ಪ್ರತಿಮೆ ಪ್ರತಿಷ್ಠಾಪನೆ ವ್ಯಕ್ತಿ ಪ್ರತಿಷ್ಠೆಯಾಗದಿರಲಿ: ನಿರಂಜನಾನಂದ ಪುರಿ ಮಹಾಸ್ವಾಮಿ


Team Udayavani, Feb 3, 2024, 5:47 AM IST

1-ssadsad

ನಮ್ಮ ಜೀವನ ಶೈಲಿಯ ಬದುಕಿನ ಅಧಿಪತಿಗಳು ನಾವಲ್ಲ ನಮ್ಮ ತಂದೆ, ತಾಯಿ, ಗುರು,ಹಿರಿಯರು ತೋರಿಸಿದ ಮಾರ್ಗದರ್ಶನದ ಬದುಕಿನ ನೆರಳಾಗಿ ಮಾತ್ರ ಜೀವಿಸುತ್ತಿದ್ದೇವೆ ನಾವು ಅನಾದಿ ಕಾಲದಿಂದಲೂ ನಮಗೆ ಮೆಚ್ಚುಗೆಯಾದ ಆಚರಣೆಗಳನ್ನು ಹಲವು ಸಂಕೇತಗಳ ಮೂಲಕ, ಮೂರ್ತಿಗಳ ಮೂಲಕ, ವಸ್ತುಗಳ ಮೂಲಕ ಆರಾಧಿಸುತ್ತಾ ಬರುತ್ತಿದ್ದೇವೆ ಹಾಗೆಯೇ ಸಾರ್ವ ತ್ರಿಕವಾಗಿ ನಿಸ್ವಾರ್ಥ ಸೇವೆ ಮಾಡಿ ದೈವ ಮಾನವ ರೆನಿಸಿಕೊಂಡ ಹಲವು ಸಾಂಸ್ಕತಿಕ, ಸಾಮಾಜಿಕ, ರಾಜಕೀಯ ನಾಯಕರ ಮತ್ತು ಧಾರ್ಮಿಕ ಮಹಾತ್ಮರ ಪ್ರತಿಮೆಗಳ ಪ್ರತಿಷ್ಠಾಪನೆ ಮಾಡು ತ್ತಿರುವ ನಿಜವಾದ ಕಳಕಳಿ ಮತ್ತು ಉದ್ದೇಶಗಳು ಅರ್ಥ ಕಳೆದುಕೊಂಡು ಪ್ರತಿಮೆ ಪ್ರತಿಷ್ಠಾಪನೆ ವ್ಯಕ್ತಿ ಪ್ರತಿಷ್ಠೆಯ ಪರಿಕಲ್ಪನೆಗಳಾಗುತ್ತಿರುವುದು ಬೇಸರದ ಸಂಗತಿ ಹಾಗೂ ಇಂತಹ ಮಹಾನ್‌ ಚೇತನಗಳ ಪ್ರತಿಮೆಗಳ ಪ್ರತಿಷ್ಠಾಪನೆ ಯ ವಿರೋ ಧಿಸುವ ಪ್ರತಿಭಟನೆಗಳೂ ಸಹ ವ್ಯಕ್ತಿ ಪ್ರತಿಷ್ಠೆ ಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ

ಅಖಂಡ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ನೀತಿ, ತತ್ತÌಗಳಿಂದ ಪ್ರಭಾವಿತವಾದ ಪ್ರತಿಮೆಗಳು ಸಮಾಜದಲ್ಲಿ ಸೌಹಾರ್ದ, ಸಾಮರಸ್ಯ, ಸಂಘಟನೆ, ಸಮಾನತೆಯನ್ನು ಎತ್ತಿ ಹಿಡಿಯಬೇಕೇ ವಿನಾ ಸಮಾಜದಲ್ಲಿ ವಿಘಟನೆ, ಅಶಾಂತಿ ಆಗಬಾರದು ಪ್ರತಿಮೆಗಳ ಪ್ರತಿಷ್ಠಾಪಕ ರಾಗಲಿ, ಪ್ರತಿಷ್ಠಾಪನೆಯನ್ನು ವಿರೋಧಿ ಸುವವರಾಗಲಿ ಸಮುದಾಯಗಳ ಮಧ್ಯೆ ಅಸಮಾನತೆ, ಅಸಹಿಷ್ಣುತೆಗೆ ಕಾರಣವಾಗುವಂತಹ ಕೆಲಸಗಳನ್ನು ಮಾಡಬಾರದು. ಪ್ರಾದೇಶಿಕತೆಯ ಒಗ್ಗಟ್ಟಿನಿಂದಲೇ ರಾಷ್ಟ್ರೀಯ ಏಕತೆ ಬೆಳೆಯುತ್ತದೆ ಹೀಗಿರುವಾಗ ಪ್ರತಿಮೆಗಳ ಪ್ರತಿಷ್ಠಾಪನೆಯ ಪರ- ವಿರೋಧ ಗಳೆರಡೂ ಪ್ರತಿಷ್ಠೆಯಾಗದಿರಲಿ ಪ್ರತಿಮೆಗಳು ಪ್ರೀತಿಯನ್ನ ಪಸರಿಸಲಿ ಪ್ರತಿಮೆಗಳ ತತ್ತÌಗಳ ಆರಾಧನೆಗಿಂತ ತತ್ತÌಗಳ ಅನುಷ್ಠಾನ ವಾದಾಗ ಪ್ರತಿಮೆಗಳ ಅನುಕರಣೆಗೊಂದು ಅರ್ಥ ಬರುತ್ತದೆ ಧರ್ಮ, ಜಾತಿಯ ನೀತಿಗಳಿಗಿಂತ ನೆರೆಹೊರೆಯವರೊಂದಿಗೆ ನಾವು ಬದುಕುವ ರೀತಿಯು ಬಹಳ ಮುಖ್ಯವಾಗುತ್ತದೆ ನಮ್ಮ ಸುಖ-ದುಃಖಕ್ಕೆ ನೆರಹೊರೆಯವರು ಧಾವಿಸುತ್ತಾರೆಯೇ ಹೊರತು ದೂರದಲ್ಲಿದ್ದು ಪ್ರಚೋದಿಸುವವರಲ್ಲ. ಹಾಗಾಗಿ ವ್ಯಕ್ತಿ ಪ್ರತಿಷ್ಠೆಗಿಂತ ವ್ಯಕ್ತಿತ್ವ ಪ್ರತಿಷ್ಠಾಪನೆಯಾದಾಗ ಬದುಕಿಗೊಂದು ಅರ್ಥ ಬರುತ್ತದೆ. ಪ್ರತಿಮೆ ಯಾಗುವ ಮಹಾನ್‌ ಚೇತನಗಳು ಬದುಕಿದ್ದಾಗ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡುವ ಮೂಲಕ ನಿಸ್ವಾರ್ಥತೆ ಯಿಂದ “ಲೋಕಾಃ ಸಮಸ್ತಾಃ ಸುಖೀನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು’ ಎಂಬ ಸಂದೇಶಗಳನ್ನು ಸಮಾಜಮುಖೀ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ನುಡಿದಂತೆ ನಡೆದು ಕೊಂಡಿರುತ್ತಾರೆ. ಆದರೆ ಇಂದು ಅಂತಹ ಮಹಾನ್‌ ವ್ಯಕ್ತಿಗಳ ಪ್ರತಿಮೆಗಳ ಅನಾವರಣ ವಿಚಾರದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹದು ಆತಂಕಕಾರಿ ಬೆಳವಣಿಗೆಯಾಗಿದೆ . ಪ್ರತಿಮೆಗಳ ಪ್ರತಿಷ್ಠಾಪನೆಗಿಂತ ನೀತಿಗಳ ಪ್ರತಿಷ್ಠಾಪನೆ ಯಾಗಬೇಕು ಜಾತಿಗಳ ಛಾತಿಗಿಂತ ಬದುಕುವ ರೀತಿ ಮುಖ್ಯವಾಗಬೇಕು ಮಹಾನ್‌ ವ್ಯಕ್ತಿಗಳನ್ನು ಅರ್ಥ ಮಾಡಿ ಕೊಂಡವರು ಅರ್ಥ ಪೂರ್ಣವಾಗಿ ಬದುಕುತ್ತಾರೆ.

ಪ್ರತಿಮೆಗೊಳಗಾಗುವವರು ನಮ್ಮ ಸಮಾಜದ ಅನಘÂì ರತ್ನಗಳು ಅಂತವರ ಪ್ರತಿಷ್ಠಾಪನೆ ಶ್ರದ್ಧಾ ಭಕ್ತಿಯಿಂದ ನಡೆಯಬೇಕು ಅವರ ಸಿದ್ಧಾಂತಗಳು ಸಮಾಜದಲ್ಲಿ ಸಾಕಾರಗೊಳ್ಳಬೇಕು .

ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳು,
ಕನಕ ಗುರುಪೀಠ, ಶ್ರೀಕ್ಷೇತ್ರ ಕಾಗಿನೆಲೆ.

ಟಾಪ್ ನ್ಯೂಸ್

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vaishnodevi-Temple

Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

Haryana: ಯಾರಿಗೆ ಗೆಲುವಿನ ಹರಿವಾಣ? ಬಿಜೆಪಿಗೆ ಆಡಳಿತ ವಿರೋಧ ಅಲೆ ಭೀತಿ

Haryana: ಯಾರಿಗೆ ಗೆಲುವಿನ ಹರಿವಾಣ? ಬಿಜೆಪಿಗೆ ಆಡಳಿತ ವಿರೋಧ ಅಲೆ ಭೀತಿ

Navratri: ಮಾತೃಶಕ್ತಿ ಆರಾಧನೆಯ ನವರಾತ್ರಿ

Navratri: ಮಾತೃಶಕ್ತಿ ಆರಾಧನೆಯ ನವರಾತ್ರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.