ದೇಶವನ್ನು ತೀವ್ರವಾಗಿ ಕಾಡುತ್ತಿದೆ “ಪೌಷ್ಟಿಕಾಂಶ ಕೊರತೆ “

ಗರ್ಭಿಣಿಯರ ಪೌಷ್ಟಿಕ ಆಹಾರಕ್ಕಾಗಿ ರಾಜ್ಯದಲ್ಲಿ ಪ್ರೋತ್ಸಾಹ ಧನ ಹೆಚ್ಚಳಕ್ಕೆ ಚಿಂತನೆ

Team Udayavani, Sep 27, 2019, 5:00 AM IST

x-40

2020ರ ವೇಳೆಗೆ ರಾಷ್ಟ್ರೀಯ ಪೌಷ್ಟಿಕಾಂಶ ಮಿಷನ್‌ (ಎನ್‌ಎನ್‌ಎಂ) ದೇಶದಲ್ಲಿ ಅಪೌಷ್ಟಿಕತೆಯ ಕಾರಣಕ್ಕೆ ಬಲಿಯಾಗುತ್ತಿರುವ ತಾಯಂದಿರ ಹಾಗೂ ಮಕ್ಕಳ ಪ್ರಮಾಣವನ್ನು ಕಡಿಮೆ ಮಾಡುವ ಗುರಿ ಹೊಂದಿತ್ತು. ಆದರೆ ಆ ಗುರಿಯನ್ನು ತಲುಪುವುದು ಸದ್ಯದ ಮಟ್ಟಿಗೆ ಅಸಾಧ್ಯ ಎಂದು ವರದಿಯೊಂದು ಹೇಳಿದೆ. ಹಾಗಾದರೆ ಏನಿದು ವರದಿ? ಅಪೌಷ್ಟಿಕತೆ ಸಮಸ್ಯೆಗೆ ಬಲಿಯಾದವರೆಷ್ಟು? ಇದಕ್ಕೆ ಕಾರಣಗಳೇನು? ಮಾಹಿತಿ ಇಲ್ಲಿದೆ.

ಏನಿದು ಸಮೀಕ್ಷೆ ?
ದೇಶದ ಅಪೌಷ್ಟಿಕತೆ ಸಮಸ್ಯೆಯ ಮಟ್ಟವನ್ನು ತಿಳಿದುಕೊಳ್ಳಲು ಭಾರತೀಯ ವೈದ್ಯಕೀಯ ಸಂಶೋಧನ ಕೇಂದ್ರ, ಸಾರ್ವಜನಿಕ ಆರೋಗ್ಯ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಸಮೀಕ್ಷೆ ನಡೆಸಿವೆ.

2020ರ ಗುರಿ ತಲುಪಲು ವಿಫ‌ಲ
ರಾಷ್ಟ್ರದಲ್ಲಿ ಅಪೌಷ್ಟಿಕತೆಯ ಕಾರಣದಿಂದ ಬಲಿಯಾಗುವ ತಾಯಂದಿರ ಹಾಗೂ ಮಕ್ಕಳ ಪ್ರಮಾಣವನ್ನು ಕಡಿತಗೊಳಿಸುವುದು ಎನ್‌ಎನ್‌ಎಂ ಸಂಸ್ಥೆಯ ಧ್ಯೇಯವಾಗಿದೆ. 2017ರಿಂದ 2020ರ ನಡುವೆ ಪ್ರತ್ಯೇಕ ವರ್ಷಗಳಲ್ಲಿ ಈ ಸಮಸ್ಯೆಯ ಪ್ರಮಾಣವನ್ನು ಶೇ. 2ರಷ್ಟು ಕಡಿಮೆ ಮಾಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ 2020ರ ಒಳಗೆ ಈ ಗುರಿ ತಲುಪುವುದು ಕಷ್ಟಸಾಧ್ಯವಾಗಿದೆ.

ಮೂವರಲ್ಲಿ 2 ಮಕ್ಕಳ ಸಾವು
5 ವರ್ಷದೊಳಗಿನ ಮಕ್ಕಳ ಸಾವಿಗೆ ಅಪೌಷ್ಟಿಕತೆ ಮೂಲ ಕಾರಣವಾಗಿದ್ದು, ಭಾರತದಲ್ಲಿ ಈ ಸಮಸ್ಯೆಗೆ 3ರಲ್ಲಿ 2 ಮಕ್ಕಳು ಬಲಿಯಾಗುತ್ತಿವೆೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅಪೌಷ್ಟಿಕತೆ ಸೂಚ್ಯಂಕದಲ್ಲಿ ಸುಧಾರಣೆಯಾಗಿದೆ. ಆದರೆ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ.

ಮುಖ್ಯ ಕಾರಣವೇನು?
ಬೆಳವಣಿಗೆ ಕುಂಠಿತ ಮಕ್ಕಳ ಜನನ ಅಥವಾ ಪೌಷ್ಟಿಕಾಂಶ ರಹಿತ ಮಕ್ಕಳ ಜನನಕ್ಕೆ ತಾಯಿ ದೇಹದ ಪರಿಸ್ಥಿತಿಯೂ ಕಾರಣವಾಗುತ್ತದೆ. ತಾಯಿ ದೇಹ ಆರೋಗ್ಯಕರವಾಗಿಲ್ಲದಿದ್ದರೆ ಅಥವಾ ಗರ್ಭಿಣಿಯಾಗಿದ್ದ ಸಂದರ್ಭ ಪೌಷ್ಟಿಕಾಂಶ ಸರಿಯಾಗಿ ಸೇವನೆ ಮಾಡದೇ ಇದ್ದರೆ ಹುಟ್ಟುವ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ರಾಜ್ಯದ ರಾಯಚೂರು ಜಿಲ್ಲೆಯ ಶೇ. 73 ಗರ್ಭಿಣಿಯರ ದೇಹದಲ್ಲಿ ಹಿಮೋಗ್ಲೋಬಿನ್‌ ಪ್ರಮಾಣ 11ಕ್ಕಿಂತ ಕಡಿಮೆ ಇದೆ. ಸಹಜವಾಗಿಯೇ ಇದು ಹುಟ್ಟುವ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ.

ಶೇ.68.2ರಷ್ಟು ಮಕ್ಕಳ ಸಾವು
2017-18ರ ಅಂಕಿ-ಅಂಶದ ಪ್ರಕಾರ 5 ವರ್ಷ ಪ್ರಾಯ ಒಳಗಿನ ಶೇ. 68.2ರಷ್ಟು ಮಕ್ಕಳು ಈ ಒಂದು ಕಾರಣಕ್ಕೆ ಸಾವನ್ನಪ್ಪುತ್ತಿದ್ದಾರೆ.
ಶೇ.21.4ರಷ್ಟು ಕಡಿಮೆ ತೂಕದ ಮಕ್ಕಳ ಜನನ
ಜನಿಸುವ ಐದು ಮಕ್ಕಳ ಪೈಕಿ 3 ಮಕ್ಕಳು (ಶೇ. 21.4) ಕಡಿಮೆ ತೂಕವನ್ನು ಹೊಂದಿರುತ್ತಾರೆ ಎಂಬ ಆತಂಕಕಾರಿ ಮಾಹಿತಿಯನ್ನು ಸಮೀಕ್ಷೆ ಬಹಿರಂಗಪಡಿಸಿದೆ.

ಪ್ರೋತ್ಸಾಹ ಧನ ಹೆಚ್ಚಳಕ್ಕೆ ಸರಕಾರದ ಚಿಂತನೆ
ಅಪೌಷ್ಟಿಕತೆ ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅದನ್ನು ನಿವಾರಿಸಲು ಸಿದ್ಧ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಉದಯವಾಣಿಯೊಂದಿಗೆ ಮಾತನಾಡಿದ ಸಚಿವರು, ಮೂಲ ಸೌಕರ್ಯಗಳ ಕೊರತೆ ಇರುವ ಪ್ರದೇಶಗಳು ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಇಂತಹ ಸಮಸ್ಯೆಗಳು ಕಂಡು ಬರುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕೊಂಡುಕೊಳ್ಳಲು ನೀಡಲಾಗುತ್ತಿರುವ ಪ್ರೋತ್ಸಾಹ ಧನವನ್ನು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

ಶೇ. 53.3ರಷ್ಟು ತಾಯಿ ಹಾಲು!
ಭಾರತದಲ್ಲಿನ ಒಟ್ಟು ಮಕ್ಕಳ ಸಂಖ್ಯೆಯ ಪೈಕಿ ಕೇವಲ ಶೇ. 53.3ರಷ್ಟು ಮಕ್ಕಳು ಮಾತ್ರ ಎದೆ ಹಾಲನ್ನು ಕುಡಿಯುತ್ತಿದ್ದಾರೆ.

ವಯಸ್ಕರನ್ನೂ ಬಿಟ್ಟಿಲ್ಲ
ಎಲ್ಲಾ ವಯೋಮಾನದವರಲ್ಲಿಯೂ ಅಪೌಷ್ಟಿ ಕತೆ ಸಮಸ್ಯೆ ಇದೆ. ಸುಮಾರು ಶೇ.17.3ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ.

ಅಧಿಕ ತೂಕವೂ ಅಪೌಷ್ಟಿಕತೆಯ ಲಕ್ಷಣ!
ಮಗು ತನ್ನ ಗರಿಷ್ಠ ತೂಕದ ಮಿತಿಯನ್ನು ದಾಟಿ ಬೆಳೆಯುತ್ತಿದ್ದರೆ ಅದೂ ಕೂಡ ಅಪೌಷ್ಟಿಕತೆಯ ಒಂದು ಲಕ್ಷಣವಾಗಿದೆ. ಮಕ್ಕಳು ಜನಿಸುವಾಗ 3 ಕೆ.ಜಿ. ಇದ್ದರೆ ಮುಂದಿನ ಎರಡು ವರ್ಷದಲ್ಲಿ ಹುಟ್ಟುವಾಗ ಇದ್ದ ತೂಕಕ್ಕಿಂತ 4 ಪಟ್ಟು ಹೆಚ್ಚಾಗಬಾರದು ಎಂದು ವೈದ್ಯರು ಹೇಳುತ್ತಾರೆ. ಕೆಲವು ಮಕ್ಕಳು ಒಂದೇ ವರ್ಷದಲ್ಲಿ 12 ಕೆ.ಜಿ. ತೂಕ ಹೊಂದುತ್ತಾರೆ. ಇದು ಆರೋಗ್ಯಪೂರ್ಣ ಲಕ್ಷಣವಲ್ಲ. ಇದು ಅಪೌಷ್ಟಿಕತೆಯ ಮತ್ತೂಂದು ಮುಖವಾಗಿದೆ. ಮಿತಿಗಿಂತ ಹೆಚ್ಚು ತೂಕವಿರುವ ಮಕ್ಕಳನ್ನು ಹೊಂದಿದ ರಾಜ್ಯಗಳ ಪೈಕಿ ದಿಲ್ಲಿ ಅಗ್ರ ಸ್ಥಾನದಲ್ಲಿದೆ. ದಿಲ್ಲಿ ಶೇ. 23, ಗೋವಾ ಶೇ. 22, ಕೇರಳ ಶೇ. 20, ಅತೀ ಕಡಿಮೆ ಪ್ರಮಾಣ ಅಂದರೆ ಬಿಹಾರದಲ್ಲಿ ಶೇ. 7 ಕಂಡುಬಂದಿದೆ. ಪ್ರತಿ ರಾಜ್ಯದಲ್ಲೂ ಹೆಚ್ಚಳ ಕಂಡು ಬರುತ್ತಿದೆ.

ಪರಿಹಾರವೇನು?
· ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡುವುದು.
· ಗರ್ಭಿಣಿಯರಿಗೆ ಕಬ್ಬಿಣಾಂಶ ಮಾತ್ರೆ ಒದಗಿಸುವುದು.
· ಎದೆ ಹಾಲು ಶಿಶುವಿಗೆ ಪೂರಕ ಪೌಷ್ಟಿಕ ಆಹಾರ.
· ತಜ್ಞರಿಂದ ತಾಯಂದಿರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡುವುದು.
· ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕುರಿತು ಮಾಹಿತಿ ನೀಡುವುದು.

ಸಮೀಕ್ಷೆಯ ಪ್ರಮುಖ ಅಂಶಗಳು
· 10 ಮಕ್ಕಳಲ್ಲಿ 4 ಮಕ್ಕಳ ಬೆಳವಣಿಗೆ ಕುಂಠಿತ.
· ಶೇ. 39.3ರಷ್ಟು ಮಕ್ಕಳಲ್ಲಿ ಕುಬ್ಜ ಬೆಳವಣಿಗೆ.
· 10 ಮಕ್ಕಳಲ್ಲಿ 3 ಮಕ್ಕಳ ತೂಕ ಕಡಿಮೆ.
· 5 ಮಕ್ಕಳ ಪೈಕಿ ಮೂರರಲ್ಲಿ ರಕ್ತ ಹೀನತೆ ಸಮಸ್ಯೆ.

ರಾಜ್ಯದಲ್ಲಿ ಹೆಚ್ಚು
ಕರ್ನಾಟಕದಲ್ಲಿ ಅಪೌಷ್ಟಿಕತೆ ಸಮಸ್ಯೆಗೆ ಬಲಿಯಾಗುತ್ತಿರುವವರ ಪ್ರಮಾಣ ಹೆಚ್ಚಿದೆ. ಆರೋಗ್ಯ ಇಲಾಖೆಯ ಅಂಕಿ-ಅಂಶದ ಪ್ರಕಾರ ಅರ್ಧಕ್ಕಿಂತ ಹೆಚ್ಚು ಶಿಶುಗಳು ಕಡಿಮೆ ತೂಕ, ಅವಧಿ ಪೂರ್ವ ಜನನ, ಭೇದಿ ಕಾರಣಗಳಿಂದ ಅಸುನೀಗಿವೆ.

6,500 ಶಿಶು ಸಾವು
2017ರಲ್ಲಿ ಎಪ್ರಿಲ್‌ನಿಂದ ಅಕ್ಟೋಬರ್‌ ಅವಧಿಯಲ್ಲಿ 6,500 ನವಜಾತ ಶಿಶುಗಳು ಸಾವವನ್ನಪ್ಪಿವೆ. ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ 2018ರಲ್ಲಿ 12 ಸಾವಿರ ಶಿಶುಗಳು ಮೃತಪಟ್ಟಿವೆ. ಕರ್ನಾಟಕದಲ್ಲಿ ಇದರ ಸರಾಸರಿ ಶೇ. 30.3ರಷ್ಟಿದ್ದು, ದೇಶದಲ್ಲಿ ಶೇ. 27.8 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಅಪೌಷ್ಟಿಕತೆ ಹೆಚ್ಚಿರುವ ಜಿಲ್ಲೆಗಳು (ಶೇ. 20-30)
ಹಾವೇರಿ, ಕಲಬುರಗಿ, ಧಾರವಾಡ, ಬಳ್ಳಾರಿ, ಯಾದಗಿರಿ, ಗದಗ, ರಾಯಚೂರು, ಕೊಪ್ಪಳ, ಬೀದರ್‌

15.6 ಕೋಟಿ
ಭಾರತದಲ್ಲಿ ಪ್ರತಿ 5 ವರ್ಷ ದೊಳಗಿನ 1/3 ಭಾಗದಷ್ಟು ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ. ಅಂದರೆ 15.6 ಕೋಟಿ ಮಕ್ಕಳು ಸಮಸ್ಯೆ ಸುಳಿಯಲ್ಲಿದ್ದಾರೆ.

ಮಾಹಿತಿ ಕೊರತೆ
2000ರಲ್ಲಿ ವಿಶ್ವಸಂಸ್ಥೆ ಅಪೌಷ್ಟಿಕತೆ ನಿವಾರಣೆಗೆ ಮಕ್ಕಳ ನಿಧಿ ಯೋಜನೆ ಆರಂಭಿಸಿತ್ತು. ಆದರೆ ಜನರಿಗೆ ಈ ಕುರಿತು ಮಾಹಿತಿ ಇಲ್ಲದ ಕಾರಣ ಸೌಲಭ್ಯ ವಂಚಿತರಾಗುತ್ತಿದ್ದಾರೆ.

ಸಮಸ್ಯೆಗೆ ಏನು ಕಾರಣ?
·  ಬಡತನ ಹಾಗೂ ಸಾಮಾಜಿಕ ಪರಿಸ್ಥಿತಿ
·  ಬಾಲ್ಯ ವಿವಾಹ ಹಾಗೂ ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧಾರಣೆ
·   ಪರಿಣಾಮದ ಕುರಿತು ಮಾಹಿತಿ ಕೊರತೆ
·  ಆರೋಗ್ಯ ಸವಲತ್ತುಗಳಿಂದ ವಂಚಿತ ಕುಟುಂಬ
·  ಮಾಲಿನ್ಯಯುಕ್ತ ಕುಡಿಯುವ ನೀರು
·  ಆಹಾರದ ಕುರಿತು ನಿರ್ಲಕ್ಷ್ಯ

ಕಡಿಮೆ ತೂಕದ ಜನನ (ಶೇ.)
ಕಲಬುರಗಿ                   56.6
ಬಳ್ಳಾರಿ                      53.3
ಯಾದಗಿರಿ                  50.3
ಕೊಪ್ಪಳ                     49.9
ಬಾಗಲಕೋಟೆ            44.6

ಕಡಿಮೆ ತೂಕ, ಎತ್ತರ ಹೆಚ್ಚು (ಶೇ.)
ರಾಯಚೂರು               34.02
ಬೀದರ್‌                      20.75
ವಿಜಯಪುರ                 19.34
ಬೆಳಗಾವಿ                    19.26
ಹಾಸನ                       19.03

ಎತ್ತರ ಕಡಿಮೆ (ಶೇ.)
ಕೊಪ್ಪಳ          55.7
ಯಾದಗಿರಿ        55.5
ಕಲ್ಬುರ್ಗಿ     52.2
ಬಳ್ಳಾರಿ           49.5
ಬಾಗಲಕೋಟೆ     47.3

ಗರ್ಭಿಣಿಯರು ಕಾಲ ಕಾಲಕ್ಕೆ ಅನುಸರಿಸಬೇಕಾದ ಆಹಾರ ಕ್ರಮಗಳ ಕುರಿತು ಸರಕಾರ ಜಾಗೃತಿ ಮೂಡಿಸಲಿದೆ. ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕೊಂಡುಕೊಳ್ಳಲು ಈಗ ನೀಡಲಾಗುತ್ತಿ ರುವ ಪ್ರೋತ್ಸಾಹ ಧನವನ್ನು ಹೆಚ್ಚಿಸಲಾಗುವುದು. ಸಿಸೇರಿಯನ್‌ ಮೂಲಕ ಜನನ ಪ್ರಮಾಣ ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ.
– ಬಿ. ಶ್ರೀರಾಮುಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಟಾಪ್ ನ್ಯೂಸ್

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.