ಆರೋಗ್ಯಕ್ಕಾಗಿ ಸುಖನಿದ್ರೆ

ಆಹಾರ, ನಿದ್ರೆ, ಬ್ರಹ್ಮಚರ್ಯ ಮಾನವನ ಆಯಸ್ಸು ಕಾಪಾಡುವ ತ್ರಯೋಪಸ್ತಂಭ

Team Udayavani, Mar 13, 2021, 6:28 PM IST

ಆರೋಗ್ಯಕ್ಕಾಗಿ ಸುಖನಿದ್ರೆ

“ಉತ್ತಮ ನಿದ್ರೆ, ಉತ್ತಮ ಜೀವನ, ಉತ್ತಮ ಪ್ರಪಂಚಕ್ಕಾಗಿ ನಿದ್ರೆಯನ್ನು  ನಮ್ಮ ಆವಶ್ಯಕತೆಗಳಲ್ಲಿ ಒಂದು ಎಂದೇ ಪರಿಗಣಿಸಲಾಗಿದೆ. ಚಿಕಿತ್ಸೆ, ಶಿಕ್ಷಣ, ಸಾಮಾಜಿಕ ಅಂಶಗಳು ಮತ್ತು ಚಾಲನೆಯಲ್ಲಿ  ನಿದ್ರೆಯ ಮಹತ್ವವನ್ನು ಪರಿಗಣಿಸಿ 2008ರಿಂದ ವಿಶ್ವ ನಿದ್ರಾ ದಿನವನ್ನು ಸಂಕ್ರಾಂತಿಗಿಂತ ಮೊದಲು ಬರುವ ಶುಕ್ರವಾರ ಅಂದರೆ ಈ ಬಾರಿ ಮಾರ್ಚ್‌ 19ರಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿದ್ರೆಯ ಮಹತ್ವವನ್ನು ತಿಳಿಸುವ ಒಂದು ಕಿರು ಪ್ರಯತ್ನ.

ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಮನುಷ್ಯನ ಆಯುಷ್ಯವನ್ನು ಕಾಪಾಡುವ ಮೂರು ಸ್ತಂಭಗಳೆಂದು (ತ್ರಯೋಪಸ್ತಂಭ) ಆಯುರ್ವೇದ ತಿಳಿಸುತ್ತದೆ.

ಒಬ್ಬ ಮನುಷ್ಯ ತನ್ನ ಆಯಸ್ಸಿನ ಮೂರನೇ ಒಂದು ಭಾಗವನ್ನು ನಿದ್ರೆಯಲ್ಲಿ ಕಳೆಯುತ್ತಾನೆ. ನಿದ್ರೆ ಒಂದು ಸಹಜವಾದ ಕ್ರಿಯೆ. ನಿದ್ರೆಯಿಂದ ಇಂದ್ರಿಯಗಳಿಗೆ, ಮನಸ್ಸು ಹಾಗೂ ದೇಹಕ್ಕೆ ವಿಶ್ರಾಂತಿ ದೊರೆಯುತ್ತದೆ. ಅಲ್ಲದೇ ಸುಖನಿದ್ರೆ ಆರೋಗ್ಯದ ಒಂದು ಲಕ್ಷಣವೂ ಹೌದು. ಮನುಷ್ಯನು ಸರಿಯಾಗಿ ನಿದ್ರಿಸದಿದ್ದರೆ ವಾತ ದೋಷವು ಪ್ರಕುಪಿತಗೊಂಡು ಅನಾರೋಗ್ಯವನ್ನುಂಟು ಮಾಡುತ್ತದೆ.

ನಿದ್ರಿಸುವ ವಿಧಾನ ಹೇಗೆ? :

ಮಲಗುವ ಕೋಣೆ ವಿಶಾಲವಾಗಿ, ನಿರ್ಮಲವಾಗಿ, ಗಾಳಿ, ಬೆಳಕು ಯಥೇತ್ಛವಾಗಿ ಬರುವಂತಿರಬೇಕು. ಯಾವುದೇ ಕಾರಣಕ್ಕೂ ನೆಲದ ಮೇಲೆ ನಿದ್ರಿಸಬಾರದು. ಏಕೆಂದರೆ ಇದು ದೇಹದಲ್ಲಿ ವಾತದೋಷವನ್ನೂ ಹೆಚ್ಚಿಸುತ್ತದೆ.  ಮಂಚವು ಮಂಡಿಯಷ್ಟು ಎತ್ತರವಿರಬೇಕು. ಹಾಸಿಗೆಯು ಹತ್ತಿ ಮತ್ತು ನಾರಿನಿಂದ ಸಿದ್ಧಪಡಿಸಿದ್ದು ಮೃದುವಾಗಿರಬೇಕು. ತಲೆಯನ್ನು ಪೂರ್ವದಿಕ್ಕಿನಲ್ಲಿಟ್ಟು ಮಲಗಬೇಕು. ಮಲಗುವಾಗ ಮುಖವನ್ನು ಹೊದಿಕೆಯಿಂದ ಮುಚ್ಚಬಾರದು. ರಾತ್ರಿ ಊಟ ಮುಗಿಸಿದ ತತ್‌ಕ್ಷಣ ಮಲಗಬಾರದು. ಕೊಂಚ ಹೊತ್ತು ತಿರುಗಾಡಿ ಅನಂತರ ಮಲಗಬೇಕು.

ಹಗಲಿನ ನಿದ್ರೆ ಆಲಸ್ಯಕ್ಕೆ ಕಾರಣವಾಗುತ್ತದೆ. ಜತೆಗೆ ಉತ್ಸಾಹ ಕುಂದಿಸುತ್ತದೆ. ತಲೆನೋವು, ಮೈ ಭಾರ, ಮೈಕೈ ನೋವು ಉಂಟುಮಾಡುತ್ತದೆ. ಕ್ರಮೇಣ ಬೊಜ್ಜು ಬೆಳೆಯಲು ಕಾರಣವಾಗುತ್ತದೆ. ಮಾತ್ರವಲ್ಲದೇ ಹಗಲು ನಿದ್ರೆಯು ರಾತ್ರಿಯ ನಿದ್ರೆಯನ್ನು ಕೆಡಿಸುತ್ತದೆ. ಹೀಗಾಗಿ ಹಗಲು ನಿದ್ರಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ.

ಹಗಲು ಹೊತ್ತು ವಿಶ್ರಾಂತಿ ಬೇಕಾಗಿದಲ್ಲಿ ಕುರ್ಚಿಯ ಮೇಲೆ ಕುಳಿತು ತೂಕಡಿಸುವುದು ಸೂಕ್ತ. ಬೇಸಗೆಯಲ್ಲಿ  ಮಧ್ಯಾಹ್ನ ಒಂದೆರಡು ಗಂಟೆ ವಿಶ್ರಾಂತಿ ಪಡೆಯಬಹುದು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹಗಲಿನಲ್ಲಿ  ನಿದ್ರೆ ಮಾಡಬಹುದು. ಆದರೆ ಇವರು ಊಟದ ಮೊದಲು ನಿದ್ರಿಸಬೇಕು. ಊಟದ ಅನಂತರ ನಿದ್ರಿಸುವುದು ಅನಾರೋಗ್ಯಕರವಾಗುವುದು.

ನಿದ್ರೆಯ ಅವಧಿ ಮಕ್ಕಳಲ್ಲಿ  ಹೆಚ್ಚಾಗಿದ್ದು ವಯಸ್ಸಾಗುತ್ತಾ ಕ್ರಮೇಣ ಕಡಿಮೆಯಾಗುತ್ತದೆ. ಶಿಶುಗಳು ಸುಮಾರು 18- 20 ಗಂಟೆಗಳ ತನಕ ನಿದ್ರಿಸಿದರೆ, ಮಕ್ಕಳು 9- 10 ಗಂಟೆಗಳ ಕಾಲ ನಿದ್ರಿಸಬಹುದು. ಯೌವನದಲ್ಲಿ 8 ಗಂಟೆ ಮತ್ತು ವೃದ್ಧಾಪ್ಯದಲ್ಲಿ 4- 6 ಗಂಟೆಗಳು. ಮಾನಸಿಕ ಗುಣಗಳಿಗೆ ಅನುಗುಣವಾಗಿ ನಿದ್ರೆಯ ಅವಧಿಯೂ ಬೇರೆಬೇರೆಯಾಗಿರುತ್ತದೆ. ಸಾತ್ವಿಕ ಪುರುಷರ ನಿದ್ರೆ 4- 6 ಗಂಟೆಗಳ ಕಾಲ, ರಾಜನಿಗೆ  ಪುರುಷರ ನಿದ್ರೆ 8 ಗಂಟೆಗಳಿಗೂ ಹೆಚ್ಚು ಮತ್ತು ತಾಮಸಿಕ ಪುರುಷರಿಗೆ 10-12 ಗಂಟೆಗಳ ಕಾಲ. ನಿದ್ರೆಯ ಕ್ರಮ ಸರಿಯಾಗಿದ್ದರೆ ಆಯಾಸ ಪರಿಹಾರವಾಗುವುದು, ಆರೋಗ್ಯದ ಬೆಳವಣಿಗೆಗೆ ಬೇಕಾದ ಸರ್ವಾಂಗ ವಿಕಾಸವೂ ಆಗುತ್ತದೆ.

ನಿದ್ರೆಯನ್ನು ನಿರ್ಲಕ್ಷಿ$Âಸಿದರೆ ಆಲಸ್ಯ ಹೆಚ್ಚಾಗುತ್ತದೆ. ಕಣ್ಣು ಉರಿ ಮತ್ತು ತಲೆ ಭಾರ ಕಾಣಿಸಿಕೊಳ್ಳುತ್ತದೆ. ಜತೆಗೆ ಮೈಕೈ ನೋವು, ಗೊಂದಲಮಯವಾದ ಮನಸ್ಸು, ಆಕಳಿಕೆ, ಆಯಾಸ ಅಧಿಕವಾಗುತ್ತದೆ. ನಿದ್ರೆ ಇಲ್ಲದಿದ್ದರೆ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೆ ಅಜೀರ್ಣ ಉಂಟಾಗಿ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಜತೆಗೆ ಮುಂಗೋಪವೂ ಹೆಚ್ಚುತ್ತದೆ.

ಸುಖ ನಿದ್ರೆಗೆ ಏನು ಮಾಡಬಹುದು? :

ಸುಖವಾದ ನಿದ್ರೆಗಾಗಿ ಸಂತೃಪ್ತ ಮನಸ್ಸು ನಮ್ಮದಾಗಿರಬೇಕು. ಇದಕ್ಕಾಗಿ ಒಳ್ಳೆಯ ಆಲೋಚನೆಗಳನ್ನು ಮನದಲ್ಲಿ ತುಂಬಿಕೊಳ್ಳಬೇಕು. ದೇವರ ಪ್ರಾರ್ಥನೆಯೂ ಸುಖ ನಿದ್ರೆಗೆ ಮನಸ್ಸನ್ನು ಪ್ರೇರೇಪಿಸುತ್ತದೆ. ಇದರೊಂದಿಗೆ ವಾರಕ್ಕೆ ಒಂದು ಬಾರಿಯಾದರೂ ಅಭ್ಯಂಗ ಸ್ನಾನ ಮಾಡಬೇಕು. ರಾತ್ರಿ ಮಲಗುವ ಮುನ್ನ  ಸಾದಾಭ್ಯಂಗ ಮಾಡುವುದು, ಶ್ರೀಗಂಧ ಮೊದಲಾದ ಸುಗಂಧ ದ್ರವ್ಯಗಳ ಲೇಪನ ಉಪಯೋಗಕಾರಿ.

ಮನಸ್ಸಿಗೆ ಮುದಕೊಡುವ ಸಂಗೀತ ಕೇಳುವುದು, ಧ್ಯಾನ ಮಾಡುವುದು, ರಾತ್ರಿ ಮಲಗುವ ಮೊದಲು ಹಾಲು ಸೇವಿಸುವುದು ಉತ್ತಮ. ನಿದ್ರೆಯ ಸಮಸ್ಯೆ ಉಳ್ಳವರು ಎಮ್ಮೆಯ ಹಾಲು ಕುಡಿಯುವುದು ಒಳ್ಳೆಯದು. ಜತೆಗೆ ವಿಪರೀತ ಕರಣಿ, ಸುಪ್ತಬದ್ಧ  ಕೋಣಾಸನ, ಬಾಲಾಸನ, ಶೀರ್ಷಾಸನ ಮತ್ತು ಶವಾಸನಗಳನ್ನು ಅಭ್ಯಾಸ ಮಾಡುವುದರಿಂದ ಮನಸ್ಸು ಹಾಗೂ ಶರೀರ ಶಾಂತವಾಗಿ ನಿದ್ರೆ ಸಹಜವಾಗಿ ಬರುತ್ತದೆ.  ರಾತ್ರಿ ಬೇಗ ಮಲಗಿ ಮುಂಜಾನೆ ಬೇಗನೆ ಏಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

 

ಡಾ| ಮೇಘನಾ,ಡಬ್ಲಿನ್‌, ಐರ್ಲೆಂಡ್‌

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.