ಮಧ್ಯ ಕರ್ನಾಟಕದ ಆಶಾಕಿರಣ S.S. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ದಾವಣಗೆರೆ


Team Udayavani, Jul 2, 2020, 2:30 AM IST

ಮಧ್ಯ ಕರ್ನಾಟಕದ ಆಶಾಕಿರಣ S.S. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ದಾವಣಗೆರೆ

ಕಳೆದ ಒಂದೂವರೆ ದಶಕದಿಂದ ಮಧ್ಯ ಕರ್ನಾಟಕದಲ್ಲಿ ನಿರಂತರವಾಗಿ ವೈದ್ಯರಂಗದ ಎಲ್ಲಾ ವಿಧದ ರೋಗಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿರುವ ದಾವಣಗೆರೆಯ ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ರಾಜ್ಯದಲ್ಲಿ ಅಲ್ಲದೆ ರಾಷ್ಟ್ರಮಟ್ಟದಲ್ಲೂ ವೈದ್ಯಕೀಯ, ಚಿಕಿತ್ಸಾ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಮತ್ತು ವಿಶಿಷ್ಟ ಛಾಪು ಮೂಡಿಸುತ್ತಿದೆ.

ಜಿಲ್ಲೆಯ ಹಿರಿಯರು, ರಾಜಕೀಯ ಮುತ್ಸದ್ಧಿಗಳು ಹಾಗೂ ಶಿಕ್ಷಣ ಪ್ರೇಮಿಗಳಾಗಿರುವ ಡಾ| ಶಾಮನೂರು ಶಿವಶಂಕರಪ್ಪನವರ ಮಾರ್ಗದರ್ಶನದಲ್ಲಿ ಯುವ ಧುರೀಣ, ಮಾಜಿ ಸಚಿವರು ಆದ ಸದಾ ಸಮಾಜೋದ್ಧಾರಕ್ಕೆ ತೊಡಗಿಸಿಕೊಂಡಿರುವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರ ದೂರದೃಷ್ಟಿತ್ವದಿಂದ ಬೆಳೆಯುತ್ತಿರುವ ಈ ಸಂಸ್ಥೆಯಲ್ಲಿ ಪ್ರತಿ ವರ್ಷ ಸ್ನಾತಕ ಮತ್ತು ಸ್ನಾತಕೋತ್ತರ ಹಾಗೂ ಸೂಪರ್‌ ಸ್ಪೆಷಾಲಿಟಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ, ಉತ್ಕೃಷ್ಟ ಗುಣಮಟ್ಟದ, ಇಂದಿನ ವೈದ್ಯಕೀಯ ಕ್ಷೇತ್ರದಲ್ಲಿನ ಸವಾಲುಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವ ಕೌಶಲ್ಯಯುತ ಶಿಕ್ಷಣ ಒದಗಿಸುತ್ತಾ ಬರುತ್ತಿದೆ. ಕೆಲವೇ ಕೆಲ ಸಂಸ್ಥೆಗಳಲ್ಲಿ ದೊರೆಯುವ ಸೇವೆ ಹಾಗೂ ಅತ್ಯಾಧುನಿಕ ಸಲಕರಣೆ ಹೊಂದಿರುವ ಆಸ್ಪತ್ರೆಗಳ ಪೈಕಿ ಇದೂ ಒಂದು ಎಂಬ ಹೆಗ್ಗಳಿಕೆ ಸಂಸ್ಥೆಯದ್ದು.


ಪ್ರತಿದಿನ ಸಾವಿರಾರು ಹೊರ ರೋಗಿಗಳು ಹಾಗೂ ನೂರಾರು ಒಳ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಯ ಅತಿ ವಿಶೇಷವೆಂದರೆ ತುರ್ತು ಚಿಕಿತ್ಸಾವಿಭಾಗ. ವೈದ್ಯಕೀಯ ರಂಗದಲ್ಲಿ ಜಗತ್ಪ್ರಸಿದ್ಧವಾದ ತುರ್ತು ಚಿಕಿತ್ಸಾ ಸಲಕರಣೆ ಹೊಂದಿರುವ ತೀವ್ರ ನಿಗಾ ಘಟಕ ಕಳೆದ 15 ವರ್ಷಗಳಿಂದ ಸಾವಿರಾರು ರೋಗಿಗಳ ಅತ್ಯಮೂಲ್ಯ ಜೀವ ಉಳಿಸುವಲ್ಲಿ ಯಶಸ್ವಿಯಾಗುತ್ತಿದೆ. ಆಸ್ಪತ್ರೆಯಲ್ಲಿ 24 ಗಂಟೆಯ ತುರ್ತುಚಿಕಿತ್ಸಾ ವಿಭಾಗ ಕೆಲಸ ನಿರ್ವಹಿಸುತ್ತಿದೆ. ತುರ್ತು ಚಿಕಿತ್ಸೆಗಾಗಿ ಬರುವ ಮಧ್ಯಕರ್ನಾಟಕದ ಎಲ್ಲಾ ಭಾಗದವರಿಗೆ ಈ ಆಸ್ಪತ್ರೆ ಅಕ್ಷರಶಃ ಆಶಾಕಿರಣವಾಗಿದೆ.

ಈ ವೈದ್ಯಕೀಯ ಮಹಾವಿದ್ಯಾಲಯದ ವಿಶೇಷತೆ ಎಂದರೆ ಪ್ರತಿ ವರ್ಷವೂ ವಿಶ್ವದರ್ಜೆಯ ವೈದ್ಯಕೀಯ ಕ್ಷೇತ್ರ ಸಂಬಂಧಿತ ಲೇಖನಗಳು, ಇಲ್ಲಿನ ವೈದ್ಯರ ಅನುಭವ ಮತ್ತು ಸಂಶೋಧನೆಗಳು ವಿವಿಧ ಪತ್ರಿಕೆ ಹಾಗೂ ಜರ್ನಲ್‌ಗ‌ಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿವೆ.


ಈ ಆಸ್ಪತ್ರೆಯಲ್ಲಿ ಅತ್ಯಂತ ವಿಶಾಲ, ಸುಸಜ್ಜಿತ ಪ್ರಯೋಗಾಲಯದ ವಿಶೇಷ ಎಂದರೆ ದಿನದ 24 ಗಂಟೆ ಚಿಕಿತ್ಸಾ ಸೌಲಭ್ಯ ದೊರೆಯುತ್ತದೆ. ಕ್ಯಾಥ್‌ಲ್ಯಾಬ್‌, ಸ್ಲೀಪ್‌ಲ್ಯಾಬ್‌, ಲಿಥೋಟ್ರಿಪ್ಸಿ, ಲ್ಯಾಪ್ರೋಸ್ಕೋಪಿಕ್‌ ಸರ್ಜರಿ, ನ್ಯೂರೋಸೈನ್ಸ್‌ ಲ್ಯಾಬ್‌, ಬ್ರಾಂಕ್ರೋಸ್ಕೋಪಿ ಹಾಗೂ ಕಣ್ಣಿನ ಕಾಯಿಲೆಗಳನ್ನು ಕಂಡು ಹಿಡಿಯುವ ಎಲ್ಲಾ ಅತ್ಯಾಧುನಿಕ ಉಪಕರಣ ಮತ್ತು ಸಲಕರಣೆಗಳು ಇಲ್ಲಿವೆ. ಚರ್ಮ ಕಾಯಿಲೆಗಾಗಿ ಲೇಸರ್‌ ಥೆರೆಪಿ, ಮಾನಸಿಕ ರೋಗಿಗಳಿಗೆ ಅವಶ್ಯವಿರುವ ಶಾಕ್‌ ಥೆರೆಪಿ, ಮಾದಕ ವ್ಯಸನ ಹೊಡೆದೋಡಿಸುವ ನುರಿತ ತಜ್ಞರ ತಂಡ ಆಸ್ಪತ್ರೆಯಲ್ಲಿ ಲಭ್ಯವಿದೆ.

ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಹೆಚ್ಚಿನ ಪರಿಣಿತಿ ಪಡೆದು ಸಾರ್ವಜನಿಕರಿಗಾಗಿ ಸದಾ ಚಿಕಿತ್ಸೆ ನೀಡಲು ಉತ್ಸುಕರಾಗಿರುವ ಎಲ್ಲಾ ವಿಭಾಗದ ಪರಿಣಿತ ತಜ್ಞರು ಲಭ್ಯರಿದ್ದಾರೆ. ಈ ಸಂಸ್ಥೆ ಕಡಿಮೆ ದರದಲ್ಲಿ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯ ನೀಡುವಲ್ಲಿ ಹೆಸರುವಾಸಿಯಾಗಿದೆ.


ವೈದ್ಯಕೀಯ ಜಗತ್ತಿನ ಅತ್ಯಂತ ವಿಶೇಷ ಚಿಕಿತ್ಸೆಗಳಾದ ಕೈ-ಕಾಲು ಜೋಡಣೆ, ಸಂಧು ಜೋಡಣೆ, ಚರ್ಮ ಜೋಡಣೆ, ಕೂದಲು ಜೋಡಣೆ, ಮೂಳೆ ಜೋಡಣೆಗಳಂತಹ ವಿರಳ ಚಿಕಿತ್ಸೆಗಳನ್ನು ಅತ್ಯಂತ ಉತ್ತಮ ಫಲಿತಾಂಶದೊಂದಿಗೆ ನೀಡುತ್ತಿದೆ. ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಎಲ್ಲಾ ಕೆಲಸ-ಕಾರ್ಯಕ್ಕೆ ನಿರಂತರವಾಗಿ ಯಾವುದೇ ಕೊರತೆ ಇಲ್ಲದಂತೆ ಸದಾ ವೈದ್ಯರನ್ನು ಹುರಿದುಂಬಿಸುತ್ತಾ, ಬಡವರ ಮತ್ತು ದೀನ ದಲಿತರ ಚಿಕಿತ್ಸೆಗೆ ಬೇಕಾಗಿರುವ ಹಣಕಾಸಿನ ವ್ಯವಸ್ಥೆ, ಅದ್ಭುತವಾದ ಕಟ್ಟಡಗಳು ಹಾಗೂ ಉಪಕರಣ ನೀಡುವಲ್ಲಿ ಆಡಳಿತ ಮಂಡಳಿ ಸದಾ ಬೆನ್ನೆಲುಬಾಗಿ ನಿಂತಿದೆ. ಎಸ್‌.ಎಸ್‌.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಸಮುದಾಯ ವಿಭಾಗದಿಂದ ಹಳ್ಳಿ ಮತ್ತು ನಗರದ ಕೊಳಚೆ ಪ್ರದೇಶದಲ್ಲಿ ತನ್ನ ಉಪಕೇಂದ್ರ ತೆರೆದು ಅಲ್ಲಿಯೂ ವೈದ್ಯಕೀಯ ಸೌಲಭ್ಯ ಒದಗಿಸುತ್ತಾ ಬರುತ್ತಿದೆ.


ಪ್ರತಿ ವರ್ಷ 150 ಸ್ನಾತಕ ಹಾಗೂ 75ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ವಿಶ್ವದ ವಿವಿಧ ರಾಷ್ಟ್ರದಲ್ಲಿ ಹೆಚ್ಚಿನ ಸೇವೆ ಸಲ್ಲಿಸುತ್ತಿದ್ದಾರೆ. ಅಮೆರಿಕದಲ್ಲಿ ಕೋವಿಡ್‌-19 ಚಿಕಿತ್ಸೆಯಲ್ಲಿ ತರಬೇತಿ ಪಡೆದು, ಸೇವೆ ಸಲ್ಲಿಸುವ ಮೂಲಕ ಸಂಸ್ಥೆಗೆ ವಿಶ್ವಮಟ್ಟದಲ್ಲಿ ಮೆಚ್ಚುಗೆ ಪಡೆದಿದ್ದಾರೆ.

ಅನೇಕ ಪ್ರಾಧ್ಯಾಪಕರು ರಾಷ್ಟ್ರದ ಉನ್ನತ ಮಟ್ಟದ ಆರೋಗ್ಯ ಸಂಸ್ಥೆಯಲ್ಲಿ ಕಾರ್ಯದರ್ಶಿ, ಕರ್ನಾಟಕದಿಂದ ಸದಸ್ಯರಾಗಿ, ಸಲಹಾ ಸದಸ್ಯರಾಗಿ ಅನೇಕ ವೈದ್ಯಕೀಯ ಸಮ್ಮೇಳನ, ಗೋಷ್ಠಿಗಳಲ್ಲಿ ಮತ್ತು ಪುಸ್ತಕ ಸಂಪಾದಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಸಂಸ್ಥೆಯ ಹೆಸರು ರಾಷ್ಟ್ರವ್ಯಾಪಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಈ ಸಂಸ್ಥೆಯಲ್ಲಿ ವಿವಿಧ ಅಂತಾರಾಷ್ಟ್ರೀಯ ಔಷಧ ಪ್ರಯೋಗಾಲಯಗಳು, ಬಹುರಾಷ್ಟ್ರೀಯ ಕಂಪನಿಗಳ ಸಹಯೋಗದೊಂದಿಗೆ ವೈದ್ಯಕೀಯ ರಂಗದ ಸಂಶೋಧನೆಗಳು ನಡೆಯುತ್ತಿವೆ.


ಸುಂದರ ಕ್ಯಾಂಪಸ್‌..
ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿರುವ ಎಸ್‌.ಎಸ್‌.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ 160 ಎಕರೆ ವಿಶಾಲ ಜಾಗ ಹೊಂದಿದೆ.

ಸಾಮಾನ್ಯ ಸಮಸ್ಯೆಯಿಂದ ಹಿಡಿದು ಅತೀ ಕ್ಲಿಷ್ಟಕರ, ಸಾಧ್ಯವೇ ಇಲ್ಲ ಎನ್ನುವ ಸಮಸ್ಯೆಗೆ ಇಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯ ಸದಾ ಲಭ್ಯ. ಒಂದು ಸಾವಿರ ಹಾಸಿಗೆ ಸಾಮರ್ಥ್ಯ ಹೊಂದಿದೆ. 23ಕ್ಕೂ ಹೆಚ್ಚು ವಿಭಾಗಗಳಿವೆ. ದೇಶದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಇರುವಂತಹ 100 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕ, ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ಆಧುನಿಕ ಯಂತ್ರೋಪಕರಣಗಳ ಅತ್ಯಾಧುನಿಕ ಪ್ರಯೋಗಾಲಯ, 24×7 ಮಾದರಿ ಕಾರ್ಯನಿರತ ರಕ್ತನಿಧಿ ಭಂಡಾರ ಹೊಂದಿದೆ.

ಹಿರಿಯ ಮುತ್ಸದ್ದಿ ಶಾಮನೂರು ಶಿವಶಂಕರಪ್ಪ ಹಾಗೂ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಆಸ್ಪತ್ರೆ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಜನರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ಒಂದೇ ಕಡೆ ದೊರೆಯುವಂತಾಗಬೇಕು ಎಂದು ಇಬ್ಬರೂ ಸಾಕಷ್ಟು ಶ್ರಮಿಸುತ್ತಿದ್ದಾರೆ. ಮುಂದಾಲೋಚನೆ, ದೂರದರ್ಶಿತ್ವ, ಪ್ರಗತಿಪರ, ಜನಪರ ಚಿಂತನೆಯ ಫಲವಾಗಿದೆ. ಇಲ್ಲಿ ಚಿಕಿತ್ಸೆ ಪಡೆದು ಗುಣವಾಗುವ ರೋಗಿಯಲ್ಲಿ ಮೂಡುವ ಸಂತಸ ಈ ಉಭಯ ನಾಯಕರ ಸಾರ್ಥಕ್ಯಭಾವವನ್ನು ಬಲಗೊಳಿಸುತ್ತಾ ಸಾಗುತ್ತಿದೆ.


– RT-PCR COVID-19 ಪ್ರಯೋಗಾಲಯವು ಸೂಕ್ಷ್ಮಜೀವಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ದಿನದ 24 ತಾಸುಗಳ ಸೇವೆ ಒದಗಿಸುತ್ತಿದೆ. ಸಂಪರ್ಕಿಸಿ: 08192-266341

– ವರ್ಣತಂತು ಮತ್ತು ಅನುವಂಶಿಕ ನ್ಯೂನತೆಗಳನ್ನು ಪತ್ತೆ ಹಚ್ಚಲು Genetic Lab ವ್ಯವಸ್ಥೆ ಅಂಗರಚನಾ ಶಾಸ್ತ್ರ ವಿಭಾಗದ ಅ ಧೀನದಲ್ಲಿದ್ದು ಬೆಳಗ್ಗೆ  9ರಿಂದ ಸಂಜೆ 5ರ ವರೆಗೆ ಕಾರ್ಯ ನಿರ್ವಹಿಸುತ್ತಿದೆ. ಸಂಪರ್ಕಿಸಿ: 08192-266311/6313.

ವಿಷಪತ್ತೆ ಮಾಡುವ (Poison detection) ಪ್ರಯೋಗಾಲಯವು ನ್ಯಾಯವೈದ್ಯಶಾಸ್ತ್ರ ವಿಭಾಗದ ಅಧಿಧೀನದಲ್ಲಿದ್ದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಕಾರ್ಯ ನಿರ್ವಹಿಸುತ್ತಿದೆ. ಸಂಪರ್ಕಿಸಿ: 08192-266335.

– ಔಷಧಗಳ ಅಡ್ಡ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಔಷಧಶಾಸ್ತ್ರ ವಿಭಾಗ (Phramacovigilance)ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಕಾರ್ಯ ನಿರ್ವಹಿಸುತ್ತಿದೆ. ಸಂಪರ್ಕಿಸಿ: 08192-266345/6308

– ಸಂಶೋಧನೆಗಳ ಹೊಸ ಔಷಧಿಗಳ ಪರಿಣಾಮ ಮತ್ತು ಆಡ್ಡಪರಿಣಾಮಗಳ ಕುರಿತು ವಿಸ್ತ್ರತವಾಗಿ ಸಂಶೋಧನಾ ಅಧ್ಯಯನ ಮಾಡಲು ಪ್ರಾಣಿಗಳ ಪ್ರಯೋಗಾಲಯವಿದೆ. ಇದಕ್ಕೆ  CPCSEA (Committee for the perpose of control and Supervisions of Experiments on Animals) ಮಾನ್ಯತೆ ಪಡೆಯಲಾಗಿದೆ. ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಕಾರ್ಯನಿರ್ವಹಿಸುತ್ತಿದೆ. ಸಂಪರ್ಕಿಸಿ: 08192-266345/6308s

ಸಂಸ್ಥೆಯಲ್ಲಿ ಸುಸಜ್ಜಿತವಾದ ಕೌಶಲ್ಯ ತರಬೇತಿ ಪ್ರಯೋಗಾಲಯವಿದ್ದು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ ತರಬೇತಿ ನಡೆಸಿಕೊಡಲಾಗುತ್ತಿದೆ. ಆಸ್ಪತ್ರೆಯಲ್ಲಿ ತರಬೇತಿಯಲ್ಲಿರುವ ಎಲ್ಲಾ ಗೃಹ ವೈದ್ಯರಿಗೆ (House surgeon) ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣ ತುರ್ತು ಚಿಕಿತ್ಸಾ ವಿಧಾನ ಮತ್ತು ಅವಘಡಗಳ ನಿರ್ವಹಣೆಗಳ ಬಗ್ಗೆ ವ್ಯವಸ್ಥಿತ ತರಬೇತಿಯನ್ನು ನುರಿತ ತಜ್ಞ ವೈದ್ಯರಿಂದ ನಡೆಸಿಕೊಡಲಾಗುತ್ತಿದೆ.

ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಗಣಕೀಕೃತ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವ್ಯವಸ್ಥೆ ಇದೆ. ನುರಿತ ಹಿರಿಯ ಪ್ರಾಧ್ಯಾಪಕರಿಂದ ಉತ್ತಮ ಗುಣಮಟ್ಟದ ಬೋಧನೆ ಹಾಗೂ ಪ್ರಾಯೋಗಿಕ ಮಾರ್ಗದರ್ಶನ ನೀಡಲಾಗುತ್ತಿದೆ. ಸುಸಜ್ಜಿತವಾದ ವಿದ್ಯಾರ್ಥಿನಿಲಯದ ವ್ಯವಸ್ಥೆ ಇದ್ದು, ಗುಣಮಟ್ಟದ ಆಹಾರ ಒದಗಿಸಬಲ್ಲ ಭೋಜನಾಲಯದ ವ್ಯವಸ್ಥೆಯೂ ಇದೆ.

ಪ್ರಾಧ್ಯಾಪಕ ಸಿಬ್ಬಂದಿಗೆ ಹೆಚ್ಚಿನ ಶೈಕ್ಷಣಿಕ ಮಾರ್ಗದರ್ಶನ ಮತ್ತು ಕಲಿಕಾ ಪ್ರಕಾರಗಳ ಬಗ್ಗೆ (Teaching learning methodology) ನಿಯಮಿತವಾಗಿ ತರಬೇತಿಯನ್ನು ಒದಗಿಸಲು ಸುಸಜ್ಜಿತವಾದ ವೈದ್ಯಕೀಯ  ಶೈಕ್ಷಣಿಕ ವಿಭಾಗದ (Medical Education Unit) ವ್ಯವಸ್ಥೆ ಇದೆ.

ಶಾರೀರಿಕ ರಚನಾ ಶಾಸ್ತ್ರ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಮನುಷ್ಯ ದೇಹದ ರಚನೆಯನ್ನು ಸುದೀರ್ಘ‌ವಾಗಿ ಅಧ್ಯಯನ ಮಾಡಲು ಮೃತ ದೇಹಗಳ ಅವಶ್ಯಕತೆ ಇರುತ್ತದೆ. ಮರಣಾ ನಂತರ ದೇಹದಾನ ಮಾಡಲು ಇಚ್ಛಿಸಿ ಉಯಿಲು ಕೊಟ್ಟಿದ್ದರೆ ಅವರ ದೇಹವನ್ನು ಕಾನೂನಿನ ಪರಿಕರಗಳ ಅಡಿಯಲ್ಲಿ ಪಡೆದುಕೊಳ್ಳಲು ದೇಹದಾನ ವಿಭಾಗದ ವ್ಯವಸ್ಥೆ ಇದೆ. ಸಂಪರ್ಕಿಸಿ: 08192-266311 ಮತ್ತು 6313.


ಟಾಪ್ ನ್ಯೂಸ್

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

Astronamy-moon

Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.