ಷಷ್ಠಿ… ಸರ್ವ ಸಂಕಷ್ಟ ನಿವಾರಕ ಸ್ಕಂದ

ಷಣ್ಮುಖ ದೇವರ ಪೂಜೆಗಿಂತ ಇಲ್ಲಿ ನಾಗಾರಾಧನೆಯೇ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ...

Team Udayavani, Dec 7, 2024, 6:20 AM IST

1-holl-sm-bg

ದಕ್ಷಯಜ್ಞದ ಸಂದರ್ಭದಲ್ಲಿ ಪರಶಿವನ ಹೆಂಡತಿಯಾದ ದಾಕ್ಷಾಯಿಣಿಯು ಯೋಗಾಗ್ನಿಯನ್ನು ಸೃಷ್ಟಿಸಿಕೊಂಡು ಅದರಲ್ಲಿ ತನ್ನನ್ನು ತಾನೇ ದಹಿಸಿಕೊಳ್ಳುತ್ತಾಳೆ. ಆಗ ಹೆಂಡತಿಯನ್ನು ಕಳೆದುಕೊಂಡ ಈಶ್ವರನು ಕೈಲಾಸದಲ್ಲಿ ಒಂಟಿಯಾಗಿಯೇ ಉಳಿದು ಧ್ಯಾನಾಸಕ್ತನಾಗಿ ಉಗ್ರವಾದ ತಪಸ್ಸಿನಲ್ಲಿ ನಿರತನಾಗುತ್ತಾನೆ.

ಈಶ್ವರನು ಹೆಂಡತಿಯನ್ನು ಕಳೆದುಕೊಂಡ ವಿಷಯವನ್ನು ಅರಿತುಕೊಂಡ ತಾರಕಾಸುರನೆಂಬ ದೈತ್ಯನು ಉಗ್ರವಾದ ತಪಸ್ಸಿನಲ್ಲಿ ಬ್ರಹ್ಮನನ್ನು ಮೆಚ್ಚಿಸಿ, ಈಶ್ವರನಿಗೆ ಇನ್ನು ಮುಂದೆ ಜನಿಸುವ ಪುತ್ರನಿಂದಲ್ಲದೇ ಅನ್ಯರಿಂದ ತನಗೆ ಮರಣ ಇಲ್ಲದಂತಹ ವರ ಪಡೆಯುತ್ತಾನೆ. ಅನಂತರ ಆ ವರಬಲದಿಂದ ಕೊಬ್ಬಿ ದೇವತೆಗಳನ್ನೆಲ್ಲ ಸೋಲಿಸಿ ಲೋಕಕಂಟಕನಾಗಿ ಮೆರೆಯುತ್ತಿರುತ್ತಾನೆ.

ಈಶ್ವರನಿಗೆ ಹೆಂಡತಿ ಇಲ್ಲದಿರು ವುದರಿಂದ ಆತನಿಗೆ ಮಗನು ಜನಿ ಸುವುದು ಸಾಧ್ಯವಿಲ್ಲ, ಈಶ್ವರನಿಗೆ ಮಗನು ಜನಿಸದೇ ಹೋದರೆ ತಾರಕಾ ಸುರನಿಗೆ ಅಳಿವಿಲ್ಲ. ಹೀಗಾಗಿ ದೇವತೆಗ ಳೆಲ್ಲರೂ ಈಶ್ವರನಿಗೆ ಮರು ಮದುವೆ ಮಾಡಿಸುವ ಉಪಾಯ ಮಾಡುತ್ತಾರೆ. ದಕ್ಷಯಜ್ಞದ ಸಂದರ್ಭದಲ್ಲಿ ಉರಿದು ಹೋದ ದಾಕ್ಷಾಯಿಣಿಯು ಅನಂತರ ಪರ್ವತ ರಾಜನಿಗೆ ಮಗಳಾಗಿ ಪಾರ್ವತಿ (ಗಿರಿಜೆ) ಎಂಬ ಹೆಸರಿನಿಂದ ಈಶ್ವರನನ್ನೇ ಧ್ಯಾನಿಸುತ್ತಾ ಇರುತ್ತಾಳೆ. ಅವಳನ್ನೇ ಕೊಟ್ಟು ಈಶ್ವರನಿಗೆ ಮದುವೆ ಮಾಡಿ ಸುತ್ತಾರೆ.

ಮುಂದೆ ಅವರಿಬ್ಬರಿಗೆ “ಷಣ್ಮುಖ’ ಎಂಬ ಮಗನು ಹುಟ್ಟುತ್ತಾನೆ. ಅವನನ್ನು ಕಾರ್ತಿಕೇಯ, ಸ್ಕಂದ, ಸುಬ್ರಹ್ಮಣ್ಯ, ಕುಮಾರಸ್ವಾಮಿ, ಮುರುಗ ಮೊದಲಾದ ಹೆಸರುಗಳಿಂದಲೂ ಕರೆಯುತ್ತಾರೆ. ತಾರಕಾಸುರನನ್ನು ವಧಿಸಿ ಲೋಕಕಲ್ಯಾಣ ಉಂಟುಮಾಡಲೆಂದೇ ಹುಟ್ಟಿದ ಷಣ್ಮುಖನು ತಾನು ಜನಿಸಿದ ಏಳನೇ ದಿನದಲ್ಲಿಯೇ ತಾರಕಾಸುರನ ಮೇಲೆ ಯುದ್ಧಕ್ಕೆ ತೆರಳುತ್ತಾನೆ. ದೇವತೆಗಳ ಸಮಸ್ತ ಸೇನೆಗೆ ಕುಮಾರಸ್ವಾಮಿಯೇ ಸೇನಾನಾಯಕನಾಗುತ್ತಾನೆ. ಆತನು ಮಾರ್ಗಶಿರ ಮಾಸದ ಶುಕ್ಲಪಕ್ಷದ ಷಷ್ಠಿ ತಿಥಿಯಂದು ತಾರಕಾಸುರನನ್ನು ಕೊಲ್ಲುತ್ತಾನೆ.

ಕುಮಾರಸ್ವಾಮಿಯು ತಾರಕಾಸು ರನನ್ನು ಕೊಂದ ಬೆಟ್ಟದ ಸuಳಕ್ಕೆ “ಕುಮಾರ ಪರ್ವತ’ ಎಂದು ಹೆಸರಾಗುತ್ತದೆ. ಅಲ್ಲದೇ ತಾರಕಾಸುರನನ್ನು ಕೊಂದ ಅನಂತರ ತನ್ನ ಆಯುಧಗಳಿಗೆ ಅಂಟಿದ ರಕ್ತವನ್ನು ಪಕ್ಕದ “ಧಾರಾ’ ನದಿಯಲ್ಲಿ ಸುಬ್ರಹ್ಮಣ್ಯನು ತೊಳೆಯುತ್ತಾನೆ. ಹೀಗಾಗಿ ಧಾರಾ ನದಿಗೆ “ಕುಮಾರಧಾರಾ’ ಎಂದು ಹೆಸರು ಬರುತ್ತದೆ.

ತಾರಕಾಸುರನ ವಧೆಯಾದ ಅನಂ ತರ ದೇವೇಂದ್ರನು ತನ್ನ ಮಗಳಾದ ದೇವಸೇನೆ ಎಂಬವಳನ್ನು ಸುಬ್ರಹ್ಮಣ್ಯನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ಅವರಿ ಬ್ಬರ ವಿವಾಹ ಮಹೋತ್ಸವವೂ ಕೂಡ ಮಾರ್ಗಶಿರ ಮಾಸದ ಶುಕ್ಲಪಕ್ಷದ ಷಷ್ಠಿ ತಿಥಿಯಂದೇ ನೆರವೇರುತ್ತದೆ. ಅನಂತರ ಸುಬ್ರಹ್ಮಣ್ಯನು ಪತ್ನಿಯೊಂದಿಗೆ ಕುಮಾರ ಧಾರಾ ನದಿಯ ಪಕ್ಕದಲ್ಲಿಯೇ ನೆಲೆ ನಿಲ್ಲುತ್ತಾನೆ. ಆ ಸ್ಥಳವೇ “ಸುಬ್ರಹ್ಮಣ್ಯ ಕ್ಷೇತ್ರ’ ಎಂದು ಪ್ರಸಿದ್ಧವಾಗುತ್ತದೆ.

ಸುಬ್ರಹ್ಮಣ್ಯನು ತಾರಕಾಸುರನನ್ನು ಕೊಂದ ಆ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿಯಂದು “ಚಂಪಾ’ ಎಂಬ ಒಂದು ವಿಶೇಷ ಯೋಗ ಇದ್ದಿತ್ತು. ಹೀಗಾಗಿ ಅದನ್ನು “ಚಂಪಾಷಷ್ಠಿ’ ಎಂಬು ದಾಗಿ ಕರೆಯುತ್ತಾರೆ. ಜನರು ಇದನ್ನೇ “ಕುಕ್ಕೆ ಶ್ರೀ ಸುಬ್ರಹ್ಮಣ್ಯ ಷಷ್ಠಿà’ ಅಥವಾ “ಕುಕ್ಕೆ ಷಷ್ಠಿ’ ಅಥವಾ “ಸುಬ್ರಹ್ಮಣ್ಯ ಷಷ್ಠಿ’ ಅಥವಾ “ಸ್ಕಂದ ಷಷ್ಠಿ’ ಎಂದು ಕರೆಯುತ್ತಾರೆ.

“ಚಂಪಾ’ ಎಂಬುದು ಮಾಮೂಲಿ ಯಾಗಿ ನಾವು ಹೇಳುವ ವಿಷ್ಕಂಭವೇ ಮೊದಲಾದ 27 ಯೋಗಗಳ ಪಟ್ಟಿಯಲ್ಲಿ ಇಲ್ಲದ ಒಂದು ವಿಶೇಷ ಯೋಗ ಸಂಯೋಗವಾಗಿದೆ. ಹಿಂದೂಗಳ ತಿಥಿ ನಿರ್ಣಯ ಗ್ರಂಥಗಳಲ್ಲಿ “ಚಂಪಾ’ ಎಂಬ ವಿಶೇಷ ಯೋಗದ ಕುರಿತು ಹೀಗೆ ಬರೆಯಲಾಗಿದೆ. ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ರವಿವಾರ ವಾಗಿದ್ದು ವೈಧೃತಿ ಯೋಗ ಸಹಿತ ವಾಗಿದ್ದರೆ ಅದನ್ನು ಚಂಪಾಷಷ್ಠಿ ಎನ್ನು ತ್ತಾರೆ ಅಥವಾ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಮಂಗಳ ವಾರವಾಗಿದ್ದು ವಿಶಾಖಾ ನಕ್ಷತ್ರ ಸಹಿತವಾಗಿದ್ದರೆ ಅದನ್ನು ಚಂಪಾಷಷ್ಠಿ ಎನ್ನುತ್ತಾರೆ ಅಥವಾ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ರವಿವಾರವಾಗಿದ್ದು ಶತಭಿಷಾ ನಕ್ಷತ್ರ ಸಹಿತವಾಗಿದ್ದರೆ ಅದನ್ನು ಚಂಪಾಷಷ್ಠಿ ಎನ್ನುತ್ತಾರೆ.

ಹೀಗೆ “ಚಂಪಾ’ ಎಂಬುದು ಅಂದು ಸುಬ್ರಹ್ಮಣ್ಯನು ತಾರಕಾಸುರನನ್ನು ಕೊಂದ ಆ “ಷಷ್ಠಿ’ ತಿಥಿಯಂದು ಇದ್ದ ಒಂದು “ಯೋಗವಿಶೇಷ’ಕ್ಕೆ ಇಟ್ಟ ಹೆಸರಾ ಗಿದೆ. ಅಂದು ಘಟಿಸಿದ ಅದೇ “ಚಂಪಾ’ ಯೋಗವು ಮರಳಿ ಬರುವುದು ಅಸಾಧ್ಯವೇ ಆಗಿದೆ. ಹೀಗಾಗಿ ಮಾರ್ಗ ಶಿರ ಮಾಸದ ಶುಕ್ಲಪಕ್ಷದ ಷಷ್ಠಿà ತಿಥಿಯನ್ನೇ “ಚಂಪಾಷಷ್ಠಿ’ ಎಂಬುದಾಗಿ ಪರಿಗಣಿಸುತ್ತೇವೆ. ಷಷ್ಠಿಯಂದು ಸುಬ್ರಹ್ಮಣ್ಯನಿಗೆ ವಿಶೇಷ ಪೂಜಾರ್ಚನೆ, ಹರಕೆಗಳನ್ನು ಸಲ್ಲಿಸಿದರೆ ನಮ್ಮನ್ನು ಕಾಡುವ ಸರ್ವ ದುರಿತ, ದೋಷ, ಸಂಕಷ್ಟಗಳೆಲ್ಲವೂ ನಿವಾರಣೆಯಾಗುತ್ತವೆ. ಅಲ್ಲದೆ ಸುಬ್ರಹ್ಮಣ್ಯನ ಆರಾಧನೆಯಿಂದ ವಿವಾಹ, ಸಂತಾನ ಭಾಗ್ಯ ಲಭಿಸುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪರಶಿವನ ಪುತ್ರನಾದ ಷಣ್ಮುಖ ದೇವರನ್ನು ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ನಾಗ ರೂಪದಲ್ಲಿಯೇ ಆರಾಧಿಸಲಾಗುತ್ತದೆ. ಷಣ್ಮುಖ ದೇವರ ಪೂಜೆಗಿಂತ ಇಲ್ಲಿ ನಾಗಾರಾಧನೆಯೇ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಈ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುತ್ತದೆ. ಹಾಗಾಗಿ ಈ ಸ್ಥಳವು ಎಲ್ಲ ತರಹದ ನಾಗದೋಷಗಳ ಪರಿಹಾರದ ಸ್ಥಳವಾಗಿದೆ. ದೇಶದ ನಾನಾ ಕಡೆಗಳಿಂದ ಹರಕೆ ಹೊತ್ತ ಜನರು ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಾ ಬಲಿ ಹಾಗೂ ಇತರ ಪೂಜೆಗಳನ್ನು ಸಲ್ಲಿಸಲು ಇಲ್ಲಿಗೆ ಬರುತ್ತಾರೆ.

ಹರಿಕೃಷ್ಣ ಹೊಳ್ಳ, ಬ್ರಹ್ಮಾವರ

ಟಾಪ್ ನ್ಯೂಸ್

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.