Sun; ಸೂರ್ಯಸ್ನಾನ: ಹಲವು ರೋಗಗಳಿಗೆ ರಾಮಬಾಣ
Team Udayavani, Jan 5, 2024, 5:00 AM IST
“ಆರೋಗ್ಯಂ ಭಾಸ್ಕಾರಾಧಿಶ್ಚೇತ್’ ಆರೋಗ್ಯಕ್ಕೆ ಆಗರ ಸೂರ್ಯ. ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ಸೂರ್ಯನನ್ನು ವಿವಿಧ ರೀತಿಯಲ್ಲಿ ಆರಾಧಿ ಸಿಕೊಂಡು ಬಂದಿರುತ್ತಾರೆ. ಪ್ರತೀದಿನ ಬೆಳಗ್ಗೆ ಸೂರ್ಯನಿಗೆ ಅರ್ಘ್ಯ ನೀಡು ವುದು ಪೂರ್ವಜರ ಪದ್ಧತಿಯಾಗಿತ್ತು. ಪುರಾಣಗಳಲ್ಲಿ, ವೇದಗಳಲ್ಲಿ ಸೂರ್ಯಸ್ನಾನದ ಬಗ್ಗೆ ಉಲ್ಲೇಖವಿದೆ. ಅಥರ್ವ ವೇದದಲ್ಲಿ ಸೂರ್ಯ ಸ್ನಾನವು ವಿವಿಧ ರೋಗಗಳಿಗೆ ಮುಖ್ಯವಾಗಿ ಸಂಧಿವಾತ, ಮೂಳೆ ಸವೆತ, ಅಜೀರ್ಣ, ಅಧಿಕ ರಕ್ತ ದೊತ್ತಡ ಹೀಗೆ ಹಲವಾರು ಸಮಸ್ಯೆಗಳಿಗೆ ಉಪಕಾರಿ ಎಂಬುದಾಗಿ ಉಲ್ಲೇಖವಿದೆ.
ಸೂರ್ಯ ಸ್ನಾನ ಮಾಡುವ ವಿಧಾನ
ತೆಳುವಾದ ಬಟ್ಟೆಯನ್ನು ಧರಿಸಬೇಕು. ಸಾಧ್ಯವಾದಷ್ಟು ಮಟ್ಟಿಗೆ ಶರೀರವು ಬಿಸಿಲಿಗೆ ಒಡ್ಡುವಂತಿರಬೇಕು.
ಸೂರ್ಯನ ಬಿಸಿಲಿಗೆ ನಿಲ್ಲುವ ಮುನ್ನ 2-4 ಲೋಟ ನೀರನ್ನು ಕುಡಿದಿರಬೇಕು.
ಅಗತ್ಯವಿದ್ದಲ್ಲಿ ತಲೆಯನ್ನು ಬಟ್ಟೆಯಿಂದ ಕಟ್ಟಿಕೊಳ್ಳುವುದು.
ಸೂರ್ಯನ ಸ್ನಾನದ ಅನಂತರ, ನೆರಳಿನಲ್ಲಿ ನಡೆಯುವುದು ಅಥವಾ ನೀರಿನಿಂದ ಸ್ನಾನ ಮಾಡುವುದು ಉತ್ತಮ.
ಶರೀರಕ್ಕೆ ಎಣ್ಣೆಯಿಂದ ಲೇಪನ ಮಾಡಿಕೊಂಡು ಸೂರ್ಯನ ಬಿಸಿಲಿಗೆ ನಿಂತರೆ ಉತ್ತಮ. ಸೂರ್ಯ ಸ್ನಾನದ ತತ್‌ಕ್ಷಣ ಸ್ನಾನಮಾಡುವುದಾಗಲಿ, ಆಹಾರ ಸೇವನೆಯಾಗಲಿ ಮಾಡಬಾರದು. ಪಾನೀಯ ಸ್ವೀಕರಿಸಬಹುದು.
ಸೂರ್ಯ ಸ್ನಾನದ ಅವಧಿ
ಮುಂಜಾನೆ: ಸೂರ್ಯೋದಯದಿಂದ 2 ಗಂಟೆ
ಸಾಯಂಕಾಲ: ಸೂರ್ಯಾಸ್ತಮಾನಕ್ಕಿಂತ 2 ಗಂಟೆ ಮುನ್ನ
15 ನಿಮಿಷದಿಂದ 30 ನಿಮಿಷಗಳ ವರೆಗೆ ಸೂರ್ಯನ ಬಿಸಿಲಿಗೆ ಶರೀರವನ್ನು ಒಡ್ಡಬಹುದು.
ಮುಂಜಾಗ್ರತೆ
ಬರೀ ಹೊಟ್ಟೆಯಲ್ಲಿ ಅಥವಾ ಹದವಾಗಿ ಆಹಾರ ಸೇವಿಸಬೇಕು.
ಸೂರ್ಯನ ಬಿಸಿಲಿನ ಅಲರ್ಜಿ ಇದ್ದಲ್ಲಿ ಜಾಗರೂಕತೆ ವಹಿಸಬೇಕು.
ಪ್ರಥಮ ಬಾರಿಗೆ ಸೂರ್ಯ ಸ್ನಾನ ಮಾಡುವವರು 10 ನಿಮಿಷಕ್ಕೆ ಮಿತಿಗೊಳಿಸಬಹುದು.
ವಯಸ್ಸಾದವರು, ದೀರ್ಘ ಕಾಲದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಜಾಗರೂಕತೆ ವಹಿಸಬೇಕು.
ಸೂರ್ಯ ಸ್ನಾನದ ಉಪಯೋಗಗಳು
ಪ್ರತೀದಿನ ಸೂರ್ಯ ಸ್ನಾನ ಹಲವಾರು ರೀತಿಯ ಕ್ಯಾನ್ಸರನ್ನು ಮುಖ್ಯವಾಗಿ ಕರುಳಿನ ಕ್ಯಾನ್ಸರ್, ಪ್ರೊಸ್ಟೇಟ್ ಕ್ಯಾನ್ಸರ್, ಸ್ತನದ ಕ್ಯಾನ್ಸರ್ ಹಾಗೂ ಮಲ್ಟಿಪಲ್ ಸ್ಕ್ಲಿರೋಸಿಸ್, ರಕ್ತದೊತ್ತಡ, ಮಧುಮೇಹಗಳನ್ನು ತಡೆಯಲು ಸಹಕಾರಿ.
ಸೂರ್ಯನ ಬೆಳಕಿನಲ್ಲಿ ವಿಟಮಿನ್ ಡಿ ಲಭ್ಯವಿರುವುದು. ಇದು ಮಾನಸಿಕ ಖನ್ನತೆ ಹಾಗೂ ಕಾಲ್ಸಿಯಂ ಹೀರುವಿಕೆಗೆ ಸಹಕಾರಿ. ಹಾಗಾಗಿ ಮೂಳೆ ಸವೆತವನ್ನು ತಡೆಯಲು ಸೂರ್ಯನ ಬೆಳಕು ಸೂಕ್ತ. ಇದರಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ರಕ್ತ ಕಣಗಳು
ಉತ್ಪತ್ತಿಯಾಗಲು ನೆರವಾಗುತ್ತದೆ. ಈ ಬಿಳಿ ರಕ್ತ ಕಣಗಳು ಹಲವು ಬಗೆಯ ಸೋಂಕುಗಳ ವಿರುದ್ಧ ಹೋರಾಡಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ಸೂರ್ಯನ ಬೆಳಕಿನ ಪರಿಣಾಮದಿಂದ ನೈಟ್ರಿಕ್ ಆಕ್ಸೆ„ಡ್, ಮೆಲಟೋನಿನ್, ಸೆರಟೋ ನಿನ್ನಂತಹ ರಾಸಾಯನಿಕ ಪದಾರ್ಥಗಳು ಹೇರಳವಾಗಿ ದೊರೆತು ದೇಹದ ಪ್ರತಿರಕ್ಷಣ ವ್ಯವಸ್ಥೆ ಉತ್ತಮಗೊಳ್ಳುತ್ತದೆ.
ಸೂರ್ಯ ಸ್ನಾನ ವಿವಿಧ ಬಗೆಯ ಚರ್ಮದ ಕಾಯಿಲೆ (ಎಕ್ಸಿಮ, ಸೋರಿಯಾಸಿಸ್) ಗಳ ನಿವಾರಣೆಗೆ ಕೂಡ ಸಹಕಾರಿ.
ಸಂಧಿವಾತ, ನಿದ್ರಾಹೀನತೆ, ಮಾನಸಿಕ ಖನ್ನತೆ, ಸಂಧಿನೋವು, ಮಾನಸಿಕ ಒತ್ತಡ ಹೀಗೆ ಇನ್ನೂ ಹಲವಾರು ಕಾಯಿಲೆಗಳಿಗೆ ಸೂರ್ಯ ಸ್ನಾನ ರಾಮಬಾಣವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸೂರ್ಯ ಸ್ನಾನವು ಯಾವುದೇ ವೆಚ್ಚವಿಲ್ಲದೆ, ಪರಿಕರಗಳ ನೆರ ವಿಲ್ಲದೆ, ಸುಲಭವಾಗಿ, ಸರಳವಾಗಿ ಅನುಸರಿಸಬಹುದಾದ ಮನೆಮದ್ದು ಎಂದೇ ಹೇಳಬಹುದು.
ಡಾ| ಹರ್ಷಿಣಿ,ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.