ಉಳಿತಾಯ, ವಿಮಾ ಯೋಜನೆಗಳ ಮೇಲಣ ಹೂಡಿಕೆಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬೇಡಿ.
  • ಉಳಿತಾಯ ಬೇರೆ, ಆಪತ್‌ ಕಾಲದ ನಿಧಿ ಬೇರೆ ಎಂಬುದು ನಿಮ್ಮ ಗಮನದಲ್ಲಿರಲಿ.
  • ಅಗತ್ಯವಾದಲ್ಲಿ ಈ ಸಂಬಂಧ ಹಣಕಾಸು ಸಲಹೆಗಾರರಿಂದ ಪಡೆದುಕೊಳ್ಳಿ.

ಟಾಪ್ ನ್ಯೂಸ್

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ABV-Modi

A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಭದ್ರ ಬುನಾದಿ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.