ಪ್ರತ್ಯೇಕ ಧರ್ಮಕ್ಕೆ ಸಿದ್ರಾಮಣ್ಣ ಜೈ
Team Udayavani, Jul 30, 2017, 1:00 AM IST
ಬಿಹಾರ್‌ನ್ಯಾಗೆ ಆಪರೇಸನ್ ಕಮಲ ಆದ್ ಮ್ಯಾಕೆ, ಗುಜರಾತ್‌ನಾಗೂ ಶುರು ಹಚ್‌ಕೊಂಡು ಕಾಂಗ್ರೆಸ್ ಎಂಎಲ್‌ಎಗಳ್ನ ಸೆಳಿತಿದ್ರಂತೆ ಅದ್ಕೆ ನಮ್ ಸಿದ್ದರಾಮಣ್ಣೋರೆ ಸೋನಿಯಾ ಮೇಡಮ್ಮು, ಆಹ್ಮದ್ ಪಟೇಲು ಫೋನ್ ಮಾಡಿ ವಸಿ ನಮ್ ಗುಜರಾತ್ ಎಂಎಲ್‌ಎ ಹೈಕ್ಳ ನೋಡ್ಕಳಿ ಅಂದ್ರಂತೆ.
ಅಮಾಸೆ: ನಮಸ್ಕಾರ ಸಾ….
ಚೇರ್ಮನ್ರು: ಏನಾ ಅಮಾಸೆ ಎತ್ತಾಗ್ಲಾ ಹೊಂಟಿದೀಯಾ?
ಅಮಾಸೆ: ಸಾ….ವಿಸ್ಯ ಗೊತ್ತಾಯ್ತಾ, ನಮ್ ಸಿದ್ರಾಮಣ್ಣೋರು ಹೊಸ ಧರ್ಮ ಮಾಡ್ತಾರಂತೆ ಸೇರಕೊಳ್ಳೋವಾ ಅಂತ ಹೊಂಟಿದೀನಿ
ಚೇರ್ಮನ್ರು: ಹೊಸ ಧರ್ಮಾನಾ ಅದಾವುದ್ಲಾ
ಅಮಾಸೆ: ನಮ್ ಕಡೆ ಸ್ವಾಮುಳು, ಲಿಂಗವಂತ್ರು ಅಂತಾ ಕರೀತೀವಲ್ಲಾ ಅವ್ರನ್ನೆಲ್ಲಾ ಸೇರಿ ಹೊಸ ಧರ್ಮ ಮಾಡ್ತಾರಂತೆ, ಸಾಬ್ರಗೆ ಕೊಟ್ಟಿರೋ ಹಂಗೆ ರಿಸರ್ವೇಸನ್ನೂ ಕೊಡ್ತಾರಂತೆ, ಇನ್ನೇನ್ ಬೇಕು ಸಾ……
ಚೇರ್ಮನ್ರು: ಯಾರ್ ಬೇಕಾದ್ರೂ ಸೇರ್ಕೊಳ್ಳೋಕೆ ಅದೇನ್ ಕಾಂಗ್ರೆಸ್ ಪಾರ್ಟಿ ಏನಾ ಅಮಾಸೆ, ಆದೊಂದು ರೀತಿ-ನೀತಿ ಇರ್ತದೆ, ನೀ ಏನ್ ಹುಟಾ ಲಿಂಗಾಯಿತ್ರ ವಂಶದಾಗೆ ಹುಟ್ಟಿದ್ಯಾ, ವಾರ-ಗೀರಾ ನೋಡೆ, ಸ್ರಾವಣ, ಕಾರ್ತೀಕ ಇದ್ರು ಬಾಡ್ ಬೇಕು ನಿಂಗೆ
ಅಮಾಸೆ: ಹಂಗಲ್ಲಾ ಸಾ…. ನಮ್ಮೂರ್‍ನಾಗೆ ಕೆಲವ್ರು ಕಿರಿಸ್ತಾನದೋರಾಗಿಲ್ವೆ, ಅದೂ ಮುಂಚೆ ಬೌದಟಛಿರಾಗಿಲ್ವೆ, ಹಂಗೇಯಾ ನಾವು ಹೊಸ ಧರ್ಮ ಸೇರ್ ಕೊತೀವಿ.
ಚೇರ್ಮನ್ರು: ಹಂಗೆಲ್ಲಾ ಆಗಾಕಿಲ್ಲ ಬುಡು, ಹೊಸ ಧರ್ಮ ಮಾಡೋದು ಅಂದ್ರೆ ಸಲೀಸಲ್ಲ, ನಾಳೆ ವಕ್ಲಿಗ್ರು, ಕುರುಬ್ರು, ಹೈನೋರು ನಮೂ ಹೊಸ ಧರ್ಮ ಮಾಡಿ ಅಂದ್ರೆ ಆಯ್ತದಾ?
ಅಮಾಸೆ: ಯಾಕ್ ಆಗಾಕಿಲ್ಲ ಸಾ…… ಜನ ಇಷ್ಟ ಪಡೋ ಧರ್ಮ ಇರ್ ಬಾರಾª, ನಮ್ ಸಿದ್ದರಾಮಣ್ಣೋರು ಕೇಳೊರ್‌ಗೆಲ್ಲಾ ಧರ್ಮ ಕೊಡ್ತಾರೆ, ಆದೇ ನ್ಯಾಯ ಆಲ್ವರಾ?
ಚೇರ್ಮನ್ರು: ಇದೆಲ್ಲಾ ಯಡ್ನೂರಪ್ಪನೋರ್‌ಗೆ ಕಿರಿಕ್ ಕೊಡೋಕೆ ಮಾಡಿರೋ ಪಿಲಾನ್ ಅಮಾಸೆ?
ಅಮಾಸೆ: ಹಂಗಂತೀರಾ ಸಾ…
ಚೇರ್ಮನ್ರು: ಹೌದ್ಲಾ, ಹೆಂಗಿದ್ರು ಮುಂದಿನ್ ವರ್ಸ ಎಲೆಕ್ಸನ್ ಬರಿ¤ದೆ, ಲಿಂಗಾಯ್ತರು ಯಡ್ನೂರಪ್ಪನೋರ್ ಪಕ್ಷದ್ ಕಡೆ ವಾಲವೆ ಅದ್ಕೆ ಅವ್ರನೆಲ್ಲಾ ಬೇರೆ ಬೇರೆ ಮಾಡೋಕೆ ಇವೆಲ್ಲಾ ನಡೀತೈತೆ ಅಂತ ಜನ
ಮಾತಾಡ್ಕೊತಾವೆ ನಿಂಗೆಲ್ಲಾ ಇದು ಗೊತ್ತಾಗಿಲ್ಲಾ ಬುಡು. ಅದೇನೋ ಮೋದಿ ಅವ್ರ ಗುಜರಾತಿಂದ ಎಂಎಲ್‌ಎಗಳು ಬಂದವ್ರಂತೆ ಏನಾ ವಿಸ್ಯ?
ಅಮಾಸೆ: ಬಿಹಾರ್‌ನ್ಯಾಗೆ ಆಪರೇಸನ್ ಕಮಲ ಆದ್‌ಮ್ಯಾಕೆ, ಗುಜರಾತ್ ನಾಗೂ ಶುರು ಹಚ್‌ಕೊಂಡು ಕಾಂಗ್ರೆಸ್ ಎಂಎಲ್‌ಎಗಳ್ನ ಸೆಳಿತಿದ್ರಂತೆ ಅದ್ಕೆ ನಮ್ ಸಿದ್ದರಾಮಣ್ಣೋರೆ ಸೋನಿಯಾ ಮೇಡಮ್ಮು, ಆಹ್ಮದ್ ಪಟೇಲು ಫೋನ್ ಮಾಡಿ ವಸಿ ನಮ್ ಎಂಎಲ್‌ಎ ಹೈಕ್ಳ ನೋಡ್ಕಳಿ ಅಂದ್ರಂತೆ.
ಚೇರ್ಮನ್ರು: ಗುಜರಾತ್‌ನ್ಯಾಗೆ ಪ್ರಾಬ್ಲಿಂ ಆದ್ರೆ ದಿಲ್ಲಿಗೇ ಕರಕೋ ಬೋದಿತ್ತಲ್ವಾ?
ಅಮಾಸೆ: ಫೈನಾನ್ಸ್ ಪ್ರಾಬ್ಲಿಂ ಸಾ….ದಿಲ್ಲಿನ್ಯಾಗೆ ಗುಜರಾತ್ ಎಂಎಲ್‌ಎಗಳ್ನ ಮೆಂಟೇನ್ ಮಾಡೋಕಾಯ್ತದ. ಅಲ್ಲಿ ಕೇಜ್ರಿವಾಲ್ ಕಾಟೆ ಕೊಡ್ತಾರೆ, ಜತೆ ನರೇಂದ್ರ ಮೋದಿ ಅವ್ರು ಅಲ್ಲೇ ಇರೋದ್ರಿಂದ ಗುಜರಾತಿ ಡೋಕ್ಲಾ ಕೊಟ್
ಕರೊಬಿಟ್ರೆ, ಅದ್ಕೆ ನಮ್ ಕರ್ನಾಟಕಾನೇ ಬೆಟ್ರಾ ಅಂತ ಕಳವೆ
ಚೇಮನ್ರು: ಗುಜರಾತ್ ಎಂಎಲ್‌ಎಗಳ್ಗೆ ಡಿ.ಕೆ.ಶಿವ್‌ಕುಮಾರ್ ಪಟಾಲಂ ಪ್ರೊಟೆಕ್ಷನ್ ಕೊಟ್ಟವ್ರಂತೆ?
ಅಮಾಸೆ: ಹೌದು ಸಾ….ಇನ್ನೇನ್ ಸಿದ್ರಾಮಣ್ಣೋರು ಕಾವು ಕಾಯೋಕ್ ಆಯ್ತದಾ, ಎಂಎಲ್‌ಎಗಳ್ನ ನೋಡ್ಕೊಳ್ಳೋದ್ರಲ್ಲಿ ಶಿವ್‌ಕುಮಾರಣ್ಣೋರು ಪಂಟ್ರಾ, ಮಹಾರಾಷ್ಟ್ರದ್ಯಾಗೆ ಪ್ರಾಬ್ಲಿಂ ಆಗಿದ್ದಾಗ ನೋಡ್‌ಕೊಂಡಿರ್‌ಲಿಲ್ವಾ, ಅದ್ಕೆ ಸಿದ್ರಾಮಣ್ಣೋರು ಅದೇನೋ ವಸಿ ನೋಡ್ಕಳಪ್ಪ ಶಿವ್‌ಕುಮಾರ್ ಹೈಕಮಾಂಡ್ ಹೇಳೈತೆ ಅಂದ್ರಂತೆ. ಶಿವ್‌ಕುಮಾರಣ್ಣೋರು ಸಿಂಗಪುರ್ ನ್ಯಾಗಿದ್ರಂತೆ, ಅದ್ಕೆ ಡಿ.ಕೆ.ಸುರೇಶಣ್ಣೋರ್ನ, ಎಂಎಲ್ಸಿ ರವಿ ಅಣ್ಣೋರ್ನ ಕಳಿ ಎಂಎಲ್‌ಎಗಳ್ನ ಏರ್‌ಪೋರ್ಟ್‌ನಿಂದಾನೆ ಕರ್‌ಕೊಂಡು ರೆಸಾರ್ಟ್‌ನ್ಯಾಗೆ ಹಾಕ್ಕೊಂಡವ್ರಂತೆ.
ಚೇರ್ಮನ್ರು: ರೆಸಾರ್ಟ್‌ನ್ಯಾಗೆ ಅಂಗಾರೆ ಫುಲ್ ಟ್ರೀಟ್‌ಮೆಂಟಾ?
ಅಮಾಸೆ: ಎಂತದೂ ಇಲ್ಲಂತೆ ಸಾ…..ಯಾರೂ ಫೋನ್ ಮಾಡಂಗಿಲ್ಲ, ಮಾತಾಡಂಗಿಲ್ಲ, ಒಬ್ರು ಮುಖ ಇನ್ನೊಬ್ರು ನೋಡ್ಕಂಡಿರ್ಬೇಕು, ಇಲ್ಲಾಂದ್ರೆ ಎಣ್ಣೆ ಪೋಟ್ಕೊಂಡು ಟಿವಿ ನೋಡ್ಕಂಡ್ ಇರ್ಬೇಕು, ಮಡಿಕೇರಿಗೂ ಕರ್
ಕೊಂಡ್ ಹೋಗೋ ಪಿಲಾನ್ ಇದೆಯಂತೆ.
ಚೇರ್ಮನ್ರು: ಲಕ್ಷಾಂತರ ಜನ ಓಟ್ ತಗೊಂಡ್ ಗೆದ್ದೀರೋ ಎಂಎಲ್ ಎಗಳು ರೂಂನ್ಯಾಗ್ ಕೂಡಾಕಿ ಇಟ್‌ಕೊಳ್ಳಂಗಾತಲ್ಲೋ?
ಅಮಾಸೆ: ಈಗೆಲ್ಲಾ ಅಂಗೇ ಸಾ…. ಎಂಎಲ್‌ಎಲ್‌ಗು ಯಾವ್ ಟೈಮ್‌ನ್ಯಾಗೆ, ಯಾವ್ ಕಡೆ ತಿರ್‌ಗ್ತಾರೋ ಗೊತ್ತಾಗಕಿಲ್ಲ, ಅಸೆಂಬ್ಲಿನ್ಯಾಗೆ ಮೆಜಾರಿಟಿ ತೋರೊವಾಗಾ, ರಾಜ್ಯಸಭೆ ಎಲೆಕ್ಸನ್ ಟೈಂನ್ಯಾಗೆ ಅವ್ರಗೆ ಫುಲ್
ಡಿಮ್ಯಾಂಡ್. ನಮ್ ರಾಜದ್ಯಾಗೆ ನೋಡಿಲ್ವಾ ಯಡ್ನೂರಪ್ಪನೋರು ಸಿಎಂ ಆಗಿದ್ದಾಗ ಎಂಎಲ್‌ಎಗ್ಳು ಇದಾನ್‌ಸೌದಾದ್ಯಾಗೆ ಬಟ್ಟೆ ಹರ್‌ಕೊಂಡು ಕಿರ್‌ಚಾಡ್ಲಿಲಿಲ್ವಾ? ರಾಜ್ಯಸಭೆ ಎಲೆಕ್ಷನ್‌ನ್ಯಾಗೆ ಟೋಕನ್ ತಕಂಡು ಬೇಲಿ
ಹಾರ್ಲಿಲ್ವಾ? ಎಲ್ಲ ಕಾಂಚಾನಾ ಮಹಿಮೆ ಸಾ….ಕಾಸಿದ್ರೆ ಕೈಲಾಸ….
ಚೇರ್ಮನ್ರು: ಆಯ್ತು, ಆ ವಿಸ್ಯ ಬಿಡು, ಅದೇನೋ ಬಿಗ್‌ಬಾಸ್ ಹುಡ್ಗ ಪ್ರಥಮ್ ಯಾರೊ ಕಚ್ಚಿದನಂತ್ಲಾ?
ಅಮಾಸೆ: ಹೌದು ಸಾ…ನೀವ್ ನಮ್ನ ಯಾವ್ ಬಾಡು ಬಿಡಾಂಗಿಲ್ಲಾ ಅಂತೀರಾ, ಆ ಹುಡ್ಗ ಮನುಸರೆ°à ಕಚ್‌ಕೊಂಡ್ ತಿಂದ್ವಾನೆ, ಅದೂ, ಐನಾತಿ ಜಾಗೆ ಬಾಯ್ ಹಾಕ್ವನೆ, ಸ್ವಲ್ಪ ಯಾಮಾರಿದ್ರೆ ಆ ಹುಡ್ಲ ಭುವನುª ಆಪ್ಸಂಟೇ, ಮನ್ಯಾಗ್ ಮಾಂಸಾ ಮಾಡಿ ಯೇಸ್ ದಿನಾ ಆಗಿತ್ತೋ ಕಾಣೆ!
ಚೇರ್ಮನ್ರು: ಮಾಂಸªಮ್ಯಾಗೆ ಬಯ್ಕೆ ಆಗಿ ತೊಡೆ ಕಚ್ಚಿಲ್ವಂತೆ ಕಣಾ, ಅದ್ಯಾರೋ ಹುಡ್ಗಿ ಮುಂದೆ ಪೌರುಸ ತೋರಕ್ಕೋಗಿ ಹಂಗಾಯ್ತಂತೆ
ಅಮಾಸೆ: ಬಿಗ್‌ಬಾಸ್‌ನ್ಯಾಗೆ ಪ್ರಥಮ್ಮು, ಭುವನ್ನು ಜತ್ಯಾಗೆ ಸಂಜಾ° ಅನ್ನೋ ಹುಡ್ಗಿàನೂ ಇತ್ತು ಸಾ…. ಅಲ್ಲೇ ಪ್ರಥಮ್ಮು-ಭುವನು ಆಯ್ತಿರಿಲಿಲ್ಲಾ. ಇಬ್ರೂ ಲವ್ವು , ಕಿರಿಕ್ಕೂ ಎಲ್ಲ ಮಾಡ್ಕೊಂಡಿದ್ರು, ಅದು ಗೊತ್ತಿದ್ದೂ ಅವರಿಬ್ರನ್ನೂ
ಹಾಕ್ಕೊಂಡು ಸೀರಿಯಲ್ ಮಾಡ್ತಾವ್ರಂತೆ, ಜತೆಗೆ ಸಂಜಾ°ನೂ ಅದ್ರಾಗೆ ಪಾಲ್ಟಾ ಮಾಡ್ತಿದ್ರಂತೆ. ಶೂಟಿಂಗ್ ಪ್ಲೇಸ್‌ನ್ಯಾಗೆ ಪ್ರಥಮ್ಮು-ಭುವನ್ನು ವರಾತ ತೆಗೆದು ಸಂಜಾ° ಮುಂದೆ ಕೈ ಕೈ ಮಿಲಾಯ್ಸಿದ್ರಂತೆ. ಪ್ರಥಮ್ಮು ಕೈ ಬಿಟ್ಟು ತೊಡೆ ಹಿಡ್ಕಂಡು ನಳ್ಳಿ ಮೂಳೆ ಸಿಕೆôತೇನೋ ಅಂತ ಕಚಕ್ ಅಂತ ಬಾಯ್ ಹಾಕೇ ಬಿಟ್ನಂತೆ. ಪಾಪ್ ಆ ಐದಾ ಭುವನ್ನು ಐಲೋ ಪೈಲೋ ಆಗ್‌ಬಿಟ್ನಂತೆ, ಈಗ ಧಾರವಾಹಿಲೀ ಆಕ್ಟಿಂಗ್ ಮಾಡೋ ಹಡುರೆಲ್ಲಾ ಮಡ್‌ಗಾರ್ಡ್ ಕೊಡಿ ಅಂತ ಪ್ರೊಡ್ನೂಸರ್‌ಗೆ ಬೆನ್‌ಬಿದ್ದಾವರಂತೆ ಸಾ…..
ಚೇರ್ಮನ್ರು: ಟೀವಿಗ್ಳು ಬಂದ್‌ಮ್ಯಾಕೆ ಅದ್ರಲ್ಲಿ ಕಾನ್ಸಕೊಂಡ್ರೆ ಟಿಆರ್‌ಪಿ ಜಾಸ್ತಿ ಆಯ್ತದೆ ಅಂತ ಕೋತಿಗಳ್ತತರಾ ಆಡೋರು ಜಾಸ್ತಿ ಆಯ್ತವೆ ಬಿಡ್ಲಾ.
ಅಮಾಸೆ: ಹೌದು ಸಾ.ಅವ್ರ ಆಟ್ಲಗಳ್ನ ನೋಡಿ ನಮ್ ಹೈಕ್ಲು ಹಂಗೆ ಆಡೋಕ್ ಸುರುಮಾಡವೆ ಬಡ್ಡೆ„ತವು. ಸರಿ ಬುಡಿ ಸಾ..ನನ್ ಹೆಂಡ್ರು ಬಾಯ್ ಕೆಟ್ಟೋಗೈತೆ ತಲೆ ಮಾಂಸ ತತ್ತಾ ಅಂದ ಹೇಳವೆ, ಮಟನ್ ಅಂಡ್ಗಿàಗೋಗಿ ತಲೆ ತಕಂಡು, ಳಾಳಾ ಸಾಬೀತಾವ್ ಸುಡ್ಸ್‌ಕೊಂಡು ಹಟ್ಟಿàಗೋಗುಮಾ, ಬತ್ತೀನಿ ಸಾ…..
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.