Dwarka; ಸಮುದ್ರದಾಳದ ಶ್ರೀಕೃಷ್ಣನ ದ್ವಾರಕಾಕ್ಕೆ ಸಬ್‌ಮೆರಿನ್ ಪ್ರವಾಸ ಶೀಘ್ರ!
Team Udayavani, Aug 14, 2024, 6:27 AM IST
ಪೌರಾಣಿಕ ಮತ್ತು ಐತಿಹಾಸಿಕವಾಗಿ ಸಾಕಷ್ಟು ಮಹತ್ವವನ್ನು ಹೊಂದಿರುವ ಮತ್ತು ಈಗ ಸಮುದ್ರದಾಳದಲ್ಲಿರುವ ದ್ವಾರಕಾಗೆ “ಸಬ್‌ಮೆರಿನ್ ಟೂರಿಸಮ್’ ಆರಂಭಿಸಲಾಗುತ್ತಿದೆ. ಮುಂಬರುವ ದೀಪಾವಳಿಗೆ ಅಧಿಕೃತವಾಗಿ ಈ ಸಮುದ್ರದಾಳದ ಸಾಹಸಿ ಪ್ರವಾಸೋದ್ಯಮಕ್ಕೆ ಚಾಲನೆ ಸಿಗಲಿದೆ. ಈ ಕುರಿತು ಭಾರತದಲ್ಲಿನ ಸಬ್‌ಮೆರಿನ್ ಟೂರಿಸಮ್, ಧಾರ್ಮಿಕ ಪ್ರವಾಸೋದ್ಯಮ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.
ದೇಶದ ಮೊಟ್ಟ ಮೊದಲ ಸಮುದ್ರಾಳದ ಪ್ರವಾಸೋದ್ಯಮಕ್ಕೆ ಮುನ್ನುಡಿ ಬರೆಯಲು ಗುಜರಾತ್ ಸಿದ್ಧವಾಗಿದೆ. ಸಮುದ್ರದಲ್ಲಿ ಮುಳುಗಿರುವ ಪ್ರಾಚೀನಕಾಲದ ದ್ವಾರಕಾ ನಗರಕ್ಕೆ ಪ್ರವಾಸಿಗರನ್ನು ಕೊಂಡೊಯ್ಯುವ ಈ “ಸಬ್‌ಮೆರಿನ್ ಟೂರಿಸಮ್’ ಅಥವಾ “ಜಲಾಂತರ್ಗಾಮಿ ಪ್ರವಾಸ’ವು ಭಾರತದ ಧಾರ್ಮಿಕ ಪ್ರವಾಸೋದ್ಯಮದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ!
ಈ ವರ್ಷದ ದೀಪಾವಳಿಗೆ ಈ ಸಾಹಸಿ ಪ್ರವಾಸೋದ್ಯಮವನ್ನು ಗುಜರಾತ್ ಸರಕಾರವು ಆರಂಭಿಸಲಿದೆ. ಇದರೊಂದಿಗೆ ಭಾರತವು ಸಮುದ್ರಾಳದ ಪ್ರವಾಸೋದ್ಯಮ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗುತ್ತಿದೆ. ಗುಜರಾತ್ ಆರಂಭಿಸುತ್ತಿರುವ ಸಬ್‌ಮೆರಿನ್ ಪ್ರವಾಸ ಕಾರ್ಯಕ್ರಮವು ಧಾರ್ಮಿಕ ಪ್ರವಾಸೋದ್ಯಮ ಮತ್ತು ಸಮುದ್ರದ ಜೀವವೈವಿಧ್ಯತೆಯನ್ನು ಪ್ರದರ್ಶಿಸುವ ಪ್ರವಾಸವೂ ಆಗಿರಲಿದೆ.
ಹಾಗಾಗಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಭಾರತವು ಈಗಾಗಲೇ ಧಾರ್ಮಿಕ ಪ್ರವಾಸೋದ್ಯಮದಲ್ಲಿ ಸಾಕಷ್ಟು ಪ್ರಗತಿಯನ್ನು ಕಂಡಿದ್ದರಿಂದ, ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಇದು ಹೊಸ ಅನುಭವವ ನೀಡಲಿದೆ ಎಂಬುದು ಉದ್ಯಮ ಮಂದಿಯ ಲೆಕ್ಕಾಚಾರವಾಗಿದೆ.
ಪ್ರವಾಸೋದ್ಯಮಕ್ಕೆ ಹೊಸ ರೂಪ
ಭಾರತದ ಮೊದಲ ಸಬ್‌ಮೆರಿನ್ ಪ್ರವಾಸ ಆರಂಭ ದಿಂದಾಗಿ ಭಾರತದ ಸಮುದ್ರಾಳದ ಪ್ರವಾಸೋದ್ಯಮದಲ್ಲಿ ದ್ವಾರಕಾಗೆ ಪ್ರಮುಖ ಸ್ಥಾನ ಕಲ್ಪಿಸಿಕೊಡಲಿದೆ ಎನ್ನುತ್ತಿದ್ದಾರೆ ವಿಶ್ಲೇಷಕರು. ಪುರಾತನ ದೇವಾಲಯಗಳು ಮತ್ತು ಧಾರ್ಮಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿರುವ ದ್ವಾರಕಾ ಈ ವಿಶಿಷ್ಟ ಸಮುದ್ರ ಪ್ರವಾಸದ ಮೂಲಕ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳಲು ಸಿದ್ಧವಾಗಿದೆ. ಈ ಸಬ್‌ಮೆರಿನ್ ಟೂರಿಸಮ್ ದೇಶೀಯ ಮತ್ತು ಅಂತಾ ರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡಲಿದೆ. ಜತೆಗೆ ಈ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎನ್ನಲಾಗುತ್ತದೆ.
ಭಾಷ್ಯ ಬರೆದ ಪ್ರಧಾನಿ ಭೇಟಿ
ಕಳೆದ ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ಮೋದಿ ಅವರು ಸಮುದ್ರದಲ್ಲಿನ ಪ್ರಾಚೀನ ಕಾಲದ ದ್ವಾರಕಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿದ್ದರು. ಈ ಅನುಭವವನ್ನು ಹಂಚಿಕೊಂಡಿದ್ದ ಅವರು, ಇದೊಂದು ದೈವಿಕ ಮತ್ತು ಪ್ರಾಚೀನ ಕಾಲದ ಅಧ್ಯಾತ್ಮಿಕ ಭವ್ಯತೆಯನ್ನು ಆನಂದಿಸಿದ ಅನುಭವವಾಯಿತು ಎಂದು ಹೇಳಿಕೊಂಡಿದ್ದರು. ಪ್ರಧಾನಿ ಮೋದಿ ಅವರ ಈ ನಡೆಯು ಸಮುದ್ರದಾಳದ ಪ್ರವಾಸೋದ್ಯಮದಲ್ಲಿ ಹೊಸ ಭಾಷ್ಯ ಬರೆಯಿತು ಎನ್ನ ಬಹುದು. ಇದಾದ ಬಳಿಕ ಸಮುದ್ರದಾಳದ ಪ್ರವಾಸೋ ದ್ಯಮಕ್ಕೆ ಸಂಬಂಧಿಸಿದಂತೆ ಚರ್ಚೆಗಳು ಹೆಚ್ಚಾದವು.
ಧಾರ್ಮಿಕ ಪ್ರವಾಸದ ಬೂಮ್!
ಭಾರತದಲ್ಲೀಗ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ವಾರಾಣಸಿ, ಅಯೋಧ್ಯಾ ಮತ್ತು ಪ್ರಯಾಗ್‌ರಾಜ್‌ಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಈ ಸ್ಥಳಗಳಿಗೆ 14 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ! ವಾರಾಣಸಿಗೆ 2022ರಲ್ಲಿ 8.2 ಕೋಟಿ ಪ್ರವಾಸಿಗರು ಆಗಮಿಸಿದ್ದರು. ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ಸ್ಥಳಗಳ ಪಟ್ಟಿಯಲ್ಲಿ ವಾರಾಣಸಿ, ಈಗ ತಾಜ್ ಮಹಲ್ ಇರುವ ಆಗ್ರಾವನ್ನು ಮೀರಿಸಿದೆ. ಜತೆಗೆ ಅಯೋಧ್ಯೆ ಮತ್ತು ಪ್ರಯಾಗ್ ರಾಜ್‌ಗಳು ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ.
ಬೇರೆ ರಾಷ್ಟ್ರಗಳಲ್ಲಿ ಈ ಪ್ರವಾಸೋದ್ಯಮ ಹೇಗಿದೆ?
ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಈಗಾಗಲೇ ಈ ಅಂಡರ್‌ವಾಟರ್ ಸಬ್‌ಮೆರಿನ್ ಪ್ರವಾಸೋದ್ಯಮ ಪ್ರಸಿದ್ಧಿಯಾಗಿದೆ. ಇದರಿಂದ ಸಾಕಷ್ಟು ಆದಾಯವನ್ನು ಪಡೆಯುತ್ತಿವೆ. ದ್ವಾರಕಾಗೆ ಸಬ್‌ಮೆರಿನ್ ಪ್ರವಾಸೋದ್ಯಮ ಆರಂಭಿಸುವ ಮೂಲಕ ಭಾರತವು ಈಗ ಆ ರಾಷ್ಟ್ರಗಳಿಗೆ ಸೇರ್ಪಡೆಯಾಗುತ್ತಿದೆ.
ಮಾಲ್ದೀವ್ಸ್ ಮತ್ತು ಹವಾಯಿ ದ್ವೀಪ
ಇಲ್ಲಿನ ಸಮುದ್ರದಲ್ಲಿರುವ ಹವಳದ ದಿಬ್ಬಗಳು ಹಾಗೂ ವೈವಿಧ್ಯ ನೋಡುವುದಕ್ಕಾಗಿಯೇ ಸಾವಿರಾರು ಜನರು ಮಾಲ್ದೀವ್ಸ್‌ಗೆ ಭೇಟಿ ನೀಡುತ್ತಾರೆ. ಹವಾಯಿ ದ್ವೀಪದಲ್ಲಿ ಸಬ್‌ಮೆರಿನ್ ಟೂರಿಸಮ್ ಹೆಚ್ಚು ಜನಪ್ರಿಯವಾಗಿದೆ.
ಆಸ್ಟ್ರೇಲಿಯಾದ ಹವಳದ ದಿಬ್ಬಗಳು
ಈ ಹವಳದ ದಿಬ್ಬಗಳು ವಿಶ್ವವಿಖ್ಯಾತವಾಗಿವೆ. ಸಾಕಷ್ಟು ವೈವಿಧ್ಯದಿಂದ ಕೂಡಿರುವ ಈ ದಿಬ್ಬಗಳನ್ನು ನೋಡಲು ಸಾಕಷ್ಟು ಪ್ರವಾಸಿಗರು ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತಾರೆ. ದಕ್ಷಿಣ ಆಫ್ರಿಕಾವು ಶ್ರೀಮಂತ ಸಮುದ್ರ ಜೀವ ವೈವಿಧ್ಯತೆಯನ್ನು ಹೊಂದಿದೆ.
ಜಪಾನ್‌ನ ಓಕಿನಾವಾ
ಜಪಾನ್‌ನ ಓಕಿನಾವಾ ಪ್ರದೇಶವು ಹವಳದ ಬಂಡೆ ಗಳು ಮತ್ತು ಸಮುದ್ರದ ಜೀವಿಗಳ ಆವಾಸಸ್ಥಾನ ವಾಗಿದೆ. ಇದು ನೀರೊಳಗಿನ ಶ್ರೀಮಂತ ಪ್ರಪಂಚ ವಾಗಿದ್ದು, ನಿಮಗೆ ಅನನ್ಯ ಅನುಭವ ನೀಡುತ್ತದೆ.
ದುಬಾೖಯ ಕಡಲಕೊಳ
ದುಬಾೖಯಲ್ಲಿರುವ ಕೃತಕ ಕಡಲಕೊಳ ಮತ್ತು ಕರಾವಳಿ ಪ್ರದೇಶಗಳು ಹೆಚ್ಚು ಜನರನ್ನು ಆಕರ್ಷಿಸುತ್ತವೆ. ಆಧುನಿಕ ಜಲಾಂತರ್ಗಾಮಿ ಸಾಹಸದ ಅನುಭವವನ್ನು ಜನರು ಪಡೆಯುತ್ತಾರೆ.
ಪ್ರವಾಸಿ ಸಬ್‌ಮೆರಿನ್ ಹೇಗಿರಲಿದೆ?
ಗುಜರಾತ್‌ನ ಸಮುದ್ರಾಳದ ಪ್ರವಾಸಕ್ಕೆ ಜನರನ್ನು ಕರೆದುಕೊಂಡು ಹೋಗಲಿರುವ ಸಬ್‌ಮೆರಿನ್ 30 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 35 ಟನ್ ತೂಕ ಹೊಂದಿದ್ದು, 24 ಪ್ರವಾಸಿಗರು ಕಿಟಕಿಗೆ ಹೊಂದಿಕೊಂಡು 2 ಸಾಲುಗಳಲ್ಲಿ ಕುಳಿತುಕೊಳ್ಳಬಹುದು. ಇದರಿಂದ ಸಮುದ್ರದಾಳದ ದೃಶ್ಯ ವೈಭವನ್ನು ಆನಂದಿಸಬಹುದಾಗಿದೆ.
ಪ್ರವಾಸದ ವೇಳೆ ಸುರಕ್ಷೆ, ಅನುಕೂಲಕ್ಕೆ ಆದ್ಯತೆ
ಪ್ರವಾಸಿ ಸಬ್‌ಮೆರಿನ್ ಸುಧಾರಿತ ನ್ಯಾವಿಗೇಶನ್ ಮತ್ತು ಸುರಕ್ಷ ವ್ಯವಸ್ಥೆಗಳೊಂದಿಗೆ ಸುಸಜ್ಜಿತವಾಗಿದೆ. ಇದನ್ನು ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುರಕ್ಷಿತ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಜಲಾಂತರ್ಗಾಮಿ ನೌಕೆಯ ದೊಡ್ಡ ವೀಕ್ಷಣ ಕಿಟಕಿಗಳು ನೀರೊಳಗಿನ ಪರಿಸರದ ವಿಹಂಗಮ ನೋಟಗಳನ್ನು ನೀಡುತ್ತದೆ ಮತ್ತು ಪ್ರವಾಸಿಗರು ಸಮುದ್ರ ಜೀವನವನ್ನು ಹತ್ತಿರದಿಂದ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಈ ಸಬ್‌ಮೆರಿನ್ ಪ್ರವಾಸದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಅದಕ್ಕಾಗಿಯೇ ಪ್ರತೀ ಪ್ರಯಾಣವು ಸುಗಮ ಮತ್ತು ಆನಂದದಾಯಕವಾಗಿರುವುದನ್ನು ಖಚಿತಪಡಿಸಿಕೊಳ್ಳುವ ನುರಿತ ವೃತ್ತಿಪರರ ತಂಡದಿಂದ ಸಬ್‌ಮೆರಿನ್ ಅನ್ನು ನಿರ್ವಹಣೆ ಮಾಡಲಾಗುತ್ತದೆ.
ಕಡಲಾಳ ಪ್ರವಾಸದಲ್ಲಿ ಹೊಸ ಶಕೆ ಆರಂಭ!
ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೆ ತೀರಾ ಇತ್ತೀಚಿನವರೆಗೂ ಸಮುದ್ರದಾಳದ ಅಥವಾ ಸಬ್‌ಮೆರಿನ್ ಟೂರಿಸಮ್ ಅಂಥ ಗಮನ ಸೆಳೆದಿಲ್ಲ. ಆದರೆ ದ್ವಾರಕಾ ಸಬ್‌ಮೆರಿನ್ ಟೂರಿಸಂ ಮೂಲಕ ಭಾರತವು ಪ್ರವಾಸೋದ್ಯಮ ದಲ್ಲಿ ಮತ್ತೂಂದು ಹಂತಕ್ಕೆ ಹೋಗಲಿದೆ. ಇದು ಸಾಕಷ್ಟು ಪ್ರವಾಸಿಗರನ್ನು ಸಾಕಷ್ಟು ಸೆಳೆಯಬ ಹುದು ಎಂದು ಹೇಳಲಾಗುತ್ತಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದು ಮಾತ್ರವಲ್ಲದೆ, ಸಮುದ್ರ ಸಂರಕ್ಷಣೆಗೆ ಸಂಬಂಧಿಸಿದಂತೆ ಶಿಕ್ಷಣ ಮತ್ತು ಜಾಗೃತಿಯನ್ನು ಮೂಡಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.