ಗುಣಮಟ್ಟದ ಚಿಕಿತ್ಸೆಗಾಗಿ ಯುನಿಟಿ ಆಸ್ಪತ್ರೆ ಮಂಗಳೂರು
ಸಹ ಸಂಸ್ಥೆ ಯುನಿಟಿ ಕಾಲೇಜ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕೋರ್ಸಸ್ ; ತುರ್ತು ಸೇವೆಗಾಗಿ :105707/ 8095051114
Team Udayavani, Jul 6, 2020, 4:15 AM IST
ವೈದ್ಯಕೀಯ ರಂಗದಲ್ಲಿ ಸಾಧನೆಗಳ ಶಿಖರವನ್ನೇರಿದ ಅನೇಕ ಆಸ್ಪತ್ರೆಗಳು ಕಡಲನಗರಿಯಲ್ಲಿವೆ.
ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರುವ ಈ ಆಸ್ಪತ್ರೆಗಳು ಜನರಿಗೆ, ಅತ್ಯುತ್ತಮ ಆರೋಗ್ಯ ಸೇವೆಗಳನ್ನು ನೀಡುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿವೆ.
ಈ ಹಿನ್ನೆಲೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ವಿಸ್ತಾರತೆಯನ್ನು ಕಾಯ್ದುಕೊಂಡು ರೋಗಿಗಳಿಗೆ ಕೈಗೆಟಕುವ ದರದಲ್ಲಿ ಗುಣ ಮಟ್ಟದ ಚಿಕಿತ್ಸೆ ನೀಡುವುದರಲ್ಲಿ ತೊಡಗಿಸಿಕೊಂಡ ಕೆಲವೇ ಆಸ್ಪತ್ರೆಗಳ ಪೈಕಿ ಮಂಗಳೂರಿನ ಯುನಿಟಿ ಆಸ್ಪತ್ರೆಯೂ ಒಂದು.
ರೋಗಿಗಳಿಗೆ ಗುಣಮಟ್ಟದ ಸೇವೆ ನೀಡುವುದೇ ಈ ಆಸ್ಪತ್ರೆಯ ಪರಮ ಧ್ಯೇಯವಾಗಿದ್ದು, ಅದು ಶುಭಾರಂಭಗೊಂಡ ದಿನದಿಂದ ಇಂದಿನವರೆಗೂ ಅದನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದೆ. ಆ ಮೂಲಕ, ವೈದ್ಯಕೀಯ ರಂಗದಲ್ಲಿ ಯುನಿಟಿ ಆಸ್ಪತ್ರೆ ತನ್ನ ಹೆಸರನ್ನು ಉತ್ತುಂಗದಲ್ಲಿ ಕಾಯ್ದುಕೊಂಡಿರುವುದು ಗಮನಾರ್ಹ.
ಯುನಿಟಿ ಆಸ್ಪತ್ರೆಯು 1978ರಲ್ಲಿ ಸ್ಥಾಪನೆಗೊಂಡಿದ್ದು, ರೋಗಿಗಳಿಗೆ ಆರೋಗ್ಯ ಸೇವೆ ಯನ್ನು ಅವರ ಕೈಗೆಟಕುವ ದರದಲ್ಲಿ ನೀಡುವುದು ಮತ್ತು ವೈದ್ಯರಿಗೆ ವೈದ್ಯಕೀಯ ಸೇವಾ ಪರಿಣತಿ ಸಾಧಿಸಲು ಉತ್ತಮ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಈ ಆಸ್ಪತ್ರೆ ಆರಂಭವಾಯಿತು. ಕರಾವಳಿ ಕರ್ನಾಟಕ ಮತ್ತು ಕೇರಳದ ಉತ್ತರ ಭಾಗದ ಜನರಿಗೆ ಯುನಿಟಿ ಆಸ್ಪತ್ರೆಯ ಆರೋಗ್ಯ ಸೇವೆ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಗುಣಮಟ್ಟಾಧಾರಿತವಾಗಿ ಸಿಗುತ್ತಿದೆ.
ವೈದ್ಯಕೀಯ ರಂಗದಲ್ಲಿ ಹೊಸ ಆವಿಷ್ಕಾರಗಳಾದಂತೆ ಆ ಹೊಸತನಗಳನ್ನು ರೂಢಿಸಿ ಮುಂದುವರಿದ ಆಧುನಿಕ ತಂತ್ರಜ್ಞಾನಗಳ ಮುಖಾಂತರ ಚಿಕಿತ್ಸೆ ನೀಡುವುದನ್ನು ಆಸ್ಪತ್ರೆ ರೂಢಿಸಿಕೊಂಡಿದೆ. ವೈದ್ಯರು, ನರ್ಸ್‌ಗಳು ಸೇರಿದಂತೆ 500ಕ್ಕೂ ಹೆಚ್ಚು ಸಿಬಂದಿಗಳ ತ್ಯಾಗ ಮತ್ತು ಪರಿಶ್ರಮದ ಫಲವಾಗಿ ಆಸ್ಪತ್ರೆ ಇಂದು ಕರಾವಳಿ ಮತ್ತು ಕೇರಳದಾದ್ಯಂತ ಮನೆ ಮಾತಾಗಿದೆ. ಆಯ್ದ ವೈಶಿಷ್ಟ್ಯಗಳೊಂದಿಗೆ ಅತ್ಯುತ್ತಮ ಚಿಕಿತ್ಸಾ ವಿಧಾನ ಅನುಸರಿಸುವ ಮೂಲಕ ವೈದ್ಯಕೀಯ ರಂಗದಲ್ಲಿ ನಾಯಕನ ಸ್ಥಾನಕ್ಕೇರುವುದು ಯುನಿಟಿ ಆಸ್ಪತ್ರೆಯ ಗುರಿ.
ಆಸ್ಪತ್ರೆಯ ವೈದ್ಯರು ಆಯಾ ಕ್ಷೇತ್ರದಲ್ಲಿ ನೈಪುಣ್ಯ ಸಾಧಿಸಿದ್ದು, ಅನುಭವಿ ವಿಶೇಷ ತಜ್ಞರುಗಳಿರುವುದರಿಂದ ಉತ್ತಮ ಗುಣಮಟ್ಟದ ಚಿಕಿತ್ಸೆಗಳು ನಿರಾಯಾಸವಾಗಿ ಇಲ್ಲಿ ಸಿಗುತ್ತಿದೆ. ಪ್ರತಿ ರೋಗಿಯ ವೈಯಕ್ತಿಕ ಕಾಳಜಿ, ಆತನ ಅಗತ್ಯತೆಗಳನ್ನು ಅರಿತುಕೊಂಡು ಕೆಲಸ ಮಾಡುವ ಸಿಬಂದಿ ಸಂಸ್ಥೆಯ ಭಾಗವಾಗಿದ್ದಾರೆ. ಸುರಕ್ಷಿತ ವಾತಾವರಣದಲ್ಲಿ ಅತಿಯಾದ ಕಾಳಜಿಯೊಂದಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದೇ ಸಂಸ್ಥೆಯ ಉದ್ದೇಶ.
ಯಾವುದೇ ಸಂಸ್ಥೆ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ಅಲ್ಲಿನ ಸಿಬಂದಿಯಂತೆ ಆಡಳಿತ ವ್ಯವಸ್ಥೆಯ ಪಾತ್ರವೂ ಅಷ್ಟೇ ಮುಖ್ಯ. ಪಾರದರ್ಶಕ ಮತ್ತು ಪರಿಣಾಮಕಾರಿ ಆಡಳಿತ ಪದ್ಧತಿಯನ್ನು ಹೊಂದುವ ಸದುದ್ದೇಶದಿಂದ ಕಾರ್ಯಾ ಚರಣೆಗಿಳಿದಿರುವ ಯುನಿಟಿ ಆಸ್ಪತ್ರೆಯು ಉತ್ತಮ ಕಾರ್ಪೋರೇಟ್ ಅಥಾರಿಟಿಯನ್ನು ಹೊಂದಿದೆ.
ಕ್ರಿಟಿಕಲ್ ಕೇರ್ ಸರ್ವೀಸಸ್
ಇಲ್ಲಿ ಮೆಡಿಕಲ್ ಇಂಟೆನ್ಸಿವ್ ಕೇರ್ ಯುನಿಟ್, ನಿಯೋ ನೇಟಲ್ ಇಂಟೆನ್ಸಿವ್ ಕೇರ್ ಯುನಿಟ್, ನ್ಯೂರೋಲಾಜಿಕಲ್ ಇಂಟೆನ್ಸಿವ್ ಕೇರ್ ಯುನಿಟ್, ಕಾರ್ಡಿಯೋಥೊರಾಸಿಸ್ ಇಂಟೆನ್ಸಿವ್ ಕೇರ್ ಯುನಿಟ್, ಸರ್ಜಿಕಲ್ ಇಂಟೆನ್ಸಿವ್ ಕೇರ್ ಯುನಿಟ್, ಹೈ ಡಿಪೆಂಡೆನ್ಸಿ ಇಂಟೆನ್ಸಿವ್ ಕೇರ್ ಯುನಿಟ್‌ಗಳಿವೆ. 40 ಹಾಸಿಗೆ ಸಾಮರ್ಥ್ಯದ ಕ್ರಿಟಿಕಲ್ ಕೇರ್ ಯುನಿಟ್ ಇದಾಗಿದೆ. ಸೆಂಟ್ರಲ್ ಮಾನಿಟರಿಂಗ್ ಸ್ಟೇಶನ್ ಇಲ್ಲಿದೆ.
ಆಪರೇಶನ್ ಥಿಯೇಟರ್
ಅನಸ್ತೇಶಿಯಾ ವರ್ಕ್ ಸ್ಟೇಶನ್ಸ್, ಜನರಲ್ ಸರ್ಜಿಕಲ್ ಮತ್ತು ಇಎನ್‌ಟಿ ಆಪರೇಶನ್ ಥಿಯೇಟರ್, ಟಾಪ್ ಎಂಡ್ ಲ್ಯಾಪ್ರೋಸ್ಕೋಪಿಕ್ ಯುನಿಟ್ ವಿಥ್ 3-ಚಿಪ್, ಕ್ಯಾಮರಾ ಮತ್ತು ಎಚ್‌ಡಿ ಮಾನಿಟರ್ ಇದರಲ್ಲಿದೆ.
ಯುನಿಟಿ ಹಾರ್ಟ್ ಇನ್‌ಸ್ಟಿಟ್ಯೂಟ್
ಯುನಿಟಿ ಹಾರ್ಟ್ ಇನ್ಸ್‌ಟಿಟ್ಯೂಟ್‌ನಲ್ಲಿ ಗುಣಮಟ್ಟದ ಹೃದಯ ಸಂಬಂಧಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಡಿಯಾಕ್ ಕ್ಯಾಥ್ ಲ್ಯಾಬ್ ಮತ್ತು ಸುಸಜ್ಜಿತ ಕಾರ್ಡಿಯಾಕ್ ಯುನಿಟ್ ಆಸ್ಪತ್ರೆ ಯಲ್ಲಿದೆ. ಹೃದಯಾಘಾತದಂಥ ಸಮಸ್ಯೆಗಳಿಗೆ ತೀರಾ ಅಗತ್ಯವಾಗಿರುವ ಪ್ರೈಮರಿ ಆಂಜಿಯೋಪ್ಲಾಸ್ಟಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಆಂಜಿಯೋಗ್ರಫಿ, ಕಾಂಪ್ಲೆಕ್ಸ್ ಆಂಜಿಯೋಪ್ಲಾಸ್ಟಿ ಮತ್ತು ಫೇಸ್‌ಮೇಕರ್‌ಗಳಿಗೆ 3ಡಿ-ಸಿ ಟೆಕ್ನಾಲಜಿ ಆಸ್ಪತ್ರೆಯಲ್ಲಿ ಲಭ್ಯವಿದೆ.
ರೇಡಿಯೋಲಜಿ ಮತ್ತು ಇಮ್ಯಾಜಿಂಗ್
ಎಂಆರ್‌ಐ 1.5 ಟೆಲ್ಸಾ, 16 ಸ್ಲೈಸ್ ಸಿಟಿ ಸ್ಕ್ಯಾನ್, ಡಿಜಿಟಲ್ ಎಕ್ಸ್‌ರೇ, ಆಲ್ಟ್ರಾ ಸೋನೋಗ್ರಫಿ, 4ಡಿ ಆಲ್ಟ್ರಾಸೌಂಡ್, ಮಮೋಗ್ರಾಂ, ಡಾಪ್ಲರ್ ಸ್ಟಡೀಸ್, ಇಮೇಜ್ ಗೈಡೆಡ್ ಬಯೋಪ್ಸಿ, ಇಂಟರ್‌ವೆನ್ಷನಲ್ ರೇಡಿಯೋಲಜಿ ಮುಂತಾದ ವೈಶಿಷ್ಟ್ಯಗಳು.
ಮಿನಿಮಲ್ ಆ್ಯಕ್ಸೆಸ್ ಸರ್ಜರಿ
ಸ್ಪೆಷಲೈಸ್‌ಡ್ ಮಿನಿಮಲ್ ಆ್ಯಕ್ಸೆಸ್ ಸರ್ಜರಿ ವಿಭಾಗದಲ್ಲಿ ಎಪೆಂಡೆಕ್ಟಮಿ, ಡಯಾಗ್ನಸ್ಟಿಕ್ ಪ್ರಕ್ರಿಯೆಗಳು, ಹೈಸ್ಟರೆಕ್ಟಮಿ, ಓವರಿಯನ್ ಸಿಸ್ಟೆಕ್ಟಮಿ, ಅಡ್ವಾನ್ಸ್‌ಡ್ ಲೆಪ್ರೊಸ್ಕೊಪಿ, ಹರ್ನಿಯೋ ಪ್ಲಾಸ್ಟಿ ಮುಂತಾದವುಗಳ ಸೇವೆ ಲಭ್ಯವಿದೆ.
ಆರ್ಥೋಪೆಡಿಕ್ಸ್ ಮತ್ತು ಕೀಲು ಮರುಜೋಡಣೆ ಘಟಕ
ಸುಸಜ್ಜಿತ ಆರ್ಥೋಪೆಡಿಕ್ಸ್ ಮತ್ತು ಕೀಲು ಮರು ಜೋಡಣೆ ಘಟಕ ಸಣ್ಣಪುಟ್ಟ ಕೀಲು ಸಂಬಂಧಿ ಕಾಯಿಲೆಗಳಿಂದ ಹಿಂಡಿದು ಗಂಭೀರ ಸ್ವರೂಪದ ಸಮಸ್ಯೆಗಳವರೆಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿದೆ. ಟ್ರಾಮಾ ಸರ್ಜರಿಯೂ ಇಲ್ಲಿ ಲಭ್ಯ. ಆಲ್ಟ್ರಾ ಮಾಡರ್ನ್ ಆಪರೇಶನ್ ಥಿಯೇಟರ್ ಇಲ್ಲಿದೆ.
ವೈಶಿಷ್ಟ್ಯಗಳು
- ಹಿಪ್ ರಿಪ್ಲೇಸ್‌ಮೆಂಟ್
- ಹಿಪ್ ರೆಸರ್‌ಫೇಸಿಂಗ್
- ಮೊಣಗಂಟು ಮರು ಜೋಡಣೆ
- ಮೊಣಗಂಟು ಮತ್ತು ಭುಜದ ಆರ್ಥೋಸ್ಕೋಪಿಕ್ ಸರ್ಜರಿ
- ಮಿನಿಮಲ್ ಆ್ಯಕ್ಸೆಸ್ ಸ್ಪೈನ್ ಸರ್ಜರಿ
- ಪೀಡಿಯಾಟ್ರಿಕ್ ಎಲುಬು ಮತ್ತು ಕೀಲು ಶಸ್ತ್ರಚಿಕಿತ್ಸೆಗಳು
- ಎಡ್ವಾನ್ಸ್‌ಡ್ ಫ್ರಾಕ್ಚರ್ ಫಿಕ್ಸೇಶನ್
- ನ್ಪೋರ್ಟ್ಸ್ ಮೆಡಿಸಿನ್
ಗ್ಯಾಸ್ಟ್ರೋಎಂಟರಾಲಜಿ ಮತ್ತು ಪಿತ್ತಜನಕಾಂಗ (ಲಿವರ್) ಕಾಯಿಲೆಗಳ ಚಿಕಿತ್ಸಾ ಘಟಕ ವೈಶಿಷ್ಟé
– ಡೆಡಿಕೇಟೆಡ್ ಎಂಡೋಸ್ಕೊಪಿ
– ಡಯಾಗ್ನಸ್ಟಿಕ್ ಮತ್ತು ಥೆರಪೆಟಿಕ್ ಸ್ಟೇಟ್ ಆಫ್ ದ ಆರ್ಟ್ ವೀಡಿಯೋ ವಿಭಾಗ
– ಗ್ಯಾಸ್ಟ್ರೋಸ್ಕೊಪಿಗೆ ಎಂಡೋಸ್ಕೋಪ್
– ಕೊಲೊನೊಸ್ಕೊಪಿ, ಇಆರ್‌ಸಿಪಿ
ಲಭ್ಯ ಸೇವೆಗಳು
- ಎಂಡೋಸ್ಕೊಪಿ
- ಅಜೀರ್ಣ ಸಂಬಂಧಿ ಕಾಯಿಲೆಗೆ ಚಿಕಿತ್ಸೆ
- ಗ್ಯಾಸ್ಟ್ರೋಇಂಟೆಸ್ಟಿನಲ್ ಆಂಕೋಲಜಿ
- ಹೆಪಟಾಲಜಿ
ನೆಪ್ರೋಲಜಿ ಮತ್ತು ಯೂರಾಲಜಿ ವಿಭಾಗ
ವಿವಿಧ ರೀತಿಯ ಕಿಡ್ನಿ ಕಾಯಿಲೆಗಳಿಗೆ ನೆಪ್ರೋಲಜಿ ವಿಭಾಗದ ಸೇವೆ ಲಭ್ಯವಿದ್ದು, ಇಲ್ಲಿ 12 ಹೇಮೋ ಡಯಾಲಿಸಿಸ್ ಯುನಿಟ್‌ಗಳು, ಪೆರಿಟೋನಿಯಲ್ ಡಯಾ ಲಿಸಿಸ್ ಮತ್ತು ಕಂಟಿನ್ಯೂವಸ್ ರೇನಲ್ ರಿಪ್ಲೇಸ್‌ಮೆಂಟ್ ಥೆರಪಿ ಇದೆ.
ಲಭ್ಯ ಸೇವೆಗಳು
- ಒಳರೋಗಿ ಮತ್ತು ಹೊರ ರೋಗಿ ಡಯಾಲಿಸಿಸ್
- ಇಂಟರ್‌ವೆನ್ಷನಲ್ ನೆಪ್ರಾಲಜಿ
- ಕಿಡ್ನಿ ಬಯೋಪ್ಸಿ
– ಪ್ಲಾಸ್ಮಾಫೆರೆಸಿಸ್
- ಕ್ರಿಟಿಕಲ್ ಕೇರ್ ನೆಪ್ರಾಲಜಿ
ಸೌಲಭ್ಯಗಳು
- ಅಡ್ವಾನ್ಸ್ಡ್ ಡಯಾಲಿಸಿಸ್ ಮೆಶಿನ್
- ಬೃಹತ್ ಸಾಮರ್ಥ್ಯದ ಆರ್.ಓ. ಪ್ಲಾಂಟ್
- ಪ್ರತ್ಯೇಕ ಡಯಾಲಿಸಿಸ್ ಪ್ರದೇಶಗಳು
- ಡಯಾಲಿಸಿಸ್ ಉಪಕರಣ ತೊಳೆಯಲು ಪ್ರತ್ಯೇಕ ನೀರಿನ ವ್ಯವಸ್ಥೆ
ಎಡ್ವಾನ್ಸ್ಡ್ ಲೇಸರ್ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್
– ಕಿಡ್ನಿ, ಯುರೇಟರ್, ಬ್ಲೇಡರ್, ಪೆನಿಸ್ ಕ್ಯಾನ್ಸರ್ ಮುಂತಾದವುಗಳಿಗೆ ಯೂರೋ ಆಂಕಾಲಜಿ ಸೇವೆ
– ಅಪ್ಪರ್, ಲೋವರ್ ಟ್ರ್ಯಾಕ್ಟ್ ಎಂಡೋ ಯುರಾಲಜಿ
– ಲ್ಯಾಪ್ರೋಸ್ಕೋಪಿಕ್ ಸರ್ಜರಿ
– ಯುರೋಲಿಥಿಯಾಸಿಸ್ ಮೆಡಿಕಲ್ ಮತ್ತು ಸರ್ಜಿಕಲ್ ಟ್ರೀಟ್‌ಮೆಂಟ್
– ಪೀಡಿಯಾಟ್ರಿಕ್ ಯುರಾಲಜಿ
– ಫೀಮೇಲ್ ಯುರಾಲಜಿ
- ಆಂಡ್ರೋಲಜಿ ಮತ್ತು ಪುರುಷರ ಫಲವತ್ತತೆ
ನ್ಯೂರೋಲಜಿ ಮತ್ತು ನ್ಯೂರೋ ಸರ್ಜರಿ ವೈಶಿಷ್ಟ್ಯ
ಮೊಲ್ಲರ್ ಎಚ್‌ಐಆರ್700 ಮೈಕ್ರೋಸ್ಕೋಪ್ ಮಿಡಾಸ್ ರೆಕ್ಸ್ ನ್ಯಮ್ಯಾಟಿಕ್ ಡ್ರಿಲ್ ಮೈಕ್ರೋಸರ್ಜಿಕಲ್ ಇನ್‌ಸ್ಟ್ರೆಮೆಂಟ್ಸ್
ಲಭ್ಯ ಸೇವೆಗಳು
- ಸ್ಟ್ರೋಕ್ ಮತ್ತು ಎಪಿಲೆಪ್ಸಿ ಕೇರ್
- ನ್ಯೂರೋ ರೀಹ್ಯಾಬಿಲಿಟೇಶನ್
- ಇಂಟರ್‌ವೆನ್ಷನಲ್ ನ್ಯೂರೋ ರೇಡಿಯೋಲಜಿ
- ಮೈಕ್ರೋ ನ್ಯೂರೋ ಸರ್ಜರಿ
- ಸ್ಪೈನ್ ಸರ್ಜರಿ
– ನ್ಯೂರೋ ಸೈಕಾಲಜಿ
- ನ್ಯೂರೋ ಡೆವಲಪ್‌ಮೆಂಟ್ ಮತ್ತು ಸೆನ್ಸರಿ
- ಇಂಟಿಗ್ರೇಶನ್ ಯುನಿಟ್
ಆಂಕಾಲಜಿ ಮತ್ತು ಆಂಕೋ ಸರ್ಜರಿ ವಿಭಾಗ
ಮೆಡಿಕಲ್ ಆಂಕಾಲಜಿ, ಹೆಮಟಾಲಜಿ- ಹಿರಿಯರಿಗೆ ಮತ್ತು ಮಕ್ಕಳಿಗೆ ಹಾಗೂ ಸ್ಪೆಷಲೈಸ್‌ಡ್ ಆಂಕೋ ಸರ್ಜರಿ ಆಸ್ಪತ್ರೆಯಲ್ಲಿ ಲಭ್ಯವಿದೆ.
ವೈಶಿಷ್ಟ್ಯಗಳು
– ಡಯಾಗ್ನೋಸ್ಡ್ ಕ್ಯಾನ್ಸರ್ ರೋಗಕ್ಕೆ ಕೀಮೋಥೆರಪಿ
– ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ
– ಎಬ್‌ಡಾಮಿನಲ್ ಕ್ಯಾನ್ಸರ್‌ಗೆ ಸರ್ಜಿಕಲ್ ಚಿಕಿತ್ಸೆ
– ಬಾಯಿ, ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗೆ ಚಿಕಿತ್ಸೆ
– ಸರ್ವಿಕ್ಸ್, ಯುಟಿರಸ್ ಮತ್ತು ಓವರಿಯನ್ ಕ್ಯಾನ್ಸರ್ ಚಿಕಿತ್ಸೆ
ಕೋವಿಡ್ 19 ಕುರಿತು ಮುಂಜಾಗ್ರತೆ
ಕೋವಿಡ್ 19 ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಯುನಿಟಿ ಆಸ್ಪತ್ರೆ ಎಲ್ಲ ರೀತಿಯ ಸುರಕ್ಷತಾ ಕ್ರಮ ಗಳನ್ನು ಪಾಲಿಸಿಕೊಂಡು ಜನಸೇವೆ ಮಾಡುತ್ತಿದೆ. ರೋಗಿಗಳು ಮತ್ತು ಆಸ್ಪತ್ರೆ ಸಿಬಂದಿಯ ಆರೋಗ್ಯ ಕಾಳಜಿಗೆ ಬೇಕಾದ ಎಲ್ಲ ಸುರಕ್ಷಿತ ವಿಧಾನಗಳನ್ನು ಆಸ್ಪತ್ರೆಯಲ್ಲಿ ಅನುಸರಿಸಲಾಗುತ್ತಿದೆ.
ಆಸ್ಪತ್ರೆಯೊಳಗೆ ಬರುವ ಮುನ್ನ ಕೈಯನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸುವುದು, ಒಳರೋಗಿಗಳು ಒಬ್ಬ ಸಹಾಯಕರನ್ನು ಮಾತ್ರ ಜೊತೆಗಿರಿಸಿಕೊಳ್ಳುವುದು, ಐಸಿಯು ರೋಗಿಯ ಬಳಿಗೆ ಓರ್ವರನ್ನು ಮಾತ್ರ ಕಳುಹಿಸಲು ಅವಕಾಶ ನೀಡುವುದು ಮುಂತಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಆಸ್ಪತ್ರೆಯಲ್ಲಿದೆ ಕೋವಿಡ್-19 ಕಮಿಟಿ
ಕೋವಿಡ್-19 ಸಂಬಂಧಿಸಿದ ಐಸಿಎಂಆರ್‌ನ ಎಲ್ಲ ಮಾರ್ಗಸೂಚಿಗಳನ್ನು ಆಸ್ಪತ್ರೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೋವಿಡ್- 19 ಕಮಿಟಿಯನ್ನು ರಚಿಸಲಾಗಿದೆ. ಕೋವಿಡ್ 19 ಹೊರತುಪಡಿಸಿ ತೀವ್ರ ಉಸಿರಾಟದ ಸಮಸ್ಯೆ/ಐಎಲ್‌ಐ ಅಥವಾ ಇತರ ಜ್ವರ, ಕಫ, ಉಸಿರಾಟದ ತೊಂದರೆಗಳಿಗೆ ರೋಗಿಗಳು ದಾಖಲಾದರೆ ರೋಗಿಗಳ ಮೇಲೆ ನಿಗಾ ಇರಿಸುತ್ತದೆ. ಕೋವಿಡ್-19 ಅಧಿಕಾರಿಯು ಈ ಕಮಿಟಿಯನ್ನು ನಿರ್ವಹಿಸುತ್ತಾರೆ.
ಹೊರರೋಗಿ ಸೇವೆಗಳು
ಯುನಿಟಿ ಆಸ್ಪತ್ರೆ ಹೊರರೋಗಿಗಳ ಸೇವೆಗಳನ್ನು ಆರಂಭಿಸಿವೆ. ಹೊರರೋಗಿ ವಿಭಾಗವು ಬೆಳಗ್ಗೆ 9.30ರಿಂದ ಮಧ್ಯಾಹ್ನ 3ರವರೆಗೆ ಲಭ್ಯವಿದೆ. ವೈದ್ಯರ ಭೇಟಿಗೆ ದೂರವಾಣಿ ಸಂಖ್ಯೆ 8197705555ಗೆ ಕರೆ ಮಾಡಬೇಕು. ರೋಗಿ ಮತ್ತು ಸಿಬಂದಿಯ ಜನಸಂದಣಿ ತಡೆಗಟ್ಟಲು ಇದು ಸುರಕ್ಷತಾ ಉಪಕ್ರಮವಾಗಿದೆ.
ಸಿಬಂದಿಗೆ ಮುನ್ನೆಚ್ಚರಿಕೆ
ಎಲ್ಲಾ ಸಿಬಂದಿ ಸರಕಾರಿ ನಿಯಮಾನುಸಾರ ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ ಕಾರ್ಯನಿರ್ವಹಿಸುತ್ತಾರೆ. ಸ್ಕ್ರೀನಿಂಗ್, ಕ್ಲಿನಿಕ್, ಓಪಿಡಿ, ತುರ್ತು ಚಿಕಿತ್ಸೆ, ಐಸೋಲೇಶನ್ ವಾರ್ಡ್, ಐಸಿಯು ಮತ್ತು ಇತರ ಕ್ಲಿನಿಕಲ್ ಪ್ರದೇಶಗಳಲ್ಲಿನ ಸಿಬಂದಿಗೆ ಐಸಿಎಂಆರ್/ಕೋವಿಡ್-19 ಸಮಿತಿ ನಿಗದಿಪಡಿಸಿದ ತರಬೇತಿ ನೀಡಲಾಗಿದೆ. ಈ ಸಂಬಂಧ ತರಬೇತಿಯನ್ನೂ ನೀಡಲಾಗಿದ್ದು, ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಕೋವಿಡ್ ಮುಕ್ತ ವಾತಾವರಣವನ್ನು ನಿರ್ಮಿಸಲಾಗಿದೆ.
ಓಪಿಡಿ ಮಾರ್ಗಸೂಚಿ
ಎಲ್ಲಾ ರೋಗಿಗಳು/ಪರಿಚಾರಕರು ಫೇಸ್ ಮಾಸ್ಕ್ ಧರಿಸಬೇಕು. ಸ್ಕ್ರೀನಿಂಗ್ ಕೇಂದ್ರದ ಹೊರಗೆ ಕಾಯುವಾಗ ರೋಗಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಆಸ್ಪತ್ರೆ ಪ್ರವೇಶಿಸುವ ಮೊದಲು ಎಲ್ಲಾ ರೋಗಿಗಳು, ಪರಿಚಾರಕರು, ಸಿಬಂದಿಗಳ ಜ್ವರ ಪರೀಕ್ಷೆ ಮಾಡಲಾಗುವುದು. ರೋಗಿಗಳ ಸಂಪೂರ್ಣ ವಿವರವನ್ನು ಪಡೆದುಕೊಂಡ ಬಳಿಕ ವೈದ್ಯರ ಭೇಟಿಗೆ ಅವಕಾಶ ಇರುತ್ತದೆ. ಕರ್ತವ್ಯನಿರತ ವೈದ್ಯರು ಪರೀಕ್ಷೆ ನಡೆಸಿದ ಬಳಿಕ ರೋಗಿಯನ್ನು ಒಪಿಡಿಗೆ ಕಳುಹಿಸಲಾಗುತ್ತದೆ.
ಒಳರೋಗಿಗಳ ದಾಖಲಾತಿ
ತುರ್ತು ಚಿಕಿತ್ಸಾ ವಿಭಾಗದ ಮೂಲಕ ವೈದ್ಯರ ತಪಾಸಣೆ ನಡೆಸಿ ಬಳಿಕ ಒಳರೋಗಿಯಾಗಿ ದಾಖಲಿಸಲಾಗುತ್ತದೆ. ಕೋವಿಡ್ 19 ರೋಗಲಕ್ಷಣ ಇದ್ದವರನ್ನು ಮಾತ್ರ ಐಸೋಲೇಶನ್ ವಾರ್ಡ್‌ಗೆ ದಾಖಲಿಸಲಾಗುತ್ತದೆ. ಐಸೋಲೇಶನ್ ವಾರ್ಡ್‌ನಲ್ಲಿ ತರಬೇತಿ ಪಡೆದ ಸಿಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಾರೆ.
ರೋಗಿಯನ್ನು ಐಸೋಲೇಶನ್ ವಾರ್ಡ್‌ಗೆ ಸ್ಥಳಾಂತರಿಸುವ ವೇಳೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತದೆ. ಸ್ಕ್ರೀನಿಂಗ್ ಕ್ಲಿನಿಕ್, ಒಪಿಡಿ, ಹೊರರೋಗಿ ವಿಭಾಗ, ಐಸೋಲೇಶನ್ ವಾರ್ಡ್, ಐಸಿಯು ಮುಂತಾದ ಘಟಕಗಳಲ್ಲಿ ಬಳಕೆ ಮಾಡಿದ ಎಲ್ಲ ತ್ಯಾಜ್ಯಗಳನ್ನು ಸಾಂಕ್ರಾಮಿಕ ತ್ಯಾಜ್ಯವೆಂದು ಪರಿಗಣಿಸಲಾಗುತ್ತದೆ. ಹಳದಿ ತೊಟ್ಟಿಗಳಲ್ಲಿ ಹಾಕಿ, 2016ರ ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ ವಿಲೇವಾರಿ ಮಾಡಲಾಗುತ್ತದೆ.
ತುರ್ತು ವಿಭಾಗ
ಲಾಕ್‌ಡೌನ್ ಸಮಯದಲ್ಲಿ ಆಸ್ಪತ್ರೆಯ ತುರ್ತು ವಿಭಾಗವು ಜನರಿಗೆ ಸೇವೆ ನೀಡುತ್ತಿತ್ತು. ದೂರವಾಣಿ ಸಂಖ್ಯೆ 8095051112ಗೆ ಕರೆ ಮಾಡಿ ತಜ್ಞ ವೈದ್ಯರು/ಕರ್ತವ್ಯ ನಿರತ ವೈದ್ಯರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ರೋಗಿಗಳನ್ನು ಅಥವಾ ಪರಿಚಾರಕರನ್ನು ಕೋವಿಡ್-19 ರೋಗ ಲಕ್ಷಣಗಳಿಗಾಗಿ ಪರೀಕ್ಷಿಸಲಾಗುತ್ತದೆ. ಪ್ರತಿ ರೋಗಿಯ ಭೇಟಿಯ ನಂತರ ಆ ಪ್ರದೇಶಕ್ಕೆ ವೈರಾಣುನಾಶಕಗಳನ್ನು ಸಿಂಪಡಿಸಲಾಗುತ್ತದೆ.
ವಿಭಾಗಗಳು ಮತ್ತು ಸೌಲಭ್ಯಗಳು
– ಕಾರ್ಡಿಯೋಲಜಿ/ಕಾರ್ಡಿಯೋ ಥೊರಾಸಿಸ್ ಸರ್ಜರಿ
– ಕ್ರಿಟಿಕಲ್ ಕೇರ್
– ಡರ್ಮಟಾಲಜಿ
– ಇಎನ್‌ಟಿ
– ಜನರಲ್ ಸರ್ಜರಿ ಮತ್ತು ಲೆಪ್ರೋಸ್ಕೋಪಿಕ್ ಸರ್ಜರಿ
– ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ
– ಒಬ್‌ಸ್ಟೆಸ್ಟ್ರಿಕ್ಸ್ ಮತ್ತು ಗೈನಕಾಲಜಿ (ಬರ್ತ್ ಆ್ಯಂಡ್ ಬಿಯಾಂಡ್)
– ಜನರಲ್ ಮೆಡಿಸಿನ್
– ಲ್ಯಾಬೋರೇಟರಿ ಮೆಡಿಸಿನ್
– ನ್ಯೂರಾಲಜಿ ಮತ್ತು ನ್ಯೂರೋ ಸರ್ಜರಿ
– ನೆಫ್ರಾಲಜಿ
– ಆಪ್ತಮಾಲಜಿ ಮತ್ತು ಆಪ್ತಾಲ್ಮಿಕ್ ಸರ್ಜರಿ
– ಆಂಕಾಲಜಿ ಮತ್ತು ಆಂಕೋ-ಸರ್ಜರಿ
– ಪುಲ್ಮುನಾಲಜಿ (ಚೆಸ್ಟ್ ಮೆಡಿಸಿನ್)
– ಆರ್ಥೋಪೆಡಿಕ್ ಮತ್ತು ಜಾಯಿಂಟ್ ರೀಪ್ಲೇಸ್‌ಮೆಂಟ್ ಸರ್ಜರಿ
– ಪೀಡಿಯಾಟ್ರಿಕ್ಸ್ ಮತ್ತು ಪೀಡಿಯಾಟ್ರಿಕ್ ಸರ್ಜರಿ
– ಪ್ಲಾಸ್ಟಿಕ್/ಮ್ಯಾಕ್ಸಿಲ್ಲೋ ಫೇಶಿಯಲ್ ಸರ್ಜರಿ
– ಸೈಕಿಯಾಟ್ರಿ
– ರೇಡಿಯಾಲಜಿ ಮತ್ತು ಇಮ್ಯಾಜಿಂಗ್ ಸೆಂಟರ್
– ರಿಹ್ಯಾಬಿಲಿಟೇಶನ್ ಮತ್ತು ಫಿಸಿಕಲ್ ಥೆರಪಿ
– ರೆಮಟಾಲಜಿ
– ಯುರಾಲಜಿ-ಯುರೋ ಸರ್ಜರಿ
– 24 ಗಂಟೆ ಫಾರ್ಮಸಿ
ಯುನಿಟಿ ಆಸ್ಪತ್ರೆಯು 1978ರಲ್ಲಿ ರೋಗಿಗಳಿಗೆ ಉತ್ತಮ ಆರೋಗ್ಯ ಕಾಳಜಿಯನ್ನು ನೀಡುವ ಬದ್ಧತೆಯೊಂದಿಗೆ ಆರಂಭವಾಯಿತು. ಆ ಸಮಯದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಯ ಕೊರತೆಯನ್ನು ಮನಗಂಡು ಆಧುನಿಕ ಡಯೋಗ್ನೋಸಿಸ್ ಮತ್ತು ಥೆರಪಿಗಳ ಮೂಲಕ ಆರೋಗ್ಯ ಸೇವೆಯನ್ನು ಆರಂಭಿಸಿ ಕೊರತೆಯನ್ನು ಹೋಗಲಾಡಿಸಿದೆವು. ಉತ್ತಮ ಮತ್ತು ಗುಣಮಟ್ಟದ ಸೇವೆಯನ್ನು ಎಲ್ಲಾ ರೋಗಿಗಳಿಗೆ ಕಳೆದ 42 ವರ್ಷಗಳಿಂದ ನೀಡಿದ ಸಾರ್ಥಕ್ಯ ನಮ್ಮದು. ಆದರೆ, ಇದು ಇಲ್ಲಿಗೆ ನಿಲ್ಲದೆ, ಇನ್ನಷ್ಟು ಆಧುನಿಕ ತಂತ್ರಜ್ಞಾನಗಳ ಸಹಕಾರದೊಂದಿಗೆ ರೋಗಿಗಳಿಗೆ ಗುಣಮಟ್ಟದ ಸೇವೆ ನೀಡುವ ಬದ್ಧತೆಯನ್ನು ಸದಾ ಮುಂದುವರಿಸುತ್ತೇವೆ. ನಮ್ಮ ಆಸ್ಪತ್ರೆಯ ಗುಣಮಟ್ಟದ ಸೇವೆಯು ಭಾರತದಾಚೆಗೂ ತಲುಪಿದ್ದು, ವಿದೇಶಗಳಿಂದಲೂ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನು ನಾವು ಯುನಿಟಿಯಲ್ಲಿ ವೈವಿಧ್ಯತೆ (ಏಕತೆಯಲ್ಲಿ ವೈವಿಧ್ಯತೆ) ಎಂದು ಕರೆಯುತ್ತೇವೆ.
-ಡಾ| ಸಿ.ಪಿ. ಹಬೀಬ್ ರಹ್ಮಾನ್, ಚೇರ್‌ಮನ್, ಯುನಿಟಿ ಆಸ್ಪತ್ರೆ, ಮಂಗಳೂರು
ವಿಳಾಸ
ಯುನಿಟಿ ಆಸ್ಪತ್ರೆ, ಪಿ.ಬಿ.ನಂ.:535,
ಫಳ್ನೀರ್ ರಸ್ತೆ, ಮಂಗಳೂರು-575002
ದೂರವಾಣಿ: 0824-4245555
Email:[email protected]
Website:www.unityhospital.in
/unityhospitalmangalore
ಸಹ ಸಂಸ್ಥೆ ಯುನಿಟಿ ಕಾಲೇಜ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕೋರ್ಸಸ್
ತುರ್ತು ಸೇವೆಗಾಗಿ :105707/ 8095051114
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.