ಭಕ್ತರ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ
ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ, ಮಾಲೂರು, ಕೋಲಾರ ಜಿಲ್ಲೆ
Team Udayavani, Mar 28, 2022, 6:10 AM IST
ಏನೇನು ಬದಲಾವಣೆ?
ಭಕ್ತರಿಗಾಗಿ ವಸತಿ ಗೃಹಗಳು, ನೀರಿನ ಸೌಲಭ್ಯ, ಅನ್ನಛತ್ರ ಭವನ, ಭಕ್ತರು ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಲ್ಲಲು ಸೂಕ್ತ ನೆರಳಿನ ವ್ಯವಸ್ಥೆ.
ವಿಮಾನ ಗೋಪುರ ಕಾಮಗಾರಿ ಪ್ರಗತಿಯಲ್ಲಿ
ಆಂಧ್ರದ ತಿರುಮಲೆಯಂತೆ ಖ್ಯಾತಿ ಗಳಿಸಿರುವ ಇನ್ನೊಂದು ಯಾತ್ರಾ ಸ್ಥಳವೆಂದರೆ ಅದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ. ದೇಗುಲ ಭೂಮಿ ತೆರವು ಮಾಡಿ, ಅಭಿವೃದ್ಧಿ ಕಾರ್ಯಗಳು ಆರಂಭವಾಗಿವೆ. ಆ ಪೈಕಿ ಕಳೆದ ಹತ್ತಾರು ವರ್ಷಗಳಿಂದ ಅಗಬೇಕಾಗಿದ್ದ ದೇವಾಲಯ ಸುತ್ತಲಿನ ಕಾಂಪೌಂಡ್ ಗೋಡೆ ಕಾಮಗಾರಿ ಆರಂಭವಾಯಿತಾದರೂ ಅನುದಾನದ ಕೊರತೆಯಿಂದ ನಿಂತ ನೀರಾಗಿದೆ. ದೇವಾಲಯದ ಮುಂಭಾಗದಲ್ಲಿ 108 ಅಡಿಗಳ ವಿಮಾನ ಗೋಪುರ ಕಾಮಗಾರಿಯು ಸ್ಥಳೀಯ ಶಾಸಕರ ಉಸ್ತುವಾರಿಯಲ್ಲಿ ಪ್ರಗತಿಯ ಹಂತದಲ್ಲಿದೆ.
ಅನುದಾನದ ಅಗತ್ಯವಿದೆ
ದೇವಾಲಯ ಗರ್ಭಗುಡಿಯು ಶಿಥಿಲವಾಗಿರುವ ಬಗ್ಗೆ ವರದಿ ಆಧರಿಸಿದ ಧಾರ್ಮಿಕ ದತ್ತಿ ಪೀಠವು ಸಂಪೂರ್ಣ ಪರಿಶೀಲನೆ ನಡೆಸಿತ್ತಾದರೂ ಯಾವುದೇ ಆದೇಶ ನೀಡದೆ ಮೌನವಾಗಿದೆ. 108 ಅಡಿಗಳ ವಿಮಾನ ಗೋಪುರ 28 ಕೋಟಿ ರೂ. ತಡೆಗೋಡೆ ನಿರ್ಮಾಣದ ಜತೆಗೆ ಭಕ್ತರೇ ನೀಡಿರುವ ಅನ್ನದಾನ ಛತ್ರದ 2.37 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿ, ದೇಗುಲ ಹುಂಡಿ ಹಣದಲ್ಲಿ ನಡೆಯುತ್ತಿದೆ. ಸರ್ಕಾರವು ವಿಶೇಷ ಅನುದಾನ ಅಥವಾ ದೇವಾಲಯ ಹುಂಡಿ ಹಣ, ಅನ್ನದಾನದ ಛತ್ರದ ಹಣದಲ್ಲಿಯಾದರೂ ಮೂಲ ಸೌಲಭ್ಯ ಕಲ್ಪಿಸಿದಲ್ಲಿ ರಾಜ್ಯದಲ್ಲಿಯೇ ಮಾದರಿ ಯಾತ್ರ ಸ್ಥಳ ಆಗುವುದರಲ್ಲಿ ಯಾವುದೇ ಸಂದೇಹವಿ ಲ್ಲ. ದೇವಾಲಯ ಸುತ್ತಲೂ ಇರುವ 16 ಎಕರೆ ಜಾಗದಲ್ಲಿ ಧಾರ್ಮಿಕ ಮಂದಿರಗಳು ಪ್ರವಚನ ಆಲಯಗಳು, ಕಲ್ಯಾಣ ಮಂಟಪಗಳನ್ನು ನಿರ್ಮಿಸಲು ಅವಕಾಶವಿದ್ದು, ಇದೆಲ್ಲ ದೇವಾಲಯದ ಅರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.