ನರೇಂದ್ರನನ್ನು ವಿವೇಕಾನಂದನಾಗಿ ರೂಪುಗೊಳಿಸಿದ ಬಗೆ ಇದು
Team Udayavani, Jan 12, 2021, 10:00 AM IST
1881:
ಕೋಲ್ಕತಾದಲ್ಲಿ ಸುರೇಂದ್ರನಾಥ ಮಿತ್ರರ ಮನೆಗೆ 1881ರ ನವೆಂಬರ್‌ನಲ್ಲಿ ನರೇಂದ್ರ (ಸ್ವಾಮಿ ವಿವೇಕಾನಂದ) ತೆರಳಿದ್ದಾಗ ಅಲ್ಲಿ ರಾಮಕೃಷ್ಣ ಪರಮಹಂಸರನ್ನು ಭೇಟಿಯಾದರು. ಇದು ಅವರಿಬ್ಬರ ಮೊದಲ ಭೇಟಿ. ನರೇಂದ್ರನಿಗೆ ಪರಮಹಂಸ ಅವರ ವ್ಯಕ್ತಿತ್ವದಲ್ಲಿ ವಿಶೇಷ ಕಂಡಿತ್ತು. ಅವರಿಗೆ ಗುರುಗಳು “ದೇವರನ್ನು ನೋಡಿದ್ದೀಯಾ’ ಎಂದಾಗ “ಹೌದು’ ಎಂದದ್ದು ಅವರ ಜೀವನಕ್ಕೆ ತಿರುವು ನೀಡಿತು.
1882 :
1882ರ ಜನವರಿಯಲ್ಲಿ ಎರಡನೇ ಬಾರಿ ನರೇಂದ್ರನಿಗೆ ರಾಮಕೃಷ್ಣ ಪರಮಹಂಸರ ವಿಶೇಷ ಶಕ್ತಿಯ ಅನುಭವವಾಗಿತ್ತು. ತಮ್ಮ ಎದೆಯ ಮೇಲೆ ಅವರು ಪಾದವನ್ನು ಇರಿಸಿದಾಗ ಹಿಂದಿನ ಎಲ್ಲ ಘಟನೆಗಳು ಅವರಿಗೆ ಮರೆತು ಹೋಗಿತ್ತು. ಅಲ್ಲದೇ ಇವರು ಸಾಮಾನ್ಯ ವ್ಯಕ್ತಿಯಲ್ಲ ಎಂಬ ಅರಿವಾಗುತ್ತದೆ. ನರೇಂದ್ರ ಬಳಿಕ ರಾಮಕೃಷ್ಣ ಅವರ ಪ್ರವಚನವನ್ನು ಕೇಳಲು ದಕ್ಷಿಣೇಶ್ವರಕ್ಕೆ ಬರುತ್ತಿದ್ದರು.
1886 :
1884ರ ಫೆಬ್ರವರಿ 25ರಂದು ತಂದೆ ತೀರಿದಾಗ ನರೇಂದ್ರನಿಗೆ ರಾಮಕೃಷ್ಣರು ಸಾಂತ್ವನ ಹೇಳಿದ್ದರು. ಮುಂದೆ ಅವರು ರಾಮಕೃಷ್ಣ ಅವರನ್ನು ಗುರುಗಳನ್ನಾಗಿ ಸ್ವೀಕರಿಸಿದರು. 1886ರ ಜನವರಿಯಲ್ಲಿ ರಾಮಕೃಷ್ಣರು ತಮ್ಮ 12 ಮಂದಿ ಶಿಷ್ಯರಿಗೆ ಸನ್ಯಾಸ ದೀಕ್ಷೆ ನೀಡಿದರು.ಈ ಸಂದರ್ಭ ಅವರ ಹೆಸರನ್ನೂ ಬದಲಾವಣೆ ಮಾಡಲಾಯಿತು. ನರೇಂದ್ರನ ಹೆಸರು ಸ್ವಾಮಿ ವಿವೇಕಾನಂದ ಎಂದಿಡಲಾಯಿತು.
1888 :
1886ರ ಆಗಸ್ಟ್ 16ರಂದು ರಾಮಕೃಷ್ಣ ಪರಮಹಂಸರು ನಿಧನ ಹೊಂದಿದರು. ಒಂದು ತಿಂಗಳ ಅನಂತರ ಬಾರನಗೋರದಲ್ಲಿ ಶಿಥಿಲವಾದ ಮನೆಯನ್ನು ಖರೀದಿಸಿ, ಮುಂದೆ ಆ ಮನೆಯೇ ರಾಮಕೃಷ್ಣ ಮಠದ ಮೊದಲ ಶಾಖೆಯಾಯಿತು. ಈಗ ವಿಶ್ವಾದ್ಯಂತ ಶಾಖೆಗಳನ್ನು ಹೊಂದಿದೆ. 1888ರಲ್ಲಿ ಮೊದಲ ಬಾರಿಗೆ ಸಹಚರರೊಂದಿಗೆ ವಿವೇಕಾನಂದರು ವಾರಾಣಸಿಗೆ ಪ್ರಯಾಣಿಸಿದರು.
1892 :
ನಡೆದುಕೊಂಡು, ಎತ್ತಿನ ಗಾಡಿ, ರೈಲಿನಲ್ಲೇ ಹೆಚ್ಚಾಗಿ ಭಾರತದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಸ್ವಾಮಿ ವಿವೇಕಾನಂದರು ಸಂಚರಿಸಿ ದ್ದರು. ಹಾಗಾಗಿ ಪರಿವ್ರಾಜಕ ಸನ್ಯಾಸಿಯೆಂದೇ ಪ್ರಸಿದ್ಧರಾಗಿದ್ದರು. 1892ರ ಡಿಸೆಂಬರ್‌ನಲ್ಲಿ ವಿವೇಕಾನಂದರು ಕನ್ಯಾಕುಮಾರಿಗೆ ಭೇಟಿ ನೀಡಿದ್ದು, ಪಾರ್ವತಿ ದೇವರ ದರ್ಶನ ಪಡೆದಿದ್ದರು. ಇದು ಅವರ ನೆಚ್ಚಿನ ತಾಣವಾಗಿದ್ದು, ಇಲ್ಲೇ ಬಳಿಕ ಅವರ ಮೂರ್ತಿಸ್ಥಾಪಿಸಲಾಯಿತು.
1893 :
ವಿವೇಕಾನಂದರು ಕೊಲಂಬಿಯಾ, ಹಾಂಕಾಂಗ್, ಒಸಾಕೋ, ಕ್ಯೂಟೋ, ಟೋಕಿಯೋದಲ್ಲಿ ನೀಡಿದ ಪ್ರವಚನದ ಬಳಿಕ ಚಿಕಾಗೋ ಧರ್ಮ ಸಂಸತ್ತಿನ ಅಧಿವೇಶನದಲ್ಲಿ ಮಾತನಾಡಲು ಅವಕಾಶ ದೊರೆಯಿತು. ಅಂದಿನ ಭಾಷಣ ಇಂದಿಗೂ ಪ್ರಮುಖ ದಾಖಲೆಯಾಗಿ ಉಳಿದಿದ್ದು, ಭಾರತೀಯರ ಸಂಸ್ಕೃತಿ ಮತ್ತು ಮಹತ್ವವನ್ನು ಜಗತ್ತಿಗೆ ಸಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.