ಪದ್ಮ ಪ್ರಶಸ್ತಿ ಪಡೆದವರ ಸಾಧನೆಯ ಕಥನ…
Team Udayavani, Jan 27, 2021, 8:00 AM IST
105 ವರ್ಷದ ಕೃಷಿಕ ಮಹಿಳೆ :
ತಮಿಳುನಾಡಿನ ಕೊಯಂಬುತ್ತೂರ್ ಜಿಲ್ಲೆಯ ತೆಕ್ಕಂಪಾಟಿಯ ನಿವಾಸಿ 105 ವರ್ಷದ ಪಾಪಮ್ಮಾಳ್ ಅವರಿಗೆ ಪದ್ಮಶ್ರೀ ಪುರಸ್ಕಾರ ಒಲಿದಿದೆ. ತಮಿಳುನಾಡಿನ ಕೃಷಿ ಕ್ಷೇತ್ರದ ಲೆಜೆಂಡ್ ಎಂದು ಕರೆಸಿಕೊಳ್ಳುವ ಪಾಪಮ್ಮಾಳ್ ಈ ಇಳಿ ವಯಸ್ಸಲ್ಲೂ ಕೃಷಿ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ. ಭವಾನಿ ನದಿ ದಂಡೆಯಲ್ಲಿರುವ ತಮ್ಮ 2.5 ಎಕರೆ ಹೊಲದಲ್ಲಿ ಸಾವಯವ ಕೃಷಿ ಮಾಡುವ ಅವರು, 1959ರಲ್ಲಿ ತೆಕ್ಕಂಪಾಟಿ ಪಂಚಾಯತ್‌ನ ಕೌನ್ಸಿಲರ್ ಆಗಿಯೂ ಆಯ್ಕೆಯಾಗಿದ್ದರು. ಡಿಎಂಕೆಯ ಸಕ್ರಿಯ ಸದಸ್ಯರಾಗಿರುವ ಪಾಪಮ್ಮಾಳ್ ಈ ಹಿಂದೆ ತಮಿಳುನಾಡಿನ ಕೃಷಿ ವಿಶ್ವವಿದ್ಯಾನಿಲಯ ಆಯೋಜಿ ಸಿದ್ದ ಕೃಷಿ ಕುರಿತ ಚರ್ಚೆಯಲ್ಲಿ ಭಾಗಿಯಾಗಿ ಸುದ್ದಿಯಾಗಿದ್ದರು. ಈ ವಯಸ್ಸಲ್ಲೂ ಅದ್ಹೇಗೆ ಅವರು ಸಕ್ರಿಯರಾಗಿದ್ದಾರೆ ಎಂಬ ಪ್ರಶ್ನೆಗೆ ಅವರು ನಗುತ್ತಾ ಹೇಳುತ್ತಾರೆ, “ಬಾಲ್ಯದಿಂದಲೂ ನಾನು ಮಟನ್ ಕರ್ರಿ, ರಾಗಿ ಮುದ್ದೆ ತಿನ್ನುತ್ತಾ ಬಂದಿದ್ದೇನೆ. ಇದರಿಂದ ದೇಹಕ್ಕೆ ಬಹಳ ಬಲ ಸಿಗುತ್ತದೆ”. ಇಷ್ಟು ವರ್ಷವಾದರೂ ತಮಗೆ ಕನ್ನಡಕ ಬಂದಿಲ್ಲ ಎಂದು ಹೆಮ್ಮೆಯಿಂದ ಹೇಳುವ ಪಾಪಮ್ಮಾಳ್, ಈಗಲೂ ತಮ್ಮ ಬಟ್ಟೆಯನ್ನು ತಾವೇ ಒಗೆಯುತ್ತಾರೆ, ಪಾತ್ರೆ ತೊಳೆಯುವುದು ಸೇರಿದಂತೆ ಮನೆಗೆಲಸಗಳನ್ನೆಲ್ಲ ತಾವೇ ಮಾಡುತ್ತಾರೆ.
ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಶ್ರಮಿಸಿದ್ದ ಕಲ್ಬೇ ಸಾದಿಕ್ :
ಹಿಂದೂ-ಮುಸ್ಲಿಂ ಮತ್ತು ಶಿಯಾ ಸುನ್ನಿ ಏಕತೆಯ ಪ್ರಬಲ ಸಮರ್ಥಕರಾಗಿದ್ದ ಲಕ್ನೋದ ಮೌಲಾನಾ ಕಲ್ಬೇಸಾದಿಕ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪುರಸ್ಕಾರ ನೀಡಲಾಗಿದೆ. ಸಾದಿಕ್ ಅವರು 2020ರ ನವೆಂಬರ್ 24ರಂದು ನಿಧನ ಹೊಂದಿದರು. ತಮ್ಮ ಜೀವನದುದ್ದಕ್ಕೂ ಅವರು ಹಿಂದೂ ಮುಸ್ಲಿಮರ ನಡುವೆ ಸೌಹಾರ್ದ ಮೂಡಿಸುವುದಕ್ಕಾಗಿ ಶ್ರಮಿಸಿದ್ದರು. ಒಮ್ಮೆ ಅವರು ಹೇಳಿದ್ದರು, ದೇಶದಲ್ಲಿ ಹಿಂದೂ ಮುಸ್ಲಿಂ ಏಕತೆಗಾಗಿ ಹರಿದ್ವಾರದ ಗಂಗಾ ನದಿಯಲ್ಲಿ ಸ್ನಾನ ಮಾಡುವ ಅಗತ್ಯ ಬಂದರೂ ನಾನು ಸಿದ್ಧ ಎಂದು! ಮೂಲಭೂತವಾದದ ಕಡು ವಿರೋಧಿಯಾಗಿದ್ದ ಕಲ್ಬೇ ಸಾದಿಕ್ ಅವರು ಶಿಕ್ಷಣವು ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ರಹದಾರಿ ಎನ್ನುತ್ತಿದ್ದರು. ಹೀಗಾಗಿ ಲಕ್ನೋ ಸೇರಿದಂತೆ ದೇಶದ ವಿವಿಧೆಡೆ ಅವರು ಯೂನಿಟಿ, ಎಂಎಂಯು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.
10 ರೂಪಾಯಿ ಆಸೆಗೆ ಚಿತ್ರಕಲೆಗಿಳಿದ ಭೂರಿ ಬಾಯಿ :
1980ರ ದಶಕದಲ್ಲಿ ಭೋಪಾಲದಲ್ಲಿ ಕಟ್ಟುಡ ಕೂಲಿ ಕಾರ್ಮಿಕಳಾಗಿದ್ದ ಭೂರಿ ಬಾಯಿ ಮುಂದೆ ಅನಿರೀಕ್ಷಿತವಾಗಿ ಭಿಲ್ ಬುಡಕಟ್ಟು ಸಮುದಾಯದ ಪ್ರಖ್ಯಾತ ಚಿತ್ರಕಲಾವಿದೆಯಾಗಿ ರೂಪುಗೊಂಡವರು. ಅವರೀಗ ಕಲಾ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1981ರಲ್ಲಿ ಭೋಪಾಲದಲ್ಲಿ ಚಿತ್ರಕಲಾ ಶಾಲೆಯೊಂದರ ನಿರ್ಮಾಣದಲ್ಲಿ ತೊಡಗಿದ್ದ ಭೂರಿ ಬಾಯಿಯವರು ಭಿಲ್ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂದು ಖ್ಯಾತ ಚಿತ್ರಕಲಾವಿದ ಜಗದೀಶ್ ಸ್ವಾಮಿನಾಥನ್‌ಗೆ ತಿಳಿಯುತ್ತದೆ. ಕೂಡಲೇ ಅವರು, ಭಿಲ್ ಸಮುದಾಯದ ಪಿತೋರಾ ಸಾಂಪ್ರದಾಯಿಕ ಚಿತ್ರವನ್ನು ರಚಿಸಲು ಭೂರಿ ಬಾಯಿಗೆ ಕೇಳುತ್ತಾರೆ. ಆದರೆ ಭೂರಿ ಬಾಯಿ ನಿರಾಕರಿಸಿಬಿಡುತ್ತಾರೆ. ಏಕೆಂದರೆ ಅವರು ಅದುವರೆಗೂ ಕ್ಯಾನ್ವಾಸ್ ಹಾಗೂ ಪೇಂಟ್‌ಬ್ರಶ್‌ಗಳನ್ನು ನೋಡಿರಲೇ ಇಲ್ಲವಂತೆ! “”ಅಲ್ಲಿಯವರೆಗೂ ನಾವು ಕಟ್ಟಿಗೆಗೆ ಬಟ್ಟೆ ಸುತ್ತಿ ಕಲ್ಲಿನ ಮೇಲೆ ಚಿತ್ರಬಿಡುಸುತ್ತಿದ್ದೆವಷ್ಟೇ.
ಎಲೆಗಳಿಂದ ಹಿಂಡಿ ತೆಗೆದ ಬಣ್ಣ ಮತ್ತು ಮಣ್ಣಿನಿಂದ ಬಂಡೆಗಳು ಹಾಗೂ ಮನೆಗಳ ಮೇಲೆ ಚಿತ್ರಬಿಡಿಸುವುದಷ್ಟೇ ಗೊತ್ತಿತ್ತು. ಸ್ವಾಮಿನಾಥನ್ ನನಗೆ 10 ರೂಪಾಯಿ ಕೊಟ್ಟು ಕ್ಯಾನ್ವಾಸ್‌ನ ಮೇಲೆ ಚಿತ್ರ ರಚಿಸಲು ಹೇಳಿದರು. 10 ರೂಪಾಯಿ ಆ ಸಮಯದಲ್ಲಿ ದೊಡ್ಡ ಮೊತ್ತ. ಆಗ ನನ್ನ ಕೂಲಿ ತಿಂಗಳಿಗೆ 6 ರೂಪಾಯಿಯಿತ್ತು. ಹೀಗಾಗಿ ಒಪ್ಪಿಕೊಂಡೆ” ಎನ್ನುತ್ತಾರೆ ಭೂರಿ ಬಾಯಿ. ಗಮನಾರ್ಹ ಸಂಗತಿಯೆಂದರೆ ಪಿತೋರಾ ಚಿತ್ರಕಲೆಯನ್ನು ಕ್ಯಾನ್ವಾಸ್‌ನ ಮೇಲೆ ಮೂಡಿಸಿದ ಮೊದಲ ಭಿಲ್ ಸುಮುದಾಯದ ಮಹಿಳೆಯೂ ಇವರೇ! ಇದುವರೆಗೂ ಭೂರಿ ಬಾಯಿಯವರ ಚಿತ್ರಗಳು ಅಮೆರಿಕ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ಜರ್ಮನಿ, ಜಪಾನ್ ಸೇರಿದಂತೆ 12 ದೇಶಗಳಲ್ಲಿ ಪ್ರದರ್ಶನಗೊಂಡಿವೆ.
ಪಾಕ್ ಸೇನೆಯ ಮಣಿಸಲು ಸಹಕರಿಸಿದ ಪಾಕ್ನ ಪೂರ್ವ ಸೇನಾಧಿಕಾರಿ! :
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಕ. ಖ್ವಾಜಿ ಸಾಜಿದ್ ಅಲಿ ಝಾಹೀರ್(70) ಅವರ ಕಥೆಯೇ ಸಿನೆಮಾದಂತಿದೆ. 1969ರ ಅವಧಿಯಲ್ಲಿ ಪಾಕಿಸ್ಥಾನದ ಸೇನಾಧಿಕಾರಿಯಾಗಿದ್ದ ಅವರು ಮುಂದೆ ಅದೇ ಪಾಕಿಸ್ಥಾನಿ ಸೇನೆಯ ಕಪಿಮುಷ್ಟಿಯಿಂದ ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಲು ಶ್ರಮಿಸಿ ಹೀರೋ ಆದವರು. ಅಂದಿನ ಪೂರ್ವ ಪಾಕಿಸ್ಥಾನ(ಈಗಿನ ಬಾಂಗ್ಲಾದೇಶ)ದಲ್ಲಿ ಅಧಿಕಾರಿಯಾಗಿ ನಿಯೋಜನೆಯಾಗುತ್ತಿದ್ದಂತೆಯೇ ಪಾಕ್ ಸೇನೆ ಸ್ಥಳೀಯರ ಮೇಲೆ ನಡೆಸುತ್ತಿದ್ದ ಕ್ರೌರ್ಯದ ಕಥೆಗಳನ್ನು ಕೇಳಿ ಬೆಚ್ಚಿಬಿದ್ದ ಅಲಿ ಝಾಹೀರ್, ಹೇಗಾದರೂ ಮಾಡಿ ಭಾರತ ಸೇನೆಯ ಜತೆ ಕೈಜೋಡಿಸಬೇಕೆಂದು ಸಿದ್ಧರಾದರು. ಇದಕ್ಕಾಗಿ ಉಟ್ಟ ಬಟ್ಟೆ, ಕೈಯಲ್ಲಿ ಇಪತ್ತು ರೂಪಾಯಿ ಹಿಡಿದು ಭಾರತಕ್ಕೆ ಓಡಿ ಬಂದರು.
“ನಮ್ಮ ಸೇನೆ ಪೂರ್ವ ಪಾಕಿಸ್ಥಾನಿಯರ ವಿರುದ್ಧ ನಡೆಸುತ್ತಿದ್ದ ದುಷ್ಕೃತ್ಯಗಳ ಕಥೆ ನನ್ನನ್ನು ಅಲುಗಾಡಿಸಿಬಿಟ್ಟಿತು. ಹೀಗಾಗಿ ಒಂದು ದಿನ ಏಕಾಏಕಿ ನಿರ್ಧಾರ ಕೈಗೊಂಡು ಸಾಂಬಾ ಗಡಿಯ ಮೂಲಕ ಜಮ್ಮು-ಕಾಶ್ಮೀರಕ್ಕೆ ಓಡಿ ಬಂದೆ. ಪಾಕ್ ಸೇನೆ ಯುದ್ಧಕ್ಕಾಗಿ ನಡೆಸಿದ್ದ ಸಿದ್ಧತೆಯ ಮಾಹಿತಿಯನ್ನೆಲ್ಲ ಸಾಧ್ಯವಾದಷ್ಟೂ ಕಲೆ ಹಾಕಿ ಭಾರತೀಯ ಸೇನೆಯೊಂದಿಗೆ ಹಂಚಿಕೊಂಡೆ’ ಎನ್ನುತ್ತಾರೆ ಸಾಜಿದ್. ಸಾಜಿದ್ ಭಾರತೀಯ ಸೇನೆಯ ಜತೆ ಕೈಜೋಡಿಸಿದ್ದಾರೆ ಎನ್ನುವುದು ತಿಳಿದದ್ದೇ ಪಾಕ್ ಸೇನೆ ಕಿಡಿಕಿಡಿಯಾಯಿತು. ಸಾಜಿದ್ ವಿರುದ್ಧ ಮರಣದಂಡನೆ ಶಿಕ್ಷೆ ಘೋಷಿಸಿತು(ಈಗಲೂ ಜಾರಿಯಲ್ಲಿದೆ).
“ನಾನು ಭಾರತಕ್ಕೆ ಓಡಿ ಬಂದಿರುವ ಸುದ್ದಿ ತಿಳಿದ ಸೇನೆ ನನ್ನ ಕುಟುಂಬವನ್ನು ಬಹಳ ಹಿಂಸಿಸಿತು. ಢಾಕಾದಲ್ಲಿನ ನನ್ನ ಮನೆಯನ್ನು ಸುಟ್ಟುಹಾಕಿತು. ನನ್ನ ತಾಯಿ ಮತ್ತು ಮಡದಿ ಪಾಕ್ ಸೈನಿಕರಿಂದ ತಪ್ಪಿಸಿಕೊಂಡು ಕೊನೆಗೆ ಭಾರತಕ್ಕೆ ಓಡಿ ಬಂದು ಆಶ್ರಯ ಪಡೆದರು’ ಎನ್ನುತ್ತಾರೆ ಸಾಜಿದ್. ಮುಂದೆ ಸಾಜಿದ್, ಬಾಂಗ್ಲಾದೇಶ ವಿಮೋಚನೆಗಾಗಿ ಹೋರಾಡುತ್ತಿದ್ದ “ಮುಕ್ತಿ ವಾಹಿನಿ’ಗೆ ತರಬೇತಿ ನೀಡಿ, 1971ರ ಬಾಂಗ್ಲಾ ವಿಮೋಚನ ಯುದ್ಧದಲ್ಲಿ ಹೀರೋ ಆದರು.
5 ದಿನಗಳ ಅಂತರದಲ್ಲೇ 2 ಬಾರಿ ಎವರೆಸ್ಟ್ ಏರಿದರು! :
ಕೇವಲ 5 ದಿನಗಳ ಅಂತರದಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಏರಿದ ಪ್ರಪಂಚದ ಮೊದಲ ಮಹಿಳೆ ಇವರು. ಅರುಣಾಚಲ ಪ್ರದೇಶ ಅನ್ಶು ಜಂಪ್ಸೇನಾ (41) 2017ರಲ್ಲಿ ಈ ಸಾಧನೆ ಮಾಡಿದರು. ಕ್ರೀಡಾ ವಿಭಾಗದಲ್ಲಿ ಅವರಿಗೀಗ ಪದ್ಮಶ್ರೀ ಒಲಿದುಬಂದಿದೆ. ಇದುವರೆಗೂ ಐದು ಬಾರಿ ಮೌಂಟ್ ಎವರೆಸ್ಟ್ ಏರಿದ ಅವರು, ಈ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆಯೂ ಹೌದು. ಗಮನಾರ್ಹ ಸಂಗತಿಯೆಂದರೆ, ಕೇವಲ 10 ವರ್ಷಗಳ ಹಿಂದಷ್ಟೇ ಅವರು ಚಾರಣವನ್ನು ಆರಂಭಿಸಿದ್ದು! “”ಚಾರಣ ಎನ್ನುವುದು ಏನೆಂಬುದೇ ನನಗೆ ತಿಳಿದಿರಲಿಲ್ಲ. ಆದರೆ, ಒಮ್ಮೆ ಅದು ಅಭ್ಯಾಸವಾದ ಅನಂತರ ನಾನು ಹಿಂದಿರುಗಿ ನೋಡಲೇ ಇಲ್ಲ. ಈಗಲೂ ಮನೆಯವರಿಗೆ ಹೇಳುತ್ತಿರುತ್ತೇನೆ, ಮುಂದೆಂದಾದರೂ ನಾನು ಜೀವಂತವಾಗಿ ಹಿಂದಿರುಗದಿದ್ದರೆ, ಅದಕ್ಕಾಗಿ ಕಣ್ಣೀರುಹಾಕಬೇಡಿ. ನನ್ನ ಬಗ್ಗೆ ಹೆಮ್ಮೆಪಡಿ’ ಎನ್ನುತ್ತಾರೆ 2 ಮಕ್ಕಳ ತಾಯಿ ಅನ್ಶು. 2011ರಲ್ಲಿ ಮೊದಲ ಬಾರಿ ಮೌಂಟ್ ಎವರೆಸ್ಟ್ ಏರಿದ್ದ ಅನ್ಶು ಕೇವಲ 10 ದಿನಗಳ ಅಂತರದಲ್ಲಿ ಮತ್ತೂಮ್ಮೆ ಶಿಖರದ ತುದಿ ತಲುಪಿದ್ದರು. (ಆ ಸಮಯದಲ್ಲಿ ಅದು ದಾಖಲೆಯಾಗಿತ್ತು).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.