ಜೀವನ ಪಾಠಗಳನ್ನು ಕಲಿಸಿದ ಶಂಕರ್ ನಾಗ್
Team Udayavani, Jul 13, 2022, 6:20 AM IST
ಸಿನೆಮಾ, ನಾಟಕ, ಅಭಿ ನಯ ಹಾಗೂ ನಿಜಜೀವನ ದಲ್ಲಿ ಒಂದೊಂದು ಪಾತ್ರ ವನ್ನೂ ಹತ್ತಾರು ಬಗೆಯಲ್ಲಿ ನೋಡಬಹುದು ಎಂಬು ದನ್ನು ನಾನು ಕಲಿತಿದ್ದು ಶಂಕರ್ ನಾಗ್ ಅವರಿಂದ. ಅವರ ನಿರ್ದೇಶನ, ಕಾರ್ಯ ವೈಖರಿಗಳಿಂದ ಕಲಿಯು ವಂಥದ್ದು ಬಹಳ ಇತ್ತು. ದಿನನಿತ್ಯದ ಸಂದರ್ಭಗಳಲ್ಲಿ ಏನೇ ಘಟನೆ ಸಂಭವಿಸಿ ದರೂ ಕೂಡ ನಮ್ಮದೇ ದೃಷ್ಟಿಕೋನದಲ್ಲಿ, ನಮ್ಮ ಮೂಗಿನ ನೇರಕ್ಕೆ ನೋಡಿ ತೀರ್ಮಾ ನಕ್ಕೆ ಬಂದುಬಿಡುತ್ತೇವೆ. ಒಬ್ಬ ಮನುಷ್ಯನನ್ನು ಅರಿಯದೆ, ವಿಷಯ ದ ಪೂರ್ವಾಪರ ತಿಳಿಯದೆ ಆತ ಹಾಗೆ ಅಂದ, ಹೀಗೆ ಮಾಡಿದ ಎಂದು ದೂರುತ್ತೇವೆ. ಆದರೆ ಆತನ ಪರಿಸ್ಥಿತಿ ಹೇಗಿತ್ತು ಎಂಬು ದರ ಬಗ್ಗೆ, ಸಣ್ಣ ಊಹೆಯನ್ನೂ ಯಾರೂ ಮಾಡುವು ದಿಲ್ಲ. ಆದರೆ ಶಂಕರ್ ನಾಗ್ ಅವರ ವ್ಯಕ್ತಿತ್ವವೇ ಬೇರೆ ಯ ದಿತ್ತು. ಆತ ಯಾವ ಸಂದರ್ಭದಲ್ಲೂ ಇನ್ನೊಬ್ಬರ ಮೇಲೆ ರೇಗುವುದು, ಬಯ್ಯುವುದು ಮಾಡಲಿಲ್ಲ. ಯಾರೇ ತಪ್ಪು ಮಾಡಿದರೂ, ತಮ್ಮ ಕೆಲಸವನ್ನು ಅರ್ಧಕ್ಕೇ ಬಿಟ್ಟು ಹೋದರೂ ಸಂಯಮ ಕಳೆದು ಕೊಳ್ಳುತ್ತಿರಲಿಲ್ಲ. ಸೀದಾ ಅವರ ಬಳಿ ಹೋಗಿ, ಏನಾಯಿ ತೆಂದು ವಿಚಾರಿಸಿ ಅದಕ್ಕೆ ಪರಿಹಾರ ಸೂಚಿಸುತ್ತಿದ್ದರು. ಅವ ರಿಗೆ ಬುದ್ಧಿಮಾತು ಹೇಳಿ, ಶಾಂತ ರೀತಿಯಿಂದ ಎಲ್ಲವನ್ನೂ ಬಗೆ ಹರಿಸುತ್ತಿದ್ದರು. ಅವರ ಈ ಗುಣವೇ ನನಗೆ ಒಂದು ಒಳ್ಳೆ ಪಾಠವಾಗಿ ಪರಿಣಮಿಸಿತು. ಜೀವ ನದ ಪಾಠಗಳನ್ನು ಹೇಳದೇ ಕಲಿಸಿದ ಗುರು ಶಂಕರ್ ನಾಗ್.
ಪ್ರತಿಯೊಬ್ಬರಲ್ಲೂ ಅಸೂಯೆ, ಸ್ವಾರ್ಥ ಇದ್ದೇ ಇರುತ್ತೆ. ಆದರೆ ಸತ್ಯಾಸತ್ಯತೆ ಅರಿಯದೇ ಮತ್ತೂಬ್ಬರ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಮುನ್ನ ಅವರ ಜಾಗದಲ್ಲಿ ನಿಂತು ಯೋಚಿಸಬೇಕು. ಬೇರೊಬ್ಬರನ್ನು ಮುಕ್ತ ಮನಸ್ಸಿನಿಂದ ಪ್ರೀತಿಸಬೇಕು. ಎಲ್ಲರನ್ನೂ ಪ್ರೀತಿ-ಗೌರವದಿಂದ ಕಾಣಬೇಕು ಎಂಬುದನ್ನು ಶಂಕರ್‌ರಿಂದ ಕಲಿತಿದ್ದೇನೆ. ಕೇವಲ ನಾನೊಬ್ಬನೇ ಅಲ್ಲ, ಅವರ ತಂಡದಲ್ಲಿದ್ದ 13-14 ಜನರೂ ಅವರಿಂದ ಮಾನವೀಯ ಗುಣಗಳನ್ನು ಕಲಿತಿದ್ದೇವೆ. ಗುರುಗಳು ಅವರ ಪರಿಣಿತಿಯ ವಿಷಯಕ್ಕೆ ತಕ್ಕಂತೆ ಪಾಠಗಳನ್ನು ಹೇಳಿಕೊಡುತ್ತಾರೆ.ಆದರೆ ಶಂಕರ್ ನಾಗ್, ಜೀವನ ಮೌಲ್ಯವನ್ನು, ಮಾನವೀಯತೆಯ ಪಾಠಗಳನ್ನು ಕಲಿಸಿದ ಮಹಾಗುರು…
– ರಮೇಶ್ ಭಟ್, ಚಿತ್ರನಟ
ಕೆಲಸದಲ್ಲಿ ಶಿಸ್ತಿರಬೇಕು !
ನಾನು ಹಂಸಲೇಖ ಅವರ ಬಳಿ ಶಿಷ್ಯ ವೃತ್ತಿ ಆರಂಭಿಸಿದಾಗ “ಚೈತ್ರದ ಪ್ರೇಮಾಂಜಲಿ’ ಚಿತ್ರದ ರಿ ರೆಕಾರ್ಡಿಂಗ್ ನಡೆ ಯುತ್ತಿತ್ತು. ಅಂದಿನಿಂದ ನಾನು ನೋಡಿದಂತೆ ಮುಂಜಾನೆ 5 ಗಂಟೆಗೆ ಎದ್ದು , ಸ್ನಾನ ಮಾಡಿ ಶುಭ್ರವಾದ ಬಿಳಿ ಅಂಗಿ ತೊಟ್ಟು, ಪಿಯಾನೋ ಮುಂದೆ ಕೂತು ಸಂಗೀತಾಭ್ಯಾಸ ಮಾಡಿ, 6 ಗಂಟೆಗೆ ಮನೆಯಿಂದ ಹೊರಡುತ್ತಿದ್ದರು. ಹಂಸ ಪಕ್ಷಿ ನಡೆದು ಬರುವ ರೀತಿಯಲ್ಲೇ ಲವಲವಿಕೆಯಿಂದ ಆರಂಭವಾಗುತ್ತಿದ್ದ ಅವರ ದಿನ, ರಾತ್ರಿ 12ರವರೆಗೂ ಅದೇ ಲವಲವಿಕೆಯಿಂದ ಕೂಡಿ ರುತ್ತಿತ್ತು. “ಕೆಲಸದಲ್ಲಿ ಸುಸ್ತಿರಬಾರದು, ಶಿಸ್ತಿರ ಬೇಕು’ ಎಂಬ ಅವರ ಮಾತು ನನ್ನ ಜೀವನಕ್ಕೆ ಆದರ್ಶ ವಾದ ಸಂಗತಿ. ಕೆಲಸದಲ್ಲಿ ಉತ್ಸಾಹ, ಏಕತಾ ನತೆ ಇಲ್ಲದೆ, ನಿಮಿಷ ನಿಮಿಷಕ್ಕೂ ಕ್ರಿಯಾತ್ಮಕವಾಗಿ ಯೋಚಿ ಸುವ ರೀತಿಯನ್ನು ಅವರಿಂದ ಕಲಿತಿದ್ದೇನೆ. ಅಂದಿನ ದಿನಗಳಲ್ಲಿ ಇಂಟರ್‌ನೆಟ್ ವ್ಯವಸ್ಥೆ ಇರಲಿಲ್ಲ . ಪುಸ್ತಕ ಗಳನ್ನು ಓದಿ, ಚರ್ಚಿಸಿ ಕಲಿಯುವುದರ ಜೊತೆಯಲ್ಲಿ ಒಂದೊಂದು ನೋಟದಲ್ಲೇ ಅಧ್ಯಯನಗಳನ್ನು ಮಾಡುತ್ತಿದ್ದರು. ಕೆಲ ಸಂಗತಿಗಳನ್ನು ವೀಕ್ಷಣೆಯ ಮೂಲಕ ಕಲಿಯುತ್ತಿದ್ದರು. ಹಂಸಲೇಖ ಓರ್ವ ಶಿಕ್ಷಕರಾಗಿದ್ದರೂ ಅವರಲ್ಲಿ ವಿದ್ಯಾರ್ಥಿಯಾಗಿ ಕಲಿಯುವ ಗುಣ ಇತ್ತು. ಅವರ ಸಾಂಗತ್ಯದಲ್ಲಿ ಅವರ ನೆರಳಲ್ಲೇ ನಾನು ಬದುಕಿನ, ವೃತ್ತಿಯ ಶಿಸ್ತನ್ನು ಕಲಿಯುವಂತಾಗಿದ್ದು.
ಅಧ್ಯಯನ, ಕ್ರಿಯಾತ್ಮಕತೆ ಜೊತೆಗೆ ಹಂಸಲೇಖ ಅವರಿಂದ ಕಲಿತ ಮತ್ತೂಂದು ಪಾಠ ನಗು. ಸದಾ ಹಸನ್ಮುಖೀಯಾಗಿರುವುದು. ನಮ್ಮ ಸುತ್ತಲಿನವರು ನಗುವಂತೆ ಮಾಡುವುದು, ಆ ಮೂಲಕ ಒಂದು ಸಕಾರಾತ್ಮಕ ವಾತಾವರಣ ಸೃಷ್ಟಿಮಾಡುವುದನ್ನು ಅವರಿಂದ ಕಲಿಯಬೇಕು. ಹಾಡು ಬರೆಯುವಾಗ ಹೀಗೇ ಬರೆಯಬೇಕು ಎಂಬ ಯಾವ ಚೌಕಟ್ಟನ್ನೂ ಹಾಕದೇ, ಹೀಗೂ ಹಾಡುಗಳನ್ನು ಬರೆಯಬಹುದು ಎಂಬು ದನ್ನು ತೋರಿಸಿದರು. ಕೇವಲ ಬರವ ಣಿಗೆಯಂತಲ್ಲದೇ, ಸಂಗೀತ ಸಂಯೋಜನೆ ಯಲ್ಲೂ ವಾದ್ಯಗಳ ಹೊಸ ಹೊಸ ಪ್ರಯೋಗಗಳನ್ನು ಮಾಡಿ, ನಾವು ವಿಭಿನ್ನತೆಯನ್ನು ರೂಢಿಸಿಕೊಳ್ಳಬೇಕು ಎಂದು ಪ್ರೇರೇಪಿಸಿದವರು ಹಂಸಲೇಖ.
– ಕೆ.ಕಲ್ಯಾಣ್, ಗೀತೆ ರಚನೆಕಾರ
ಮೌನದ ಮಹತ್ವವನ್ನು ಅರಿತೆ
ಕೋಚ್‌ಗಳು ಮಾಮೂಲಿಯಾಗಿ ಆಡುವುದು ಹೇಗೆ, ಆಹಾರ ಪದ್ಧತಿ ಹೇಗಿರಬೇಕು, ಶಿಸ್ತನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದನ್ನು ಕಲಿಸುತ್ತಾರೆ. ಆದರೆ ನನ್ನ ಕೋಚ್ ಅನೂಪ್ ಜೋಸೆಫ್ ಹೇಳಿಕೊಟ್ಟು ಕಲಿಸಿದ್ದರ ಜೊತೆಗೆ, ತಮ್ಮ ನಡವಳಿಕೆಯಿಂದಲೂ ನನಗೆ ಕಲಿಸಿ ದರು. ನಾನು ಬಹಳ ಮಾತನಾಡುತ್ತಿದ್ದೆ, ಕೀಟಲೆ ಗಳನ್ನು ಮಾಡುತ್ತಿದ್ದೆ. ಆದರೆ ಅವರನ್ನು ನೋಡುತ್ತ ಹೋದಂತೆಲ್ಲ ಗಂಭೀರವಾಗಿರುವುದು, ಮೌನವನ್ನು ಕಾಪಾಡಿ ಕೊಳ್ಳುವುದು ಹೇಗೆಂದು ಅರ್ಥವಾಯಿತು. ನೇರವಾಗಿ ಮಾತನಾಡು ವುದು, ನಡೆದುಕೊಳ್ಳುವ ಸ್ವಭಾವ ಅವರನ್ನು ನೋಡಿಯೇ ಬಂದಿದ್ದು.
– ಎನ್.ಎಸ್.ಸಿಮಿ, ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾಗಿರುವ ರಿಲೇ ಓಟಗಾರ್ತಿ, ಮುಂಡಗೋಡು
ಸೂಕ್ಷ್ಮತೆಯ ಅರಿವಾಯಿತು
ಒಬ್ಬ ಕ್ರೀಡಾಪಟು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ನನ್ನ ಕ್ರೀಡಾಗುರುಗಳಾದ ಆರ್.ರಾಜೀವ್‌ರನ್ನು ನೋಡುತ್ತ ಪ್ರತಿಯೊಂದನ್ನೂ ವಿವರವಾಗಿ, ನಿರ್ದಿಷ್ಟವಾಗಿ ಗಮನಿಸುವುದನ್ನು ಕಲಿತೆ. ಮುಖ್ಯವಾಗಿ ನಮಗೆ ಸಮಯಪ್ರಜ್ಞೆ ಇರಬೇಕು, ಶಿಸ್ತಂತೂ ಬೇಕೇಬೇಕು. ಇವೆಲ್ಲ ಹೇಳಿ, ಕಲಿಸಿ ಬರುವುದಲ್ಲ. ನಾನು ಗುರುಗಳ ಜೀವನಶೈಲಿ ನೋಡಿ ತಂತಾನೇ ಅದನ್ನು ಅಳವಡಿಸಿ ಕೊಂಡೆ. ಹೀಗೆ ನೋಡಿದರೆ ನನಗೆ ಪಾಠ ಮಾಡಿದ ಶಿಕ್ಷಕರು, ಉಪನ್ಯಾಸಕರೂ ತಮ್ಮ ನಡೆನುಡಿಯಿಂದ ಪರೋಕ್ಷವಾಗಿ ಬಹಳ ಕಲಿಸಿದ್ದಾರೆ. ಮಾತನಾಡು ವುದು ಒಂದು ಸ್ವಭಾವವಾದರೆ, ಇನ್ನೊಬ್ಬರ ಮಾತನ್ನು ಕೇಳುವುದೂ ಕೂಡ ಅಷ್ಟೇ ಅಗತ್ಯ. ಇನ್ನೊಬ್ಬರನ್ನು ಗೌರವಿಸುವುದು, ಅವರ ಮಾತನ್ನು ಶಾಂತವಾಗಿ ಆಲಿಸುವುದು ನನಗೆ ಈಗ ಅಭ್ಯಾಸವಾಗಿದೆ.
– ಶಿವಾ ಶ್ರೀಧರ್, ಖೇಲೋದಲ್ಲಿ 7 ಚಿನ್ನ ಗೆದ್ದ ಈಜುಪಟು, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.