ಪರೀಕ್ಷೆ ಗೆಲ್ಲಲು ಕೆಲವು ಸೂತ್ರಗಳು 


Team Udayavani, Mar 23, 2018, 12:30 AM IST

book.jpg

ಒಂದು ಪರೀಕ್ಷೆ ಮುಗಿದ ಕೂಡಲೇ 2-3 ದಿನ ರಜೆಯಿರುತ್ತದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ. ಪರೀಕ್ಷೆಯ ವೇಳಾಪಟ್ಟಿ ಯನ್ನು ಮಲಗುವ ಕೋಣೆಯಲ್ಲಿ ದೊಡ್ಡದಾಗಿ ತೂಗು ಹಾಕಿ  ಅನುಸರಿಸಿ. ಕೆಲವರು ಪರೀಕ್ಷೆಯ ದಿನ ಬೇರೆ ವಿಷಯವನ್ನು ಓದಿ ಬರುವುದು ಅಥವಾ ರಜೆಯ ದಿನ ಪರೀಕ್ಷೆ ಇದೆ ಎಂದು ತಿಳಿದು ಶಾಲೆಗೆ ಬರುವುದು ಮಾಡುತ್ತಾರೆ. 

ಪರೀಕ್ಷೆಗಳು ಶುರುವಾಗಿವೆ. ಮಕ್ಕಳು ಶಾಲೆಯಲ್ಲಿ ಓದಿದನ್ನು ಮೂರು ಗಂಟೆಯಲ್ಲಿ ಬರೆಯುವ ಕಾಲ ಬಂದಿದೆ. ಈ ಸಂದರ್ಭದಲ್ಲಿ ಮಕ್ಕಳು ಮಾತ್ರವಲ್ಲದೆ ಅವರ ಪೋಷಕರೂ ಕೂಡ ಉದ್ವೇಗಕ್ಕೊಳಗಾಗುವುದು ಸಹಜ. ಈ ಉದ್ವೇಗದಿಂದ ಹೊರ ಬರಲು ಮೊದಲಿಂದಲೇ ತಯಾರಿ ಮಾಡಿಕೊಂಡರೆ ಕೊನೆ ಕ್ಷಣದಲ್ಲಿ ತೊಳಲಾಡುವ ಕಷ್ಟ ತಪ್ಪುತ್ತದೆ. ಈ ದಿನಗಳಲ್ಲಿ ಸರಿಯಾದ ರೀತಿಯಲ್ಲಿ ಕ್ರಮಬದ್ಧವಾಗಿ ಅಭ್ಯಾಸ ಮಾಡಿದರೆ ಪರೀಕ್ಷೆ ಎದುರಿಸುವುದು ಸುಲಭವಾಗಲಿದೆ. ಅದಕ್ಕೆ ಈ ಕೆಲವು ಸೂತ್ರಗಳನ್ನು ಅನುಸರಿಸಬಹುದಾಗಿದೆ.

ಆದ್ಯತೆ ನೀಡಿ
ಕಷ್ಟದ ವಿಷಯಗಳನ್ನು ಮೊದಲು ಕೈಗೆತ್ತಿಕೊಳ್ಳಿ. ಗಣಿತದ ಸೂತ್ರ ಬಿಡಿಸಲು,ಇಂಗ್ಲೀಷ್‌ ಬರೆಯಲು ಕಷ್ಟವಾಗುತ್ತದೆ ಎಂದಾದರೆ ಮೊದಲು ಆ ವಿಷಯಗಳ ನೋಟ್ಸ್‌ ಮಾಡಿಕೊಂಡು ಓದಲು ಪ್ರಾರಂಭಿಸಿ.ಕಡಿಮೆ ಸಮಯ ಇದೆ ಎಂದು ಅವಸರದಿಂದ ಓದದೆ ವಿಷಯವನ್ನು ಅರ್ಥ ಮಾಡಿಕೊಂಡು ಓದಿದರೆ ಉತ್ತಮ.ಆದಷ್ಟು ಬರೆದು ಓದಿದರೆ ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ.ಇಂಗ್ಲೀಷ್‌ ಸ್ಪೆಲ್ಲಿಂಗ್‌ನ್ನು ಬರೆಯಿರಿ ಮತ್ತು ಅದನ್ನು ಮನನ ಮಾಡಿರಿ. ಇದರಿಂದ ತರಗತಿಯಲಿ. ಓದಿದ ವಿಷಯ ಅರ್ಥವಾಗದಿದ್ದರೆ ಆ ವಿಷಯದ ಕುರಿತು ಬೇರೆಯವರೊಂದಿಗೆ ಕೇಳಿ ಸರಿಯಾಗಿ ಅರ್ಥಮಾಡಿದ ಬಳಿಕವೇ ಮುಂದೆ ಓದಿ. ಇಲ್ಲದಿದ್ದರೆ ಅದು ಸ್ಪಷ್ಟವಾಗಿ ಅರ್ಥವಾಗದೆ ಅದೇ ತಲೆಯಲ್ಲಿ ಉಳಿಯುತ್ತದೆ.

ಕೆಲವು ವಿದ್ಯಾರ್ಥಿಗಳಲ್ಲಿ ನಾನೀಗಲೇ 1-2 ಬಾರಿ ಓದಿಕೊಂಡಿ ದ್ದೇನೆ, ಇನ್ನು ಪರೀಕ್ಷೆಯ ಹಿಂದಿನ ದಿನ ಓದಿದರಾಯಿತು ಎಂಬ ಅತಿಯಾದ ಆತ್ಮವಿಶ್ವಾಸ ಇರುತ್ತದೆ. ಈ ರೀತಿಯ ಆತ್ಮವಿಶ್ವಾಸ ಒಳ್ಳೆಯದಲ್ಲ. ಮೊದಲು ಓದಿರುವಾಗ ಕೆಲವು ವಿಷಯಗಳನ್ನು ನೀವು ಬಿಟ್ಟಿರಬಹುದು ಅದನ್ನು ಮತ್ತೂಮ್ಮೆ ಓದಿ, ಮುಂದುವರೆಯಿರಿ. ಈ ಸಮಯ ಅತ್ಯಂತ ಮಹತ್ವದ್ದು. ಕೊನೆಯ ಗಳಿಗೆಯಲ್ಲಿ ಎಲ್ಲವನ್ನೂ ಓದಲು ಸಾಧ್ಯವಾಗದೆ ಬೇಸರಮಾಡಿಕೊಳ್ಳಬೇಡಿ.

ಗೊಂದಲ ಬೇಡ
ಒಂದು ಪರೀಕ್ಷೆ ಮುಗಿದ ಕೂಡಲೇ 2-3 ದಿನ ರಜೆಯಿರುತ್ತದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ. ಪರೀಕ್ಷೆಯ ವೇಳಾಪಟ್ಟಿ ಯನ್ನು ನೀವು ಮಲಗುವ ಕೋಣೆಯಲ್ಲಿ ದೊಡ್ಡದಾಗಿ ಬರೆದು ತೂಗು ಹಾಕಿ ಮತ್ತು ಅದನ್ನು ಅನುಸರಿಸಿ. ಕೆಲವು ವಿದ್ಯಾರ್ಥಿಗಳು ಪರೀಕ್ಷೆಯ ದಿನ ಬೇರೆ ವಿಷಯವನ್ನು ಓದಿ ಬರುವುದು ಅಥವಾ ರಜೆಯ ದಿನ ಪರೀಕ್ಷೆ ಇದೆ ಎಂದು ತಿಳಿದು ಶಾಲೆಗೆ ಬರುವುದು ಮಾಡುತ್ತಾರೆ. ಈ ರೀತಿಯ ತಪ್ಪಿನಿಂದ ತೊಂದರೆಯಾಗಬಹುದು ಹೀಗಾಗಿ ಈ ಬಗ್ಗೆ ಗಮನವಿರಲಿ.

ಓದುವ ಸಮಯ ನಿಗದಿಪಡಿಸಿಕೊಳ್ಳಿ 
ಓದಿಗೆ ಕುಳಿತುಕೊಳ್ಳುವ ಸಮಯ ಮತ್ತು ಸ್ಥಳ ಅತ್ಯಂತ ಮುಖ್ಯವಾದದು. ಏಕೆಂದರೆ ಇದು ಕೂಡ ಓದಿನಲ್ಲಿ ಪ್ರಮುಖ ವಾದ ಪಾತ್ರವಹಿಸುತ್ತದೆ. ಬೆಳಿಗ್ಗೆ ಬೇಗನೆ ಎದ್ದು ಮುಖ ತೊಳೆದು ಓದಿದರೆ ಉತ್ತಮ. ಆಗ ವಾತಾವರಣ ಶುಭ್ರವಾಗಿದ್ದು ಯಾವುದೇ ರೀತಿಯ ಗಲಾಟೆಗಳು ಇರುವುದಿಲ್ಲ. ನಿದ್ದೆಗೆಟ್ಟು ಓದಬೇಡಿ, ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣ ವಾಗುತ್ತದೆ. ಸಂಜೆಯ ವೇಳೆ ಕೂಡ ಓದಲು ಉತ್ತಮವಾದ ಸಮಯವಾಗಿದೆ.ನಿಮ್ಮ ಮನೆಯ ಪಕ್ಕದಲ್ಲಿ ಮರಗಳು ಇದ್ದರೆ ಅದರ ಹತ್ತಿರ ಹೋಗಿ ಓದಿದರೆ ಉತ್ತಮ. ಅಲ್ಲಿ ಗಾಳಿ ಮತ್ತು ಆಹ್ಲಾದಕರ ವಾತಾವರಣ ಇರುತ್ತದೆ.

ಶುದ್ಧ ನೀರು ಕುಡಿಯಿರಿ
ತಂಪು ಪಾನೀಯಗಳ ಬದಲು ಶುದ್ಧವಾದ ನೀರು ಹೆಚ್ಚು ಕುಡಿಯಿರಿ. ಇದು ಆರೋಗ್ಯಕ್ಕೆ ಮಾತ್ರವಲ್ಲದೆ ಏಕಾಗ್ರತೆಯ ದೃಷ್ಟಿಯಿಂದಲೂ ಉತ್ತಮವಾಗಿದೆ. ಎಣ್ಣೆಯಲ್ಲಿ ಕರಿದ ತಿಂಡಿಗಳ ಬಗ್ಗೆ ಜಾಗರೂಕತೆ ವಹಿಸಿ. ನಿಮ್ಮ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಉತ್ತಮವಾಗಿ ಪರೀಕ್ಷೆಯಲ್ಲಿ ಬರೆದು ಹೆಚ್ಚು ಅಂಕ ಗಳಿಸ ಬಹುದು. ನಿಮ್ಮ ಪರಿಸರವನ್ನು ಸ್ವತ್ಛವಾಗಿರಿಸಿಕೊಳ್ಳಿ.

ಬಿಡುವು ಇರಲಿ
ನಿರಂತರವಾಗಿ ಓದುತ್ತಾ ಇರದೆ ಮಧ್ಯೆ ಸ್ವಲ್ಪ ಬಿಡುವು ಮಾಡಿ ಕೊಂಡು ಏಕಾಗ್ರತೆಗೆ ಸಹಕಾರಿಯಾಗುವ ಆಟ ಗಳನ್ನು ಆಡಿರಿ. ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಗಟ್ಟಿಯಾಗಿ ಓದುವುದರಿಂದ ಹೆಚ್ಚು ಸಮಯ ನೆನಪಿನಲ್ಲಿ ಉಳಿಯುತ್ತದೆ. ಅವಸರದಿಂದ ಓದದೆ ಅರ್ಥಮಾಡಿ ಕೊಂಡು ಓದಿ. ಪರೀಕ್ಷೆಗೆ ಕಡಿಮೆ ದಿನವಿರುವುದರಿಂದ ಈ ಸಮಯವನ್ನು ಸದುಪಯೋಗಪಡಿಸಿರಿ. ಮಗ್ಗಿಯನ್ನು ಹೇಳುವಾಗಲೂ ನಿಮಗೆ ಕೇಳುವಷ್ಟು ಗಟ್ಟಿ ಧ್ವನಿಯಲ್ಲಿ ಓದಿ. ಗಣಿತದ ಸೂತ್ರವನ್ನು ಅರ್ಥಮಾಡಿ ಕೊಂಡು ನೆನಪಿನಲ್ಲಿಟ್ಟುಕೊಳ್ಳಿ. 

ಟಿ.ವಿ, ಮೋಬೈಲ್‌,ಕಂಪ್ಯೂಟರ್‌ಗೆ ವಿರಾಮ
ಮನಸ್ಸನ್ನು ಚಂಚಲಗೊಳಿಸುವ ಟಿ.ವಿ ಕಾರ್ಯಕ್ರಮಗಳು, ಮೊಬೈಲ್‌, ಕಂಪ್ಯೂಟರ್‌ ಇತ್ಯಾದಿಗಳನ್ನು ಈ ದಿನ ಗಳಲ್ಲಿ ದೂರವಿಡಿ. ಓದಿನ ಏಕತಾನತೆ ಕಡಿಮೆ ಗೊಳಿ ಸಲು ಶಾಂತ ಪರಿಸರದಲ್ಲಿ ವಾಕ್‌ ಮಾಡಿ. ಮನೆಯಲ್ಲಿ ಜೋಕಾಲಿ ಇದ್ದರೆ ಅದರಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಸಮಯವಿದ್ದರೆ ಹಿಂದಿನ ಪ್ರಶ್ನೆ ಪತ್ರಿಕೆಗೆ ಉತ್ತರಿಸಿ. ಇದರಿಂದ ನಿಮಗೆ ಆತ್ಮವಿಶ್ವಾಸ ಬರುತ್ತದೆ ಅಲ್ಲದೆ ಸಮ ಯದ ಹೊಂದಾಣಿಕೆಯ ಅಭ್ಯಾಸವಾಗುತ್ತದೆ. ಪರೀಕ್ಷೆ ಯಲ್ಲಿ ಕೈಬರಹ, ಕಾಗುಣಿತ, ಪೂರ್ಣ ವಿರಾಮ, ಅಲ್ಪವಿರಾಮ ಮತ್ತು ವ್ಯಾಕರಣದ ಬಗ್ಗೆ ಗಮನಹರಿಸಿ.

ಕಂಬೈನ್‌ ಸ್ಟಡಿಯಲ್ಲಿ ಸ್ಪರ್ಧೆ ಬೇಡ 
ಪಠ್ಯಪುಸ್ತಕ, ನೋಟ್ಸ್‌, ಗುರುಗಳು ಹೇಳಿದ ಪಾಠ ನಿಮ್ಮ ಆಸ್ತಿ. ಮಾರುಕಟ್ಟೆಯಲ್ಲಿರುವ ಗೈಡ್‌ ಅವಲಂಬಿಸ ಬೇಡಿ. ಮನೆಯ ಪಕ್ಕದಲ್ಲಿ ಸಹಪಾಠಿ ಇದ್ದರೆ ಅವರ ಜತೆಗೆ ಅಭ್ಯಾಸ ಮಾಡಿ. ಆದರೆ ಸ್ಪರ್ಧೆ ಬೇಡ. ಪ್ರತಿಯೊಬ್ಬರಿಗೆ ಅವರದ್ದೇ ಆದ ಸಾಮರ್ಥ್ಯ ಇರುತ್ತದೆ. ಈ ಸಾಮರ್ಥ್ಯಕ್ಕೆ ತಕ್ಕಂತೆ ಅಭ್ಯಾಸ ಮಾಡಿದರೆ ಸಾಕು. 

ನಿರಾಳತೆ ಇರಲಿ
ಪರೀಕ್ಷೆಯ ದಿನಗಳಲ್ಲಿ ಯಾವ ಕಾರಣಕ್ಕೂ ಮನಸ್ಸನ್ನು ವಿಚಲಿತಗೊಳಿಸಲು ಬಿಡಬಾರದು. ಮನಸ್ಸು ನಿರಾಳ ಮತ್ತು ಶಾಂತವಾಗಿರಬೇಕು. ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆ ಸಿಕ್ಕಿದ ಕೂಡಲೇ ಉತ್ತರ ಬರೆಯಲು ತೊಡಗದೆ ಅದನ್ನು ಒಂದು ಬಾರಿ ಪೂರ್ತಿಯಾಗಿ ಓದಿ ನಂತರ ಉತ್ತರಿಸಿ. ಪ್ರಶ್ನೆಗೆ ಉತ್ತರಿಸುವಾಗ ಸಮಯದ ಬಗ್ಗೆ ಗಮನ ಇರಲಿ. ಗೊತ್ತಿರುವ ಉತ್ತರವನ್ನು ಸ್ಪಷ್ಟವಾಗಿ ಬರೆಯಿರಿ. ಕಡೆಗೆ ತಪ್ಪಾದ ಉತ್ತರವನ್ನು ಸರಿ ಮಾಡಿ. ಪ್ರಶ್ನೆಗಳಿಗೆ ಆರಾಮವಾಗಿ ಶಾಂತಚಿತ್ತದಿಂದ ಉತ್ತರಿಸಿ, ಉದ್ವೇಗ ಬೇಡ. ಈ ಸೂತ್ರಗಳನ್ನು ಪಾಲಿಸಿದರೆ ಪರೀಕ್ಷೆಯ ಒತ್ತಡವನ್ನು ಸಾಕಷ್ಟು ಕಡಿಮೆ ಮಾಡಿಕೊಳ್ಳಬಹುದು. 

– ರಾಘವೇಂದ್ರ ಪ್ರಭು ಕರ್ವಾಲು

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.