ಅವಕಾಶಗಳಿಗೆ ತೆರೆದುಕೊಂಡಲ್ಲಿ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು 


Team Udayavani, Aug 26, 2021, 6:10 AM IST

ಅವಕಾಶಗಳಿಗೆ ತೆರೆದುಕೊಂಡಲ್ಲಿ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು 

ಕೈಗಾರಿಕ ಕ್ಷೇತ್ರ ಪ್ರಸ್ತುತ ಸವಾಲುಗಳ ಜತೆಗೆ ಹೊಸ ಅವ ಕಾಶಗಳು, ಆರ್ಥಿಕ ಮಾದರಿಗಳೊಂದಿಗೆ ಸ್ಥಿತ್ಯಂತರದ ಹಾದಿ ಯಲ್ಲಿದೆ. ಇದು ಯಾವುದೇ ಒಂದು ದೇಶದ ಸ್ಥಿತಿಯಲ್ಲ. ಜಾಗತಿಕವಾಗಿ ಸೃಷ್ಟಿ ಯಾಗಿರುವ ಸನ್ನಿವೇಶ. ಉದ್ಯಮದಲ್ಲಿ ಹೊಸ ಕ್ಷೇತ್ರಗಳು ಅನಾವರಣಗೊಳ್ಳುತ್ತಿವೆ. ಸವಾಲುಗಳನ್ನು ನಿವಾರಿಸಿಕೊಂಡು ಅವ ಕಾಶವಾಗಿ ಪರಿವರ್ತಿಸಿಕೊಳ್ಳುವವರು ಯಶಸ್ಸಿನ ಹಾದಿಯಲ್ಲಿ ಮುನ್ನಡೆ ಯುತ್ತಾರೆ.

ಸ್ವಾತಂತ್ರ್ಯಪೂರ್ವದಲ್ಲಿ ದೇಶ ದಲ್ಲಿ ಅಂಬೆಗಾಲಿಟ್ಟು ಸಾಗುತ್ತಿದ್ದ ಉದ್ದಿಮೆ ಕ್ಷೇತ್ರ ಸ್ವಾತಂತ್ರ್ಯೋತ್ತರದ ಅವಧಿಯಲ್ಲಿ ಆಗಾಧವಾಗಿ ವಿಸ್ತಾರಗೊಂಡಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ದೇಶ ತನ್ನತನವನ್ನು ಪ್ರದರ್ಶಿಸಿದೆ. ಪ್ರಸ್ತುತ ಕೊರೊನಾ ಜಾಗತಿಕ ಕೈಗಾರಿಕ ಕ್ಷೇತ್ರದ ಪುನರ್‌ ಸಂಘ ಟನ ಆಯಾಮಕ್ಕೆ ನಾಂದಿ ಹಾಡಿದೆ. ಚೀನ ಸಹಿತ ಕೆಲವು ರಾಷ್ಟ್ರಗಳಲ್ಲಿನ ಕೆಲವು ಉದ್ಯಮಗಳು ವಿಶ್ವಾಸನೀಯ ಕೈಗಾರಿಕ ಭಾಗೀದಾರಿಗಳ ಹುಡುಕಾಟದಲ್ಲಿವೆ. ಭಾರತದ ಮಟ್ಟಿಗೆ ಹೇಳುವುದಾದರೆ ಸ್ವಾತ್ರಂತ್ಯದ ಶತಮಾನೋತ್ಸವದ ಮುಂದಿನ 25 ವರ್ಷಗಳ ಕಾಲಘಟ್ಟದ ಅವಧಿಯನ್ನು ಗಮನದಲ್ಲಿಟ್ಟು ಕೊಂಡು ವಿಶ್ಲೇಷಿಸುವುದಾದರೆ ಈ ಪರಿಸ್ಥಿತಿ ಉತ್ತಮ ಅವ ಕಾಶಗಳನ್ನು ಸೃಷ್ಟಿಸಿದೆ. ಇದಕ್ಕೆ ತೆರೆದುಕೊಳ್ಳುವಲ್ಲಿನ ನಮ್ಮ ಕಾರ್ಯಯೋಜನೆಯ ಮೇಲೆ ಕ್ಷೇತ್ರದ ಯಶಸ್ಸು ಅಡಗಿದೆ.

ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಪರಿಗಣಿಸಿಕೊಂಡು ಹೇಳುವುದಾದರೆ ಸ್ವಾತಂತ್ರ್ಯೋತ್ತರದ ಅವಧಿಯಲ್ಲಿ ಕೈಗಾರಿಕ ಕ್ಷೇತ್ರ ಸಾಗಿ ಬಂದ ಹಾದಿ ಮತ್ತು ಮುಂದಿನ ದಿನಗಳಲ್ಲಿ ಆಗಬೇಕಾದ ಕಾರ್ಯ ಯೋಜನೆಗಳ ಬಗ್ಗೆ ಒಂದಷ್ಟು ವಿಶ್ಲೇಷಣೆಗಳು ನಡೆ ಯುವುದು ಅವಶ್ಯ. ಕರಾವಳಿಯಲ್ಲಿ ಕೈಗಾರಿಕ ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ ಎಂಬುದು ಒಪ್ಪತಕ್ಕ ವಿಚಾರ. ಬೃಹತ್‌ ಬಂದರು, ಸಾಗರ, ಶೈಕ್ಷಣಿಕ ಹಬ್‌, ಬ್ಯಾಂಕಿಂಗ್‌ , ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೇ, ವಿಮಾನ ನಿಲ್ದಾಣ ಮುಂತಾದ ಅವಕಾಶಗಳ ತೃಪ್ತಿಕರ ಬಳಕೆ ಆಗಿಲ್ಲ ಎನ್ನುವ ಕೊರಗು ಇದೆ ನಿಜ. ಹಾಗೆಂದು ಭೂತಕಾಲದ ಬಗ್ಗೆ ಚಿಂತಿಸುವ ಬದಲು ವರ್ತಮಾನದಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಒಂದಷ್ಟು ಉಪಕ್ರಮಗಳು ಆಗಬೇಕಾಗಿವೆ.

ಕರಾವಳಿಯ ಮುಂದಿನ 25 ವರ್ಷಗಳ ಕೈಗಾರಿಕ ಕ್ಷೇತ್ರದ ಬೆಳ ವಣಿಗೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ವಿಶ್ಲೇಷಿಸುವುದಾದರೆ ಕೆಲವು ಪ್ರಮುಖ ಕ್ಷೇತ್ರಗಳು ಆದ್ಯತೆಯಲ್ಲಿ ಕಾಣಿಸಿಕೊಳ್ಳುತ್ತವೆ. ಎಂಎಸ್‌ಎಂಇ, ಪ್ರವಾಸೋದ್ಯಮ, ಐಟಿ-ಬಿಟಿ, ಸಾಗರ ಉತ್ಪನ್ನಗಳು, ಸೇವಾ ಕ್ಷೇತ್ರಗಳನ್ನು ಪ್ರಮುಖವಾಗಿ ಪರಿಗಣಿಸಬಹುದಾಗಿದೆ.

ಅತೀ ಹೆಚ್ಚು ಉದ್ಯೋಗಗಳನ್ನು ನೀಡುತ್ತಿರುವ ಎಂಎಸ್‌ಎಂಇ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಇವುಗಳನ್ನು ಬಳಸಿ ಕೊಳ್ಳುವ ನಿಟ್ಟಿನಲ್ಲಿ ಕರಾವಳಿಯಲ್ಲಿ ಪೂರಕವಾದ ಕ್ರಮಗಳು ಅವಶ್ಯವಿರುತ್ತವೆ. ಕರಾವಳಿಯಲ್ಲಿ ಈಗಾಗಲೇ ಇರುವ ಕೆಲವು ಕೈಗಾರಿಕ ಪ್ರದೇಶಗಳು ಭರ್ತಿಯಾಗಿವೆ. ಹೊಸದಾಗಿ ಕೆಲವು ಬೃಹತ್‌ ಕೈಗಾರಿಕ ಪ್ರದೇಶಗಳು ಒಳಗೊಂಡಂತೆ ಕೈಗಾರಿಕ ಪ್ರದೇಶಗಳನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕಾಗಿದೆ. ಗುರು ತಿಸುವ ಪ್ರದೇಶಗಳು ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾಗಿರಬೇಕು. ಕೈಗಾರಿಕೋದ್ಯಮಿಗಳನ್ನು ಆಕರ್ಷಿಸುವಂತಿರ ಬೇಕು. ಇದರ ಜತೆಗೆ ಪ್ರಸ್ತುತ ಹೆಚ್ಚು ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತಿರುವ ಬಹುಮಹಡಿ ಕೈಗಾರಿಕ ಸಂಕೀರ್ಣಗಳ ನಿರ್ಮಾಣದತ್ತಲೂ ಸರಕಾರ ಗಮನಹರಿಸುವುದು ಉತ್ತಮ. ಇದು ಕಡಿಮೆ ಸ್ಥಳಾವಕಾಶದಲ್ಲಿ ಹೆಚ್ಚು ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಸಿಕ್ಕಂತಾಗುತ್ತದೆ.

ಉದ್ಯೋಗಾವಕಾಶದಲ್ಲಿ ಇನ್ನೊಂದು ಪ್ರಮುಖ ಕ್ಷೇತ್ರ ವಾಗಿರುವ ಕೃಷಿ ಆಧಾರಿತ ಮತ್ತು ಆಹಾರ ಸಂಸ್ಕರಣ ಉದ್ದಿಮೆಗಳಿಗೆ ಕರಾವಳಿ ಹೆಚ್ಚು ಪೂರಕವಾಗಿದೆ. ಈ ನಿಟ್ಟಿನಲ್ಲಿ ಕೃಷಿ ಆಧಾರಿತ ಮತ್ತು ಆಹಾರ ಸಂಸ್ಕರಣ ಉದ್ದಿಮೆಗಳ ಪಾರ್ಕ್‌ಗಳು ಸ್ಥಾಪನೆಯಾಗಬೇಕು. ಮಂಗಳೂರಿನಲ್ಲಿ ವಿಮಾನ ನಿಲ್ದಾಣವಿರುವುದರಿಂದ ಇಲ್ಲಿಂದ ಕಾರ್ಗೊ ಸೌಲಭ್ಯದ ಮೂಲಕ ಕೊಲ್ಲಿ ರಾಷ್ಟ್ರಗಳು ಸೇರಿದಂತೆ ವಿಶ್ವದ ಅನೇಕ ದೇಶಗಳಿಗೆ ಆಹಾರ, ಕೃಷ್ಯುತ್ಪನ್ನಗಳನ್ನು ರಫ್ತು ಮಾಡಲು ಅವಕಾಶವಿದೆ.

ಮಂಗಳೂರಿನಲ್ಲಿರುವ ಬೃಹತ್‌ ಬಂದರಿನ ಸರಕು ನಿರ್ವಹಣ ಸಾಮರ್ಥ್ಯದ ಪೂರ್ಣ ಬಳಕೆಗೆ ಪೂರಕವಾದ ಯೋಜನೆಗಳು ಅನುಷ್ಠಾನಗೊಳ್ಳಬೇಕಾಗಿದೆ. ಪ್ರಸ್ತುತ ಇದರ ಸಾಮರ್ಥ್ಯದ ಶೇ.50ರಷ್ಟು ಕೂಡಾ ಬಳಕೆಯಾಗುತ್ತಿಲ್ಲ. ಕರಾವಳಿಯಲ್ಲಿ ರಫ್ತು ಅಧಾರಿತ ಕೈಗಾರಿಕೆಗಳು, ರಫ್ತು ಹಬ್‌ಗಳು ಸ್ಥಾಪನೆಯಾಗುವುದು ಇದಕ್ಕೆ ಪೂರಕವಾಗುತ್ತವೆ. ರಾಜ್ಯದ ವಿವಿಧ ಕಡೆಗಳಿಂದ ಇಲ್ಲಿಗೆ ರಫ್ತು ಉತ್ಪನ್ನಗಳು ಸರಾಗವಾಗಿ ಬರುವ ನಿಟ್ಟಿನಲ್ಲಿ ರಸ್ತೆ ಸೌಲಭ್ಯಗಳು ಅಭಿವೃದ್ಧಿ ಯಾಗಬೇಕಾಗಿದೆ. ಬೆಂಗಳೂರು-ಮಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಶಿರಾಡಿ ಘಾಟ್‌ನ್ನು ಸುಗಮ ಸಂಚಾರಕ್ಕೆ ಪೂರಕವಾಗಿ ರೂಪಿಸಬೇಕು. ಈ ನಿಟ್ಟಿನಲ್ಲಿ ಪ್ರಸ್ತಾವನೆಯಲ್ಲಿರುವ ಸುರಂಗ ಮಾರ್ಗ ಯೋಜನೆ ಅತೀ ಶೀಘ್ರ ಅನುಷ್ಠಾನಗೊಳ್ಳಬೇಕಾಗಿದೆ.

ಐಟಿಬಿಟಿ ಕ್ಷೇತ್ರದಲ್ಲಿ ಬೆಂಗಳೂರು ಬಿಟ್ಟರೆ ಮಂಗಳೂರು ವಿಫುಲ ಅವಕಾಶವಿರುವ ನಗರವಾಗಿದೆ. ಮಂಗಳೂರು ನಗರ ಉತ್ತಮ ಸಂಪರ್ಕ ಸೌಲಭ್ಯಗಳನ್ನು ಹೊಂದಿದೆ. ಐಟಿ ಉದ್ಯಮಿಗಳನ್ನು ಮಂಗಳೂರಿಗೆ ಆಕರ್ಷಿಸುವ ನಿಟ್ಟಿನಲ್ಲಿ ಪೂರಕ ಕಾರ್ಯಯೋಜನೆಗಳಾಗಬೇಕಿದೆ. ಪ್ರಸ್ತುತ ಪ್ರಸ್ತಾವನೆಯಲ್ಲಿರುವ ಐಟಿ ಪಾರ್ಕ್‌ಗಳ ಜತೆಗೆ ಒಂದಷ್ಟು ಹೊಸ ಸಾಧ್ಯತೆಗಳತ್ತಲೂ ಗಮನಹರಿಸಬೇಕಾಗಿದೆ.

ಕರಾವಳಿಯಲ್ಲಿ ಪ್ರವಾಸೋದ್ಯಮ ಒಂದು ಪ್ರಮುಖ ಕ್ಷೇತ್ರ. ಇಲ್ಲಿ ಬೀಚ್‌ ಟೂರಿಸಂ, ಧಾರ್ಮಿಕ ಟೂರಿಸಂ, ಹೆಲ್ತ್‌ ಟೂರಿಸಂಗೆ ಉತ್ತಮ ಅವಕಾಶಗಳಿವೆ. ಈ ಕ್ಷೇತ್ರದಲ್ಲಿ ಬೆಳ ವಣಿಗೆಗೆ ಅಗಾಧವಾಗಿರುವ ಅವಕಾಶಗಳನ್ನು ಬಳಸಿಕೊಂಡು ಕರಾವಳಿ ಮುಂದಿನ 25ವರ್ಷಗಳಲ್ಲಿ ದೇಶ-ವಿದೇಶಗಳ ಪ್ರವಾಸೋದ್ಯಮ ನಕಾಶೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಈಗಿನಿಂದಲೇ ನೀಲಿನಕಾಶೆಯನ್ನು ಸಿದ್ಧಪಡಿಸಿಕೊಂಡು ಕಾರ್ಯಯೋಜನೆ ರೂಪಿಸುವ ಕಾರ್ಯ ಆಗಬೇಕಾಗಿದೆ.

ಸಂಪರ್ಕ ಮೂಲ ಸೌಕರ್ಯಗಳಲ್ಲಿ ರೈಲ್ವೇ ಸೌಲಭ್ಯ ಪ್ರಮುಖವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಸ್ತುತ ಒಂದು ವಿಚಿತ್ರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜಿಲ್ಲಾ ಕೇಂದ್ರ ವಾಗಿರುವ ಮತ್ತು ಉದ್ದಿಮೆಗಳ ಪಾಲಿಗೆ ಪ್ರಮುಖವಾಗಿರುವ ಮಂಗಳೂರು ದಕ್ಷಿಣ ರೈಲ್ವೇ, ನೈರುತ್ಯ ರೈಲ್ವೇ ಹಾಗೂ ಕೊಂಕಣ ರೈಲ್ವೇಯಲ್ಲಿ ಹಂಚಿಹೋಗಿದೆ. ಬಹುಶಃ ಈ ರೀತಿಯ ವ್ಯವಸ್ಥೆ ದೇಶದ ಯಾವುದೇ ಭಾಗದಲ್ಲಿರಲಾರದು. ಇದು ಕೈಗಾರಿಕೆಗಳ ಪಾಲಿಗೆ ಸಮಸ್ಯೆಯಾಗಿದೆ. ಇದನ್ನು ನಿವಾರಿಸಿ ನೈಋತ್ಯ ರೈಲ್ವೇಯ ಮೈಸೂರು ವಿಭಾಗಕ್ಕೆ ಮಂಗಳೂರನ್ನು ಸೇರಿಸಬೇಕು. ಹಾಸನ-ಮಂಗಳೂರು ಮಧ್ಯೆ ರೈಲು ಹಳಿಗಳನ್ನು ದ್ವಿಗುಣಗೊಳಿಸುವುದು ಕೂಡಾ ಅಗತ್ಯವಾಗಿದೆ.

ಕರಾವಳಿ ಜಿಲ್ಲೆಗಳು ಮುಂದಿನ 25 ವರ್ಷಗಳಲ್ಲಿ ದೇಶದ ಮುಂಚೂಣಿಯ ಕೈಗಾರಿಕ ಹಬ್‌ಗಳಲ್ಲೊಂದಾಗಿ ಗುರುತಿಸುವಂತಾಗಲಿ. ಈ ನಿಟ್ಟಿನಲ್ಲಿ ಬಲವಾದ ಇಚ್ಛಾಶಕ್ತಿ ಎಲ್ಲ ವಲಯಗಳಿಂದಲೂ ಪ್ರದರ್ಶಿತಗೊಳ್ಳಲಿ ಎಂಬ ಆಶಯ ನನ್ನದಾಗಿದೆ.

 

ಜೀವನ್‌ ಸಲ್ದಾನ

ಅಧ್ಯಕ್ಷರು, ಭಾರತೀಯ ಕೈಗಾರಿಕೆಗಳ ಒಕ್ಕೂಟದ

ದಕ್ಷಿಣ ಕನ್ನಡ ಜಿಲ್ಲಾ ಚಾಪ್ಟರ್‌

ಟಾಪ್ ನ್ಯೂಸ್

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.