![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 6, 2023, 12:39 PM IST
ಬ್ರಿಟಿಷರ ಕಪಿಮುಷ್ಟಿಯಿಂದ ಭಾರತ ದೇಶವನ್ನು ಸ್ವಾತಂತ್ರ್ಯಗೊಳಿಸಬೇಕೆಂಬ ಉದ್ದೇಶದಿಂದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ದೇಶಾದ್ಯಂತ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಈ ಹೋರಾಟದ ಕಿಚ್ಚು ಇಮ್ಮಡಿಯಾಗಲೆಂದು ಭಾರತದೇಶದಲ್ಲಿ ಸ್ಥಾನಿಕ ಸ್ವರಾಜ್ಯದ ಕಾರ್ಯಾಲಯಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕೆಂದು ರಾಷ್ಟ್ರಮಟ್ಟದಲ್ಲಿ ನಾಯಕರು ನಿರ್ಣಯಿಸಿದರು. ಭಾರತ ದೇಶದಲ್ಲಿ ಈ ವಿಷಯವಾಗಿ ಕೆಲವೇ ಕೆಲವು ಬೆರಳೆಣಿಕೆಯಷ್ಟು ಪ್ರದೇಶಗಳಲ್ಲಿ ಧ್ವಜಾರೋಹಣ ಮಾಡಲಾಯಿತು.
ಕರ್ನಾಟಕ ಹಾಗೂ ಹಳೆಯ ಅಖಂಡ ಧಾರವಾಡ ಜಿಲ್ಲೆಯಲ್ಲಿ ಈ ವಿಷಯವಾಗಿ ಸ್ವಾತಂತ್ರ್ಯ ಹೋರಾಟಗಾರರು ಗಟ್ಟಿತನ ಪ್ರದರ್ಶಿಸಬೇಕೆಂಬ ಪ್ರಯತ್ನದಲ್ಲಿದ್ದರು. ಆದರೆ ಹಾವೇರಿ ಜನ ಒಂದು ಹೆಜ್ಜೆ ಮುಂದೆ ಎಂಬಂತೆ ಮುನ್ಸಿಪಾಲ್ಟಿಯ ಕಚೇರಿ ಮೇಲೆ ಧ್ವಜಾರೋಹಣ ಮಾಡಬೇಕೆಂಬ ನಿರ್ಣಯವನ್ನು ಅದಾಗಲೇ ಕೈಗೊಂಡಿದ್ದರು.
1930 ಮೇ 3ರಂದು ಸಂಜೆ ಪಟ್ಟಣದ ನಾಗರಿಕರೆಲ್ಲರೂ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಡಂಗುರ ಸಾರಿದರು. ವಿಷಯ ತಿಳಿಯುತ್ತಿದ್ದಂತೆ ರವಿವಾರ (04/05/1930) ಬೆಳಗ್ಗೆ 7 ಗಂಟೆಗೆ ಮುನ್ಸಿಪಾಲ್ಟಿ ಕಚೇರಿ ಎದುರು ಸಾವಿರಾರು ಜನರು ಸೇರಿದರು. ಮುನ್ಸಿಪಾಲ್ಟಿ ಕಟ್ಟಡವನ್ನು ಹಸಿರು ತೋರಣಗಳಿಂದ ಶೃಂಗರಿಸಲ್ಪಟ್ಟಿತ್ತು. ಕಚೇರಿ ಸಿಬ್ಬಂದಿಗಳೆಲ್ಲ ಖಾದಿ ಧರಿಸಿ ಎದೆಯ ಮೇಲೆ ಮೂರು ಬಣ್ಣದ ರಾಷ್ಟ್ರ ನಿಶಾನೆಯ ಚಿಹ್ನೆ ಹಚ್ಚಿಕೊಂಡಿದ್ದರು.
ವಾಲಂಟಿಯರ್ಗಳು ಖಾದಿ ಧರಿಸಿ ರಾಷ್ಟ್ರಧ್ವಜ ಏರಿಸುವ ಪದ್ಧªತಿ ತಿಳಿಸಲು ಆಗಮಿಸಿದ್ದರು. ಸ್ಪೂಲ್ ಕಮಿಟಿ ಚೇರಮನ್‌ರಾದ ಹೊಸಮನಿ ಸಿದ್ದಪ್ಪನವರು ರಾಷ್ಟ್ರಧ್ವಜವನ್ನು ಹೆಗಲ ಮೇಲೆ ಹೊತ್ತುಕೊಂಡು ಉತ್ಸವ ಹೊರಡಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರಧ್ವಜಕ್ಕೆ ಹೆಣ್ಣು ಮಕ್ಕಳು ಆರತಿ ಬೆಳಗಿ, ಪುಷ್ಪ ಅರ್ಪಿಸುತ್ತಿದ್ದರು. ಉತ್ಸವ ಪಟ್ಟಣದ ತುಂಬೆಲ್ಲ ಸಂಚರಿಸಿ ಬೆಳಗ್ಗೆ 9 ಗಂಟೆಗೆ ಮುನ್ಸಿಪಾಲ್ಟಿ ಆವರಣಕ್ಕೆ ಬಂದಿತು.
ಸಿದ್ಧಗೊಳಿಸಿದ್ದ ಕಂಬದ ಕೆಳಗೆ ಎಲ್ಲರೂ ನಿಂತುಕೊಂಡರು. ವಾಲಂಟಿಯರ್ ರಾಷ್ಟ್ರಧ್ವಜ ಏರಿಸುವ ಕಾರ್ಯ ಮಾಡಬೇಕೆಂದು ಮುನ್ಸಿಪಾಲ್ಟಿ ಸದಸ್ಯರಾದ ಹೊಂಬಣ್ಣ ಹೊಂಬಣ್ಣನವರ ಪ್ರಾರ್ಥಿಸಿದರು. ಮಹದೇವರಾವ ನಾಡಗೇರ ಇದಕ್ಕೆ ಅನುಮೋದನೆ ನೀಡಿದರು. ಪರಮಣ್ಣ ಹೊಸಮನಿಯವರು ರಾಷ್ಟ್ರಧ್ವಜ ಪೂಜೆಗೈದರು.
ಧ್ವಜಾರೋಹಣಯಾಗುತ್ತಿದ್ದಂತೆಯೇ ರಾಷ್ಟ್ರಗೀತೆ ಮೊಳಗಲಾರಂಭಿಸಿತು. ರಾಷ್ಟ್ರಗೀತೆ ನಂತರ ಚನ್ನಬಸಪ್ಪ ಹಾಲಪ್ಪನವರ ಜನರಿಗೂ ಮುನ್ಸಿಪಾಲಿಟಿ ಸರ್ವ ಸದಸ್ಯರಿಗೂ ಹಾಗೂ ಅಧ್ಯಕ್ಷರಿಗೂ ವಂದಿಸಿದರು. ರಾಷ್ಟ್ರಕಾರ್ಯದಲ್ಲಿ ಹಾವೇರಿ ಕರ್ನಾಟಕದಲ್ಲಿಯೇ ಅಗ್ರಗಣ್ಯವಾಯಿತೆಂದು ಜನರು ಮಾತನಾಡಲು ಆರಂಭಿಸಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.