ಮರಡೋನಾ: ಅನಂತದಲ್ಲಿ ನಿರಂತರ ಓಡುವ ಚೆಂಡು
Team Udayavani, Nov 27, 2020, 6:28 AM IST
ಫುಟ್‌ಬಾಲ್ ಜಗತ್ತಿನಲ್ಲಿ ಪ್ರಶ್ನೆಯೊಂದು ಉಳಿದೇ ಹೋಗಿದೆ. ಬಹುಶಃ ಇದು ಎಂದೂ ಇತ್ಯರ್ಥವಾ ಗದ ಪ್ರಶ್ನೆ! ಎಲ್ಲಿಯವರೆಗೆ ಡೀಗೊ ಮರಡೋನಾ ಮತ್ತು ಪೀಲೆ ಎಂಬ ಹೆಸರು ಕೇಳಿ ಬರುತ್ತದೋ ಅಲ್ಲಿಯವರೆಗೆ, ಈ ವಾಗ್ವಾದವೂ ಜೀವಂತವಾ ಗಿಯೇ ಇರುತ್ತದೆ. ಬುಧವಾರ ರಾತ್ರಿ ಅರ್ಜೆಂಟೀ ನಾದ ಡೀಗೊ ಮರಡೋನಾ ಹೃದಯಸ್ತಂಭನ ದಿಂದ ಈ ಜಗತ್ತನ್ನು ತೊರೆದಾಗ, ಎಲ್ಲ ಬೇಸರಗಳ ನಡುವೆಯೇ ಮತ್ತೂಮ್ಮೆ ಈ ಪ್ರಶ್ನೆಯನ್ನು ಕೇಳಿಕೊಳ್ಳ ಬೇಕಾಗಿದೆ. ಸತ್ಯವೇನು ಗೊತ್ತಾ? ಈ ಇಬ್ಬರ ನಡುವೆ ಶ್ರೇಷ್ಠರೊಬ್ಬರ ಆಯ್ಕೆ ಮಾಡುವುದು ಮುಟಾuಳತನ. ಒಂದೇ ಗಾತ್ರ, ಒಂದೇ ತೂಕ, ಒಂದೇ ಹೊಳಪಿರುವ ವಜ್ರದ ಎರಡು ಹರಳುಗಳ ನಡುವೆ ನೀವು ಯಾವುದನ್ನು ಆಯ್ದುಕೊಳ್ಳುತ್ತೀರಿ?
ಬಹುಶಃ ಈ ಹೋಲಿಕೆಯೇ ತಪ್ಪು ಎಂದು ಕೆಲವರು ಹೇಳಬಹುದು. ಇಬ್ಬರ ಸಾಧನೆ, ಕಾಲಘಟ್ಟ, ಆಟದ ರೀತಿ ನೋಡಿದಾಗ ಅದನ್ನು ಹೌದೂ ಎಂದೂ ಹೇಳ ಬಹುದು. ಆದರೆ…ಇಬ್ಬರೂ ಮೈದಾನಕ್ಕಿಳಿದ ವೇಳೆ ಅವರ ಕಾಲಿಗೆ ಚೆಂಡು ಸಿಲುಕಿ ದಾಗ, ರೂಪುಗೊಳ್ಳುತ್ತಿದ್ದ ವರ್ಣ ಮಯ ಚಿತ್ತಾರಗಳಿವೆಯಲ್ಲ, ಅದರಿಂದ ಸಿದ್ಧ ಗೊಳ್ಳುತ್ತಿದ್ದ ಕಲಾಕೃತಿಗಳಿವೆಯಲ್ಲ, ಅವುಗಳ ಪೈಕಿ ಯಾವುವನ್ನು ನೀವು ಸುಂದರ, ಅತೀಸುಂದರ ಎನ್ನುತ್ತೀರಿ? ಭಾರತೀಯರಿಗೆ ಈ ಪ್ರಶ್ನೆ ಸರಿಯಾಗಿ ಅರ್ಥವಾಗುವುದು ಸಚಿನ್ ತೆಂಡುಲ್ಕರ್ ಅಥವಾ ವಿರಾಟ್ ಕೊಹ್ಲಿ ನಡುವೆ ಹೋಲಿಕೆಗಳು ಬಂದಾಗ. ಅದಕ್ಕೂ ಸರಿಯಾಗಿ ಅರ್ಥವಾಗುವುದು ತೆಂಡು ಲ್ಕರ್‌ರನ್ನು ಬ್ರಾಡ್ಮನ್‌ಗೆ ಹೋಲಿಸಿದಾಗ. ಸಚಿನ್ ಮತ್ತು ಡೊನಾಲ್ಡ್ ಬ್ರಾಡ್ಮನ್ ನಡುವೆ ಶ್ರೇಷ್ಠರು ಯಾರು ಎಂಬಂತಹದ್ದೇ ಇಬ್ಬಂದಿ ಪೀಲೆ ಮತ್ತು ಡೀಗೊ ಮರಡೋನಾ ನಡುವೆ ಇದೆ.
ಬ್ರಝಿಲ್‌ನ ಪೀಲೆಗೆ 80 ವರ್ಷ, ಇನ್ನೂ ಬದುಕಿದ್ದಾರೆ. ಅರ್ಜೆಂಟೀ ನಾದ ಮರಡೋನಾ ಎಂಬ ಫುಟ್‌ಬಾಲ್‌ಗೆ 60 ವರ್ಷ ತುಂಬಿದ್ದಾಗ ವಿಧಿಯೆಂಬ ಸ್ಟ್ರೈಕರ್, ಅನಾರೋಗ್ಯವೆಂಬ ಪಾಸ್ ಪಡೆದು ಜೋರಾಗಿ ಒದ್ದಿದೆ. ಒಮ್ಮೆಗೇ ಮರಡೋನಾ ಅನಂತವೆಂಬ ಗೋಲುಪೆಟ್ಟಿಗೆಯೊಳಗೆ ಸೇರಿ ಹೋಗಿದ್ದಾರೆ. ಮರೆಯದಿರಿ, ಈ ಗೋಲು ಪೆಟ್ಟಿಗೆಗೆ ಕಂಬಿಗಳಿವೆ, ಬಲೆಯೇ ಇಲ್ಲ. ಹಾಗಾಗಿ ಅನಂತ ಫುಟ್‌ಬಾಲ್ ಜಗತ್ತಿನಲ್ಲಿ ನಿರಂತರವಾಗಿ ಸಾಗುತ್ತಲೇ ಇರುತ್ತಾರೆ. ಬಹುಶಃ ಅವರೊಂದು ಎಂದೆಂದೂ ಅಳಿಯದ ಅದ್ಭುತ ಇತಿಹಾಸ. ಮರಡೋನಾ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದು 1977, ಫೆ.27ರಂದು ಹಂಗೇರಿ ವಿರುದ್ಧ. ಆಗವರಿಗೆ ಕೇವಲ 16 ವರ್ಷ. 1978ರಲ್ಲಿ ವಿಶ್ವಕಪ್ ಇತ್ತು. 17 ವರ್ಷದ ಹುಡುಗ ಅಂತಾರಾಷ್ಟ್ರೀಯ ತಂಡಕ್ಕೆ ಸೂಕ್ತ ಅಲ್ಲ ಎಂದು ತರಬೇತುದಾರರು ಪರಿಗಣಿಸಲಿಲ್ಲ. ಆದರೆ ಮುಂದಿನ ವರ್ಷ ಸ್ಕಾಟ್‌ಲೆಂಡ್ ವಿರುದ್ಧ ಹಿರಿಯರ ತಂಡದ ಪರ ಮೊದಲ ಗೋಲು ಗಳಿಸಿದರು. ಅಲ್ಲಿಂದ ಒಂದು ಸುವರ್ಣಯುಗ ಆರಂಭವಾಯಿತು. ಪೀಲೆಯೂ 16 ವರ್ಷ 9 ತಿಂಗಳಿಗೆ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನ ಶುರು ಮಾಡಿದರು. ಎದುರಾಳಿ ತಂಡ ಅರ್ಜೆಂಟೀನಾ. ಇವನ್ನೆಲ್ಲ ಕಾಕತಾಳೀಯ ಎನ್ನು ತ್ತೀರಾ ಅಥವಾ ಹೀಗೆಯೇ ಒಂದು ಘಟನೆ ತಳ್ಳಿ ಹಾಕುತ್ತೀರಾ?
ಮರಡೋನಾ ಅರ್ಜೆಂಟೀನಾದ ಪರ ಒಟ್ಟು 91 ಪಂದ್ಯವಾಡಿ 34 ಗೋಲು ಬಾರಿಸಿದ್ದಾರೆ. ಕೆಲ ವೊಮ್ಮೆ ಮಧ್ಯಕ್ಷೇತ್ರೀಯ ಆಟಗಾರನಾಗಿ, ಬಹು ತೇಕ ಬಾರಿ ಮುನ್ಪಡೆ ಆಟಗಾರನಾಗಿ ನುಗ್ಗುತ್ತಿದ್ದ ಅವರು ಗಳಿಸಿದ್ದು ಅಷ್ಟೇ ಗೋಲಾ ಎಂದು ಕೇಳಬೇಡಿ. ಫುಟ್‌ಬಾಲ್‌ನಲ್ಲಿ ಒಬ್ಬ ಆಟಗಾರನ ಶ್ರೇಷ್ಠತೆಯನ್ನು ಅಳೆಯುವುದು ಅವರು ಬಾರಿಸಿದ ಗೋಲಿನ ಮೂಲಕವಲ್ಲವೇ ಅಲ್ಲ. ಪಂದ್ಯದ ವೇಳೆ ಮಾಡುವ ಜಾದೂವಿನಿಂದ, ಮೂಡಿಸುವ ಪ್ರಭಾವದಿಂದ, ಸೃಷ್ಟಿಸುವ ಗೋಲು ಗಳ ಅವಕಾಶ ಗಳಿಂದ. ಒಬ್ಬ ಶ್ರೇಷ್ಠ ಆಟಗಾರ ತಾನು ಗೋಲು ಬಾರಿಸದಿದ್ದರೂ, ತನ್ನ ಅಸೀಮ ಪ್ರತಿಭೆಯಿಂದ ಅಗಣಿತ ಸಂಖ್ಯೆಯಲ್ಲಿ ಗೋಲು ಹೊಡೆಯುವ ಅವಕಾಶಗಳನ್ನು ಸೃಷ್ಟಿಸುತ್ತಾನೆ. ಇದರ ಲಾಭ ಪಡೆದು ಉಳಿದವರು ತಂಡವನ್ನು ದಡ ಸೇರಿಸುತ್ತಾರೆ.
ಮರಡೋನಾ ಒಟ್ಟು ನಾಲ್ಕು ವಿಶ್ವಕಪ್ ಆಡಿ ದರು. ಮೊದಲ ವಿಶ್ವಕಪ್ ಸ್ಪೇನ್‌ನಲ್ಲಿ 1982ರಲ್ಲಿ ನಡೆಯಿತು. ಅದರ ಮುಂದಿನ ವಿಶ್ವಕಪ್ 1986ರಲ್ಲಿ ಮೆಕ್ಸಿಕೋ ದಲ್ಲಿ ನಡೆಯಿತು. ತಾವಾ ಡಿದ ಎರಡನೇ ಕೂಟದಲ್ಲೇ ನಾಯಕರಾದರು ಮಾತ್ರ ವಲ್ಲ ತಂಡವನ್ನು ಗೆಲ್ಲಿಸಿಯೇ ಬಿಟ್ಟರು. 1990ರಲ್ಲಿ ಅವರ ನೇತೃತ್ವದ ತಂಡ ಫೈನಲ್‌ವರೆಗೆ ಸಾಗಿ ಅಲ್ಲಿ ಸೋಲನುಭವಿಸಿತು. ಅಮೆರಿಕದಲ್ಲಿ ನಡೆದ 1994ರ ವಿಶ್ವಕಪ್ ಮರಡೋನಾ ಅವರ ದುರಂತ ಅಂತ್ಯಕ್ಕೆ ಮುನ್ಸೂಚನೆ ಎಂದೇ ಹೇಳಬಹುದು. ಅಲ್ಲಿ ಅವರು ಆಡಿದ್ದು ಕೇವಲ ಎರಡು ಪಂದ್ಯ. ಗ್ರೀಸ್ ವಿರುದ್ಧ ಆಡಿ ಒಮ್ಮೆ ಗೋಲು ಬಾರಿಸಿದರು. ಮುಂದೆ ನೈಜೀರಿಯ ವಿರುದ್ಧ ಆಡಿದ ಅನಂತರ ಉದ್ದೀಪನ ಸೇವನೆ ಪರೀಕ್ಷೆಯಲ್ಲಿ ವಿಫಲರಾಗಿ ಕೂಟದಿಂದಲೇ ಹೊರದಬ್ಬಲ್ಪಟ್ಟರು. ಅದೇ ಅವರ ಕೊನೆಯ ಪಂದ್ಯ. ತಮ್ಮ ಆತ್ಮಕಥೆಯಲ್ಲಿ ತಮ್ಮನ್ನು ಉದ್ದೀಪನದ ಬಲೆಗೆ ಬೀಳಿ ಸಿದ್ದು ಸ್ವತಃ ತಮ್ಮ ಖಾಸಗಿ ತರಬೇತುದಾರ ಎಂದು ಮರಡೋನಾ ಆರೋಪಿಸಿ ದ್ದರು. ಅಂತಹದ್ದೊಂದು ಬಲೆಯನ್ನು ಜತೆಗೆ ಹೊತ್ತುಕೊಂಡು ತಿರುಗಿದ್ದು ಯಾರು?
ಒಂದೇ ಫುಟ್‌ಬಾಲ್ ಜಗತ್ತಿನಲ್ಲಿ ಎರಡು ಅಸಾಮಾನ್ಯ ಪ್ರತಿಭೆಗಳು ತಮ್ಮ ಪ್ರಭೆಯನ್ನು ಹೊಮ್ಮಿಸಿವೆ. ಒಬ್ಬರ ಹೆಸರು ಪೀಲೆ, ಇನ್ನೊಬ್ಬರ ಹೆಸರು ಮರಡೋನಾ. ಈಗ ಹೇಳಿ, ಇಬ್ಬರ ನಡುವೆ ಅತಿ ಶ್ರೇಷ್ಠರು? ಅಮಾವಾಸ್ಯೆಯ ಕತ್ತಲಲ್ಲಿ ಧೋ ಎಂದು ಮಳೆ ಸುರಿಯುವಾಗ ಫಳಕ್ಕನೆ ಹೊಳೆಯುವ ಮಿಂಚು ಶ್ರೇಷ್ಠವಾ? ಅದರ ಬೆನ್ನಲ್ಲೇ ಕೇಳಿ ಬರುವ ಸಿಡಿಲಿನಂತಹ ಶಬ್ದ ಶ್ರೇಷ್ಠವಾ?
ಬದುಕು ಬದಲಿಸಿದ ಆ ಗಿಫ್ಟ್ !
ಅರ್ಜೆಂಟೀನಾದ ಬ್ಯೂನಸ್ ಐರಸ್‌ನ ಬಡ ಕುಟುಂಬದಲ್ಲಿ 8ನೇ ಮಗುವಾಗಿ ಮರಡೋನಾ ಜನಿಸಿದರು. 3 ವರ್ಷದ ಮಗುವಿದ್ದಾಗಲೇ ಅವರ ತಂದೆ ಒಂದು ಫುಟ್‌ಬಾಲ್ ಗಿಫ್ಟ್ ಕೊಟ್ಟಿದ್ದರು. ಆ ಚೆಂಡು ಪುಟ್ಟ ಹುಡುಗನ ಲೋಕವನ್ನೇ ಬದಲಿಸಲಿದೆ ಎಂಬ ಅಂದಾಜು ಯಾರಿಗೂ ಇರಲಿಲ್ಲ.
ತಮ್ಮ 8ನೇ ವಯಸ್ಸಿಗಾಗಲೇ ಮರಡೋನಾ ಫುಟ್‌ಬಾಲ್ ಕ್ಲಬ್‌ಗಳ ಗಮನ ಸೆಳೆಯುವ ಮಟ್ಟಕ್ಕೆ ಹೆಸರು ಮಾಡಿಬಿಟ್ಟರು. 10ನೇ ವಯಸ್ಸಿಗೆ ಲಾಸ್ ಸೆಬೊಲಿಟಾಸ್ ಎನ್ನುವ ಕಿರಿಯರ ತಂಡದ ನಾಯಕನಾದರು! ಆ ತಂಡದ ಕೋಚ್ ಅವರನ್ನು “ದ ಗೋಲ್ಡನ್ ಬಾಯ್’ ಎಂದು ಕರೆಯುತ್ತಿದ್ದರು!. ತಮ್ಮ ಜೀವಿತಾವಧಿಯಲ್ಲಿ ಮರಡೋನಾ 91 ಬಾರಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ ದ್ದಷ್ಟೇ ಅಲ್ಲದೇ, ಒಟ್ಟು 491 ವೃತ್ತಿಪರ ಪ್ರದರ್ಶನಗಳನ್ನೂ ನೀಡಿದ್ದರು. ತಮ್ಮ ದೇಶಕ್ಕೆ ಫುಟ್‌ಬಾಲ್ ವಿಶ್ವಕಪ್ ಅನ್ನೂ ತಂದುಕೊಟ್ಟರು.
ಪೀಲೆ ಹಾಗೂ ಮರಡೋನಾ…ಇವರಿಬ್ಬರಲ್ಲಿ ಯಾರು ಶ್ರೇಷ್ಠರು ಎಂಬ ಚರ್ಚೆಗಳು ನಡೆಯುತ್ತಲೇ ಬಂದಿವೆ. ಆದರೆ, ಅಮಾವಾಸ್ಯೆಯ ಕತ್ತಲಲ್ಲಿ ಧೋ ಎಂದು ಮಳೆ ಸುರಿಯುವಾಗ ಫಳಕ್ಕನೆ ಹೊಳೆಯುವ ಮಿಂಚು ಶ್ರೇಷ್ಠವಾ? ಅದರ ಬೆನ್ನಲ್ಲೇ ಕೇಳಿ ಬರುವ ಸಿಡಿಲಿನಂತಹ ಶಬ್ದ ಶ್ರೇಷ್ಠವಾ?
ಕಾಲ್ಚೆಂಡಿನ ಮಾಂತ್ರಿಕ
ಫುಟ್‌ಬಾಲ್ ಕ್ರೇಝ್ ಇಲ್ಲದ ಕಡೆಗಳಲ್ಲೂ ಕಾಲ್ಚೆಂಡಿನ ಹವಾ ಎಬ್ಬಿಸಿದ್ದು ಮರಡೋನಾ ಪಾಲಿನ ಹೆಗ್ಗಳಿಕೆ. ಮರಡೋನಾ ಆಟವನ್ನು ಕಾಣಲೆಂದೇ ತಾನು ಫುಟ್‌ಬಾಲ್ ನೋಡುತ್ತೇನೆ, ಇದರಿಂದಲೇ ತನಗೆ ಫುಟ್‌ಬಾಲ್ ಹುಚ್ಚು ಅಂಟಿಕೊಂಡಿತು ಎಂಬುದಾಗಿ ಸೌರವ್ ಗಂಗೂಲಿ ಸಹಿತ ಅನೇಕರು ಹೇಳಿರುವುದು ಇದಕ್ಕೆ ಉತ್ತಮ ನಿದರ್ಶನ. ಈ ಕಾರಣಕ್ಕಾಗಿ ಮರಡೋನಾ ನಿಜಕ್ಕೂ ಓರ್ವ ಮಾಯಗಾರ!
ಬಡ ಕುಟುಂಬದ ಸದಸ್ಯ: ಮರಡೋನಾ ಅವರ ಪೂರ್ತಿ ಹೆಸರು ಡೀಗೊ ಅರ್ಮಾಂಡೊ ಮರ ಡೋನಾ ಫ್ರಾಂಕೊ. ಬಡ ಕುಟುಂಬದ ಸದಸ್ಯ. 4 ಜನ ಅಕ್ಕಂದಿರ ಬಳಿಕ ಜನಿಸಿದ ಮೊದಲ ಗಂಡು ಇವರಾಗಿದ್ದರು. ಇವರಿಗೆ ಇಬ್ಬರು ತಮ್ಮಂದಿರೂ ಇದ್ದಾರೆ. ಕೇವಲ 5 ಅಡಿ, 5 ಇಂಚು ಎತ್ತರದ ಗಾತ್ರ. ಚೆಂಡಿನ ಮೇಲಿನ ಅವರ ದೂರದೃಷ್ಟಿ, ಪಾಸಿಂಗ್ ಮತ್ತು ಡ್ರಿಬ್ಲಿಂಗ್ ಅಸಾಮಾನ್ಯ ವಾಗಿತ್ತು. ಇದನ್ನು ಕಾಣುವುದೇ ಕಣ್ಣಿಗೊಂದು ಹಬ್ಬ!
ಆರ್ಜೆಂಟೀನಾದ ಜೂನಿಯರ್ ತಂಡದ ಮೂಲಕ 1976ರಲ್ಲಿ ರಾಷ್ಟ್ರೀಯ ತಂಡವನ್ನು ಮೊದಲ ಬಾರಿಗೆ ಪ್ರತಿನಿಧಿಸಿದರು. 5 ವರ್ಷಗಳ ಕಾಲ ಜೂನಿಯರ್ ತಂಡವನ್ನು ಪ್ರತಿನಿಧಿಸಿದ ಡೀಗೊ ಮರಡೋನಾ 167 ಪಂದ್ಯಗಳನ್ನಾಡಿ 115 ಗೋಲ್ ಬಾರಿಸಿದರು.
ಅಂತಾರಾಷ್ಟ್ರೀಯ ವೃತ್ತಿಜೀವನ: ಮರಡೋನಾ 1977ರಲ್ಲಿ ಸೀನಿಯರ್ ತಂಡ ಸೇರಿಕೊಂಡರು. ಹಂಗೇರಿ ವಿರುದ್ಧ ಮೊದಲ ಬಾರಿಗೆ ಕಣಕ್ಕಿಳಿದರು. ಆದರೆ 1978ರ ವಿಶ್ವಕಪ್ ತಂಡದಲ್ಲಿ ಅವಕಾಶ ಲಭಿಸಲಿಲ್ಲ. ಈ ಟೂರ್ನಿ ಅರ್ಜೆಂಟೀನಾದಲ್ಲೇ ನಡೆದಿತ್ತು. ಈ ವಿಶ್ವಕಪ್‌ನಲ್ಲಿ ಭಾಗವಹಿಸಲು ಇನ್ನೂ ಸಮರ್ಥನಾಗಿಲ್ಲ ಎಂಬುದು ಕೋಚ್ ತೀರ್ಮಾನ ವಾಗಿತ್ತು. ಆದರೆ 1979ರಲ್ಲಿ ಜಪಾನ್‌ನಲ್ಲಿ ನಡೆದ ಫಿಫಾ ವಿಶ್ವ ಯುವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಜತೆಗೆ ಅರ್ಜೆಂಟೀನಾವನ್ನು ಚಾಂಪಿ ಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾ ಗಿದ್ದರು. ಮುಂದಿನದು ಇತಿಹಾಸ.
1986ರ ಸ್ಮರಣೀಯ ವಿಶ್ವಕಪ್: 1986ರ ವಿಶ್ವಕಪ್ ಮರಡೋನಾ ಪಾಲಿಗೆ ಸರ್ವಶ್ರೇಷ್ಠ ವಾಗಿತ್ತು. ಸೆಮಿಫೈನಲ್‌ನಲ್ಲಿ ಬಲಾಡ್ಯ ಬೆಲ್ಜಿಯಂ ವಿರುದ್ಧ ಜೋಡಿ ಗೋಲು ಬಾರಿಸಿದ್ದ ಮರಡೋನಾ, ಫೈನಲ್‌ನಲ್ಲಿ ಪಶ್ಚಿಮ ಜರ್ಮನಿ ವಿರುದ್ಧ ಇತಿಹಾಸ ಬರೆದರು. 83ನೇ ನಿಮಿಷದಲ್ಲಿ ಪಂದ್ಯ 2-2 ಸಮಗೊಂಡಿದ್ದ ಸಂದರ್ಭದಲ್ಲಿ ಮರ ಡೋನಾ ಚಾಕಚಕ್ಯತೆಯಿಂದ ಗೋಲಿನ ಅವಕಾಶ ಸೃಷ್ಟಿಸಿ ಆರ್ಜೆಂಟೀನಾವನ್ನು ಚಾಂಪಿಯನ್ ಪಟ್ಟಕೇ ರಿಸಿದ್ದರು. ಜತೆಗೆ ಚಿನ್ನದ ಚೆಂಡನ್ನು ಪಡೆದರು.
ಇದೇ ಕೂಟದ ಇಂಗ್ಲೆಂಡ್ ಎದುರಿನ ಕ್ವಾರ್ಟರ್ ಫೈನಲ್‌ನಲ್ಲಿ ಹೊಡೆದ ಹ್ಯಾಂಡ್ ಗೋಲ್‌ನಿಂದ ಮರಡೋನಾ ಹೆಸರಿಗೆ ಮಸಿ ಅಂಟಿತಾದರೂ ಕೆಲವೇ ನಿಮಿಷಗಳಲ್ಲಿ “ಶತಮಾನದ ಗೋಲು’ ಬಾರಿಸಿ ಕಳಂಕವನ್ನು ನಿವಾರಿಸಿಕೊಂಡರು.
ಲೆಜೆಂಡ್ರಿ ಫುಟ್ಬಾಲಿಗರ ಮುನಿಸು
ಮರಡೋನಾ ನಿಧನಕ್ಕೆ ಮತ್ತೋರ್ವ ಲೆಜೆಂಡ್, ಬ್ರಝಿಲ್‌ನ ಪೀಲೆ ಸಂತಾಪ ವ್ಯಕ್ತಪ ಡಿಸಿದ್ದಾರೆ. ಗೆಳೆಯನೊಬ್ಬನನ್ನು ಈ ರೀತಿಯಾಗಿ ಕಳೆದುಕೊಂಡೆ ಎಂಬುದಾಗಿ ದುಃಖೀಸಿದ್ದಾರೆ. “ಒಂದು ದಿನ ನಾವಿಬ್ಬರೂ ಸೇರಿ ಆಗಸದಲ್ಲಿ ಚೆಂಡನ್ನು ಕಿಕ್ ಮಾಡೋಣ’ ಎಂಬುದಾಗಿ ಪೀಲೆ ಹೇಳಿದ್ದಾರೆ.
ಹಾಗೆ ನೋಡಿದರೆ ಮರಡೋನಾ ಅತಿಯಾಗಿ ದ್ವೇಷಿಸುತ್ತಿದ್ದ ಮತ್ತೋರ್ವ ಫುಟ್ಬಾಲಿಗನೆಂದರೆ ಅದು ಪೀಲೆಯೇ ಆಗಿದ್ದರು! 2000ದಲ್ಲಿ ಇಬ್ಬರೂ ಶತಮಾನದ ಶ್ರೇಷ್ಠ ಫುಟ್‌ಬಾಲ್ ಪ್ರಶಸ್ತಿಗೆ ಪಾತ್ರರಾದಾಗ ಪೀಲೆ ಮರಡೋನಾರನ್ನು ಚುಚ್ಚಿ ಮಾತಾಡಿದ್ದರು. “ಮರಡೋನಾ ತಾನೇ ಶ್ರೇಷ್ಠ ಆಟಗಾರನೆಂದು ಭಾವಿಸಿದ್ದಾರೆ, ಅದೇ ಅವರ ದೊಡ್ಡ ಸಮಸ್ಯೆ’ ಎಂದಿದ್ದರು.
2006ರ ಜರ್ಮನಿ ವಿಶ್ವಕಪ್ ಫುಟ್‌ಬಾಲ್ ಉದ್ಘಾಟನ ಸಮಾರಂಭಕ್ಕೆ ತೆರಳದೆ ಪೀಲೆ ವಿರುದ್ಧ ಮರಡೋನಾ ಸೇಡು ತೀರಿಸಿ ಕೊಂಡರು. “ಆ ಬ್ಲಿಡಿ ಪೀಲೆ ಅಲ್ಲಿ ಆಚೀಚೆ ಓಡಾಡುತ್ತ ಇರುವುದನ್ನು ಕಾಣಲು ನಾನು ಬಯಸುವುದಿಲ್ಲ’ ಎಂದು ಕೆಂಡ ಕಾರಿದ್ದರು.
ಮರಡೋನಾ ಆರ್ಜೆಂಟೀನಾ ತಂಡದ ಕೋಚ್ ಆಗಿ ವೈಫಲ್ಯ ಕಂಡಾಗಲೂ ಪೀಲೆ ವ್ಯಂಗ್ಯವಾಡಿದ್ದರು. “ಇದು ಮರಡೋನಾ ತಪ್ಪಲ್ಲ. ಅವರನ್ನು ಆ ಸ್ಥಾನಕ್ಕೆ ಏರಿಸಿದವರು ಮಾಡಿದ ದೊಡ್ಡ ಬ್ಲಿಂಡರ್’ ಎಂದು ಜರೆದಿದ್ದರು. ಮರಡೋನಾ ಸುಮ್ಮನುಳಿಯಲಿಲ್ಲ. “ಆ ಪೀಲೆ ಮ್ಯೂಸಿಯಂನಲ್ಲಿರಲಿಕ್ಕೇ ಫಿಟ್’ ಎಂದು ಕಟಕಿಯಾಡಿದ್ದರು! ಫುಟ್‌ಬಾಲ್ ಲೆಜೆಂಡ್ರಿಗಳ ಈ ಜಟಾಪಟಿಗೆ ಇನ್ನು ಪೂರ್ಣ ವಿರಾಮ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.