ಪಠ್ಯ ಪುಸ್ತಕದ ಮೇಲೆ ಎಡ-ಬಲ ಸಿದ್ಧಾಂತ ಸಂಘರ್ಷ


Team Udayavani, May 26, 2022, 6:10 AM IST

ಪಠ್ಯ ಪುಸ್ತಕದ ಮೇಲೆ ಎಡ-ಬಲ ಸಿದ್ಧಾಂತ ಸಂಘರ್ಷ

ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ಕೇಸರೀಕರಣ, ಜಾತೀಕರಣ, ಎಡಪಂಥ- ಬಲಪಂಥ, ಬ್ರಾಹ್ಮಣ್ಯ, ವೈದಿಕ ಧರ್ಮ, ಮೇಲ್ವರ್ಗ- ಕೆಳವರ್ಗ ಎಂಬಿತ್ಯಾದಿ ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ರಾಜಕಾರಣಿಗಳು, ಸಾಹಿತಿಗಳು, ಶಿಕ್ಷಣ ತಜ್ಞರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪಠ್ಯಪುಸ್ತಕವು ಸರಕಾರ, ಶಾಲೆ, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾತ್ರ ಸೀಮಿತವಾಗದೆ, ಜಾತಿ-ಧರ್ಮದ ವಿಚಾರವಾಗಿ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಲಿ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಹಾಗೂ ಹಿಂದಿನ ಅಧ್ಯಕ್ಷ ಪ್ರೊ| ಬರಗೂರು ರಾಮಚಂದ್ರಪ್ಪ ಮುಕ್ತವಾಗಿ “ಉದಯವಾಣಿ’ ಜತೆ ಮಾತನಾಡಿದ್ದಾರೆ.

ಅವಶ್ಯವಿದ್ದರೆ ಪರಿಷ್ಕರಣೆ ಮಾಡಿ, ವಿವಾದ ಬೇಡ

– ಪಠ್ಯಕ್ರಮ ವಿವಾದ ನಿಮ್ಮ ಸುತ್ತಲೇ ಗಿರಕಿ ಹೊಡೆಯುತ್ತಿದೆ ಯಾಕೆ?
ಪರಿಷ್ಕರಣೆ ವಿಚಾರ ನನ್ನ ಸುತ್ತ ಏಕೆ ಗಿರಕಿ ಹೊಡೆ ಯುತ್ತಿದೆ ಎಂಬುದು ನನಗಂತೂ ಗೊತ್ತಿಲ್ಲ. ನಾನು ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ 5 ವರ್ಷವಾಗುತ್ತಿದೆ. ನೂತನ ಸಮಿತಿ ಅವಶ್ಯವಿದ್ದರೆ ಮತ್ತೂಮ್ಮೆ ಪರಿಷ್ಕರಣೆ ಮಾಡಲಿ. ಆದರೆ ಇದಕ್ಕಾಗಿ ಬೀದಿ ರಂಪಾಟ ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ.

– ನೀವು ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿ¨ªಾಗ ಪಕ್ಷಪಾತಿ ಆಗಿದ್ದೀರಂತೆ?
ನಾನು ಪಕ್ಷಪಾತಿಯಲ್ಲ, ಪಾಠಗಳು ವಿಷಯಾಧಾರಿ ತವಾಗಿರಬೇಕೇ ವಿನಾ ವ್ಯಕ್ತಿಯಾಧಾರಿತ ವಾಗಿರ ಬಾರದು. ಪಾಠದಲ್ಲಿ ಏನಿದೆ ಎಂಬುದು ಮುಖ್ಯವಾಗಿದೆ. ಮಿಥ್ಯಾರೋಪ ಮತ್ತು ವೈಯಕ್ತಿಕ ಟೀಕೆಗಳಿಗೆ ಉತ್ತರ ನೀಡುವುದಿಲ್ಲ. ವೈಯಕ್ತಿಕ ತೇಜೋವಧೆಗೆ ನಾನು ಕೂಡ ಹೋಗಲ್ಲ.

– ದೇವನೂರು ಮಹಾದೇವ, ಜಿ.ರಾಮಕೃಷ್ಣ ಅವರು ತಮ್ಮ ಪಠ್ಯ ತೆಗೆದುಬಿಡಿ ಎಂದು ಹೇಳುವ ಮಟ್ಟಿಗೆ ಆಗಿರುವ ಅಪಚಾರವಾದರೂ ಏನು?
ಅವರನ್ನೇ ಕೇಳಬೇಕು. ನಾನು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ.

– “ಕುವೆಂಪು ಅನೇಕರಿಂದ ದೊಡ್ಡ ಸಾಹಿತಿಯಾದರು’ ಎಂಬ ಸಾಲು ನಿಮ್ಮ ಅವಧಿಯಲ್ಲಿಯೇ ಸೇರಿಸಲಾಗಿತ್ತಂತೆ ಹೌದಾ ?
4ನೇ ತರಗತಿಯ “ಪರಿಸರ ಅಧ್ಯಯನ’ ಪಠ್ಯಪುಸ್ತಕದಲ್ಲಿರುವ ಕುವೆಂಪು ಅವರನ್ನು ಕುರಿತ ಪರಿಚಯವನ್ನು ಪಠ್ಯಪುಸ್ತಕ ಮೂಲ ರಚನೆ ವೇಳೆ ಬರೆಯಲಾಗಿತ್ತು. ನಮ್ಮ ಕಾಲದ ಪರಿಷ್ಕರಣೆಯಲ್ಲಿ ಬರೆದದ್ದಲ್ಲ. ಹೊಸದಾಗಿ ನಾವು ಒಂದು ಸಾಲು ಕೂಡ ಸೇರ್ಪಡೆ ಮಾಡಿಲ್ಲ. ಇಷ್ಟಕ್ಕೂ ಕುವೆಂಪು ಅವರ “ಮನುಜ ಮತ ವಿಶ್ವಪಥ’ ಸಂದೇಶದ ಬೆಳಕಿನಲ್ಲಿ ಸಾಗುತ್ತಿರುವ ನಾನು ಮತ್ತು ನನ್ನಂಥವರು ಅವರ ಅಪೂರ್ವ ಸಾಧನೆಯನ್ನು ಸ್ವಲ್ಪವೂ ಅವಗಣಿಸಲು ಸಾಧ್ಯವೇ ಇಲ್ಲ. ಆದ್ದರಿಂದ ಪಠ್ಯಪುಸ್ತಕಗಳ ವಿಷಯದಲ್ಲಿ ಈಗ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಲು ಮುಖ್ಯಮಂತ್ರಿ ಮಧ್ಯ ಪ್ರವೇಶಿಸಬೇಕು. ವಿದ್ಯಾರ್ಥಿಗಳು ಮತ್ತು ಪೋಷಕರಲ್ಲದೆ ಒಟ್ಟಾರೆ ಸಾರ್ವಜನಿಕರಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆ ಅಪನಂಬಿಕೆ ಮೂಡದಂತೆ ನೋಡಿಕೊಳ್ಳಬೇಕು.

 – ಓಟ್‌ ಬ್ಯಾಂಕ್‌ಗಾಗಿ ಟಿಪ್ಪುವಿನ ವಿಜೃಂಭಣೆ ಮಾಡಲಾಗಿದೆ ಅಂತ ಆರೋಪ ಇದೆಯಲ್ಲ ?
7ನೇ ತರಗತಿ ಭಾಗ-1ರಲ್ಲಿ “ಮೈಸೂರು ಒಡೆಯರು’ ಎಂಬ ಪ್ರತ್ಯೇಕ ಅಧ್ಯಾಯವನ್ನು ನೀಡಲಾಗಿದೆ. ಮೈಸೂರು ಮಹಾರಾಜರನ್ನು 4 ಸಾಲುಗಳಿಗೆ ಇಳಿಸಿದ್ದಾರೆಂಬುದು ಶುದ್ಧ ಸುಳ್ಳು. ಅದಕ್ಕೆ ಬೇಕಾದ ಸಮಗ್ರ ಮಾಹಿತಿಯನ್ನು ಕೂಡ ಒದಗಿಸಿದ್ದೇನೆ. ಅದು ಸಾಲದು ಎಂದರೆ, ಮರು ಪರಿಷ್ಕರಣೆ ವೇಳೆ ಸೇರ್ಪಡೆ ಮಾಡಲಿ. ಆದರೆ, ನಮ್ಮ ಮೇಲೆ ಆರೋಪ ಏಕೆ ಮಾಡಬೇಕು?
ಹಾಗೆಯೇ ಟಿಪ್ಪುವನ್ನು ಒಳಗೊಂಡಂತೆ ಯಾರ ಬಗ್ಗೆಯೂ ಸಮಾಜ ವಿಜ್ಞಾನ ಪಠ್ಯಪುಸ್ತಕ ಸಮಿತಿ ಆಧಾರವಿಲ್ಲದೆ ಏನನ್ನೂ ಸೇರಿಸಿಲ್ಲ. ಟಿಪ್ಪು, ಸಾವರ್ಕರ್‌ ಒಳಗೊಂಡಂತೆ ಯಾರ ಬಗ್ಗೆಯೂ ನಕಾರಾತ್ಮಕ ವಿಷಯಗಳನ್ನು ಹೇಳದೆ ನಡೆದ ಘಟನೆಗಳ ವಾಸ್ತವದ ಮಾಹಿತಿಯನ್ನಷ್ಟೇ ನೀಡಲಾಗಿದೆ. ಶಾಲಾ ಮಕ್ಕಳಿಗೆ ಪರ ಮತ್ತು ವಿರೋಧದ ಚರ್ಚೆಗಳ ಬದಲು ಸಕಾರಾತ್ಮಕ ಮಾಹಿತಿ ಒದಗಿಸುವ ಉದ್ದೇಶವೇ ಮುಖ್ಯವೆಂದು ಭಾವಿಸಲಾಗಿತ್ತು.

– ನೆಹರೂ ಇಂದಿರಾ ಗಾಂಧಿಗೆ ಬರೆದ ಪತ್ರ ಮುಖ್ಯನಾ? ಸಿಂಧೂ ನಾಗರಿಕತೆ ಮುಖ್ಯನಾ ಅಂತ ಬಿಜೆಪಿಯವರು ಪ್ರಶ್ನಿಸುತ್ತಿದ್ದಾರಲ್ಲ ?
ಸಿಂಧೂ ನಾಗರಿಕತೆ ಪಾಠವನ್ನು ಕೂಡ ನಾವು ಬಿಟ್ಟಿಲ್ಲ. ಆದರೆ ಅವರು ಯಾವ ರೀತಿಯಲ್ಲಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂಬುದು
ನನಗೆ ಗೊತ್ತಿಲ್ಲ. ಆದರೆ ಪರಿಷ್ಕರಣೆ ಮಾಡುವುದೇ ಕೆಲವು ಬದಲಾವಣೆ ಮಾಡುವುದಕ್ಕೆ. ನಮ್ಮ ಸಮಿತಿಯಲ್ಲಿ ತಪ್ಪುಗಳಿದ್ದರೆ ಅದನ್ನು ಬದಲಾ
ವಣೆ ಮಾಡಲಿ. ಇದರಲ್ಲಿ ನನ್ನ ಅಭ್ಯಂತರವೇನಿಲ್ಲ.

– ನೀವು ಹಿಂದೂ ಮಹಾಸಾಗರ ಹೆಸರನ್ನೇ ಇಂಡಿಯನ್‌ ಓಷನ್‌ ಅಂತ ಬಳಕೆ ಮಾಡಿದ್ದೀರಿ ಅಂತಿದಾರಲ್ಲ ನಿಜಾನಾ ?
ನಾನು ಪರಿಷ್ಕರಣೆ ಮಾಡಿದ್ದ ಹಿಂದಿನ ಸಮಿತಿ ಮೇಲೆ ಒಂದೇ ಒಂದು ಮಾತು ಕೂಡ ಟೀಕೆ ಮಾಡಿಲ್ಲ. ಅದನ್ನೇ ಇವರು ಕೂಡ ಮಾಡಲಿ. ಆದರೆ ನನ್ನನ್ನು ಮಧ್ಯದಲ್ಲಿ ಎಳೆಯುವುದು ಸರಿಯಲ್ಲ. ದೋಷಗಳಿದ್ದರೆ, ಸರಿ ಮಾಡಬಹುದು ಎಂದು ಹೇಳಿದ್ದೇವೆ. ಪರಿಷ್ಕರಣೆ ಮಾಡುವ ನೆಪದಲ್ಲಿ ಆರೋಪ- ಪ್ರತ್ಯಾರೋಪಗಳನ್ನು ಮಾಡುವುದು ಸರಿಯಲ್ಲ. ನಾನೊಬ್ಬನೇ ಅಲ್ಲ ಎಷ್ಟೊಂದು ಜನ ಮಾತನಾಡುತ್ತಿ ದ್ದಾರೆ. ಅವರೆಲ್ಲರೂ ದಡ್ಡರಾ? ನಾವು ಸುಮ್ಮನೆ ಪರಿಷ್ಕರಣೆ ಮಾಡಿಲ್ಲ. 27 ಸಮಿತಿಗಳು ಇದ್ದವು. 172 ತಜ್ಞರು ಕೆಲಸ ಮಾಡಿದ್ದಾರೆ. ಅಧ್ಯಾಪಕರು, ಅಧ್ಯಾಪಕರ ಸಂಘ ಗಳನ್ನು ಒಳಗೊಂಡಿತ್ತು. ಡಯಟ್‌ ಪ್ರಾಂಶುಪಾಲರನ್ನು ಸೇರಿಸಿದ್ದೆವು. ಎಲ್ಲರೂ ಹೇಳಿದ್ದನ್ನು ಸೇರಿಸಿದ್ದೇವೆ.

– ಹೆಗ್ಡೆವಾರ್‌, ಸೂಲಿಬೆಲೆ ಪಾಠ ಸೇರಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸುವ ನೀವು, ಜಿ. ರಾಮಕೃಷ್ಣ ಮತ್ತು ಜಯಮಾಲಾ ಅವರ ಪಾಠ ಸೇರಿಸಲು ಯಾವ ಮಾನದಂಡ ಕಾಯ್ದುಕೊಂಡಿದ್ದೀರಿ?
ಬಲ ಅಥವಾ ಎಡ ಎಂಬುದು ಮುಖ್ಯವಲ್ಲ. ಸೇರ್ಪಡೆ ಮಾಡುತ್ತಿರುವ ಪಾಠ ಎಂಥದ್ದು. ಜಾತಿ ವಾದ ಬಿತ್ತುತ್ತಾ? ಧಾರ್ಮಿಕ ಮೂಲಭೂತವಾದ ಬಿತ್ತುತ್ತಾ? ಮಕ್ಕಳಿಗೆ ಇದನ್ನು ಹೇಳಿಕೊಡಬೇಕಾ ಎಂಬ ವಿಷಯಗಳನ್ನು ಚರ್ಚಿಸಬೇಕು. ಸಾಹಿತಿಗಳನ್ನು ಆಯ್ಕೆ ಮಾಡುವ ವೇಳೆ ವ್ಯಕ್ತಿಗಿಂತ ವಿಷಯವನ್ನು ಮುಖ್ಯವಾಗಿ ಪರಿಗಣಿಸಲಾಗಿತ್ತು. ಮಕ್ಕಳಿಗೆ ಉತ್ತಮ ಪಠ್ಯವನ್ನು ನೀಡಬೇಕು ಎಂಬುದು ನಮ್ಮ ಗುರಿಯಾಗಿತ್ತು.

– ಮಕ್ಕಳ ಹಿತಾಸಕ್ತಿಯನ್ನು ಬಲಿಕೊಟ್ಟು ಎಡ ಬಲ ಸಂಘರ್ಷ ನಡೆಸುತ್ತಿರುವುದು ಸರಿಯೇ?
ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಲುಷಿತಗೊಳಿಸಿ ವಾದ-ವಿವಾದಗಳನ್ನು ಮಾಡುವ ಬದಲು ವಿವಾದ ಬಗೆಹರಿಸಲಿ. ಮಕ್ಕಳಲ್ಲಿ ತಪ್ಪು ಅಭಿಪ್ರಾಯ ಮೂಡದಂತೆ ನೋಡಿ‌ಕೊಳ್ಳಲಿ. ಸಣ್ಣ-ಪುಟ್ಟ ತಪ್ಪುಗಳಿದ್ದರೆ ಸೇರಿಸಿ. ಸುಮ್ಮನೆ ವಾದ ಮಾಡುವುದರಿಂದ ಪ್ರಯೋಜನವಿಲ್ಲ.

– ಪ್ರೊ| ಬರಗೂರು ರಾಮಚಂದ್ರಪ್ಪ
**
ಜಿನ್ನಾ ಬೇಕು, ಹೆಗ್ಡೆವಾರ್‌ ಬೇಡ ಅಂದರೆ ಹೇಗೆ?

– ನೀವು ಪರಿಷ್ಕರಣೆ ಮಾಡಿರುವ ಪಠ್ಯಪುಸ್ತಕಕ್ಕೆ ವಿರೋಧ ವ್ಯಕ್ತವಾಗುತ್ತಿದೆಯಲ್ಲ?
ಪರಿಷ್ಕರಣೆ ಮಾಡಿರುವ ವಿಷಯಗಳನ್ನು ಕುರಿತು ಮಾತನಾಡಿದರೆ ಉತ್ತರಿಸಬಹುದು. ಆದರೆ ಕೆಲವರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ವಿವಾದವಾಗು ತ್ತಿದೆ. ಜಾತಿ/ವ್ಯಕ್ತಿ ಆಧಾರದಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ. ಜಿ. ರಾಮಕೃಷ್ಣ ಅವರ ಭಗತ್‌ಸಿಂಗ್‌ ಪಾಠಕ್ಕೆ ಮತ್ತಷ್ಟು ಪೂರಕ ಅಂಶಗಳನ್ನು ಸೇರ್ಪಡೆ ಮಾಡ ಲಾಗಿದೆ. ಆರಂಭದಲ್ಲಿ ಪಾಠ ಇಲ್ಲವೆಂದು ಹೇಳಿದರು. ಈಗ ತೆಗೆಯಿರಿ ಎನ್ನುತ್ತಿದ್ದಾರೆ. ಆದ್ದರಿಂದ ವಿವಾದ ಯಾರು ಮಾಡುತ್ತಿದ್ದಾರೆಂದು ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನೆಯಾಗುತ್ತಿದೆ.

– ಇದು ಮಕ್ಕಳ ಹಿತಾಸಕ್ತಿಯನ್ನು ಬಲಿಕೊಟ್ಟು ಮಾಡುತ್ತಿರುವ ಎಡ ಬಲ ಸಂಘರ್ಷ ಎನ್ನಿಸುತ್ತಿಲ್ಲವೇ?
ನಮಗೆ ಸಂಘಟನೆ ಯಾವುದು ಮತ್ತು ರಾಜಕೀಯ ಪಕ್ಷ ಯಾವುದು ಎಂಬುದರ ಬಗ್ಗೆ ಸ್ಪಷ್ಟನೆ ಇರಬೇಕು. ಹೆಗ್ಡೆವಾರ್‌ ವಾರ್‌ ಇರುವ ತನಕ ಬಿಜೆಪಿ ಅಸ್ತಿತ್ವಕ್ಕೆ ಬಂದಿರಲಿಲ್ಲ. ಅವರು ಪಕ್ಷ ಕಟ್ಟಿಲ್ಲ, ಸ್ವಯಂ ಸೇವಕ ಸಂಸ್ಥೆಯನ್ನು ಕಟ್ಟಿದರು. ಸಂಘಟನೆ ಕಟ್ಟಿದವರನ್ನು ಸೇರಿಸಬಾರದು ಎಂದಾದರೆ ಇತಿಹಾಸ ಪಠ್ಯದಲ್ಲಿ ಜಿನ್ನಾ ಏಕೆ? ಆರ್ಯ ಸಮಾಜ, ಬ್ರಹ್ಮ ಸಮಾಜ, ಥಿಯಾಸೋಫಿಕಲ್‌ ಸೊಸೈಟಿ, ಸತ್ಯಶೋಧಕ ಸಮಾಜವನ್ನು ಏಕೆ ಸೇರಿಸಬೇಕು? ಮುಸ್ಲಿಂ ಲೀಗ್‌ ಕಟ್ಟಿದ ಜಿನ್ನಾ ಬೇಕು, ಆರ್‌ಎಸ್‌ಎಸ್‌ ಸ್ಥಾಪಿಸಿದ ಹೆಗ್ಡೆವಾರ್‌ ಬೇಡ ಎಂದರೆ ಹೇಗೆ?

– ಗಣಿತ ಪ್ರಾಧ್ಯಾಪಕರಾದ ನಿಮಗೆ ಇತಿಹಾಸ ಪರಿಷ್ಕರಿಸುವ ಅರ್ಹತೆ ಇಲ್ಲ ಅಂತಿದಾರಲ್ಲಾ?
ಗಣಿತ ಪ್ರಾಧ್ಯಾಪಕ ಇತಿಹಾಸ, ಸಮಾಜ ಅಧ್ಯಯನ ಪಠ್ಯವನ್ನು ಪರಿಷ್ಕರಣೆ ಮಾಡಬಾರದು ಎನ್ನುವುದಾದರೆ, ಬರಗೂರು ರಾಮಚಂದ್ರಪ್ಪನವರು ಕನ್ನಡ ಪ್ರಾಧ್ಯಾಪ ಕರು. ಅವರು ಯಾವ ಮಾನದಂಡದ ಆಧಾರದಲ್ಲಿ ಸಮಾಜ ಅಧ್ಯಯನ, ಇಂಗ್ಲಿಷ್‌, ವಿಜ್ಞಾನ, ಗಣಿತ, ತಮಿಳು, ತೆಲುಗು, ಉರ್ದು ಎಲ್ಲವನ್ನೂ ಪರಿಷ್ಕರಣೆ ಮಾಡಿದರು. ಅವರ ಅರ್ಹತೆ ಏನು?

– ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಶೇ. 90 ರಷ್ಟು ಒಂದೇ ಸಮುದಾಯದವರು ತುಂಬಿದ್ದಾರೆ ಎಂಬ ಆರೋಪ ಇದೆಯಾ?
ಒಂದು ಕಡೆ ಜಾತಿ ಬೇಕು ಎನ್ನುತ್ತಾರೆ. ಮತ್ತೂಂದೆಡೆ ಬೇಡವೆನ್ನುತ್ತಾರೆ. ಸಾಹಿತಿಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸಬೇಕು ಎನ್ನುತ್ತಾರೆ. ದೇವನೂರು ಮಹಾದೇವ ಅವರು “ಭಾರತದಂತಹ ಸಂಕೀರ್ಣ ದೇಶದಲ್ಲಿ ಪ್ರಜ್ಞಾಪೂ ರ್ವಕವಾಗಿ ಜಾತಿಯನ್ನು ಗುರುತಿಸದಿದ್ದರೆ ಬಹುತ್ವ ಕಣ್ಮರೆಯಾಗುತ್ತದೆ’ ಎನ್ನುತ್ತಾರೆ. ಪಠ್ಯಪುಸ್ತಕದಲ್ಲಿ ಕೇವಲ ಬ್ರಾಹ್ಮಣರೇ ಕಾಣಬೇಕು ಎಂಬ ದುರುದ್ದೇಶದಿಂದ ದಲಿತ ಸಾಹಿತ್ಯವನ್ನು ದೇವನೂರು ವಾಪಸ್‌ ಪಡೆದು ಕೊಂಡಿದ್ದಾರೆ. ನಾನು ಬಹುತ್ವವನ್ನು ಪ್ರತಿಪಾದನೆ ಮಾಡು ವವನು. ಪಠ್ಯದಲ್ಲಿ ಬಿ.ಎಸ್‌.ಸನದಿ, ಎಂ.ಅಕºರ್‌ ಅಲಿ ಸೇರಿ ಎಲ್ಲ ಜಾತಿಗಳ ಸಾಹಿತಿಗಳು ಇದ್ದಾರೆ.

– ಪಠ್ಯದಲ್ಲಿ ಬಲಪಂಥೀಯ ಚಿಂತನೆ ಹೇರುತ್ತಿದ್ದೀರಿ ಎಂಬ ಆರೋಪ ಇದೆಯಲ್ಲಾ ?
ಪೆರಿಯಾರ್‌ ಹಿಂದೂ, ಬ್ರಾಹ್ಮಣ ಸಂಸ್ಕೃತಿಯನ್ನು ಹಾಗೂ ವೈದಿಕ ಸಂಸ್ಕೃತಿಯನ್ನು ತೀವ್ರವಾಗಿ ವಿರೋಧಿ ಸಿದ ವ್ಯಕ್ತಿ. ಬ್ರಾಹ್ಮಣ ಮತ್ತು ಹಾವು ಬಂದರೆ ಮೊದಲು ಬ್ರಾಹ್ಮಣರನ್ನು ಕೊಲ್ಲಿ ಎಂದಿದ್ದ ವ್ಯಕ್ತಿ. ರಾಮನ ವಿಗ್ರಹ ಗಳಿಗೆ ಚಪ್ಪಲಿ ಹಾಕಿದ್ದ ವ್ಯಕ್ತಿಯ ವಿಚಾರವನ್ನು ಪಠ್ಯದಲ್ಲಿ ಸೇರಿಸಿದ್ದ ವೇಳೆ ಒಬ್ಬರೂ ಮಾತನಾಡಲಿಲ್ಲ.

ಉದಾಹರಣೆಗೆ- ದಲಿತನೊಬ್ಬನನ್ನು ಕೀಳುಮಟ್ಟದ ಭಾಷೆಯಲ್ಲಿ ನಾವು ಬೈದರೆ, ಅಂತಾರಾಷ್ಟ್ರೀಯ ಮಟ್ಟ ದಲ್ಲಿ ವಿವಾದವಾಗುತ್ತದೆ. ಅದೇ ರೀತಿ ವೈದಿಕ ಸಂಸ್ಕೃತಿಗೆ ಅವಮಾನ ಮಾಡಿದ ಆಧಾರದಲ್ಲಿ ಪೆರಿಯಾರ್‌ ಪಠ್ಯದ ಕೆಲವು ವಿಷಯಗಳನ್ನು ಕೈಬಿಡಲಾಗಿದೆ. ಯಾವುದೇ ಜಾತಿಯನ್ನು ಅವಹೇಳನ ಮಾಡಬಾರದು. ಅಂತಹ ದ್ದರಲ್ಲಿ ಭಾರತ ಸಂಸ್ಕೃತಿ ಬಗ್ಗೆ ಮಾತನಾಡುವಾಗ ಏಕೆ ವಿವಾದವಾಗಿಲ್ಲ ಎಂದು ಆಶ್ಚರ್ಯವಾಗಿದೆ. ಭಾರ ತೀಯ ಸಂಸ್ಕೃತಿಯನ್ನು ಬಿಂಬಿಸಲಾಗುತ್ತಿದೆ ಅಷ್ಟೇ.

– ಧರ್ಮಗಳ ಉದಯ ಪಾದದಲ್ಲಿ ಬ್ರಾಹ್ಮಣ ವಿರೋಧಿ ಅಂಶಗಳಿವೆ. ಅವುಗಳನ್ನು ತೆರವು ಮಾಡ ಲಾಗುತ್ತಿದೆ ಎಂಬ ಮಾತಿದೆ. ನಿಮ್ಮ ಉತ್ತರ?
ಪಠ್ಯದಲ್ಲಿ ಕೆಲವೊಂದು ಆಕ್ಷೇಪಾರ್ಹ ಅಂಶಗಳಿವೆ ಎಂದು ಸರಕಾರ ತಿಳಿಸಿದೆ. ಈ ಸಂಬಂಧ ಕೃತಿಕಾರರಿಂದ ಮಾಹಿತಿ ಪಡೆಯಲಾಗುತ್ತದೆ. ಸರಿಯಾದ ಸಾಕ್ಷ್ಯಗಳನ್ನು ಒದಗಿಸಿದರೆ, ಪಠ್ಯವನ್ನು ಕೈಬಿಡುವುದಿಲ್ಲ. ಯಾವುದೇ ವ್ಯಕ್ತಿಯನ್ನು ವಿಜೃಂಭಿಸುವುದು ಅಥವಾ ಹೀಗಳೆಯ ಬಾರದು. ಮಕ್ಕಳ ಹೊರೆ ಜಾಸ್ತಿ ಮಾಡಬಾರದು, ಸತ್ಯ ವಿಚಾರಗಳು ಮಾತ್ರ ಇರಬೇಕು ಎಂಬ ಮಾನದಂಡ ಗಳನ್ನು ಅನುಸರಿಸಲಾಗುತ್ತದೆ.

– ಪಠ್ಯ ಪುಸ್ತಕ ಮತ್ತೂಮ್ಮೆ ಪರಿಷ್ಕರಣೆಯಾಗುತ್ತಾ?
ಬಹುತ್ವದಲ್ಲಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದವರು ತಮ್ಮ ಬರೆಹ ಬೇಡವೆಂದು ಮನವಿ ಕೊಡಬಹುದು. ಅದಾದ ಅನಂತರ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲಿದೆ. ಪದೇ ಪದೆ ಪಠ್ಯಪುಸ್ತಕ ಪರಿಷ್ಕರಣೆ ಮತ್ತು ಮುದ್ರಣ ಮಾಡಲು ಸಾಧ್ಯವಿಲ್ಲ.

– ಬರಗೂರು ರಾಮಚಂದ್ರಪ್ಪ ಅವರ ಬಗ್ಗೆ ನೀವು ಅನಗತ್ಯ ಆರೋಪ ಮಾಡುತ್ತಿದ್ದೀರಂತಲ್ಲ ?
ಹಿಂದಿನ ಸಮಿತಿ ಹೇಳುವುದೊಂದು, ಮಾಡುವು ದೊಂದು. ವೇದಿಕೆಯಲ್ಲಿ ಆದರ್ಶದ ಮಾತುಗಳನ್ನು ಆಡುತ್ತಾರೆ. ಕೆಲಸ ಮಾಡುವಾಗ ಇನ್ನೊಂದನ್ನು ಮಾಡು ತ್ತಾರೆ. ಪಠ್ಯಪುಸ್ತಕ ಪಕ್ಷ ಪುಸ್ತಕವಾಗಬಾರದು ಎನ್ನುವ ವರು ಜಯಮಾಲಾ, ದೇವನೂರು ಅವರನ್ನು ಏಕೆ ಸೇರಿಸಿದ್ದರು? ಬರಗೂರು ನಯವಾಗಿ ಸುಳ್ಳುಗಳನ್ನು ಹೇಳುತ್ತಾ ಹೋಗುತ್ತಾರೆ.

– ಲಂಕೇಶ್‌ಗೆ ಅವಮಾನವಾಗಿದೆ ಅಂತಾರಲ್ಲ?
ಲಂಕೇಶ್‌ ಅವರ ಪಾಠವನ್ನು ಜಾತಿ ಉದ್ದೇಶದಿಂದ ತೆಗೆದಿಲ್ಲ. ಕೇವಲ ವಿಷಯಾಧಾರಿತವಾಗಿ ಮಾತ್ರ ಪರಿಗ ಣಿಸಲಾಗಿದೆ. ಕಲ್ಲು ಕರಗುವ ಸಮಯದಲ್ಲಿ ಲಂಕೇಶ್‌ ಕತೆ ಬರುತ್ತದೆ. ಪಠ್ಯದಲ್ಲಿ ಲಂಕೇಶ್‌ ಅವರ ಸಾಹಿತ್ಯಕ ಅಂಶ ಗಳು ಯಾವುದು ಇಲ್ಲ. ಭಾಷಾ ದೃಷ್ಟಿಯಿಂದ ಉಪ ಯೋಗವಾಗಿಲ್ಲ ಮತ್ತು ವಿಷಯಾಧಾರಿತವಾಗಿಲ್ಲ ಎಂಬ ಕಾರಣಕ್ಕೆ ತೆಗೆದಿದ್ದೇವೆ. ಇವತ್ತಿಗೂ ಲಂಕೇಶರ ಜಾತಿ ಯಾವುದೆಂದು ನನಗೆ ಗೊತ್ತಿಲ್ಲ. ಜಾತಿ ನೋಡಿ ಪಠ್ಯ ತೆಗೆಯುವುದಾದರೆ, ದೇವನೂರು ಅವರ ಪಾಠವನ್ನೇ ಮೊದಲು ತೆಗೆಯುತ್ತಿದ್ದೆವು. ಲಂಕೇಶರ ಕವಿತೆಯನ್ನು ಸೇರಿಸಿದ್ದರೆ ಉಳಿಸಿಕೊಳ್ಳುತ್ತಿದ್ದೆವು. ಹಾಗೆ ನೋಡಿದರೆ, ಕತೆಯನ್ನು 2 ಪುಟಕ್ಕೆ ಇಳಿಸಿ ವಿಕೃತಗೊಳಿಸಿ ಲಂಕೇಶರಿಗೆ ಅವಮಾನ ಮಾಡಿದ್ದು ಬರಗೂರು ರಾಮಚಂದ್ರಪ್ಪ.

– ರೋಹಿತ್‌ ಚಕ್ರತೀರ್ಥ

ಸಂದರ್ಶನ: ಎನ್‌.ಎಲ್‌. ಶಿವಮಾದು

ಟಾಪ್ ನ್ಯೂಸ್

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.