ಅಮ್ಮನ ನೆನೆಯುವ ಮನಗಳು ಅನೇಕ
Team Udayavani, Aug 8, 2019, 5:26 AM IST
ವಿದೇಶಗಳಲ್ಲಿ ಸಿಲುಕಿದ್ದ ಸಾವಿರಾರು ಭಾರತೀಯರನ್ನು ರಕ್ಷಿಸಿ ತಂದ, ಅನೇಕ ಪಾಕಿಸ್ತಾನಿಗಳಿಗೆ ಭಾರತದಲ್ಲಿ ಆರೋಗ್ಯ ಸೇವೆ ಒದಗಿಸಿದ ಹೆಗ್ಗಳಿಕೆ ಸುಷ್ಮಾರದ್ದು. ಅವರ ಕಾರ್ಯಕಾಲದಲ್ಲಿ ಯಾರು ಬೇಕಾದರೂ ವಿದೇಶಾಂಗ ಸಚಿವಾಲಯದ ನೆರವನ್ನು ಸುಲಭವಾಗಿ ಪಡೆಯಬಹುದಿತ್ತು. ಕಷ್ಟ ಎಂದು ಒಂದು ಟ್ವೀಟ್ ಮಾಡಿದರೂ ಸಾಕು, ಸುಷ್ಮಾ ಸ್ವರಾಜ್ ಕೂಡಲೇ ಸ್ಪಂದಿಸುತ್ತಿದ್ದರು. ಹೀಗೆ ಕಷ್ಟದ ಸುಳಿಗೆ ಸಿಲುಕಿದ್ದ ಅನೇಕ ಕುಟುಂಬಗಳಿಗೆ ಸುಷ್ಮಾ ನೆರವಿಗೆ ಬಂದರು. ಸ್ವರಾಜ್‌ರ ನಿಧನದ ಹಿನ್ನೆಲೆಯಲ್ಲಿ, ಅವರಿಂದ ಸಹಾಯ ಪಡೆದವರು ನೆನಪಿಸಿಕೊಂಡದ್ದು ಹೀಗೆ…
ಅಮ್ಮನನ್ನು ಕಳೆದುಕೊಂಡ ಹಿಂದೂಸ್ತಾನದ ಮಗಳು
ತನ್ನ 8ನೆಯ ವಯಸ್ಸಿನಲ್ಲಿ ಸಮಝೋತಾ ಎಕ್ಸಪ್ರಸ್ ರೈಲೇರಿ ಪಾಕಿಸ್ತಾನಕ್ಕೆ ತಪ್ಪಿಸಿಕೊಂಡು ಹೋಗಿದ್ದ ‘ಗೀತಾ’ ಎಂಬ ಕಿವುಡ-ಮೂಗ ಯುವತಿಯನ್ನು ಭಾರತಕ್ಕೆ ಕರೆತರುವಲ್ಲಿ ವಿಶೇಷ ಮುತುವರ್ಜಿ ತೋರಿದ್ದರು ಸುಷ್ಮಾ ಸ್ವರಾಜ್. ಗೀತಾಗೆ ತನ್ನ ಊರು ಯಾವುದು, ಪೋಷಕರು ಯಾರು ಎನ್ನುವುದೂ ನೆನಪಿಲ್ಲ. ಆದರೆ ಆಕೆಯನ್ನು ದೇಶಕ್ಕೆ ಕರೆತಂದಾಗ ಸುಷ್ಮಾ ಅವರು ಹೇಳಿದ ಮಾತು ಒಂದೇ-”ಗೀತಾ ಹಿಂದೂಸ್ತಾನದ ಮಗಳು. ಆಕೆಗೆ ತನ್ನ ಕುಟುಂಬದವರು ಸಿಗದೇ ಹೋದರೂ, ನಾವು ಆಕೆಯನ್ನು ಪಾಕ್‌ಗೆ ವಾಪಸ್ ಕಳುಹಿಸುವುದಿಲ್ಲ. ಭಾರತ ಸರ್ಕಾರವೇ ಇನ್ಮುಂದೆ ಗೀತಾಳನ್ನು ಪೋಷಿಸಲಿದೆ”
ವಿದೇಶಾಂಗ ಸಚಿವಾಲಯದ ಪ್ರಯತ್ನದ ಫಲವಾಗಿ 2015ರಲ್ಲಿ ಭಾರತಕ್ಕೆ ಹಿಂದಿರುಗಿದ ಗೀತಾ ಈಗ ಇಂದೋರ್‌ನ ಸರ್ಕಾರೇತರ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾ, ಸರ್ಕಾರಿ ಹಾಸ್ಟೆಲ್ನಲ್ಲಿ ತಂಗಿದ್ದಾಳೆ. ‘ಗೀತಾಗೆ ಅಮ್ಮನಾಗಿದ್ದರು ಸುಷ್ಮಾ. ಅವರ ಸಾವಿನ ಸುದ್ದಿ ಕೇಳಿ ಗೀತಾ ಬಹಳ ವೇದನೆ ಪಡುತ್ತಿದ್ದಾಳೆ. ತನ್ನ ಆಧಾರ ಸ್ತಂಭವೇ ಕುಸಿದಿದೆ ಎಂದು ಸನ್ನೆ ಭಾಷೆಯಲ್ಲಿ ಹೇಳುತ್ತಿದ್ದಾಳೆ. ಸುಷ್ಮಾ ಅವರು ಆಗಾಗ ಕರೆ ಮಾಡಿ ಗೀತಾ ಬಗ್ಗೆ ವಿಚಾರಿಸುತ್ತಿದ್ದರು. ಗೀತಾ ಕೂಡ ಅನೇಕ ಬಾರಿ ದೆಹಲಿಗೆ ತೆರಳಿ ಅವರನ್ನು ಭೇಟಿಯಾಗಿ ಬರುತ್ತಿದ್ದಳು’ ಎನ್ನುತ್ತಾರೆ ಹಾಸ್ಟೆಲ್ನ ವಾರ್ಡನ್.
ಸುಷ್ಮಾ, ನನ್ನ ಪಾಲಿನ ಝಾನ್ಸಿ ರಾಣಿ
ಭಾರತದ ಇಂಜಿನಿಯರ್ ಹಮೀದ್ ಅನ್ಸಾರಿ, ತನ್ನ ಆನ್‌ಲೈನ್ ಪ್ರಿಯತಮೆಯನ್ನು ಭೇಟಿಯಾಗುವುದಕ್ಕಾಗಿ ಪಾಕಿಸ್ತಾನಕ್ಕೆ ತೆರಳಿ, ಅಲ್ಲಿ ನಕಲಿ ಪಾಸ್‌ಪೋರ್ಟ್ ಹೊಂದಿದ ಆರೋಪದಲ್ಲಿ ಜೈಲು ಸೇರಿಬಿಟ್ಟಿದ್ದರು. ಆರು ವರ್ಷ ಸೆರೆವಾಸದಲ್ಲಿದ್ದ ಅವರನ್ನು ಬಿಡಿಸಿಕೊಂಡು ಬರಲು ಭಾರತದ ವಿದೇಶಾಂಗ ಸಚಿವಾಲಯ ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಹಮೀದ್‌ತಾಯಿ ಫೌಜಿಯಾ ಅನ್ಸಾರಿಯವರು ಸುಷ್ಮಾ ಸ್ವರಾಜ್‌ರ ನಿಧನ ವಾರ್ತೆ ಕೇಳಿ ದುಃಖೀತರಾಗಿದ್ದಾರೆ…ಸುಷ್ಮಾರನ್ನು ಅವರು ನೆನೆದದ್ದು ಹೀಗೆ:
ಪಾಕ್ ಜೈಲಿನಲ್ಲಿ ಸಿಲುಕಿದ್ದ ನನ್ನ ಮಗ ಹಮೀದ್ ಭಾರತಕ್ಕೆ ಹಿಂದಿರುಗುತ್ತಾನೆಂದು ನಾನು ಕನಸುಮನಸಲ್ಲೂ ಯೋಚಿಸಿರಲಿಲ್ಲ. ಅವನನ್ನು ವಾಪಸ್ ಕರೆತಂದ ಸುಷ್ಮಾ ಸ್ವರಾಜ್‌ರ ಋಣ ಹೇಗೆ ತೀರಿಸಲಿ? ಅವರು ನಮಗಾಗಿ ಎಷ್ಟು ಶ್ರಮವಹಿಸಿದರೆಂದರೆ, ನನ್ನ ಇಡೀ ಕುಟುಂಬವೇ ಅವರಿಗೆ ಚಿರಋಣಿಯಾಗಿದೆ. ಸುಷ್ಮಾ ನನ್ನ ಪಾಲಿನ ಝಾನ್ಸಿ ರಾಣಿ ಇದ್ದಂತೆ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಇದನ್ನು ಕೇಳಿದಾಗೆಲ್ಲ ಸುಷ್ಮಾ ನಗುತ್ತಿದ್ದರು.
ನನ್ನ ಮಗನನ್ನು ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ನಾನು ಅವರನ್ನು ಏಳೆಂಟು ಬಾರಿ ಭೇಟಿಯಾಗಿದ್ದೇನೆ. ಅವರನ್ನು ಮೊದಲ ಬಾರಿ ಭೇಟಿಯಾದ ಘಟನೆ ಚೆನ್ನಾಗಿ ನೆನಪಿದೆ. ಸುಷ್ಮಾ ವಿದೇಶಾಂಗ ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನವದು. ಈ ಕಾರಣಕ್ಕಾಗಿ ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಅವರ ಬಂಗಲೆ ಎದುರಿಗೆ ಜಮಾಯಿಸಿದ್ದರು. ನಾನು ಈ ಗುಂಪಿನ ಒಳಗೆ ತೂರಿ, ಕಾರಿನೆಡೆಗೆ ಹೋಗುತ್ತಿದ್ದ ಸುಷ್ಮಾರತ್ತ ಹೋದೆ. ಅವರು ಇನ್ನೇನು ಕಾರ್ ಏರಬೇಕು, ಆಗ ನಾನು ‘ಮೇಡಂ, ನಿಮಗೆ ಕೊಡಲು ನಾನು ಹೂವು, ಗಿಫ್ಟ್ಗಳನ್ನು ತಂದಿಲ್ಲ. ನನ್ನ ಬಳಿ ಬರೀ ಕಣ್ಣೀರೊಂದೇ ಇದೆ’ ಎಂದೆ. ಈ ಮಾತು ಕೇಳಿದ್ದೇ ಸುಷ್ಮಾ ನನ್ನತ್ತ ಧಾವಿಸಿ ಬಂದು ತಬ್ಬಿಕೊಂಡರು.
‘ಸಂಜೆ 4 ಗಂಟೆಗೆ ನನ್ನ ಕಚೇರಿಗೆ ಬಂದುಬಿಡಿ’ ಎಂದು ಹೇಳಿದರು. ನನಗೆ ಆಘಾತವಾಯಿತು.
‘ಮೇಡಂ, ಇವತ್ತೇ ಸಂಜೇನಾ?’ ಅಂದೆ.
‘ಹೌದು, ಇವತ್ತೇ ಸಂಜೆ’ ಅಂದರು.
ನಂತರ ಹಲವಾರು ಬಾರಿ, ನಾನು ಮತ್ತು ಕುಟುಂಬದವರು ಸುಷ್ಮಾರನ್ನು ಭೇಟಿಯಾದೆವು. ಬಹುತೇಕ ಬಾರಿ ನಾವು ಅಪಾಯಿಂಟ್ಮೆಂಟ್ ಅನ್ನೇ ತೆಗೆದುಕೊಳ್ಳುತ್ತಿರಲಿಲ್ಲ. ಆದರೂ ಪ್ರತಿ ಬಾರಿಯೂ ಅವರು ನಮ್ಮನ್ನು ಆದರದಿಂದ ಬರಮಾಡಿಕೊಂಡು, ಪ್ರೀತಿಯಿಂದ ಮಾತನಾಡುತ್ತಿದ್ದರು. ಕೊನೆಗೂ ವಿದೇಶಾಂಗ ಸಚಿವಾಲಯದ ಪ್ರಯತ್ನದ ಫಲವಾಗಿ ಹಮೀದ್ ಪಾಕಿಸ್ತಾನದಿಂದ ಬಿಡುಗಡೆಗೊಂಡ. ಅವನು ವಾಪಸ್ ಬಂದದ್ದೇ, ಅವನನ್ನು ನೇರವಾಗಿ ಸುಷ್ಮಾ ಸ್ವರಾಜ್‌ರ ಬಳಿ ಕರೆದೊಯ್ದೆವು. ನಮಗಾಗಿ ಅವರು ತುಂಬಾ ಖುಷಿಪಟ್ಟರು. ‘ನಿಮ್ಮ ಕಷ್ಟದ ದಿನಗಳೆಲ್ಲ ಮುಗಿದುಹೋದವು. ಖುಷಿಯಾಗಿರಿ. ಏನೇ ಬೇಕಾದರೂ ನನ್ನನ್ನು ಸಂಪರ್ಕಿಸಿ. ಹಮೀದ್ ನನ್ನ ಮಗನಿದ್ದಂತೆ’ ಎನ್ನುತ್ತಾ ನಮ್ಮಿಬ್ಬರನ್ನೂ ತಬ್ಬಿಕೊಂಡರು.
ಸುಷ್ಮಾಜೀ ಅಪರೂಪದ ರಾಜಕಾರಣಿಯಾಗಿದ್ದರು. ನನ್ನ ಮಗ ಕೇಸ್ ಗೆಲ್ಲಲು ತುಂಬಾ ಸಹಾಯ ಮಾಡಿದ ಪಾಕಿಸ್ತಾನಿ ಪತ್ರಕರ್ತೆ ಝೀನತ್ ಶೆಹಜಾದಿ-‘ಸುಷ್ಮಾರ ಬಗ್ಗೆ ಪಾಕಿಸ್ತಾನಿಯರಿಗೆ ಬಹಳ ಗೌರವವಿದೆ’ ಎಂದೇ ಹೇಳುತ್ತಿದ್ದರು. ಮೇಡಂ ಇಲ್ಲ ಎನ್ನುವುದು ತಿಳಿದು ತುಂಬಾ ನೋವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.