ಉಜ್ಬೆಕಿಸ್ಥಾನದಲ್ಲಿ ಎಸ್‌ಸಿಒ ಶೃಂಗ ಸಭೆ: ಜಗದ ಕುತೂಹಲ ಕೆರಳಿಸಲು ಹಲವು ಕಾರಣ


Team Udayavani, Sep 16, 2022, 6:40 AM IST

ಉಜ್ಬೆಕಿಸ್ಥಾನದಲ್ಲಿ ಎಸ್‌ಸಿಒ ಶೃಂಗ ಸಭೆ: ಜಗದ ಕುತೂಹಲ ಕೆರಳಿಸಲು ಹಲವು ಕಾರಣ

ಮಣಿಪಾಲ: ಉಜ್ಬೆಕಿಸ್ಥಾನದ ಸಮರ್‌ಖಂಡ್‌ ನಗರದಲ್ಲಿ ನಡೆ ಯುತ್ತಿರುವ ಶಾಂಘೈ ಕೊಆಪ ರೇಶನ್‌ ಆರ್ಗನೈಸೇಶನ್‌ (ಎಸ್‌ಸಿಒ) ಹಲವು ಕಾರಣಗಳಿಗಾಗಿ ಜಗತ್ತಿನ ಕುತೂಹಲ ಕೆರಳಿಸಿದೆ. ಭಾರತ, ಚೀನ, ರಷ್ಯಾ ಎಂಬ ಮೂರು ಬೃಹತ್‌ ಶಕ್ತಿಗಳ ಮುಖಂಡರು ಇಲ್ಲಿ ಮುಖಾಮುಖೀ ಭೇಟಿಯಾಗಲಿರು ವುದು, ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಉಕ್ರೇನ್‌ ಯುದ್ಧದ ಬಳಿಕ ಮತ್ತು ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕೊರೊನಾ ಹಾವಳಿಯ ಬಳಿಕ ಇದೇ ಮೊದಲ ಬಾರಿಗೆ ಸ್ವದೇಶದಿಂದ ಹೊರಗೆ ಕಾಲಿಡುತ್ತಿರು ವುದು ಮತ್ತು ಅವರ ಪರಸ್ಪರ ಭೇಟಿ, ಮೋದಿ-ಪುತಿನ್‌ ಮುಖಾಮುಖೀ, ಗಾಲ್ವನ್‌ ಕಣಿವೆಯಲ್ಲಿ ಭಾರತ-ಚೀನ ಸೈನಿಕರ ನಡುವೆ ಕಾದಾಟದ ಬಳಿಕ ಮೋದಿ ಮತ್ತು ಕ್ಸಿ ಜಿನ್‌ಪಿಂಗ್‌ ಪರಸ್ಪರ ಎದುರಾಗುತ್ತಿರುವುದು – ಹೀಗೆ ಎಸ್‌ಸಿಒ ಗಮನ ಸೆಳೆಯಲು ಕಾರಣಗಳು ಹಲವು. ಇದರ ಜತೆಗೆ ಮೋದಿ ಮತ್ತು ಪಾಕ್‌ ಪ್ರಧಾನಿ ಶೆಹಬಾಜ್‌ ಶರೀಫ್ ಮುಖಾ ಮುಖೀಯಾಗುವರೇ ಎಂಬ ಪ್ರಶ್ನೆಯೂ ಇದೆ.

ಏನಿದು ಎಸ್‌ಸಿಒ? :

ಯುರೇಶಿಯನ್‌ ಪ್ರದೇಶದ ಚೀನ, ರಷ್ಯಾ, ಭಾರತ, ಕಿರ್ಗಿಸ್ಥಾನ, ಉಜ್ಬೆಕಿಸ್ಥಾನ, ತಾಜಿಕಿಸ್ಥಾನದಂತಹ ದೇಶಗಳು ರಾಜಕೀಯ, ಆರ್ಥಿಕ, ಭದ್ರತೆ ಮುಂತಾದ ಉದ್ದೇಶಗಳಿಂದ ಮಾಡಿಕೊಂಡಿರುವ ಸಹಕಾರ ಸಂಘಟನೆ. ಇದರ ಸದಸ್ಯ ದೇಶಗಳ ಒಟ್ಟು ಭೌಗೋಳಿಕ ವ್ಯಾಪ್ತಿ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಹೇಳುವುದಾದರೆ ಜಗತ್ತಿನ ಅತೀ ದೊಡ್ಡ ಪ್ರಾಂತೀಯ ಸಂಘಟನೆ ಇದು. ಯುರೇಶಿಯಾದ ಶೇ. 40ರಷ್ಟು ಭೂಭಾಗ, ಜಗತ್ತಿನ ಶೇ. 40ಕ್ಕಿಂತ ಅಧಿಕ ಜನಸಂಖ್ಯೆ ಮತ್ತು ಜಾಗತಿಕ ಜಿಡಿಪಿಯ ಶೇ. 30 ಇದರಡಿ ಬರುತ್ತದೆ.

ಮೋದಿ ಪಾಲ್ಗೊಳ್ಳುವಿಕೆಗೆ ಮಹತ್ವ:

ಉಕ್ರೇನ್‌-ರಷ್ಯಾ ಯುದ್ಧ ಮತ್ತು ಆ ಬಳಿಕ ಪಶ್ಚಿಮದ ದೇಶಗಳು ರಷ್ಯಾದ ಮೇಲೆ ವಿಧಿಸಿರುವ ನಿರ್ಬಂಧ, ಗಾಲ್ವನ್‌ ಕಣಿವೆಯಲ್ಲಿ ಚೀನ-ಭಾರತ ಯೋಧರ ಮುಖಾಮುಖೀ, ಕೊರೊನಾ ಚೀನದಲ್ಲಿ ಹುಟ್ಟಿದ್ದು ಎಂಬಿತ್ಯಾದಿ ಕೂಗು ಮತ್ತಿತರ ಕಾರಣಗಳ ಹಿನ್ನೆಲೆಯಲ್ಲಿ ಎಸ್‌ಸಿಒ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾಲ್ಗೊಳ್ಳುವಿಕೆ ಭಾರೀ ಮಹತ್ವ ಪಡೆದಿದೆ. ಶೃಂಗದ ಪಾರ್ಶ್ವದಲ್ಲಿ ಅವರು ರಷ್ಯಾದ ಅಧ್ಯಕ್ಷ ಪುತಿನ್‌ ಅವರ ಜತೆಗೆ ಮಾತುಕತೆ ನಡೆಸುವುದು ನಿಗದಿಯಾಗಿದೆ. ಜಿ20 ಕೂಟ, ರಕ್ಷಣೆ, ಇಂಧನ ಮತ್ತು ಬಂಡವಾಳ ಹೂಡಿಕೆ ಸಹಯೋಗ ಮತ್ತಿತರ ವಿಚಾರಗಳ ಬಗ್ಗೆ ಇವರಿಬ್ಬರು ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ. ಆದರೆ ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌-ಮೋದಿ ಮುಖಾಮುಖೀ ಭೇಟಿಯಾಗುವರೇ ಎಂಬುದು ಕುತೂಹಲ ಕೆರಳಿಸಿದೆ.

ಭಾರತ ಈ ವರ್ಷದ ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿಕೊಳ್ಳಲಿರುವುದು, ಮುಂದಿನ ವರ್ಷ ಎಸ್‌ಸಿಒ ಮತ್ತು ಜಿ20 ಅಧ್ಯಕ್ಷತೆ ಪಡೆಯಲಿರುವ ಹಿನ್ನೆಲೆಯಲ್ಲಿಯೂ ಈ ಶೃಂಗದಲ್ಲಿ ಮೋದಿಯವರತ್ತ ಗಮನ ಕೇಂದ್ರೀಕೃತವಾಗಿದೆ.

ಮೋದಿ ಯಾರ್ಯಾರನ್ನು ಭೇಟಿಯಾಗುವರು?:

ಇರಾನ್‌ ಅಧ್ಯಕ್ಷ ಇಬ್ರಾಹಿಂ ರಿಯಾಸಿ, ಉಜ್ಬೆಕಿಸ್ಥಾನದ ಅಧ್ಯಕ್ಷ ಶೌಕತ್‌ ಮಿರ್ಜಿಯೊಯೇವ್‌ ಅವರನ್ನು ಮೋದಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಟರ್ಕಿಯ ನಾಯಕ ಎರ್ದೊಗನ್‌ ಜತೆಗೆ ಮಾತುಕತೆಯೂ ಸಂಭಾವ್ಯ.

ಜಿನ್‌ಪಿಂಗ್‌-ಪುತಿನ್‌ ಭೇಟಿಯಾಗುವರೇ? :

ಜಗತ್ತಿನ ಈ ಇಬ್ಬರು ಅಗ್ರ, ವಿವಿಧ ಕೋನಗಳಿಂದ ನಿರ್ಣಾಯಕರೆನಿಸಿಕೊಂಡ ನಾಯಕರು ಎಸ್‌ಸಿಒ ಪಾರ್ಶ್ವದಲ್ಲಿ ಮಾತುಕತೆ ನಡೆಸುವರೇ ಎಂಬ ಕುತೂಹಲ ಎಲ್ಲೆಡೆ ಇದೆ. ಮುಖಾಮುಖೀಯಂತೂ ಖಂಡಿತ. ಈ ಎರಡು ಕಮ್ಯುನಿಸ್ಟ್‌ ರಾಷ್ಟ್ರಗಳ ಗೆಳೆತನವನ್ನು ಅಮೆರಿಕ ದೂರ ಮಾಡಬೇಕು ಎಂಬುದಾಗಿ ಅನೇಕ ವಿಶ್ಲೇಷಕರು ವಾದಿಸುತ್ತಾರೆ. ಶೀತಲ ಸಮರದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್‌ ನಿಕ್ಸನ್‌ ಈ ಭೇದೋಪಾಯ ಅನುಸರಿಸಿದ್ದರು. ಆದರೆ ಅದೀಗ ಸಾಧ್ಯವಿಲ್ಲದ ಮಾತು. ಅಫ್ಘಾನಿಸ್ಥಾನದಿಂದ ಕಳೆದ ವರ್ಷ ಅಮೆರಿಕ ಪೂರ್ಣವಾಗಿ ವಾಪಸಾದ ಅನಂತರ ಮೊದಲ ಬಾರಿಗೆ ಈ ಶೃಂಗ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಹಿಡಿತ ಹೊಂದುವ ದೃಷ್ಟಿಯಿಂದ ಚೀನ-ರಷ್ಯಾಗಳಿಗೆ ಇದು ಮಹತ್ವದ್ದು. ಅಮೆರಿಕವು ಎಸ್‌ಸಿಒದ ಸದಸ್ಯನಲ್ಲದಿದ್ದರೂ ಈ ಶೃಂಗದಲ್ಲಿ ಅದಕ್ಕೂ ಸಾಕಷ್ಟು ಹಿತಾಸಕ್ತಿಗಳಿವೆ. ರಷ್ಯಾ, ಚೀನ ಬಿಟ್ಟು ಉಳಿದ ಐದು ದೇಶಗಳು ಅವೆರಡರಿಂದ ಸುರಕ್ಷಿತ ಅಂತರ, ಸೌಹಾರ್ದಯುತ ಸಂಬಂಧ ಕಾಯ್ದುಕೊಳ್ಳಲು ಬಯಸುತ್ತಿವೆ. ಅಫ್ಘಾನ್‌ನಲ್ಲಿ ಅನುಭವಿಸಿದ ಹಿನ್ನಡೆಯ ಹೊರತಾಗಿಯೂ ಅಮೆರಿಕದ ಸಂಗದಿಂದ ಲಾಭವಿದೆ ಎಂಬ ನಿರೀಕ್ಷೆ ಈ ಐದು ದೇಶಗಳದು. ಇದು ಅಮೆರಿಕದ ಆಶೆಯೂ ಹೌದು. ಯುರೇಶಿಯಾದಲ್ಲಿ ರಷ್ಯಾ-ಚೀನ ಪರಸ್ಪರ ಸಂಘಟಿತವಾಗುವುದನ್ನು ತಡೆಯುವ ಅಮೆರಿಕದ ನಿರೀಕ್ಷೆಯಾಗಿ ಈ ಐದು ದೇಶಗಳ ನಡೆಯನ್ನು ಗಮನಿಸಲಾಗುತ್ತದೆ.

ಚೀನ ಮತ್ತು ರಷ್ಯಾ ಹಿಂದೆಂದಿಗಿಂತಲೂ ಹೆಚ್ಚು ಈಗ ನಿಕಟವಾಗಿವೆ. ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣವನ್ನು ಚೀನ ಪೂರ್ಣವಾಗಿ ಬೆಂಬಲಿಸಿದೆ. ರಷ್ಯಾದಿಂದ ಉತ್ಪನ್ನಗಳ ಖರೀದಿಯನ್ನು ಹೆಚ್ಚಿಸುವ ಮೂಲಕ ಪರೋಕ್ಷವಾಗಿ ಅದಕ್ಕೆ ಧನಸಹಾಯ ಒದಗಿಸುತ್ತಿದೆ.

ಅಮೆರಿಕದ ನಡೆಯೇನು? :

ಹಾಗಾದರೆ ಅಮೆರಿಕದ ನಡೆ ಏನಿರಬಹುದು? ಸದ್ಯದ ಮಟ್ಟಿಗೆ ರಷ್ಯಾ-ಚೀನ ಎರಡರ ಅರ್ಥ ವ್ಯವಸ್ಥೆಗಳು ಕೂಡ ದುರ್ಬಲವಾಗುತ್ತ ಬಂದಿವೆ. ಹಿಂದೆ ರೊನಾಲ್ಡ್‌ ರೇಗನ್‌ ಸೋವಿಯತ್‌ ಒಕ್ಕೂಟವನ್ನು ದುರ್ಬಲಗೊಳಿಸಲು ಇತರ ತಂತ್ರಗಳ ಜತೆಗೆ ಉತ್ಪನ್ನಗಳ ಬೆಲೆ ಇಳಿಸುವ ಮಾರ್ಗ ಅನುಸರಿಸಿದ್ದರು. ಕಾಲಾಂತರದಲ್ಲಿ ಈ ಒತ್ತಡ ಹೆಚ್ಚುತ್ತ ಹೋಗಿ ಅಂತಿಮವಾಗಿ ಸೋವಿಯತ್‌ ಒಕ್ಕೂಟ ಹೋಳಾಯಿತು. ಅದೇ ಕಾರ್ಯವಿಧಾನದ ಅಸ್ಪಷ್ಟ ನೆರಳನ್ನು ನಾವೀಗ ಕಾಣುತ್ತಿದ್ದೇವೆ. ಜಿ-7, ಐರೋಪ್ಯ ಒಕ್ಕೂಟ ಮತ್ತು ಅಮೆರಿಕ ಪ್ರಸ್ತಾವಿಸಿದ ಬೆಲೆ ಮಿತಿಗಿಂತ ಹೆಚ್ಚು ಬೆಲೆ ತೆತ್ತು ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ನಿರ್ಬಂಧ ವಿಧಿಸುವ ಎಚ್ಚರಿಕೆಯನ್ನು ಅಮೆರಿಕ ನೀಡಿದೆ. ರಷ್ಯಾ-ಚೀನದ ಆರ್ಥಿಕತೆಗೆ ಹೊಡೆತ ನೀಡುವುದಕ್ಕೆ ದೀರ್ಘ‌ಕಾಲ, ದೂರದೃಷ್ಟಿಯ ಕಾರ್ಯ ತಂತ್ರ ಅಗತ್ಯ. ಅದರ ಮೊದಲ ಅಂಗವಾಗಿ ಬೀಜಿಂಗ್‌ ಅಥವಾ ಮಾಸ್ಕೋ ಮಧ್ಯ ಏಷ್ಯಾದ ಈ ಐದು ದೇಶಗಳನ್ನು ಹಿಡಿತಕ್ಕೆ ತೆಗೆದುಕೊಳ್ಳದಂತೆ ಮಾಡಬೇಕು. ಅಮೆರಿಕ ಆ ಕಾರ್ಯತಂತ್ರ ಹೂಡುವುದು ಖಚಿತ. ಈ ಹಿನ್ನೆಲೆಯಲ್ಲಿ ಅದು ಎಸ್‌ಸಿಒದ ಪ್ರತಿಯೊಂದು ಬೆಳವಣಿಗೆಯ ಮೇಲೂ ನಿಕಟವಾಗಿ ಕಣ್ಣಿರಿಸಿದೆ.

ಯಾವ ದೇಶಗಳು ಭಾಗಿ? :

ಚೀನ, ಭಾರತ, ಕಜಕಿಸ್ಥಾನ, ಕಿರ್ಗಿಸ್ಥಾನ, ಪಾಕಿಸ್ಥಾನ, ರಷ್ಯಾ, ತಾಜಿಕಿಸ್ಥಾನ, ಉಜ್ಬೆಕಿಸ್ಥಾನ. ಈಗ ಇರಾನನ್ನೂ ಸದಸ್ಯನನ್ನಾಗಿ ಮಾಡಿಕೊಳ್ಳಲಾಗಿದೆ.

ಕ್ಸಿ ಜಿನ್‌ಪಿಂಗ್‌-ಮೋದಿ ಮುಖಾಮುಖಿಯಾಗುವರೇ? :

ಶೃಂಗಸಭೆಯಲ್ಲಿ ಇಬ್ಬರೂ ನಾಯಕರು ಎದುರುಬದುರಾಗಲಿದ್ದಾರೆ. ಆದರೆ ಸಭೆಯ ಪಾರ್ಶ್ವದಲ್ಲಿ ಮಾತುಕತೆ ನಡೆಸುವರೇ ಎಂಬ ಮಾಹಿತಿ ಇಲ್ಲ. ಹೊಸದಿಲ್ಲಿ ಅಥವಾ ಬೀಜಿಂಗ್‌- ಎರಡೂ ಈ ಬಗ್ಗೆ ತುಟಿ ಬಿಚ್ಚಿಲ್ಲ. ಸಮರ್‌ಖಂಡದಲ್ಲಿ ಕ್ಸಿ ಜಿನ್‌ಪಿಂಗ್‌ ಅವರ ಕಾರ್ಯಕ್ರಮಗಳೇನು ಎಂಬುದನ್ನು ಬೀಜಿಂಗ್‌ ರಹಸ್ಯವಾಗಿರಿಸಿದೆ. ಲಡಾಖ್‌ನ ಗೋಗ್ರಾ-ಹಾಟ್‌ಸ್ಪ್ರಿಂಗ್ಸ್‌ ಪಿಪಿ 15ನಿಂದ ಉಭಯ ದೇಶಗಳು ಸೈನಿಕರನ್ನು ಹಿಂದೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಮೋದಿ-ಜಿನ್‌ಪಿಂಗ್‌ ಭೇಟಿ ನಡೆಯುವುದು ಸಾಧ್ಯ. ಆಗ ಮೋದಿಯವರು 2020ರ ಎಪ್ರಿಲ್‌ಗೆ ಮುನ್ನ ಇದ್ದ ಸ್ಥಿತಿಯನ್ನು ಲಡಾಖ್‌ನಲ್ಲಿ ಪುನರ್‌ಸ್ಥಾಪಿಸಬೇಕು ಎಂಬ ವಿಚಾರ ಪ್ರಸ್ತಾವಿಸುವ, ಹಾಗೆಯೇ ಜಿನ್‌ಪಿಂಗ್‌ ಅವರು ಭಾರತವು ಚೀನೀ ಆ್ಯಪ್‌ಗ್ಳು, ಸೆಲ್‌ಫೋನ್‌ ಕಂಪೆನಿಗಳ ಮೇಲೆ ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಪ್ರಸ್ತಾವಿಸುವ ಸಾಧ್ಯತೆಗಳಿವೆ.

ಎಸ್‌ಸಿಒದಲ್ಲಿ ಮೋದಿ ಮುಖ್ಯ ನಡೆಗಳೇನು?:

  • ಯುರೇಶಿಯಾದಲ್ಲಿ ಪರಿಣಾಮಕಾರಿ ಉಗ್ರವಾದ ವಿರೋಧಿ ಕ್ರಮಗಳಿಗೆ ಒತ್ತು
  • ಇಂಟರ್‌ನ್ಯಾಶನಲ್‌ ನಾರ್ತ್‌-ಸೌತ್‌ ಟ್ರಾನ್ಸ್‌ ಪೋರ್ಟ್‌ ಕಾರಿಡಾರ್‌ (ಐಎನ್‌ಎಸ್‌ಟಿಸಿ) ಸ್ಥಾಪನೆಗೆ ಒತ್ತಾಯ
  • ಇರಾನ್‌ನ ಚಾಬಹಾರ್‌ ಬಂದರನ್ನು “ಪರಿಣಾಮಕಾರಿ ಸಂಪರ್ಕ ಜಾಲ’ವನ್ನಾಗಿಸಲು ಆಗ್ರಹ
  • ಸದಸ್ಯ ದೇಶಗಳ ಭೌಗೋಳಿಕ ಸಾರ್ವಭೌಮತೆಯನ್ನು ಗೌರವಿಸಲು ಆಗ್ರಹಿಸುವ ಮೂಲಕ ಚೀನ, ಪಾಕ್‌ಗೆ ಪರೋಕ್ಷ ಸಂದೇಶ

ಟಾಪ್ ನ್ಯೂಸ್

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

1(1

Puttur ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

3-ptr

Puttur: ಪೆನ್‌ ಪಾಯಿಂಟ್‌ ಕ್ರಿಕೆಟ್‌: ಸತತ 2ನೇ ಬಾರಿ ಬ್ಲೂ ಹಂಟರ್ಸ್‌ ಚಾಂಪಿಯನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.