ಬ್ಯಾಂಕಿಂಗ್‌ನಿಂದ ಬಿ ಸ್ಕೂಲ್‌ಗೆ ನೆಗೆದ ದಿಗ್ಗಜ


Team Udayavani, Jan 17, 2022, 6:00 AM IST

ಬ್ಯಾಂಕಿಂಗ್‌ನಿಂದ ಬಿ ಸ್ಕೂಲ್‌ಗೆ ನೆಗೆದ ದಿಗ್ಗಜ

ಸಿಂಡಿಕೇಟ್‌ ಬ್ಯಾಂಕ್‌ ಅಧ್ಯಕ್ಷರಾಗಿ ಟಿ.ಎ. ಪೈ ಅವರು ಹಲವು ಸಾಮಾಜಿಕ ಅಗತ್ಯದ ಉಪಕ್ರಮಗಳನ್ನು ಆರಂಭಿಸಿದರು. ಇದರಲ್ಲಿ ಒಂದು 1962ರಲ್ಲಿ ಮಹಿಳಾ ಸಬಲೀಕರಣ. ಬೆಂಗಳೂರಿನ ಶೇಷಾದ್ರಿಪುರಂ ಶಾಖೆಯಲ್ಲಿ ಮಹಿಳಾ ಶಾಖೆಯನ್ನು ತೆರೆದು ಎಲ್ಲ ಹುದ್ದೆಗಳಿಗೆ ಮಹಿಳೆಯರನ್ನು ನಿಯೋ ಜಿಸಿದರು. ಅನಂತರ ದೇಶದ ವಿವಿಧೆಡೆ ಒಂಬತ್ತು ಮಹಿಳಾ ಶಾಖೆಗಳು ತೆರೆದವು.

ವಿದೇಶಕ್ಕೆ ತೆರಳಿ ಶಿಕ್ಷಣ ಪಡೆಯುವವರಿಗೆ ಹಣಕಾಸು ಒದಗಣೆಯನ್ನು ಆರಂಭಿಸಿದ್ದು ಟಿ.ಎ. ಪೈಯವರು. ಸುಮಾರು 5,400 ವಿದ್ಯಾರ್ಥಿಗಳಿಗೆ ಯಾವುದೇ ಭದ್ರತೆ ಇಲ್ಲದೆ ವಿದೇಶದ ಶಿಕ್ಷಣ ಕೊಡಿಸಲು ಕಾರಣರಾದರು. ಆದರೆ ಇಷ್ಟೊಂದು ಸಾಲವೂ ಶೇ.100 ಮರುಪಾವತಿಯಾದ ದಾಖಲೆ ನಿರ್ಮಾಣವಾಯಿತು.

ಅವರು ಎಲ್ಲ ಶಾಖೆ ಗಳಿಗೆ ಭೇಟಿ ನೀಡಿ ದಾಗಲೂ “ಮಹಿಳೆಯರ ಶಕ್ತಿಯನ್ನು ಕೀಳಂದಾಜಿಸಬೇಡಿ’ ಎಂಬ ಒಂದು ವಾಕ್ಯದ ಬೀಜಮಂತ್ರವನ್ನು ಹೇಳುತ್ತಿದ್ದರು. ಬೆಳಗಾವಿಯ ತರಕಾರಿ ಮಾರುವ ಮಹಿಳೆಯರೇ ಇರಬಹುದು, ಕರಾ ವಳಿಯ ಮೀನು ಮಾರುವ ಮಹಿಳೆಯರೇ ಇರಬಹುದು, ಮಹಿಳೆಯರ ಈ ಶಕ್ತಿಯನ್ನು ಕುಟುಂಬದ ಅಭಿವೃದ್ಧಿಗೆ ಹೇಗೆ ಮಾರ್ಪಡಿಸಬಹುದು ಎಂಬ ಚಿಂತನೆ ಅವರಲ್ಲಿತ್ತು. ಮಹಿಳೆಯರು ಮತ್ತು ಯುವಜನರು ಸಮಾಜವನ್ನು ಪರಿವರ್ತಿಸುವ ಏಜೆಂಟರು ಎಂದು ಅವರು ಹೇಳುತ್ತಿದ್ದರು.

ಬ್ಯಾಂಕ್‌ ಒಂದು ಹಣಕಾಸು ಒದಗಿಸುವ ಸಂಸ್ಥೆ ಎಂದು ಪರಿಗಣಿಸದೆ, ಠೇವಣಿದಾರರು ಮತ್ತು ಮುಂಗಡ ಪಡೆಯುವ ವರನ್ನು ಸಂರಕ್ಷಿಸುವ ಸಂಸ್ಥೆ ಎಂದು ನಂಬಿದ್ದರು.

ಮಣ್ಣು ಪರೀಕ್ಷೆಯಂತಹ ಅನೇಕ ಪ್ರಗತಿಪರ ಉಪಕ್ರಮಗಳಿಗೆ ಮುಂದಾದ ಅವರು, ಮೀನುಗಾರಿಕೆ, ಬೇಸಾಯ, ಗ್ರಾಮ ಕೈಗಾರಿಕೆಗಳ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಟ್ಟರು. ಜಗತ್ತು ತಿಳಿಯುವ ಸಾಕಷ್ಟು ಮುನ್ನವೇ ಪ್ರಯೋಗವನ್ನು ಮಾಡಿದ್ದ ಸಾಧಕ ಇವರಾಗಿದ್ದರು.

ಟಿ.ಎ. ಪೈಯವರು ಸಿಂಡಿಕೇಟ್‌ ಬ್ಯಾಂಕ್‌ನೊಂದಿಗೆ 20 ದೊಡ್ಡಮತ್ತು ಸಣ್ಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ್ದರು. ಆಗ ಉದ್ಭವಿಸಿದ ಅನೇಕ ವ್ಯಾಜ್ಯಗಳನ್ನು ಪರಿಹರಿಸುವಲ್ಲಿ ಅವರ ಮುನ್ನೋಟ, ತಾಳ್ಮೆ ಗಮನೀಯವಾಗಿದೆ. ಸಿಂಡಿಕೇಟ್‌ ಬ್ಯಾಂಕ್‌ನ ಸಂಸ್ಕೃತಿಗೆ ಒಗ್ಗಿ ಜನ ಸೇವೆ ಮಾಡಲು ಅವರು ಸಿಬಂದಿಗೆ ವಿಶೇಷ ತರಬೇತಿ ಕೊಡುತ್ತಿದ್ದರು.

1969ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ರಾಷ್ಟ್ರೀಕರಣವಾದ ಬಳಿಕ ಬ್ಯಾಂಕ್‌ನ ಕಸ್ಟೋಡಿಯನ್‌ ಆಗಿ ಎಂಟು ತಿಂಗಳು ಕರ್ತವ್ಯ ನಿರ್ವಹಿಸಿದ್ದರು. ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಬ್ಯಾಂಕ್‌ ರಾಷ್ಟ್ರ ಮಟ್ಟದಲ್ಲಿ ಛಾಪು ಮೂಡಿಸುವಲ್ಲಿ ವಿಶೇಷವಾಗಿ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ. ಪೈಯವರ ದೂರದೃಷ್ಟಿ ಉಲ್ಲೇಖನೀಯ.
ಜನಜೀವನವನ್ನು ಬಲಗೊಳಿಸುವ ಬ್ಯಾಂಕಿಂಗ್‌ ವ್ಯವಸ್ಥೆ ಬಗೆಗೆ ಅಭಿಪ್ರಾಯಹೊಂದಿದ್ದ ಸ್ವಾತಂತ್ರ್ಯ ಹೋರಾಟ
ಗಾರ ಸಿ. ರಾಜ ಗೋಪಾಲಾಚಾರಿ ಅವರ ಆಶಯವನ್ನು ಟಿ.ಎ. ಪೈ ಸುಪುಷ್ಟಿಗೊಳಿಸಿದ್ದರು.

1970ರ ಬಳಿಕ ಟಿ.ಎ. ಪೈಯವರು ಭಾರತೀಯ ಜೀವವಿಮಾ ನಿಗಮದಅಧ್ಯಕ್ಷತೆ ವಹಿಸಿಕೊಂಡು ಹಣಕಾಸು
ಸೇವೆಯನ್ನು ಮುಂದುವರಿಸಿದರು. 1980 ರಲ್ಲಿ ಅವರು ಇನ್ನಿಲ್ಲವಾಗುವ ಮುನ್ನ ಬಿಸಿನೆಸ್‌ ಸ್ಕೂಲ್‌ ಆರಂಭಿಸಿದ್ದು ಜೀವಿತದ ಕೊನೆಯ ಕೊಡುಗೆ ಯಾಗಿದೆ. ಸ್ಥಾಪಕರ ಸದಾಶಯದಂತೆ ಟಿ.ಎ. ಪೈ ಮ್ಯಾನೇಜ್ಮೆಂಟ್ ಇನ್‌ಸ್ಟಿಟ್ಯೂಟ್‌ (ಟ್ಯಾಪ್ಮಿ) ಮಣಿಪಾಲ ಹೊರವಲಯದ 80 ಬಡಗಬೆಟ್ಟು ಗ್ರಾಮದಲ್ಲಿ ನೆಲೆ ನಿಂತು ಬ್ಯಾಂಕಿಂಗ್‌, ಫೈನಾನ್ಶಿಯಲ್‌ ಸರ್ವಿಸಸ್‌ನಲ್ಲಿ ಸ್ನಾತಕೋತ್ತರ ಪದವಿ (ಎಂಬಿಎ) ನೀಡುವ ಭಾರತದ ಶ್ರೇಷ್ಠ ಬಿ ಸ್ಕೂಲ್‌ ಆಗಿ ಹೊರಹೊಮ್ಮಿದೆ.

-ಪ್ರೊ| ಮಧು ವೀರರಾಘವನ್‌
(ಟ್ಯಾಪ್ಮಿ ನಿರ್ದೇಶಕರು. ಹಣಕಾಸು, ನಿರ್ವಹಣ ವಿಷಯ ತಜ್ಞರು)

 

ಟಾಪ್ ನ್ಯೂಸ್

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

Astronamy-moon

Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.