Sri Aurobindo; ಪಾಶ್ಚಾತ್ಯ ಪೊರೆಯಿಂದ ಪುದುಚೇರಿಯ ಗುಹೆಯವರೆಗೆ


Team Udayavani, Aug 14, 2023, 7:00 AM IST

1-qwewqe

ಭಾರತ ದ್ವೇಷಿಯಾದ ತಂದೆಯ ಕಾರಣದಿಂದ ತನ್ನ ಏಳರ ಹರೆಯದಲ್ಲಿ ಬ್ರಿಟನ್‌ ತಲುಪಿ, ಮುಂದಿನ ಹದಿನಾಲ್ಕು ವರ್ಷಗಳ ಕಾಲ ಅಲ್ಲಿದ್ದು, ಅಲ್ಲಿನ ಭಾಷೆಗಳು, ಸಾಹಿತ್ಯಗಳೆಲ್ಲವನ್ನೂ ಅರಗಿಸಿಕೊಂಡು, ಎಲ್ಲದ ರಲ್ಲಿಯೂ ಪಾಂಡಿತ್ಯವನ್ನು ಪಡೆದು, ಮುಂದೆ ಭಾರತದಲ್ಲಿ ಸಶಸ್ತ್ರ ಹೋರಾಟಕ್ಕೆ ಸಮಾಜವನ್ನು ಸಿದ್ಧಗೊಳಿಸಿ ಸಕ್ರಿಯವಾಗಿ ತಾನೂ ಅದರಲ್ಲಿ ಪಾಲ್ಗೊಂಡು, ಕೊನೆಗೆ ಅಧ್ಯಾತ್ಮದ ಗಿರಿ ಶಿಖರವನ್ನೇರಿ ಜಗತ್ತಿಗೆ ಹೊಸ ಬೆಳಕನ್ನು ನೀಡಿದ ಮಹಾಪುರುಷ ಯೋಗಿ ಅರವಿಂದರು.

ಅವರ ಜನ್ಮದಿನ 1872ರ ಆಗಸ್ಟ್‌ 15. ಅರವಿಂದರು ಹುಟ್ಟಿ ಸರಿಯಾಗಿ ಎಪ್ಪತ್ತೈದು ವರ್ಷಗಳ ಬಳಿಕ ಅಂದರೆ 1947ರ ಆ. 15ರಂದು ಭಾರತಕ್ಕೆ ಸ್ವಾತಂತ್ರ್ಯ ಬಂತು. ಇದನ್ನು ಆಕಸ್ಮಿಕ ಅನ್ನುವುದಕ್ಕಿಂತ ಹೆಚ್ಚಿನ ಅರ್ಥವನ್ನು ಕೊಡುತ್ತದೆ. ಮಂಗಳವಾರಕ್ಕೆ ಶ್ರೀ ಅರವಿಂದರ ಜನನವಾಗಿ 151 ವರ್ಷಗಳು.

ಪಾಶ್ಚಾತ್ಯದ ಪೊರೆಯೊಳಗೆ ಅರವಿಂದೋ!
ಭಾರತೀಯವಾದುದೆಲ್ಲವನ್ನು ವಿರೋಧಿಸುವ ಮತ್ತು ಆಂಗ್ಲ ಜೀವನ ಪದ್ಧತಿಯೇ ಸರ್ವಶ್ರೇಷ್ಠವೆಂದು ಭಾವಿ ಸಿದ ಶ್ರೀಮಂತ, ಕೃಷ್ಣಧನ ಘೋಷ್‌ ಅರವಿಂದರ ತಂದೆ. ಸ್ವತಃ ಕಥೆ, ನಾಟಕಗಳನ್ನು ಬರೆಯುತ್ತಾ ಸಾಹಿತ್ಯ ದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದ ಸ್ವರ್ಣಲತಾದೇವಿ ಅರವಿಂದರ ತಾಯಿ. ತಂದೆ ಕೃಷ್ಣ ಧನರು ಸಂಪೂರ್ಣ ಆಂಗ್ಲ ವಾತಾವರಣದಲ್ಲಿಯೇ ಮಕ್ಕಳನ್ನು ಬೆಳೆಸಬೇ ೆಂಬ ಹಠತೊಟ್ಟಿದ್ದರು. ಬಂಗಾಲಿ ಭಾಷೆಯ ಒಂದಕ್ಷರವೂ ಮಕ್ಕಳ ಕಿವಿಯ ಮೇಲೆ ಬೀಳದಂತೆ ಕಟ್ಟೆಚ್ಚರ ವಹಿಸಿದ್ದರು. ಭಾರತದ ಜತೆ ಮಕ್ಕಳ ಸಂಪರ್ಕವನ್ನು ಸಂಪೂರ್ಣ ಕಡಿದು ಹಾಕುವ ಉದ್ದೇಶದಿಂದ ಇಂಗ್ಲೆಂಡಿಗೆ ಕರೆದುಕೊಂಡು ಬಂದರು. ತಂದೆಯ ಈ ವಿಚಿತ್ರ ಹಠದ ಪರಿಣಾಮ ಅರವಿಂದರು 7 ವರ್ಷದ ಮಗು ಇರುವಾಗಲೇ ತಾಯ್ನಾಡನ್ನು ತೊರೆದು ಪರದೇಶದಲ್ಲಿ ಬೆಳೆಯುವಂತಾಯಿತು.

ಭಾರತದಿಂದ ಬೇರ್ಪಡಿಸಿ ಪರಕೀಯ ಸಂಸ್ಕೃತಿಯಲ್ಲಿ ಅರವಿಂದರನ್ನು ಅದ್ದಿ ಅದ್ದಿ ತೆಗೆದರೂ, ಕೊನೆಗೂ ಅಲ್ಲಿ ಬೆಳಗಿದುದು ಸಂಸ್ಕಾರ ರೂಪವಾಗಿದ್ದ ಭಾರತೀಯ ಬಣ್ಣವೇ. ತಾಯ್ನಾಡಿನಿಂದ, ಅದರ ಸಾಂಸ್ಕೃತಿಕ ಪ್ರಭಾ ವದಿಂದ ಸಾವಿರಾರು ಮೈಲುಗಳ ದೂರದಲ್ಲಿದ್ದ ಅವರ ಮನಸ್ಸು ಭಾರತದ ಕಡೆಗೆ ಸೆಳೆಯಲ್ಪಡುತ್ತಿತ್ತು. ಸುಮಾರು ಹದಿನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿದ್ದು, ಭಾರತಕ್ಕೆ ಮರಳಿದರು ಅರವಿಂದರು.

ಕ್ರಾಂತಿಶಿರೋಮಣಿ ಅರವಿಂದೋ
ಇಂಗ್ಲಿಷ್‌ ಹಾಗೂ ಮರಾಠಿ ಭಾಷೆಗಳಲ್ಲಿ ಪ್ರಕಟವಾಗು ತ್ತಿದ್ದ “ಇಂದುಪ್ರಕಾಶ’ ಪತ್ರಿಕೆಗೆ “ಹಳೆಯ ಲಾಂದ್ರಗಳಿಗೆ ಹೊಸ ದೀಪಗಳು'() ಎಂಬ ಶೀರ್ಷಿಕೆಯಲ್ಲಿ, ಗುಪ್ತನಾಮದಿಂದ ಲೇಖನಗಳನ್ನು ಬರೆಯತೊಡಗಿದರು. ಕ್ರಾಂತಿಕಾರಿಗಳ ಅನೇಕ ಗುಪ್ತ ದಳಗಳನ್ನು ಸಂಘಟಿಸಿ ಸ್ವಾತಂತ್ರ್ಯ ಯಜ್ಞಕ್ಕೆ ಅವರೆಲ್ಲರನ್ನು ಸಿದ್ಧಗೊಳಿಸತೊಡಗಿದರು. ಅರವಿಂದರ ತಮ್ಮ ಬಾರೀಂದ್ರ ಘೋಷರೂ ಅಣ್ಣನೊಂದಿಗೆ ಸೇರಿಕೊಂಡರು. ಮದ್ದು ಗುಂಡುಗಳ ತಯಾರಿಕೆ ಮತ್ತು ಪ್ರಯೋಗಗಳನ್ನು ಕಲಿಯಲು ಮಾಧವರಾವ ಜಾಧವ ಎಂಬ ಯುವಕನನ್ನು ಯುರೋಪಿಗೆ ಅರವಿಂ ದರು ಕಳುಹಿಸಿಕೊಟ್ಟರು. ಇವರು ಹಚ್ಚಿದ ಆ ಸ್ವಾತಂತ್ರ್ಯ ದ ಕಿಡಿ ಬಂಗಾಲದ ಸೀಮೆಯನ್ನು ದಾಟಿ ಸಂಪೂರ್ಣ ಭಾರತವನ್ನು ವ್ಯಾಪಿಸಿತ್ತು. ಅದರ ಪರಿಣಾಮ 1905ರ ಹೊತ್ತಿಗೆ ಬಂಗಾಲ, ಕ್ರಾಂತಿಯ ಅಗ್ನಿ ಪರ್ವ ತವೇ ಆಗಿ ಮಾರ್ಪಾ ಡಾಯಿತು. ಯಾವಾಗ ಜ್ವಾಲಾಮುಖಿ ಸಿಡಿ ದೇಳುತ್ತಿತ್ತೋ ಹೇಳುವಂತಿರಲಿಲ್ಲ.

ವೈಸರಾಯ್‌ ಕರ್ಜನ್‌ ಬಂಗಾಲದ ವಿಭಜನೆಗೆ ಕೈ ಹಾಕಿದ್ದ. ಸುದ್ದಿ ಕೇಳಿ ಇಡೀ ಬಂಗಾಲವೇ ತತ್ತರಿಸಿತು. ಕೆರಳಿ ಸಿಡಿದೆದ್ದಿತು. ಬಂಗಾಲದ ಬೀದಿ ಬೀದಿಗಳಲ್ಲಿ “ವಂದೇ ಮಾತರಂ’ ಸಾಗರದ ಅಲೆಗಳಂತೆ ಅಪ್ಪಳಿ ಸತೊಡಗಿತು. “ವಂದೇ ಮಾತರಂ’ನ ಹೊಡೆತಕ್ಕೆ ಬ್ರಿಟಿಷರು ನಡುಗಿ ಆ ಗೀತೆಗೆ ನಿಷೇಧ ಹೇರಿದರು. ಜನ ಅಂಜಲಿಲ್ಲ, ಚಳವಳಿಗೆ “ವಂದೇ ಮಾತರಂ’ ಹೆಸರನ್ನೇ ಇಟ್ಟು ನುಗ್ಗಿದರು. ಅರವಿಂದರೂ ಬಹಿರಂಗವಾಗಿ ಹೋರಾಟಕ್ಕೆ ಧುಮುಕಿದರು.

ಅಧ್ಯಾತ್ಮ ಶಿಖರ ಶ್ರೀಅರವಿಂದೋ
ಅರವಿಂದರನ್ನು ಬ್ರಿಟಿಷರು ಬಂಧಿಸುವುದು, ಅನಂ ತರ ಬಿಡುಗಡೆಯಾಗುವುದು ನಡೆದೇ ಇತ್ತು. 1908ರ ಮೇ ತಿಂಗಳಿನಲ್ಲಿ ಬಂಧಿತರಾದ ಅರವಿಂದರು ಸುಮಾರು ಒಂದು ವರ್ಷ ಕಾಲ ಜೈಲಿನಲ್ಲಿದ್ದರು. ಅರವಿಂದರ ಜೀವನದಲ್ಲಿ ಅದೊಂದು ಮಹತ್ವ ಪೂರ್ಣವಾದ ಕಾಲ ಪರಿವರ್ತನೆ. ಆರಂಭದಿಂದಲೂ ಆಧ್ಯಾತ್ಮಿಕ ಅಭೀಪ್ಸೆ ಅವರ ಜೀವನದಲ್ಲಿ ಅಂತರ್‌ ವಾಹಿನಿಯಾಗಿ ಹರಿಯುತ್ತಿತ್ತು. ಲೌಕಿಕ ಅಧಿಕಾರಕ್ಕೆ ಸಂಬಂಧಿಸಿದ ಬಹಿರಂಗದ ಜೀವನ, ದೇಶದ ಆಗು ಹೋಗುಗಳನ್ನು ಅಂಟಿಸಿಕೊಂಡು ದುಡಿದ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧನ ಜೀವನ, ಇವೆರ ಡಕ್ಕಿಂತಲೂ ಆಳವಾದ ಮತ್ತೂಂದು ಆಧ್ಯಾತ್ಮಿಕ ತುಡಿತದ ಆಂತರಿಕ ಜೀವನ, ಅಗೋಚರವಾಗಿ ಅವರ ಜೀವನ ಕ್ರಮವನ್ನು ರೂಪಿಸುತ್ತಿತ್ತು. ಸೆರೆಮನೆಯಲ್ಲಿ ಕಳೆದ ಆ ದಿನಗಳು ಶ್ರೀ ಅರವಿಂದರ ಆಧ್ಯಾತ್ಮಿಕ ಸಾಧನೆಯ ಪರಮ ಪಾವನ ಪುಣ್ಯಕಾಲವೆಂದೇ ಹೇಳಬೇಕು. ಆ ಒಂದು ವರ್ಷದ ಜೈಲುವಾಸ, ಅವರೊಳಗಿನ ಆಧ್ಯಾತ್ಮಿಕ ಪ್ರವಾಹವನ್ನು ಗುಪ್ತಗಾಮಿನಿಯಾಗಿ ಉಳಿಸದೆ ಮಹಾ ಪ್ರವಾಹವಾಗಿ ಹೊರಹೊಮ್ಮಿಸಿತು.

ಕ್ರಾಂತಿಕಾರಿಯಾಗಿ, ಸ್ವಾತಂತ್ರ್ಯ ಯೋಧನಾಗಿ ಜೈಲಿನ ಒಳಗಡೆ ಅಡಿಯಿಟ್ಟ ಅರವಿಂದರು, ಆಧ್ಯಾತ್ಮಿಕ ಯೋಗಿಯಾಗಿ ಹೊರಬಂದರು. ಯೋಗ ಸಾಧನೆಗಾಗಿ ಚಂದ್ರನಾಗೂರಿಗೆ ಹೊರಟರು. ರಾಜಕೀಯದ ಬಿಸಿಗೆ ತೀರಾ ಹತ್ತಿರವಾಗಿದ್ದ ಚಂದ್ರನಾಗೂರಿನಲ್ಲಿ ಹೆಚ್ಚು ಕಾಲ ಉಳಿಯುವುದು ಅವರಿಗೆ ಸಾಧ್ಯವಾಗಲಿಲ್ಲ. ಆಗ ತನ್ನ ಯೋಗ ಸಾಧನೆಗಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ಕಲ್ಕತ್ತಾ ಹಾಗೂ ಬ್ರಿಟಿಷರ ಆಡಳಿತದಿಂದ ದೂರವಿದ್ದ ಪುದುಚೇರಿ ಅರ್ಥಾತ್‌ ಪಾಂಡಿಚೇರಿಯನ್ನು.

1910ರ ಎಪ್ರಿಲ್‌ 4ರಂದು ಶ್ರೀ ಅರವಿಂದರು ಪುದುಚೇರಿಯನ್ನು ಪ್ರವೇಶಿಸಿದರು. ಅಲ್ಲಿಗೆ ಅವರ ಬಾಹ್ಯ ಜೀವನದ ಲೌಕಿಕ ಸಂಘಟನೆಗಳ ಚರಿತ್ರೆಗೆ ತೆರೆಬಿದ್ದಿತು. ಮುಂದಿನದೆಲ್ಲವೂ ಅವರ ಆಂತರಿಕ ಜೀವನ. ಒಮ್ಮೆ ಪುದುಚೇರಿಯನ್ನು ಪ್ರವೇಶಿಸಿದವರು ಮತ್ತೆಂದೂ ಅಲ್ಲಿಂದ ಹೊರಗೆ ಬರಲಿಲ್ಲ. ಸುಮಾರು ನಲವತ್ತಕ್ಕೂ ಹೆಚ್ಚು ವರ್ಷಗಳ ಕಾಲದ ಆ ಸಮಯದಲ್ಲಿ ಪುದುಚೇರಿಯನ್ನು ಯೋಗಭೂಮಿಯಾಗಿ ಪರಿವರ್ತಿಸಿದರು. ತಾನು ಕಂಡ ಬೆಳಕನ್ನು ಜಗತ್ತಿಗೂ ಕಾಣಿಸುವುದು ಅವರ ಗುರಿಯಾಯಿತು. ಶ್ರೀಅರ ವಿಂದರು ಪಾಂಡಿಚೇರಿಯ ಪುಟ್ಟ ಕೋಣೆಯೊಳಗೆ ಕುಳಿತಿದ್ದರೂ ಅವರ ಚೇತನ ಇಡೀ ಜಗತ್ತನ್ನು ವ್ಯಾಪಿಸಿತು.

ಮುಂದೆ ರಾಷ್ಟ್ರಕವಿ ಎನಿಸಿದ ತಮಿಳುನಾಡಿನ ಸುಬ್ರ ಹ್ಮಣ್ಯ ಭಾರತಿ ಅವರೂ ಸೇರಿದಂತೆ ಅನೇಕ ಮಹಾ ಮಹಿಮರು ಪುದುಚೇರಿಯ ಆಶ್ರಮದಲ್ಲಿ ಕಾಲ ಕಳೆಯುತ್ತಾರೆ. ಫ್ರೆಂಚ್‌ ಅಧಿಕಾರಿಯೊಬ್ಬರ ಪತ್ನಿಯಾದ ಮಿರಾ ರಿಚರ್ಡ್‌ ಮೊದಲಿಂದಲೂ ಆಧ್ಯಾತ್ಮಿಕ ತುಡಿತವಿದ್ದವರು. ಯೋಗಿ ಅರವಿಂದರ ವ್ಯಕ್ತಿತ್ವಕ್ಕೆ, ವಿಚಾರಗಳಿಗೆ ಮಾರು ಹೋಗಿ ಅವರಲ್ಲಿ ತಮ್ಮ ಗುರುವನ್ನು ಕಂಡುಕೊಂಡರು. ಸಂಪೂರ್ಣ ಭಾರತೀಯ ನಾರಿಯಾಗಿ ಬದಲಾದರು, ಆಶ್ರಮದ ಶ್ರೀಮಾತೆಯಾದರು.

ಸಾಹಿತ್ಯ ಸಾಗರ
ಶ್ರೀ ಅರವಿಂದರ ಗ್ರಂಥಗಳ ಸಂಖ್ಯೆ ಬಹಳ ದೊಡ್ಡ ದಿದೆ, ಮಾತ್ರವಲ್ಲ ಅವುಗಳ ವಿಷಯದ ಆಳವೂ ಅಷ್ಟೇ ವ್ಯಾಪಕವಾದುದು. ತತ್ತ್ವ ಜ್ಞಾನ, ದರ್ಶನ, ಯೋಗ, ಧರ್ಮ, ಸಂಸ್ಕೃತಿ, ನಾಗರಿಕತೆ, ಶಿಲ್ಪ, ಸಾಹಿತ್ಯ, ಸಂಗೀತ, ಚಿತ್ರಕಲೆ ಮುಂತಾದ ಎಲ್ಲ ವಿಚಾರಗಳಲ್ಲಿಯೂ ತಮಗಿದ್ದ ಅಪಾರ ಪಾಂಡಿತ್ಯವನ್ನು ಲೇಖನ, ಉಪನ್ಯಾಸಗಳ ಮೂಲಕ ಜಗತ್ತಿಗೆ ನೀಡಿದರು. ಅವರ ವಿಚಾರಗಳು ಸುಮಾರು ಹದಿನಾರು ಸಾವಿರ ಪುಟ ಗಳಿಗಿಂತಲೂ ಮಿಗಿಲಾದ ಕ್ಷೀರಸಾಗರವೇ ಸರಿ. ಗೀತಾ ಪ್ರಬಂಧಗಳು, ಯೋಗಸಮನ್ವಯ, ದಿವ್ಯಜೀವನ, ಸಾವಿತ್ರಿ ಇವು ಶ್ರೀ ಅರವಿಂದರ ಕೆಲವು ಪ್ರಮುಖ ಕೃತಿಗಳು.

ಒಂದು ಸಂಕಲ್ಪ ಅವರರಿಯದಂತೆಯೇ ಅವರನ್ನ ರೂಪಿಸಿಕೊಂಡು ಬಂದಿತು. ಶ್ರೀ ಅರವಿಂದರು ಮಹಾ ಯೋಗಿಯಾಗಬೇಕೆಂಬುದು, ಆಧ್ಯಾತ್ಮಿಕ ಸಾಧನೆ ಯಲ್ಲಿ ಯುಗಪ್ರವರ್ತಕ ಶಕ್ತಿಯಾಗಬೇಕೆಂಬುದು ಅದರ ಇಚ್ಛೆಯಾಗಿತ್ತು. ಆ ಗುಪ್ತಗಾಮಿನಿ ಅಂತರ್ವಾಣಿಯ ರೂಪದಲ್ಲಿ ಶ್ರೀ ಅರವಿಂದರನ್ನು ಪಾಂಡಿಚೇರಿಯ ಕಡೆ ಸೆಳೆದುಕೊಂಡು ಬಂತು. ಶ್ರೀ ಅರವಿಂದರು ಮಹಾಯೋಗಿಯಾಗಿ ಮಾತ್ರವಲ್ಲ ಜಗತ್ತಿನ ಹಿತಕ್ಕಾಗಿ ಸರ್ವವನ್ನೂ ಸಮರ್ಪಿಸಲು ಮಹಾವ್ಯಕ್ತಿಯೂ ಆದರು. ಮಾನವ ಕುಲವನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಬೆಳಕಿನ ಕಿರಣವಾದರು. ಮಾನವಕುಲ ವಿಕಾಸ ಮಾರ್ಗದಲ್ಲಿ ಮುಂದುವರಿದಂತೆಲ್ಲ ಅವರು ಕಂಡ ಕಾಣ್ಕೆ, ನಡೆದ ಹೆಜ್ಜೆ, ಏರಿದ ಎತ್ತರಗಳು ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತವೆ. ನಾವು ಆ ದಿಕ್ಕಿನತ್ತ ಇಡುವ ಒಂದೊಂದು ಹೆಜ್ಜೆಯೂ ಸಾರ್ಥಕವಾದ ಹೆಜ್ಜೆಯಾಗುತ್ತದೆ. ಯೋಗಿ ಅರವಿಂದರಿಗೆ ನಾವು ಅರ್ಪಿಸುವ ಗೌರವದ ಕಾಣಿಕೆಯಾಗುತ್ತದೆ.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅಲ್ಪಸಂಖ್ಯಾಕ ವರ್ಗದ (ಮುಸ್ಲಿಂ, ಜೈನರು, ಪಾರ್ಸಿ, ಸಿಕ್ಖ್, ಕ್ರೈಸ್ತರು, ಬೌದ್ಧರು ಆರ್ಥಿಕ ದುರ್ಬಲರಾದವರು) ಕುಲಕಸುಬುದಾರರಿಗೆ ತರಬೇತಿ ನೀಡಿ, ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ ವೃದ್ಧಿಸಿಕೊಂಡು ಅದೇ ಕಸುಬನ್ನು ಮುಂದುವರಿಸಲು ಅಥವಾ ಸಣ್ಣ ವ್ಯಾಪಾರ ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸುವ ಸಲುವಾಗಿ ನಿಗಮದಿಂದ ಕಡಿಮೆ ಬಡ್ಡಿದರದಲ್ಲಿ 25,000 ರಿಂದ 50,000 ರೂ. ವರೆಗೆ ಸಾಲವನ್ನು ಸೌಲಭ್ಯ ಕಲ್ಪಿಸಲಾಗುತ್ತದೆ. ಶೇ.50ರಷ್ಟು ಸಾಲ 36 ತಿಂಗಳಲ್ಲಿ ಫ‌ಲಾನುಭವಿಯು ಮರುಪಾವತಿ ಮಾಡಿದಲ್ಲಿ ಉಳಿದ ಶೇ.50ರಷ್ಟು ಹಣವನ್ನು ಬ್ಯಾಕ್‌ಎಂಡ್‌ ಸಹಾಯಧನವನ್ನಾಗಿ ಪರಿಗಣಿಸಲಾಗುತ್ತದೆ. 36 ತಿಂಗಳೊಳಗೆ ಮರುಪಾವತಿ ಮಾಡಲು ವಿಫ‌ಲವಾದಲ್ಲಿ ಶೇ.50ರಷ್ಟು ಬ್ಯಾಕ್‌ಎಂಡ್‌ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ.

ಪ್ರಕಾಶ್‌ ಮಲ್ಪೆ

ಟಾಪ್ ನ್ಯೂಸ್

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ABV-Modi

A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಭದ್ರ ಬುನಾದಿ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.