Uniqueness,Brotherhood ಮಾನವೀಯತೆಯ ಪ್ರತೀಕ ಶ್ರೀರಾಮ

Team Udayavani, Jan 8, 2024, 5:00 AM IST

1-sds-dsad

ಪ್ರಭು ಶ್ರೀರಾಮನನ್ನು ಇಡೀ ಜಗತ್ತಿಗೆ ಪ್ರಜ್ವಲ ಬೆಳಕಿನಂತೆ ಪರಿಚಯ ಮಾಡಿಕೊಟ್ಟಂತಹ ವಾಲ್ಮೀಕಿ ಮಹಾಕವಿ ಅವರು ರಚಿಸಿದ ಮಹಾಕಾವ್ಯ ರಾಮಾಯಣ. ಇದರ ಪ್ರಮುಖ ಉದ್ದೇಶವೇ ಮಾನವ ಸಂಕುಲಕ್ಕೆ ನೆಲದ ಬದುಕಿನ ಅನನ್ಯತೆ, ಸಹೋದರತೆ, ಮಾನವೀಯತೆ, ತ್ಯಾಗ ಮುಂತಾದ ಮಹಾನ್‌ ಗುಣಗಳನ್ನು ಅರ್ಥೈಸುವ ಪ್ರಯತ್ನವಾಗಿದೆ. ರಾಮಾಯಣದ ನಾಯಕ ರಾಮನನ್ನು ಪರಿಪೂರ್ಣತೆಯ ರೂಪಕವಾಗಿ ಚಿತ್ರಿಸಲು ಬಯಸಿದ ವಾಲ್ಮೀಕಿ ಅವರು ರಾಮನ ಪಾತ್ರವನ್ನು ಆದರ್ಶತೆಯ ಪ್ರತೀಕದ ಉನ್ನತಿಯ ರೂಪವಾಗಿಸಲು ಬಯಸಿದ್ದಾರೆ. ಅಂತೆಯೇ ಶ್ರೀರಾಮಚಂದ್ರ ಪ್ರಭು ಇಡೀ ಮಾನವಕುಲಕ್ಕೆ ಬೆಳಕು ನೀಡುವಂತಹ ಮರ್ಯಾದಾ ಪುರುಷೋತ್ತಮರು.

ಈ ನೆಲದ ಬದುಕಿನಲ್ಲಿ ಪುರುಷನೆಂದರೆ ಹೀಗಿರಬೇಕು ಎನ್ನುವಂತಹ ಅದಮ್ಯವಾದ ಪರಿಕಲ್ಪನೆಯಾಗಿ ರಾಮನ ಪಾತ್ರ ಚಿತ್ರಣಗೊಂಡಿದೆ. ರಾಮನ ಆದರ್ಶ ಸೂರ್ಯಚಂದ್ರರು ಇರುವ ತನಕ ಪ್ರಸ್ತುತವಾಗಿರುತ್ತದೆ ಎನ್ನುವುದಕ್ಕೆ ಜೀವನಗಾಥೆಯೇ ಸಾಕ್ಷಿ. ಕೂಡು ಕುಟುಂಬದ ಈ ನೆಲದ ನಂಬಿಕೆಯ ಪ್ರತಿರೂಪವಾದ ದಶರಥನ ಹಿರಿಯ ಮಗನಾದ ರಾಮ ಸಕಲ ಗುಣ ಸಂಪನ್ನನಾಗಿ ಬದುಕುವುದು ತನ್ಮೂಲಕ ಹೀಗೂ ಬದುಕಲು ಸಾಧ್ಯವೆನ್ನುವುದನ್ನು ಅರಿವು ಮಾಡಿಸುವಂತದ್ದು. ಶ್ರೀರಾಮಚಂದ್ರ ಪ್ರಭು ಬಾಲ್ಯದಿಂದಲೇ ಆದರ್ಶ ಮಗನಾಗಿ ಬೆಳೆದವರು. ಶ್ರೀರಾಮ ಬೆಳೆಯುತ್ತಲೇ ಆದರ್ಶ ಸಹೋದರನಾಗಿ, ಆದರ್ಶ ಪ್ರಜೆಯಾಗಿ, ಸಮೃದ್ಧಿಯ ಸಮಾಜದ ಪ್ರಜೆಯಾಗಿ ಕಾಣಿಸಿಕೊಳ್ಳುವರು.

ರಾಮ ತನ್ನ ವಿನಯ, ವಿವೇಕ ಮತ್ತು ಅಖಂಡ ಜೀವನಪ್ರೀತಿಯ ಕಾರಣದಿಂದಲೇ ಇಡೀ ನಾಡಿನ ಪ್ರೀತಿಯ ಆಸ್ತಿಯಂತೆ ಬದುಕಿದವರು. ಸಾವಿರಾರು ವರ್ಷಗಳ ನಂತರವೂ ಇರುವಂತಹವರು. ಮುಂದೆಯೂ ಶ್ರೀರಾಮಚಂದ್ರ ಪ್ರಭುವಿನ ಹೆಸರು ಇದ್ದೇ ಇರುತ್ತದೆ. ಅಂತಹ ಮಾನವೀಯ, ಆದರ್ಶದ ಪ್ರತೀಕವೇ ಶ್ರೀರಾಮ. ಬಾಲ್ಯದಲ್ಲೇ ವಿಶ್ವಾಮಿತ್ರರೊಂದಿಗೆ ಮೊದಲಿಗೆ ಅರಣ್ಯ ಪ್ರವೇಶ ಮಾಡಿದಾಗ ದುಷ್ಟಶಿಕ್ಷಣ, ಶಿಷ್ಟರಕ್ಷಣೆಯ ಪಾಠವ ಕಲಿತು ತನ್ನ ಶೌರ್ಯವನ್ನು ಒರೆ ಹಚ್ಚುತ್ತಾರೆ. ಅಹಲೆÂಯ ಶಾಪ ವಿಮೋಚನೆಗೂ ಕಾರಣವಾಗುವ ಮೂಲಕ ತಾನು ಜಗದೆಲ್ಲ ತಾಯಂದಿರ ಹರಕೆಯ ಮಗುವಾಗುತ್ತಾನೆ. ಇಲ್ಲಿಂದಲೇ ವಿದೇಹಕ್ಕೆ ತೆರಳಿ ಶಿವಧನುಸ್ಸು ಮುರಿದು ಮಾತೆ ಸೀತೆಯನ್ನು ವರಿಸುತ್ತಾರೆ. ನಿರಂತರ ಕ್ರಿಯಾಶೀಲತೆಯ ಪಾತ್ರವಾಗುವ ರಾಮ ವ್ಯಕ್ತಿಯೊಬ್ಬ ತನ್ನ ವ್ಯಕ್ತಿತ್ವದ ಶ್ರಮ ಮತ್ತು ಬದ್ಧತೆಯ ಕಾರಣಕ್ಕೆ ಎಲ್ಲವನ್ನೂ ಸಾ ಧಿಸಬಹುದೆ ಎಂಬ ಸಾಧ್ಯತೆಗೆ ಬಹು ದೊಡ್ಡ ಉದಾಹರಣೆ. ರಾಮಚಂದ್ರ ಪ್ರಭುವಿನ ಪಟ್ಟಾಭಿಷೇಕ ಯೋಜನೆಗೆ ಕೈಕೇಯಿ ಅಡ್ಡವಾದಾಗ ನಿರ್ಲಿಪ್ತವಾಗಿಯೇ ವನವಾಸವನ್ನು ಒಪ್ಪಿಕೊಂಡು ಬದುಕಿನ ಎಲ್ಲಾ ಸವಾಲುಗಳಿಗೆ ಸಿದ್ಧನಾಗುತ್ತಾರೆ. ತನ್ಮೂಲಕ ಪತ್ನಿ ಸೀತಾಮಾತೆ, ತಮ್ಮ ಲಕ್ಷ್ಮಣರೊಂದಿಗೆ ಕಾನನದ ದಟ್ಟ ಅನುಭವಗಳಿಗೂ ಶ್ರೀರಾಮ ತನ್ನನ್ನು ಪ್ರೀತಿಯಿಂದಲೇ ಒಡ್ಡಿಕೊಳ್ಳುತ್ತಾರೆ. ಸ್ವತಃ ಸಹೋದರ ಭರತನೇ ಬಂದು ಅಣ್ಣನನ್ನು ಅಯೋಧ್ಯೆಗೆ ಹಿಂದಿರುಗಲು ಒತ್ತಾಯಿಸುವಾಗಲೂ ತಂದೆಗೆ ಕೊಟ್ಟ ಮಾತಿಗೆ ಬದ್ಧವಾಗುವ ಮೂಲಕ ಮಾತು ಮತ್ತು ನಡತೆ ಬಗೆಗೆ ಇರಬೇಕಾದ ಘನತೆಯ ತೋರಿಸಿಕೊಟ್ಟವರು. ಪಿತೃವಾಕ್ಯ ಪರಿಪಾಲಕರಾಗಿ ರಾಮನ ಆದರ್ಶ ಸಕಲ ಕಾಲಕ್ಕೂ ನಿದರ್ಶನ. ಅಯೋಧ್ಯೆಯಲ್ಲಿನ ಮರ್ಯಾದಾ ಪುರುಷೋತ್ತಮನ ಭವ್ಯ, ದಿವ್ಯ, ರಾಮಮಂದಿರ ಅಗಣಿತ ಭಕ್ತ ಸಂಕುಲದ ಜೀವನದ ಮಾರ್ಗದರ್ಶನದ ಭವ್ಯತಾಣವಾಗಲಿ…

ಶ್ರೀ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಹರಿಹರ

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.