ಮೆದುಳಿನ ಆರೋಗ್ಯಕ್ಕೆ ಸೂಪರ್‌ ಬ್ರೇನ್‌ ಯೋಗ


Team Udayavani, Jun 15, 2019, 6:00 AM IST

q-24

ಪ್ರತಿದಿನ ನೀವು ಎದ್ದ ನಂತರ ನಿಮ್ಮ ದೇಹದ ಆರೋಗ್ಯವು ನಿಮ್ಮ ದಿನವನ್ನು ನಿರ್ಧರಿಸುತ್ತದೆ. ದೇಹದಲ್ಲಿ ಯಾವುದೇ ಖಾಯಿಲೆ ಇದ್ದರೂ ಸಹ, ಅದು ನಿಮ್ಮ ಉತ್ಸಾಹವನ್ನು ಕುಂದಿಸುತ್ತದೆ ಮತ್ತು ದಿನನಿತ್ಯದ ಚಟುವಟಿಕೆಯ ಸುಗಮ ನಿರ್ವಹಣೆಗೆ ತಡೆಯನ್ನೊಡ್ಡುತ್ತದೆ.

ವ್ಯಾಯಾಮದಿಂದ ನೀವು ದೈಹಿಕವಾಗಿ ಆರೋಗ್ಯದಿಂದ ಇರಬಹುದಾದರೂ ಸಮಗ್ರ ಸ್ವಾಸ್ಥ ್ಯಕ್ಕಾಗಿ ಅದೊಂದೇ ಸಾಕಾಗುವುದಿಲ್ಲ. ನಿಮ್ಮ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯವಾದದ್ದು.

ದಿನನಿತ್ಯದ ಚಟುವಟಿಕೆಗಳ ನಿರ್ವಹಣೆಯಲ್ಲಿ ನಿಮ್ಮ ಮೆದುಳು ಅತಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ತ್ವರಿತವಾಗಿ ಸ್ಪಂದಿಸುವ, ಗ್ರಹಿಸುವ, ಅರ್ಥಮಾಡಿಕೊಳ್ಳುವ ಮತ್ತು ಕಾರ್ಯ ಮಾಡುವ ನಿಮ್ಮ ಸಾಮರ್ಥ್ಯವು, ಮೆದುಳಿನ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ.

ದೇಹದ ಇತರ ಅಂಗಗಳಂತೆಯೇ ಪ್ರತಿನಿತ್ಯ ಮೆದುಳಿಗೂ ಪೌಷ್ಠಿಕತೆ ಮತ್ತು ಶಕ್ತಿ ಅಗತ್ಯ. ನಿತ್ಯ ವ್ಯಾಯಾಮದಿಂದ ದೇಹವು ಸುಸ್ಥಿತಿಯಲ್ಲಿ ಇರುವಂತೆಯೇ ಮೆದುಳಿನ ವ್ಯಾಯಾಮವೂ ಸಹ ಬುದ್ಧಿಯ ಆಲಯದ ಮೇಲೆ ಅದೇ ರೀತಿಯ ಪರಿಣಾಮಗಳನ್ನು ಉಂಟು ಮಾಡುತ್ತವೆ. ಅದರಲ್ಲೂ ಯೋಗಾಸನಗಳು ಮಾನವ ದೇಹವು ಉತ್ತಮವಾಗಿ ಕೆಲಸ ಮಾಡುವಂತೆ ಮಾಡುತ್ತವೆ.

ಉತ್ತಮ ಮೆದುಳಿಗಾಗಿ ಯೋಗ- ಪ್ರಾಣಾಯಾಮ
ಯೋಗ ಒಂದು ವಿಜ್ಞಾನ. ಇದು ನಮ್ಮ ದೇಹವು ತನ್ನದೇ ಮೂಲ ಶಕ್ತಿಗಳನ್ನು ಮತ್ತು ಕೆಲಸ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಂತೆ ಮಾಡುತ್ತದೆ. ಯೋಗವು ತತ್‌ಕ್ಷಣವೇ ಮನೋದೈಹಿಕ ಶಕ್ತಿಯನ್ನು ವರ್ಧಿಸುತ್ತದೆ, ಒತ್ತಡವನ್ನು ನಿವಾರಿಸುತ್ತದೆ ಮತ್ತು ಇದರಿಂದ ಮೆದುಳಿನ ಕಾರ್ಯನಿರ್ವಹಣಾ ಸಾಮರ್ಥ್ಯವೂ ಹೆಚ್ಚುತ್ತದೆ. ಎಡ ಮೂಗಿನ ಹೊಳ್ಳೆಯಿಂದ ಉಸಿರಾಡಿದರೆ ಬಲ ಮೆದುಳು ಸಕ್ರಿಯವಾಗುತ್ತದೆ ಮತ್ತು ಬಲಮೂಗಿನ ಹೊಳ್ಳೆಯಲ್ಲಿ ಉಸಿರಾಡಿದರೆ ಎಡ ಮೆದುಳು ಸಕ್ರಿಯವಾಗುತ್ತದೆ. ಸೂಪರ್‌ ಬ್ರೇನ್‌ ಯೋಗವು ಸರಳವಾದ ಯೋಗಾಸನಗಳ ಸರಣಿಯಾಗಿದ್ದು, ಇದು ವೃತ್ತಿಪರರಲ್ಲಿ ಮತ್ತು ಶಿಕ್ಷಕರಲ್ಲಿ ಹೆಚ್ಚು ಪ್ರಸಿದ್ಧವಾಗಿದೆ.

1) ಭ್ರಮರಿ ಪ್ರಾಣಾಯಾಮ (ದುಂಬಿಯ ಉಸಿರಾಟ)
ಕೋಪ, ಆಶಾಭಂಗ ಮತ್ತು ಆತಂಕದಂತಹ ನಕಾರಾತ್ಮಕ ಭಾವನೆಗಳನ್ನು ತೊಲಗಿಸುತ್ತದೆ. ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತದೆ. ವಿಶ್ವಾಸವನ್ನು ಹೆಚ್ಚಿಸುತ್ತದೆ.

2)ಪಶ್ಚಿಮೊತ್ತನಾಸನ (ಕುಳಿತು ಮುಂದಕ್ಕೆ ಬಗ್ಗುವುದು)
ಬೆನ್ನೆಲುಬನ್ನು ವಿಸ್ತರಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಕೋಪ, ಕಿರಿಕಿರಿಯಂತಹ ನಕಾರಾತ್ಮಕ ಭಾವನೆಗಳನ್ನು ತೆಗೆದು ಮನಸ್ಸಿಗೆ ವಿಶ್ರಾಮ ನೀಡುತ್ತದೆ.

3)ಸೇತು ಬಂಧಾಸನ
ಕತ್ತ‌ು ಮತ್ತು ಬೆನ್ನೆಲುಬನ್ನು ಬಲಿಷ್ಠಗೊಳಿಸಿ, ವಿಸ್ತರಿಸುತ್ತದೆ. ಬಿಗಿಯಾಗಿರುವ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಮೆದುಳಿನ ರಕ್ತಚಲನೆ ಸುಧಾರಿಸುತ್ತದೆ. ಮೆದುಳ‌ು ಮತ್ತು ನರವ್ಯವಸ್ಥೆಯನ್ನು ಪ್ರಶಾಂತ ಗೊಳಿಸುತ್ತದೆ. ಇದರಿಂದ ಆತಂಕ, ಒತ್ತಡ ಮತ್ತು ಖನ್ನತೆಯು ಕುಗ್ಗುತ್ತದೆ.

4)ಸರ್ವಾಂಗಾಸನ (ಭುಜಗಳ ಹಲಗೆ)
ಥೈರಾಯ್ಡ ಮತ್ತು ಪ್ಯಾರಾಥೈರಾಯ್ಡ ಗ್ರಂಥಿಯನ್ನು ನಿಯಂತ್ರಿಸುತ್ತದೆ ಮತ್ತು ಸಾಮಾನ್ಯ ಸ್ಥಿತಿಗೆ ತರುತ್ತದೆ. ಹೆಚ್ಚು ರಕ್ತವು ಪೀನಿಯಲ್ ಮತ್ತು ಹೈಪೊಥಲಾಮಸ್‌ ಗ್ರಂಥಿಯನ್ನು ತಲುಪಿ ಮೆದುಳಿಗೆ ಹೆಚ್ಚು ಪೌಷ್ಠಿಕತೆಯನ್ನು ನೀಡಿ ಪೋಷಿಸುತ್ತದೆ.

5)ಹಲಾಸನ (ನೇಗಿಲ ಆಸನ)
ಮೆದುಳಿನ ರಕ್ತ ಸಂಚಾರವನ್ನು ಹೆಚ್ಚಿಸಿ, ನರ ವ್ಯವಸ್ಥೆಯನ್ನು ಪ್ರಶಾಂತಗೊಳಿಸುತ್ತದೆ. ಬೆನ್ನನ್ನು, ಕತ್ತನ್ನು ವಿಸ್ತರಿಸುತ್ತದೆ, ಒತ್ತಡವನ್ನು, ದಣಿವನ್ನು ನಿವಾರಿಸುತ್ತದೆ.

ಸೂಪರ್‌ ಬ್ರೇನ್‌ ಯೋಗವನ್ನು ಮಾಡುವುದು ಹೇಗೆ?

∙ ನೇರವಾಗಿ, ಉದ್ದವಾಗಿ ನಿಲ್ಲಿ. ನಿಮ್ಮ ತೋಳುಗಳು ದೇಹದ ಬದಿಯಲ್ಲಿರಲಿ.

∙ ನಿಮ್ಮ ಎಡತೋಳನ್ನು ಎತ್ತಿ ಮತ್ತು ನಿಮ್ಮ ಬಲಗಿವಿಯ ಕೆಳ ಭಾಗವನ್ನು ನಿಮ್ಮ ಹೆಬ್ಬೆರಳಿನಿಂದ ಮತ್ತು ತೋಳ್ಬೆರಳಿನಿಂದ ಹಿಡಿಯಿರಿ. ನಿಮ್ಮ ಹೆಬ್ಬೆರಳು ಮುಂದಿರಲಿ.

∙ ದೀರ್ಘ‌ ಉಸಿರನ್ನು ಒಳಗೆ ತೆಗೆದುಕೊಳ್ಳಿ ಮತ್ತು ಕುಳಿತುಕೊಳ್ಳುವ ಭಂಗಿಗೆ ಬನ್ನಿ.

∙ ಈ ಭಂಗಿಯಲ್ಲಿ 2-3 ಸೆಕೆಂಡುಗಳವರೆಗೆ ಇರಿ.

∙ ಮೇಲೇಳುತ್ತ ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ. ಇದರಿಂದ ಒಂದು ಚಕ್ರ ಮುಗಿಯುತ್ತದೆ. ಈ ಚಕ್ರವನ್ನು ಪ್ರತಿನಿತ್ಯ 15 ಸಲ ಪುನರಾವರ್ತಿಸಿ.

ಸೂಪರ್‌ ಬ್ರೇನ್‌ ಯೋಗದ ಲಾಭಗಳು

ಸೂಪರ್‌ ಬ್ರೇನ್‌ ಯೋಗವು ನಿಮ್ಮ ಕಿವಿಯಲ್ಲಿರುವ ಆಕ್ಯುಪಂಕ್ಚರ್‌ನ ಸ್ಥಳಗಳನ್ನು ಸಕ್ರಿಯವಾಗಿಸುತ್ತದೆ. ಇವು ನಿಮ್ಮ ಮೆದುಳಿನ ಗ್ರೇ ಮ್ಯಾಟರನ್ನು ಪ್ರಚೋದಿಸುತ್ತದೆ. ಸೂಪರ್‌ ಬ್ರೇನ್‌ ಯೋಗವು ಮೆದುಳಿನ ಎಡ ಮತ್ತು ಬಲ ಭಾಗಗಳ ನಡುವೆ ಸಮನ್ವಯತೆಯನ್ನು ತರುತ್ತದೆ. ಶಕ್ತಿಯ ಮಟ್ಟಗಳನ್ನು ಹಂಚಿ, ಪ್ರಶಾಂತತೆಯನ್ನು ತರಿಸುತ್ತದೆ. ಆಲೋಚಿಸುವ ಸಾಮರ್ಥ್ಯವನ್ನು ಪ್ರಚೋದಿಸುತ್ತದೆ. ಮಾನಸಿಕ ಶಕ್ತಿಯನ್ನು ವರ್ಧಿಸುತ್ತದೆ. ನಿಮ್ಮಲ್ಲಿ ಹೆಚ್ಚು ಸೃಜನಶೀಲತೆಯನ್ನು ತರಿಸುತ್ತದೆ.

ಗುರುತಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಏಕಾಗ್ರತೆ, ಮತ್ತು ಸ್ಮರಣ ಶಕ್ತಿಯನ್ನು ಸುಧಾರಿಸುತ್ತದೆ. ನಿರ್ಧಾರವನ್ನು ಮಾಡುವ ಕುಶಲತೆಗಳನ್ನು ವರ್ಧಿಸುತ್ತದೆ. ಒತ್ತಡವನ್ನು ಅಥವಾ ವರ್ತನೆಯ ಸಮಸ್ಯೆಗಳನ್ನು ನೀಗಿಸುತ್ತದೆ. ಮಾನಸಿಕವಾಗಿ ಹೆಚ್ಚು ಸಮತೋಲನವುಳ್ಳವರಾಗಿರುತ್ತೀರಿ.

ಧ್ಯಾನದಿಂದ ಮೆದುಳಿನ ಶಕ್ತಿಯನ್ನು ವರ್ಧಿಸಿಕೊಳ್ಳುವುದು

2011ನಲ್ಲಿ ಹಾರ್ವರ್ಡ್‌ ಸಂಶೋಧಕರು ಮಸಾಚುಸೆಟ್ಸ್‌ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ, ಎಂಟು ವಾರಗಳ ಧ್ಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ನೆನಪಿನಶಕ್ತಿ, ಆತ್ಮವಿಶ್ವಾಸ, ಸಹಾನುಭೂತಿ ಮತ್ತು ಒತ್ತಡದ ವಿಷಯಗಳಲ್ಲಿ, ಮೆದುಳಿನಲ್ಲಿ ಮಾಪಿಸ ಬಹುದಾದಷ್ಟು ಬದಲಾವಣೆಗಳನ್ನು ಗುರುತಿಸಬಹುದಾಗಿದೆ.

ಎಲ್ಲರೂ ಗಮನಿಸಬೇಕಾದ ಒಂದು ಪ್ರಮುಖ ವಿಚಾರವೆಂದರೆ ಯೋಗ ಅಭ್ಯಾಸ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಅಭಿವೃದ್ಧಿಯಾಗುತ್ತದೆಯಾದರೂ ಅದು ಔಷಧಿಗೆ ಪರ್ಯಾಯವಲ್ಲ. ತರಬೇತಿ ಪಡೆದ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲೇ ಯೋಗ ಅಭ್ಯಾಸವನ್ನು ಸರಿಯಾಗಿ ಕಲಿತು, ಮಾಡುವುದು ಒಳಿತು. ನಿಮಗೆ ಯಾವುದೇ ರೀತಿಯಾದ ವೈದ್ಯಕೀಯ ಸಮಸ್ಯೆಯಿದ್ದಲ್ಲಿ ನಿಮ್ಮ ವೈದ್ಯರ, ಯೋಗದ ಶಿಕ್ಷಕರ ಮಾರ್ಗದರ್ಶನ ಪಡೆದ ನಂತರವೇ ಯೋಗವನ್ನು ಮಾಡುವುದು ಒಳಿತು.

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.