ವಿವೇಕ ಜಯಂತಿ : ವಿವೇಕ ಚಿಂತನೆ ಉದ್ಧಾರಕ್ಕಿದುವೇ ಸೋಪಾನ !


Team Udayavani, Jan 12, 2021, 8:00 AM IST

ವಿವೇಕ ಚಿಂತನೆ  ಉದ್ಧಾರಕ್ಕಿದುವೇ ಸೋಪಾನ !

ಸ್ವಾಮಿ ವಿವೇಕಾನಂದರೆಂಬ ವಿಶ್ವಮಾನವ  ಪ್ರತಿಪಾದಿಸಿದ ವಿಚಾರ ಗಳು ತಮ್ಮ ವೈಶಾಲ್ಯತೆ ಹಾಗೂ ಲೋಕೋಪಯೋಗಿತ್ವ ಗುಣವಿಶೇಷ ಗಳಿಗೆ ಹೆಸರಾಗಿವೆ. ಅವರು ಕೇವಲ ತಮ್ಮ ಬಹು ಮುಖ ವ್ಯಕ್ತಿತ್ವಕ್ಕಷ್ಟೇ ಖ್ಯಾತರಾಗದೆ ಬಹುದೊಡ್ಡ ದೂರದರ್ಶಿತ್ವಕ್ಕೂ ಹೆಸರಾಗಿದ್ದರು. ಸ್ವಾಮಿ ವಿವೇಕಾನಂದರ ಅದ್ಭುತ ಸಮಾಜ ಸುಧಾರಣಾತಣ್ತೀ, ರಾಷ್ಟ್ರ ತಣ್ತೀ ಮತ್ತು ನಿರ್ವಹಣ ಕೌಶಲದ ವಿಧಾನಗಳು ಹೆಸರು ವಾಸಿಯಾ ದವು. ಸರ್ವವಿಧಗಳಿಂದಲೂ ಮಾನವೋತ್ಥಾನವನ್ನು ಸಾಧಿಸು ವುದು ಅವರ ಬದುಕಿನ ಧ್ಯೇಯವಾಗಿದ್ದಿತು.

ಸ್ವಾಮಿ ವಿವೇಕಾನಂದರು ಪ್ರತಿಪಾದಿಸುವ ವಿಚಾರಗಳಿಗೆ ಉಪನಿಷತ್ತಿನ ಹಿನ್ನೆಲೆ ಇದೆ. ಅವರು ಮನುಷ್ಯನ ಅಭ್ಯುದಯಕ್ಕೆ ಆತನ ಆಧ್ಯಾತ್ಮಿಕ ಸ್ವರೂಪಕ್ಕೆ ಪ್ರತಿಬಂಧಕವಾಗಿ ನಿಂತ ಕಳೆಯ ನಿರ್ಮೂಲನ ಕಾರ್ಯಕ್ಕೆ ಒತ್ತು ನೀಡಿದರೇ ವಿನಃ ಕೇವಲ ಜೈವಿಕ ವಿನ್ಯಾಸವನ್ನು ಸುಂದರಗೊಳಿಸುವ ಕಾರ್ಯಕ್ಕಲ್ಲ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ: “Man is potentially divine. Infinite perfection is in every man, though unmanifested…. to succeed we must have tremendous perseverance, tremendous will…”…

ಸಮಾಜದ ಪ್ರಸ್ತುತ ಅವಶ್ಯಕತೆಗಳಿಗೆ ತಕ್ಕಂತೆ ಅನೇಕ ವಿಧಗಳಲ್ಲಿ ಪರಿವರ್ತನೆಗೆ ಒಳಗಾಗಬೇಕೆಂದು ಪ್ರತಿಪಾದಿಸಿದರೂ ಮಾನವನ ಎಲ್ಲ ಪ್ರಯತ್ನಗಳ ಹಿಂದೆ ಮೂಲವಾಗಿರುವ ಶಾಶ್ವತ ಮೌಲ್ಯಗಳನ್ನು ಬಿಡುವುದಾಗಲಿ ಅಥವಾ ಬದಲಾಯಿಸಬೇಕಾದ ಔಚಿತ್ಯವಾಗಲಿ ಇಲ್ಲವೆಂದು ಸ್ವಾಮಿ ವಿವೇಕಾನಂದರು ಬಲವಾಗಿ ಸಾರಿದ್ದಾರೆ. ಅವರು ಬೋಧಿಸಿದ್ದು ಉಪನಿಷತ್ತುಗಳನ್ನು ಮಾತ್ರ.  ಅವರು ಪ್ರತಿಪಾದಿಸಿದ್ದು ಜೈವಿಕವಾದ ಮಾನವನ ಅಸ್ತಿತ್ವವನ್ನಲ್ಲ, ಮಾನವನ ಆಧ್ಯಾತ್ಮಿಕ ಅಸ್ತಿತ್ವವನ್ನು. ಆದ್ದರಿಂದ ನಾವು ಸ್ವಾಮೀಜಿ ಯವರ ಚಿಂತನೆಗಳಿಗಿರುವ ಸಾರ್ವಕಾಲಿಕ ಪ್ರಸ್ತುತತೆಯನ್ನು ಪೂರ್ವಾಗ್ರಹವಿಲ್ಲದೆ ಸಮ್ಮತಿಸಬೇಕಿದೆ.  ಸ್ವಾಮಿ ವಿವೇಕಾನಂದರ ಚಿಂತನೆಗಳ ವಿರಾಟ್‌ ಸ್ವರೂಪದ ಕೆಲವು ಆಯಾಮಗಳನ್ನು ಕುರಿತು ಚಿಂತನೆ ನಡೆಸಬೇಕಾದ ಸಂದರ್ಭವಿದು.

ಮಾನವ ವಿಕಾಸತತ್ತ್ವ :

ವಿಜ್ಞಾನಿ ಡಾರ್ವಿನ್‌, ಏಕಕೋಶಜೀವಿಯು ಮಾನವನ ಹಂತಕ್ಕೆ ವಿಕಸನ ಹೊಂದಿದಾಗ ವಿಕಾಸ ಪ್ರಕ್ರಿಯೆ ಮುಕ್ತಾಯ ವಾಯಿತೆಂದು ಸಾರುತ್ತಾನೆ. ಆದರೆ ಸ್ವಾಮಿ ವಿವೇಕಾನಂದರು ಹೇಳುತ್ತಾರೆ: “ಮಾನವನು ಅಸತ್ಯದಿಂದ ಸತ್ಯದೆಡೆಗೆ ಪಯಣಿಸು ವುದಿಲ್ಲ, ಸತ್ಯದಿಂದಲೇ ಸತ್ಯದೆಡೆಗೆ. ಅರ್ಥಾತ್‌ ಅಲ್ಪ ಸತ್ಯದಿಂದ ಪೂರ್ಣ ಸತ್ಯದೆಡೆಗೆ ಪಯಣಿಸುತ್ತಾನೆ. ಪ್ರಾಣಿಸಂಕುಲಕ್ಕೆ ಅನ್ವಯಿ ಸುವ ಅಸ್ತಿತ್ವಕ್ಕಾಗಿ ಹೋರಾಟ ಎಂಬ ನಿಯಮವು ಮಾನವನ ವಿಕಾಸದ ಹಂತದಲ್ಲಿ ಬಾಲಿಶವೆನಿಸುತ್ತದೆ ಮತ್ತು ಈ ಹಂತದಲ್ಲಿ ವಿಕಾಸಕ್ಕಾಗಿ ಹೋರಾಟ ಎಂಬ ಉದಾತ್ತ ತಣ್ತೀಕ್ಕೆ ತಲೆಬಾಗುತ್ತದೆ. ಮಂಗನಲ್ಲಿ ಮಾನವ ಹುದುಗಿದ್ದನೆಂದು ನಂಬುವುದಾದರೆ ಮಾನವನಲ್ಲಿ ದೈವ ಹುದುಗಿದೆ ಎಂಬುದು ಮಹಾನ್‌ ಸತ್ಯವ ಲ್ಲವೇ?’ ಎಂದಿದ್ದಾರೆ. ಇಲ್ಲಿ ಮಾನವ ವಿಕಾಸದ ಆಧ್ಯಾತ್ಮಿಕ ಆಯಾಮವನ್ನು ತೆರೆದಿಟ್ಟು ಸ್ವಾಮೀಜಿ ನಮ್ಮ ಜೀವನದ ಹೋರಾಟಕ್ಕೆ ಸನ್ನದ್ಧಗೊಳಿಸುತ್ತಿದ್ದಾರೆ.

ಜೀವನ ತತ್ವ :

ಜೀವನವನ್ನು ನಿರಂತರ ಹೋರಾಟಕ್ಕೆ ಹೋಲಿಸುತ್ತಾರೆ. ಅಲ್ಲದೆ ಪ್ರಕೃತಿ ನಮ್ಮ ಮುಂದಿರುವ ಸವಾಲು ಎಂದೇ ವ್ಯಾಖ್ಯಾನಿ ಸುತ್ತಾರೆ. ಜೀವನಕ್ಕೆ ಚೈತನ್ಯ ದೊರಕುವುದೇ ಮೌಲ್ಯಗಳಿಂದ. ಆದ್ದರಿಂದ ಋಣಾತ್ಮಕ ಹಾಗೂ ನಕರಾತ್ಮಕ ಚಿಂತನೆಗಳು ನಮ್ಮನ್ನು ಮೃತಪ್ರಾಯವಾಗಿಸುತ್ತವೆ. ಯಶಸ್ವೀ ಜೀವನಕ್ಕಿಂತ ಮೌಲ್ಯ ಪೂರ್ಣ ಜೀವನ ಹಿರಿದಾದದ್ದು. ಆದರ್ಶ ಹೊತ್ತ ವ್ಯಕ್ತಿ ಐದು ನೂರು ತಪ್ಪುಗಳನ್ನೆಸಗಿದರೆ ಆದರ್ಶರಹಿತ ವ್ಯಕ್ತಿ ಐವತ್ತು ಸಾವಿರ ತಪ್ಪುಗಳನ್ನೆಸಗುವುದರಿಂದ ಜೀವನವು ಆದಶಾìವಲಂಬಿತವಾಗ ಬೇಕು. ಅನ್ಯಾಯದ ಮಾರ್ಗದಲ್ಲಿ ಗೆಲ್ಲುವುದಕ್ಕಿಂತ ನ್ಯಾಯ ಮಾರ್ಗದಲ್ಲಿ ಸೋಲುವುದು ಘನತೆಪೂರ್ಣ. ಸತ್ಯಕ್ಕಾಗಿ ಸರ್ವಸ್ವ ವನ್ನು ತ್ಯಾಗ ಮಾಡುವುದು ಒಳಿತು. ಆದರೆ ಸತ್ಯವನ್ನು   ವಸ್ತುವಿಗಾಗಿ, ವಿಚಾರಕ್ಕಾಗಿ ತ್ಯಾಗ ಮಾಡಬಾರದು ಎಂದಿದ್ದಾರೆ.

ಯೌವನ ತತ್ವ :

ಜಗತ್ತಿನಲ್ಲಿ ದೈವವನ್ನಷ್ಟೇ ನಂಬಿದರೆ ನಾವು ಆಸ್ತಿಕರೆನಿಸುವುದಿಲ್ಲ, ನಮ್ಮನ್ನು ನಾವು ನಂಬದೆ ಎಷ್ಟೇ ದೈವಗಳನ್ನು ನಂಬಿದರೂ ನಾವು ನಾಸ್ತಿಕರೆಂದೇ ಪರಿಗಣಿತರಾಗುತ್ತೇವೆ. ಜೀವನದ ವಸಂತಕಾಲವೆನಿ ಸಿರುವ ಯೌವನವು ಅನಂತ ಶಕ್ತಿಯನ್ನರಿಯಲು, ನಮ್ಮ ಕಾರ್ಯ ದಕ್ಷತೆಯನ್ನು ಕಾರ್ಯರೂಪಗೊಳಿಸಲು, ಸೋಲನ್ನು ದ್ವೇಷಿಸುವ ಅರ್ಥಾತ್‌ ಅಸಾಧ್ಯವೆನಿಸಬಹುದಾದುದನ್ನು ಸುಸಾಧ್ಯಗೊಳಿಸ ಬಹುದಾದ ಪರ್ವಕಾಲವೆನಿಸಿದೆ!. “ನಿನ್ನನ್ನು ನೀನು ದುರ್ಬಲ ನೆಂದು ಭಾವಿಸುವುದೇ ಜೀವನದಲ್ಲಿ ನೀನು ಮಾಡಬಹುದಾದ ಘೋರಪಾಪ. ಪೌರುಷದಿಂದ ಪ್ರಯತ್ನ ಮಾಡದಿದ್ದರೆ ಎಂತಹ ದೈವಬಲವೂ ನಿನ್ನ ತಮಸ್ಸನ್ನು ತೊಲಗಿಸಲಾರದು. ಜನರು ನಮ್ಮನ್ನು ಹೊಗಳಲಿ ಅಥವಾ ತೆಗಳಲಿ ನಾವು ಮಾತ್ರ ಅದ್ಯಾವು ದಕ್ಕೂ ಗಮನ ಕೊಡದೆ ಆದರ್ಶವನ್ನು ಮುಂದಿರಿಸಿಕೊಂಡು ಸಿಂಹ ಪರಾಕ್ರಮದಿಂದ ಕಾರ್ಯ ಪ್ರವೃತ್ತರಾಗಬೇಕು. ಸರ್ವಶಕ್ತಿ ಸ್ವರೂಪಿಣಿಯಾದ, ಅನಂತಳಾದ ಜಗಜ್ಜನನಿಯ ಪುತ್ರ ನೀನೆಂಬುದು ನೆನಪಿರಲಿ. ನಕಾರಾತ್ಮಕ ಭಾವನೆಗಳನ್ನು  ಅಂಟು ರೋಗವೋ ಎಂಬಂತೆ ಹೊಸಕಿ ಹಾಕು’ ಎಂದಿದ್ದಾರೆ .

ಸೇವಾ ತತ್ವ :

ತ್ಯಾಗ ಮತ್ತು ಸೇವೆ ಭಾರತದ ಅವಳಿ ಆದರ್ಶಗಳು. ಅವುಗ ಳನ್ನು ನಾವು ಊರ್ಜಿತಗೊಳಿಸಿದಷ್ಟೂ ರಾಷ್ಟ್ರದ ಉತ್ಥಾನದ ಸೋಪಾನವು ಸುರಕ್ಷಿತವಾಗುತ್ತದೆ ಎಂದಿದ್ದಾರೆ. ಸೇವೆಯು ಭಾವುಕತೆಯಾಗದೆ ಜೀವನವಿಧಾನವಾಗಬೇಕು. ಸೇವೆ ಮಾಡುವವರು ಸೇವೆ ಪಡೆಯು ವವರಿಗೆ ಋಣಿಯಾ ಗಿರಬೇಕು ಎಂದಿದ್ದಾರೆ. ಸ್ವಾಮೀಜಿಯವರಿಂದ ಪ್ರೇರೇಪಿತ ರಾಗಿ ಅಮೆರಿಕದ ಪ್ರತಿಷ್ಠಿತ ಶ್ರೀಮಂತ ಜಾನ್‌.ಡಿ. ರಾಕ್‌ಫೆಲ್ಲರ್‌ ತಮ್ಮ ಸೇವಾಕಾರ್ಯಗಳ ಮೂಲಕ ಅಮೆರಿಕದ ಇತಿಹಾಸದಲ್ಲಿ ದಾಖಲಾದರು. ಯಾರು ಇತರರಿಗಾಗಿ ಬದುಕುತ್ತಾರೆಯೋ ಅವ ರದ್ದೇ ಜೀವನ, ಉಳಿದವರು ಬದುಕಿದ್ದೂ ಸತ್ತಂತೆ ಎಂದಿದ್ದಾರೆ.

ವಿಶ್ವ ಶಾಂತಿ ತತ್ವ :

1993ರಲ್ಲಿ ಅಮೆರಿಕಾದಲ್ಲಿ ನೆರವೇರಿದ ಐತಿಹಾಸಿಕ ಚಿಕಾಗೋ ಉಪನ್ಯಾಸದ ಶತಮಾನೋತ್ಸವ ಸಮಾರಂಭದಲ್ಲಿ ಯುನೆಸ್ಕೋ ಡೈರೆಕ್ಟರ್‌ ಜನರಲ್‌ ಫೆಡರಿಕೊ ಮೇಯರ್‌ ಹೀಗೆ ಹೇಳುತ್ತಾರೆ: “ಸ್ವಾಮಿ ವಿವೇಕಾನಂದರು 1897ರಷ್ಟು ಹಿಂದೆಯೇ ಸ್ಥಾಪಿಸಿದ ರಾಮಕೃಷ್ಣ ಮಹಾಸಂಘದ ಸಂವಿಧಾನಕ್ಕೂ, 1945ರಲ್ಲಿ ರೂಪು ಗೊಂಡ ಯುನೆಸ್ಕೋ ಸಂವಿಧಾನಕ್ಕೂ ಇರುವ ಸಾಮ್ಯತೆಯನ್ನು ಕಂಡು ನಾನು ನಿಜಕ್ಕೂ ಚಕಿತನಾಗಿದ್ದೇನೆ. ಇವೆರಡೂ ಪ್ರಗತಿ ಯನ್ನು ಉದ್ದೇಶವಾಗಿ ಉಳ್ಳ ತಮ್ಮ ಪ್ರಯತ್ನಗಳಲ್ಲಿ ಮನುಷ್ಯನನ್ನು ಕೇಂದ್ರವಾಗಿರಿಸಿಕೊಂಡಿವೆ. ಪ್ರಜಾಸತ್ತಾತ್ಮಕತೆಯನ್ನು ನಿರ್ಮಿಸುವ ತಮ್ಮ ಕಾರ್ಯಸೂಚಿಯಲ್ಲಿ ಇವೆರಡೂ ಸಹಿಷ್ಣುತೆಯನ್ನು ಅಗ್ರಸ್ಥಾನದಲ್ಲಿರಿಸುತ್ತವೆ. ಇವೆರಡೂ ಮಾನವ ಸಂಸ್ಕೃತಿ ಮತ್ತು ಸಮಾಜಗಳ ವೈವಿಧ್ಯವನ್ನು ಸಮಾನ ಪರಂಪರೆಯ ಅಗತ್ಯ ಎಂದು ಗುರುತಿಸಿರುತ್ತವೆ’ ಇಲ್ಲಿ ಅವರ ವಿಶ್ವಾತ್ಮಭಾವ ವೇದ್ಯವಾಗುತ್ತದೆ.

ಉಪಸಂಹಾರ :

ಸರ್ವಜನರ ಬದುಕಿಗೆ ಸ್ವಾಮಿ ವಿವೇಕಾನಂದರು ಬೆಳಕಾದದ್ದು ತಮ್ಮ ಚಾರಿತ್ರÂಬಲದಿಂದ. ಚರಿತ್ರೆ ರೂಪಿಸುವವರು ಚಾರಿತ್ರವಂತರೇ ಎಂಬು ದನ್ನು ಸಾಬೀತುಪಡಿಸಿದ್ದಾರೆ. ಮಹಾವಾಗ್ಮಿಗಳಾಗಿದ್ದ ಅವರು ತಮ್ಮ 91ಕ್ಕೂ ಅಧಿಕ ಪರಿಚಿತರಿಗೆ 768 ಪತ್ರಗಳನ್ನು ಬರೆದು ಬದುಕಿಗೆ ಪ್ರೇರೇಪಿಸಿ ದ್ದಾರೆ. ಲೋಕಶಿಕ್ಷಣಕ್ಕೆ ನಿರ್ದೇಶಿತರಾಗಿ ಧರೆಗಿಳಿದ ಸ್ವಾಮೀಜಿ ತಮ್ಮ ಮಾತು, ಕೃತಿ, ಬರಹಗಳ ಮೂಲಕ ಜೀವನಾದರ್ಶಕ್ಕೆ ದಾರಿದೀಪ ವಾದರು, ಜನಸಂಕುಲದ ಭವನಾಶದ ಪಯಣಕ್ಕೆ ಚುಕ್ಕಾಣಿಗರಾದ‌ರು. ಅವರ ವಾಣಿ ಸಾರ್ವಕಾಲಿಕ ಸಂಜೀವಿನಿಯಾಗಿ ಶಿಲಾಕ್ಷರವಾಗಿ ನಿಂತಿದೆ.

ಹೀಗಿದ್ದರು :

 

  • ವಿವೇಕಾನಂದರು ವಿದ್ಯಾರ್ಥಿ ಜೀವನದಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದರು. ಭಾರೀ ಅಂಕಗಳನ್ನು ಪಡೆಯುತ್ತಿರಲೇ ಇಲ್ಲ. ವಿ.ವಿ. ಪ್ರವೇಶ ಪರೀಕ್ಷೆಯಲ್ಲಿ ಅವರು ಪಡೆದಿದ್ದು ಶೇ.47 ರಷ್ಟು ಅಂಕ. ಬಿ.ಎ. ಪರೀಕ್ಷೆಯಲ್ಲಿ ಅವರು ಶೇ. 56ರಷ್ಟು ಅಂಕ ಪಡೆದಿದ್ದರು. ಆದರೆ ಅವರ ಮೇಧಾವಿತನಕ್ಕೆ ಅಂಕ ಕೊಡಲು ಸಾಧ್ಯವೇ ಇರಲಿಲ್ಲ.
  • ಚಹಾ ಎಂದರೆ ವಿವೇಕಾನಂದರಿಗೆ ಎಂದಿಗೂ ಬಿಟ್ಟಿರಲಾರದಷ್ಟು ನಂಟು. ಪಂಡಿತರು ಚಹಾ ಕುಡಿಯಲು ನಿರಾಕರಿಸುತ್ತಿದ್ದ ಸಂದರ್ಭ ತಾವಿದ್ದ ಬೇಲೂರು ಆಶ್ರಮದಲ್ಲಿ ಚಹಾ ವ್ಯವಸ್ಥೆ ಮಾಡಿದ್ದರು. ಇದರ ವಿರುದ್ಧ ಮುನ್ಸಿಪಾಲಿಟಿ ಮೂಲಕ ಕರ ವಿಧಿಸುವಂತೆ ಪಂಡಿತರು ಯತ್ನಿಸಿದ್ದರು. ಇದನ್ನರಿತ ವಿವೇಕಾನಂದರು, ಪ್ರತಿಭಟನೆ ನಡೆಸಿ ಕರ ತೆಗೆಯುವಂತೆ ಹೋರಾಟ ಮಾಡಿದ್ದರು. ಒಮ್ಮೆ ಸ್ನೇಹಿತ ಬಾಲಗಂಗಾಧರ ತಿಲಕ್‌ ಅವರೇ ವಿವೇಕಾನಂದರಿಗೆ ಚಹಾ ಮಾಡಿಕೊಟ್ಟಿದ್ದರು. ಏಲಕ್ಕಿ, ಲವಂಗ, ಕೇಸರಿಯ ಚಹಾ ಕುಡಿದು ಖುಷಿಪಟ್ಟಿದ್ದರು.
  • ತಂದೆಯ ನಿಧನಾನಂತರ ವಿವೇಕಾನಂದರ ಕುಟುಂಬ ತೀವ್ರ ಬಡತನಕ್ಕೆ ನೂಕಲ್ಪಟ್ಟಿತ್ತು. ಕುಟುಂ ಬದ ಎಲ್ಲರಿಗೂ ಊಟ ಸಿಗಲು ವಿವೇಕಾನಂದರು ಊಟದ ವೇಳೆ ಹೊರಗಿರುತ್ತಿದ್ದರು. ಹೊತ್ತಿನ ಊಟಕ್ಕೂ ಅವರ ಕುಟುಂಬ ಪರದಾಡುವ ಸ್ಥಿತಿ ಬಂದಿತ್ತು.
  • ಸಂತ ಪದವಿ ಹೊಂದುವ ಮುನ್ನ ಪರಮಹಂಸರ ಬಳಿ ವಿದ್ಯಾರ್ಜನೆ ಮಾಡಿಕೊಂಡಿದ್ದ ವಿವೇಕಾ ನಂದರು ಆರಂಭದಲ್ಲಿ ಗುರುಗಳನ್ನು ನಂಬುತ್ತಿರಲಿ ಲ್ಲವಂತೆ. ಅವರು ಏನು ಹೇಳಿದರೂ ಪ್ರಶ್ನೆಗಳನ್ನು ಕೇಳಿ ಬಳಿಕವೇ ನಂಬುತ್ತಿದ್ದರಂತೆ. ಆದರೆ ಗುರುವಿನ ನೈಜ ದರ್ಶನ ವಾದಾಗ, ಅವರ ನಂಬಿಕೆ ವ್ಯಾಪಕವಾಗಿ ಬಲಗೊಂಡಿತ್ತಂತೆ.
  • ಖೇತ್ರಿಯ ಮಹಾರಾಜ ಅಜಿತ್‌ ಸಿಂಗ್‌ ಅವರು ಗುಟ್ಟಾಗಿ ವಿವೇಕಾನಂದರ ತಾಯಿಗೆ ತಿಂಗಳಿಗೆ 100 ರೂ. ಕಳಿಸುತ್ತಿದ್ದರು. ಬಡತನದಲ್ಲಿದ್ದ ಕುಟುಂಬಕ್ಕೆ ಇದು ನೆರವು ನೀಡಿತ್ತು. ಆದರೆ ಸಿಂಗ್‌ ಅವರು ಹಣ ಕೊಡುತ್ತಿದ್ದ ವಿಚಾರ ತೀರ ಗುಪ್ತವಾಗಿಯೇ ಇತ್ತು.
  • ವಿವೇಕಾನಂದರು ಗ್ರಂಥಾಲಯದಿಂದ ಪುಸ್ತಕ ಕೊಂಡು ಹೋಗಿ, ಮರುದಿನ ವಾಪಸ್‌ ಕೊಡುತ್ತಿ ದ್ದರು. ಆದರೆ ಲೈಬ್ರೇರಿಯನ್‌ಗೆ ಸಂಶಯ. ಅಷ್ಟಷ್ಟು ದಪ್ಪದ ಪುಸ್ತಕ ಓದುತ್ತಾರಾ? ಅನ್ನೋ ಸಂಶಯ. ಇದೇ ಕಾರಣಕ್ಕೆ ವಿವೇಕಾನಂದರನ್ನು ಪರೀಕ್ಷಿಸಲೂ ಹೊರಟರು. ಒಂದು ದಿನ ಪುಸ್ತಕ ತಂದುಕೊಟ್ಟ ವೇಳೆ ದೊಡ್ಡ ಪುಸ್ತಕದ ಯಾವುದೋ ಒಂದು ಪುಟ ಹಿಡಿದು ಪ್ರಶ್ನೆ ಕೇಳಿದ್ರು. ವಿವೇಕಾ ನಂದರು ತಡಮಾಡದೇ ಉತ್ತರ ಕೊಟ್ಟರು. ಮತ್ತೆರಡು ಪುಟಗಳ ಬಗ್ಗೆ ಕೇಳಿದಾಗಲೂ ಸರಿಯಾದ ಉತ್ತರ. ಲೈಬ್ರೇರಿ ಯನ್‌ ಅಕ್ಷರಶಃ ತಬ್ಬಿಬ್ಟಾದರು. ಇದು ಅವರ ಜ್ಞಾಪಕ ಶಕ್ತಿಯ ಕೈಗನ್ನಡಿ.
  • ಯಾವಾಗ ಇಹಲೋಕ ತ್ಯಜಿಸುತ್ತೇನೆ ಎಂಬುದು ವಿವೇಕಾನಂದರಿಗೆ ಮೊದಲೇ ಗೊತ್ತಿತ್ತು. ವಿವೇಕಾ ನಂದರ ಜೀವನಚರಿ ತ್ರೆಯನ್ನು ಬರೆದಿದ್ದ ಫ್ರೆಂಚ್‌ ಗಾಯಕಿ ಎಮ್ಮಾ ಆಲ್ವೇ ಅವರ ಬಳಿ ಈಜಿಪ್ಟ್ನಲ್ಲಿ ಜು. 4ರಂದು ಇಹಲೋಕ ತ್ಯಜಿಸುವುದಾಗಿ ಹೇಳಿದ್ದರಂತೆ. ಅದ ರಂತೆ 1902 ಜು.4ರಂದೇ ಅಸ್ತಂಗತರಾದರು.

 

ಸ್ವಾಮಿ ವೀರೇಶಾನಂದ ಸರಸ್ವತೀ,

ಅಧ್ಯಕ್ಷರು, ರಾಮಕೃಷ್ಣ-ವಿವೇಕಾನಂದ ಆಶ್ರಮ, ತುಮಕೂರು

ಟಾಪ್ ನ್ಯೂಸ್

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

DK-Suresh

By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

books-colomn

Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

science-AI-2

ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

16

Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.