ಮನಸ್ಸಿದ್ದರೆ ಮಾರಿ ತೋರಿಸು, ಪ್ರೀತಿ ಇದ್ದರೆ ಪೋನ ಮಾಡು!
Team Udayavani, Apr 24, 2017, 6:43 AM IST
“”ಪಸ್ಟಪಾಲ್… ಪಿಚ್ಚರ್ರಾಗ ಯೀರೋಯಿನಿ ಬೆಳ್ಳಗ ಇರಬೇಕು. ಯೀರೋ ಯಂಗಿದ್ರೂ ನಡೀತದ. ಆದ್ರ ಅವ್ನಿಗೆ ತಾಬಡತೋಬಡ ಫೈಟಿಂಗ್ ಬರಾಬೇಕು. ಅವ°ತ್ರ ಒಂದು ರೂಪಾಯಿ ಆಮಾನಿ ಇಲ್ಲ ಅಂದ್ರೂ ಅಡ್ಡಿಯಿಲ್ಲ; ದೊಡ್ಡ ದೊಡ್ಡ ಕಾರು ಇರಬೇಕು. ಬಡತನದಾಗಿದ್ರೂ ಅವ್ನು ಫಾರಿನ್ನಾಗ ಹೋಗಿ ಡ್ಯಾನ್ಸ್ ಮಾಡಬೇಕು. ಬಾಯ್ಬಿಟ್ರೇ ತನ್ನ ಬಗ್ಗೆ ತಾನು ದೊಡ್ ದೊಡ್ ಮಾತಾಡ್ಬೇಕು…”
ತನ್ನ ಟಾಮ್‌ಟಾಮ್‌ನಾಗ “ಪ್ರೀತಿಯ ಪಾರಿವಾಳ ಹಾರಿಹೋತೋ ಗೆಳೆಯ’ ಹಾಡ್ ಹಾಕ್ಯಂಡು ಸ್ಪೀಡಾಗಿ ಹೊಂಟಿದ್ದ ಯಲ್ಲಪ್ಪಗ ರೋಡಿನ ಸೈಡಿನ ಚಾ ಬಂಡಿ ನೋಡಿ ಬಾಯಿ ಚುಟುಚುಟು ಅಂತು. ಒಂದು ಚಾ ಕುಡುದೋಗಣ ಅಂತಂದು, ಟಾಮ್‌ಟಾಮ್ ಸೈಡಿಗೆ ತರುಬಿ 50 ರೂಪಾಯಿ ಕೂಲಿಂಗ್ ಗ್ಲಾಸು ಹಾಕ್ಕೆಂಡು ಕೆಳಗಿಳದ. “ಯಣ್ಣ, ಒಂದು ಚಾ ಕುಡುಸಾ…’ ಅಂತ ಚಾ ಅಂಗಡಿ ಇಲಿಯಾಜಗ ಹೇಳಿ ಕಲ್ಲಿನಬಂಡಿಮ್ಯಾಲ ಕೂತ. ತನ್ನ ಬಗಲಾಗ ಚಾ ಆರ್ಡರ್ ಮಾಡಿ ಕೂತ ಮಾನುಬಾವನ್ನ ಎಲ್ಲೋ ನೋಡಿದಂಗೈತಲ್ಲ ಅನ್ಕೊಂಡ ಯಲ್ಲಪ್ಪ ಚಾಳೀಸ್ ತಗದು ದಿಟ್ಟಿಸಿ ನೋಡಿದ.
“ಅಲೇ ಲಕ್ಷ್ಮಣ. ಏನಲೇ, ಬೆಂಗಳೂರಿಗೆ ಹೋಗಿದ್ಯಂತ. ಪಿಚ್ಚರ್ ಗಿಚ್ಚರ್ ಮಾಡಕತ್ತೀಯಂತ?’ ಕೇಳಿದ ಯಲ್ಲಪ್ಪ.
“ಯಣ್ಣ ನಾ ಪಿಚ್ಚರ್ ಮಾಡಕತ್ತೀನಂತ ಯಾರ್ ಹೇಳಿದ್ರ?’ ಅಂದು ಚಾ ಸರಕ್ ಅನ್ಸಿದ ಲಕ್ಷ್ಮಣ. ಜೋಬಾಗಿನ ಚಾಳೀಸ್ ಹೊರಾಗ ತಗದು ಅದರ ಮ್ಯಾಲಿನ ಧೂಳು ಒರೆಸಿ ಅಂದ ಯಲ್ಲಪ್ಪ: “”ಊರಿಗೂರೇ ಹೇಳಾತ್ತದ. ಪಿಚ್ಚರ್ ಮಾಡ್ತೀನಂತ ಬೆಂಗ್ಳೂರಿಗೆ ಓಡೋಗ್ಯಾನ ಲಕ್ಷ್ಮಣ ಅಂತಂದು. ಮೂರು ತಿಂಗಳ ಮನ್ಯಾಗ ಉಳಾಡಿ ಉಳಾಡಿ ಪ್ರೇಮ ಕಥಿ ಬರದ್ಯಂತಲಲೇ? ಏನಾತಪ? ಏನಾರ ಶುಭಸಮಾಚಾರ?” ಇವರ ಮಾತು ಕೇಳಿಸಿಗೆಂತ ನಿಂತಿದ್ದ ಚಾಬಂಡಿ ಇಲಿಯಾಜ “ಕ್ಯಾಬಾ ಪಿಚ್ಚರ್ ಕರ್ರಾ? ಹಮ್ ಕೋ ಚಾನ್ಸ್ ನಯ್ ದೇತಾ?’ಅಂದು ಚಾ ಸೋಸಿದ.
“”ಬೈಂಗನ್‌ಕಾ ಪಿಚ್ಚರ್ ಕರೂ…ನಂದೇ ನನಗ ಹರದು ಹನ್ನೆರಡಾಗ್ಯಾದ..ಜಾಬಾ ಅಪ್ನಾ ಕಾಮ್‌ದಂಧಾ ದೇಖ್” ಎಂದು ಇಲಿಯಾಜನಿಗೆ ಜಾಡಿಸಿದ ಲಕ್ಷ್ಮಣ ನಿಟ್ಟುಸಿರುಬಿಟ್ಟು ಜೇಬಿನಿಂದ ತಂಬಾಕಿನ ಚೀಟಿ ಹೊರಗ ತಗದ. “ತಂಬಾಕ್ ಇಟ್ಟಿದೇನು? ಜರಾ ನನಗೂ ಕೊಡಾ ಪಾರಾ…’ ಅಂದ ಯಲ್ಲಪ್ಪ ಕೈ ಮುಂದ ಚಾಚಿದ. ಯಲ್ಲಪ್ಪ- ಲಕ್ಷ್ಮಣ ಇಬ್ರೂ ತಂಬಾಕಿಗೆ ಸುಣ್ಣ ಕಲಿಸಿ ಒಂದೇ ಟೈಮಿಗೆ ತಮ್ಮ ತುಟಿ ಮುಂದ ಎಳಕೊಂಡು ಬಾಯೊಳಗ ತುರಿಕ್ಯಂಡ್ರು. “ಏನ್ ಪಿಚ್ಚರ್ ಬದೀìದಲೇ…ನನಗೂ ಕಥಿ ಹೇಳು. ನಾನೂ ಬಾಳ ಸಿನೆಮಾ ನೋಡೀನಿ’ ಅಂತ ಯಲ್ಲಪ್ಪ ಲಕ್ಷ್ಮಣನ್ನ ಕೇಳಿದ್ದೇ. ಲಕ್ಷ್ಮಣ ತನ್ನ ಕತಿ ಶುರುವಚಿಗೆಂಡ.
“”ಯಣ್ಣ, ವರ್ಷದಿಂದ ಒಬ್ಬ ಪೋರಿ ಜೊತಿ ಲವ್ವಾಗ ಬಿದ್ದಿದೆ. ಅಕೀನು ನನ್ನ ನೋಡಿದಾಗೆಲ್ಲ ಕಿಸಕ್ ಅಂತ ನಗಕೀ..ನಮ್ಮಿಬ್ಬರ ಪ್ರೀತಿ ಬರೇ ನಗದ್ರಾಗ ಹೊಂಟಿತ್ತು. ಒಂದಿನ ಆಗಿದ್ದಾಗೋಗ್ಲಿ ಅಂತ ಎದಿ ಗಟ್ಟಿ ಮಾಡ್ಕéಂಡು… ಐ ಲವ್ ಯು ಅಂದೆ. ನಾ ಹಂಗಂದಿದ್ದೇ ತಡ. ಅಕಿ, “ನಿನ್ನ ಮಾರೀಗೆ ಮದ್ದರವ. ನಿನ್ನ ಬಾಯಾಗ ಮಣ್ಣಾಕ. ನಿನ್ನ ಹೆಣ ಎತ್ತಾ’ ಅಂತ ಬಾಯಿಗೆ ಬಂದಂಗ ಬೈದು. ಅಷ್ಟಕ್ಕ ಸುಮ್ನಾಗ್ಲಿಲ್ಲ. “ಕೆಲಸಿಲ್ಲ ಬೊಗಸಿಲ್ಲ, ಕೈಯಾಗ ಒಂದು ರೂಪಾಯಿ ಇಲ್ಲ. ಭಿಕ್ಷಗಾರ ಇದ್ದಂಗ ಇದ್ದಿ. ನಿನಗೆ ನಾನು ಬೇಕಾದೆ°ನಲೇ ಬಾಡೌR?’ ಅಂದು ಉಗುಳಿ ಮುಂದೋದು. ಅಕಿ ನನ್ನ ಬಾಯಾಗ ಮಣ್ಣಾಕ, ಹೆಣ ಎತ್ತಾ, ಬಾಡೌR ಅಂದಿದ್ದು ಬ್ಯಾಸ್ರಾಗ್ಲಿಲ್ಲ. ಆದ್ರ ಭಿಕ್ಷಗಾರ ಅಂದಿದ್ದು ಕೇಳಿ ಬಾಳ ತ್ರಾಸಾತು. ಆಗಿದ್ದು ಆಗೋಗ್ಲಿ. ನಾನು ಒಂದು ವರ್ಷದಾಗ ಶ್ರೀಮಂತ ಆಗಿ, ಅಕ್ಕಿನ್ನ ಮದುವಿ ಆಗ್ತಿàನಿ ಅಂತ ಡಿಸೈಡ್ ಮಾಡಿದೆ. ಸಿನೆಮಾ ಮಾಡಿದ್ರೆ ಕೈತುಂಬಾ ರೊಕ್ಕ ಬರ್ತಾವ ಅಂತ ಯಾರೋ ಅಂದಿದ್ದು ನೆನಪಾಯ್ತು. ಅವತ್ತ ಚಂಜಿಮುಂದಿಂದ ಕಥಿ ಬರಿಯೋಕ್ಕ ಶುರುವಚಿಗ್ಯಂಡೆ.” “ಅಬ್ಟಾಬ್ಟಾ, ನೀನು ಬಲು ತೀಸ್‌ಮಾರ್ಕ ಬಿಡಲೇ! ಹುಡ್ಗಿ ಬೈದ್ಲಂತಂದು ಪಿಚ್ಚರೇ ಮಾಡಕ್ಕೊಂಟೀದಿ…ಏನದ ಕತಿ ನಮಗೂ ಹೇಳು…’ ಅಂದ ಯಲ್ಲಪ್ಪ ತನ್ನ ಚಾಳೀಸ್ ತಗದು ಮತ್ತೆ ಜೋಬಾಗ ತುರಿಕ್ಯಂಡ.
“ಕಥಿ ರಿಯಲ್ ಟು ರಿಯಲ್ ಇಬೇìಕು ಅಂತ ನಮೆªà ಕಥಿ ಬರ್ದೆ. ನಾನು ಅಕಿನ್ನ ಮನಸಿಗೆ ಹಚಿಗೆಂಡಿದ್ದು, ಅಕಿ ನನಗ ಬಾಯಿಗೆ ಬಂದಂಗ ಬೈದು ದೂರಾಗಿದ್ದು, ಆಮ್ಯಾಲೆ ನಾನು ಬ್ಯಾಸ್ರ ಮಾಡಿಕೆಂಡಿದ್ದು… ಇದೇ ಕಥೀನ್ನೇ ಬರದೆ. ಪಿಚ್ಚರ್ರಿಗೆ “ಮನಸ್ಸಿದ್ದರೆ ಮಾರಿ ತೋರ್ಸು, ಪ್ರೀತಿ ಇದ್ದರೆ ಪೋನ ಮಾಡು’ ಅಂತ ಹೆಸರಿಟ್ಟು, ಬೆಂಗಳೂರಿಗೆ ಒಯ್ದಿದ್ದೆ’ “ಫಿರ್ ಕ್ಯಾ ಹುವಾ ಬಾ?’ ಚಾಪುಡಿ ನೆಲಕ್ಕ ಚೆಲ್ಲಿ ಕೇಳಿದ ಇಲಿಯಾಜ.
“ಕ್ಯಾ ಹುವಾ, ನಕ್ಕೋ ಪೂಛೋ…’ ಎಂದು ತಲಿ ತೂರಿಸಿಗ್ಯಂಡು ಯಲ್ಲಪ್ಪನ ಕಡೆ ತಿರುಗಿ ಮಾತು ಮುಂದುವರಿಸಿದ ಲಕ್ಷ್ಮಣ. “ಅಲ್ಲಾ, ದೋಸ್ತ. ಇಂಥಾ ಬಂಗಾರದಂಥ ಕಥಿ ಬರದು ಗಾಂಧಿನಗರಕ್ಕ ಒಯ್ದೆ. ಬೆಳಗ್ಗಿಂದ ಸಂಜಿ ಮಟ ತಿರುಗ್ಯಾಡಿದ್ರೂ, ಒಬ್ಬೇ ಒಬ್ಬ ಪಿಚ್ಚೌರವೂ° ಕಾಣಿಲ್ಲ. ಆಮ್ಯಾಲ ಗೊತ್ತಾತು, ಆಟೋದವ ಗಾಂಧಿನಗರ ಅಂತೇಳಿ, ಗಾಂಧಿ ಬಜಾರಾಗ ನಿಂದ್ರಿಸೋಗಿದ್ದು! ಥೋ ಇವ° ಮಾರೀಗೆ ಬೆಂಕ್ಯಚ್ಚ ಅನ್ಕೊಂಡು ಬಸ್ಸು ಹಿಡದು ಗಾಂಧಿ ನಗರಕ್ಕ ಹೋದೆ. ಅಲ್ಲಿ ಪಿಚ್ಚರ್ ಮಾಡೋರ್ ಮನೀನೂ ಸಿಕ್ಕಿತು. ಹಂಗ ಹಿಂಗ ವಾಚ್‌ಮನ್ ಕೈಕಾಲ್ ಹಿಡುª ಒಳಗ ಹೋದೆ. ಅಲ್ಲಿ ನಾಲ್ಕೈದು ಮಂದಿ ಕುಂತಿದ್ರು. ನನ್ನ ಸಿನೆಮಾ ಕಥಿ ಅವ್ರಿಗೆ ಹೇಳಿ…ರೊಕ್ಕ ಕೊಡ್ರೀ ಅಂದೆ. ಆ ಮಕ್ಳು, “ಇದನ್ನ ಕಥಿ ಅಂತಾರೇನಲೇ ಸುಡುಗಾಡು? ಒಂದು ಫೈಟಿಂಗ್ ಇಲ್ಲ, ಒಂದು ಡ್ಯಾನ್ಸಿಲ್ಲ, ಗೂಂಡಾಗರ್ದಿ ಇಲ್ಲ’ ಅಂತ ಬಡಿಬಡಿಲಕ್ಕೇ ಬಂದ್ರು. ಇಲಿ ಒಂದು ಹಾಡೈತಿ ಕೇಳಿ ಅಂತ ನಾ ಬರದ ಹಾಡು ತೋರ್ಸಿದೆ. ಅದನ್ನು ಓದಿ ಒಬ್ಬವ ವಾಂತಿ ಮಾಡ್ಕéಂಡ!” ಯಲ್ಲಪ್ಪ ನಡುವ ಬಾಯಾಕಿ ಕೇಳಿದ “ಏನಲೇ ಅಂತ ಹಾಡದು?’
ಲಕ್ಷ್ಮಣ ತನ್ನ ಚೀಲದಾಗಿಂದ ಹಾಡಿನ ಹಾಳಿ ತಗದು ಓದಿದ: “ಬೆಳಗ ಮುಂಜಾಲೆ ಹೊಂಟಾಳ ಚೆಲುವಿ ಚರಗಿ ಹಿಡಕಂಡು. ಅವಸರ ತಡಿಯದ, ತುಟಿಗಳ ಕಚ್ಚಿ, ಬಡಬಡ ನಡಕಂಡು..’ “ಥೋ ಹೊಲ್ಸು. ಲೇ ಇಂಥ ಸಂಡಾಸ್ ಕಥೀ ಬರದ್ರ ಯಾವ್ನು ನೋಡ್ತಾನಲೇ? ಇಷ್ಟೊಂದು ಖರೆ ಖರೆ ಇರಬಾರ್ದು ಸಿನೆಮಾ. ಸಿನೆಮಾ ಅಂದ್ರ ಹೆಂಗಿರಬೇಕು, ಎಂತ ಸಿನೆಮಾ ಮಾಡಿದ್ರ ರೊಕ್ಕ ಬರ್ತಾವ ಅಂತ ನಾನು ಹೇಳ್ತೀನಿ ಕೇಳು’ ಅಂದ ಯಲ್ಲಪ್ಪ. “ಯಣ್ಣಾ, ನೀ ಬಾಳ ಪಿಚ್ಚರು ನೋಡ್ತಿ ಅಂತ ಊರಿನ ಮಂದೆಲ್ಲ ಮಾತಾಡ್ತಾರ. ನಾ ಪಿಚ್ಚರು ಮಾಡಿ ರೊಕ್ಕಾ ಮಾಡ್ಲೆ ಬೇಕು. ನೀನಾ ನನ್ನ ಕಥಿ ತಿದ್ದಿ ಕಾಪಾಡು. ಆ ಪೋರೀನ್ನ ಈ ಪಾರನ್ನ ಒಂದುಮಾಡು’ ಅಂತ ಅಂಡಾಲಿಕೆಂಡ ಲಕ್ಷ್ಮಣ. “ಹಂಗಿದ್ರ ಹತ್ತು ಟಾಮ್‌ಟಾಮ್. ರೊಕ್ಕಾ ಮಾಡ ಕನ್ನಡ ಪಿಚ್ಚರ್ ಹೆಂಗ ಮಾಡ್ತಾರ ಅಂತ ಹೇಳ್ತೀನಿ ನಿಂಗ.’ ಎಂದು ಆಟೋ ಚಾಲೂ ಮಾಡಿದ ಯಲ್ಲಪ್ಪ. ಅವನ ಬಗಲಾಗೇ ಹೋಗಿ ಕುಂತ ಲಕ್ಷ್ಮಣ. ಟಾಮ್‌ಟಾಮ್ ನಡಿಸೆತ್ತ ಯಲ್ಲಪ್ಪ ಶುರುಮಾಡಿದ…
“”ಪಸ್ಟಪಾಲ್… ಪಿಚ್ಚರ್ರಾಗ ಯೀರೋಯಿನಿ ಬೆಳ್ಳಗ ಇರಬೇಕು. ಯೀರೋ ಯಂಗಿದ್ರೂ ನಡೀತದ. ಆದ್ರ ಅವ್ನಿಗೆ ತಾಬಡತೋಬಡ ಫೈಟಿಂಗ್ ಬರಾಬೇಕು. ಅವ°ತ್ರ ಒಂದು ರೂಪಾಯಿ ಆಮಾªನಿ ಇಲ್ಲ ಅಂದ್ರೂ ಅಡ್ಡಿಯಿಲ್ಲ; ದೊಡ್ಡ ದೊಡ್ಡ ಕಾರು ಇರಬೇಕು. ಬಡತನದಾಗಿದ್ರೂ ಅವ್ನು ಫಾರಿನ್ನಾಗ ಹೋಗಿ ಡ್ಯಾನ್ಸ್ ಮಾಡಬೇಕು. ಬಾಯ್ಬಿಟ್ರೇ ತನ್ನ ಬಗ್ಗೆ ತಾನು ದೊಡ್ ದೊಡ್ ಮಾತಾಡ್ಬೇಕು. ಎಕ್ಸಾಂಪಲ್: “ನಾನ್ಯಾರು ಗೊತ್ತೇನಲೇ. ನನ್ನ ಹಿಂದೆ ಇಡೀ ಗಾಂದಿಬಜಾರಿನ ಜನ ಇದ್ದಾರೆ. ನನ್ನ ಒಂದೊಂದು ಉಗುರೂ ಒಂದೊಂದು ಮಚ್ಚಿಗೆ ಸಮ. ಕನ್ನಡ ತಾಯಿ ಭುವನೇಶ್ವರಿಯ ಕಂದ ನಾನು’ ಅನ್ಬೇಕು. ಸಿನೆಮಾ ನೋಡೋರೆಲ್ಲ ಹುಚ್ಚೆದ್ದು ಹೋಗ್ತಾರ. ಏನಿಲ್ಲಾ ಅಂದ್ರೂ ಒಂದು 50 ಮಂದೀನ್ನನ್ನ ಅವ ಸಿನೆಮಾದಾಗ ಸಾಯಿಸಬೇಕು. ಕೊನೀಗೇ ಅವ ಹೀರೋಯಿನ್ ಅಪ್ಪ, ಅಣ್ಣನ್ನೂ ಕೊಂದು, ಅಕಿನ್ನ ಮದುವಿ ಆಗಬೇಕು. ಪಿಚ್ಚರ್ ನಡ ನಡುವ ಫಾರಿನ್ನಾಗ ಹೋಗಿ ಡ್ಯಾನ್ಸ್ ಮಾಡೋದು ಕಂಪಲ್ಸರಿ. ಆಮ್ಯಾಲೇ ಕನ್ನಡ ಕನ್ನಡ ಅಂತ ನಮ್ಮ ಭಾಷೆನ್ನ ಹೊಗಳಿದ ಹಾಡು ಇರೋದು ಕಂಪಲ್ಸರಿ. ಇಷ್ಟು ಕಥೀ ಒಯ್ದು ತೋರ್ಸು ಅವ್ರಿಗೆ. ರೊಕ್ಕ ಹೆಂಗ ಸುರೀತಾರ ನೋಡು ಪಿಚ್ಚರ್ ಮ್ಯಾಲ.’ ಅಂದು ಟಾಮ್‌ಟಾಮ್ ಲಕ್ಷ್ಮಣನ ಮನೀ ಮುಂದ ತಂದು ತರುಬಿದ ಯಲ್ಲಪ್ಪ.
ಕೆಳಗಿಳದು ಲಕ್ಷ್ಮಣ ತಲಿ ತೂರಿಸಿಗೆಂಡು ಕೇಳಿದ “”ಯಣ್ಣಾ, ಹೀರೋ ಬಡವ ಅಂದಿ, ಫಾರಿನ್ನಾಗ ಡ್ಯಾನ್ಸ್ ಮಾಡಕ್ಕ ಅವನಿಗೆ ರೊಕ್ಕಾ ಎಲ್ಲಿಂದ ಬಂತು? ಅಷ್ಟು ಮಂದಿನ್ನ ಹೀರೋ ಕೊಲ್ತಾನ ಅಂದ್ರ, ಪೊಲೀಸರ್ಯಾಕ ಹೀರೋನ್ನ ಹಿಡಿದು ಜೈಲಾಗ ಹಾಕೋದಿಲ್ಲ? ಪಾಪ, ಅಷ್ಟು ಮಂದೀನ್ನ ಸಾಯಿಸ್ತಾನಲ್ಲ ಅವ ಹೀರೋನಾ ವಿಲನ್ನಾ? ಆ ಮಂಗ್ಯಾನ ಮುಸಡಿ-ಬಡ ಹೀರೋ ಮ್ಯಾಲ ಅಷ್ಟು ಛಂದಿರ ಶ್ರೀಮಂತ ಹೀರೋಯಿನ್ನಿಗೆ ಪ್ರೀತಿ ಹೆಂಗ ಆಗ್ತದ? ”
ಯಲ್ಲಪ್ಪ ಟಾಮ್‌ಟಾಮ್ ಮುಂದ ಒಯ್ದು ನಕ್ಕಂತ ಕೂಗಿದ “ಲೇ ಪಾರಾ, ನಮ್ ಸಿನೆಮಾದಾಗ ಲಾಜಿಕ್ಕೆಲ್ಲ ನಡ್ಯಂಗಿಲ್ಲಲೇ..ಇವತ್ತಿಂದ ಜರಾ ನಮ್ಮ ಹಿಟ್ ಸಿನೆಮಾ ನೋಡಕ್ಕ ಶುರು ಮಾಡು…ನೀನೂ ರೊಕ್ಕದ ಕಥೀ ಬರಿಯೋದು ಹೆಂಗಂತ ಕಲೀತಿ!’
ಲಕ್ಷ್ಮಣ ತನ್ನ ಮ್ಯಾಲ ದೂಳುಬಿಟಗೊಂಡು ಹೊಂಟ ಟಾಮ್‌ಟಾಮ್‌ನ ನೋಡಿಕೆಂತ ನಿಂತ…
ರಾಘವೇಂದ್ರ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.