ಗುರುಗಳಿಗೆ ನಮೋ ನಮಃ 


Team Udayavani, Sep 5, 2021, 6:00 AM IST

Untitled-1

ಪ್ರೀತಿಯ ಶಿಕ್ಷಕರೇ… ನಿಮ್ಮೆಲ್ಲರಿಗೂ ಶಿಕ್ಷಕರ ದಿನಾಚರಣೆ ಶುಭಾಶಯಗಳು.

ದೇಶ ಕಂಡ ಶ್ರೇಷ್ಠ ತಣ್ತೀಜ್ಞಾನಿ. ಶಿಕ್ಷಣ ತಜ್ಞ. ಭಾರತೀಯ ಸಂಸ್ಕೃತಿ, ಪರಂಪರೆಯ ಅಂತಾ ರಾಷ್ಟ್ರೀಯ ರಾಯಭಾರಿ. ವಾಗ್ಮಿ. ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳನ್ನು ಅಲಂಕರಿಸಿ, ಭಾರತದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ ಭಾರತರತ್ನ ಡಾ| ಎಸ್‌. ರಾಧಾಕೃಷ್ಣನ್‌ ಅವರ ಜನ್ಮ ದಿನವನ್ನು “ಶಿಕ್ಷಕರ ದಿನ’ವಾಗಿ ಆಚರಿಸುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ.

ಪಾಠ ಕಲಿಸಿದ, ಮಾರ್ಗದರ್ಷನ ನೀಡಿದ ಗುರುಗಳು ಪ್ರತಿಯೊಬ್ಬರ ಜೀವನದಲ್ಲಿ ಇರುತ್ತಾರೆ. ಭವಿಷ್ಯ ರೂಪಿಸಿಕೊಳ್ಳಲು, ಉತ್ತಮ ಜೀವನ ನಡೆಸಲು ಮಾರ್ಗದರ್ಶನ ನೀಡಿದ ಗುರುಗಳಿಗೆ ವಂದಿಸಿ, ಸ್ಮರಿಸಲು ಈ ದಿನವನ್ನು ಮೀಸಲಿಡಲಾಗಿದೆ.

ಕಳೆದ ಒಂದೂವರೆ ವರ್ಷದಲ್ಲಿ ಎದುರಾದ ಹಲವು ಸವಾಲುಗಳನ್ನು ಸಮ ರ್ಥವಾಗಿ ಎದುರಿಸಿರುವ ಶಿಕ್ಷಕರು, ಕೊರೊ ನಾ ಮಹಾಮಾರಿಯ ನಡುವೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಮುಂದುವರಿ ಯಲು ಕಾರಣರಾದರು. ಕೊರೊ ನಾ ಸಂದರ್ಭದಲ್ಲಿ ಮಕ್ಕಳ ವ್ಯಾಸಂಗಕ್ಕಾಗಿ ಸರಕಾರ ಆರಂಭಿಸಿದ ವಿದ್ಯಾಗಮ ಯೋಜನೆ ಜಾರಿಗೊಳಿಸಲು ಶಿಕ್ಷಕರ ಶ್ರಮ ಅವಿಸ್ಮರ ಣೀಯ. ಮರಗಳ ಕೆಳಗೆ, ಶಾಲೆಗಳ ಆವರಣ, ಸಮುದಾಯ ಭವನ, ದೇಗುಲ ಆವರಣದಂತಹ ಸ್ಥಳಗಳಲ್ಲಿ ಕೊರೊ ನಾ ಸುರಕ್ಷತ ಕ್ರಮಗಳೊಂದಿಗೆ ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ಮಕ್ಕಳ ಶಿಕ್ಷಣ ಮುಂದುವರಿಯಲು ಶ್ರಮಿಸಿರುವುದು ಗಮನಾರ್ಹ.

ಶಿಕ್ಷಕರು ಪಾಠ ಮಾಡುವುದು ಮತ್ತು ಚುನಾವಣೆ ಕರ್ತವ್ಯಗಳ ಜತೆಗೆ ಕೊರೊ ನಾ ದಂತಹ ತುರ್ತು ಸಂದರ್ಭಗಳಲ್ಲಿ ಅದರ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿರುವುದು ಸಂತಸದ ಸಂಗತಿ.

ಆರೋಗ್ಯ ಇಲಾಖೆ ಜತೆ ಕೈಜೋಡಿಸಿ ಕೊರೊ ನಾ ಸೋಂಕಿತರಿಗೆ, ಕ್ವಾರಂಟೈನ್‌¬ನಲ್ಲಿರುವವರಿಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಕೊರೊ ನಾ ಸೋಂಕಿತರು ಮತ್ತು ಪ್ರಾಥಮಿಕ ಸಂಪರ್ಕಿತರ ಪತ್ತೆ ಕಾರ್ಯದಲ್ಲಿ ನೆರವಾಗುವುದು, ಲಸಿಕೆ ಸರ್ವೇ ಕಾರ್ಯ ಸೇರಿದಂತೆ ಕೊರೊ ನಾ ಮುಂಚೂಣಿ ಆರೋಗ್ಯ ಕಾರ್ಯಕರ್ತರಾಗಿ ಧೈರ್ಯದಿಂದ ಕರ್ತವ್ಯ ನಿರ್ವಹಿಸುವ ಮೂಲಕ ಶಿಕ್ಷಕರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತರಗತಿಗಳು ಪುನರಾರಂಭಕ್ಕೆ ಉತ್ಸಾಹ: ಒಂದೂವರೆ ವರ್ಷದ ಬಳಿಕ ಭೌತಿಕ ತರಗತಿಗಳನ್ನು ಪುನರಾರಂಭಿಸಲು ನಿರ್ಧಾರ ತೆಗೆದುಕೊಂಡಾಗ ಶಿಕ್ಷಕರ ಸಹಕಾರ ಅತೀ ಮುಖ್ಯವಾಗಿತ್ತು. ಶಾಲೆಗಳನ್ನು ಆರಂಭಿಸು ತ್ತೇವೆ ಎಂದಾಗ ಅತೀ ಉತ್ಸಾಹ ತೋರಿದರು. ಶಾಲೆಗೆ ಬರಲು ನಾವೆಲ್ಲ ಸಿದ್ದ ಎಂದರು. ಇದು ಮಕ್ಕಳ ಶೈಕ್ಷಣಿಕ ಭವಿಷ್ಯದ ಕುರಿತು ಶಿಕ್ಷಕರಿಗೆ ಅತೀ ಹೆಚ್ಚಿನ ಕಾಳಜಿ ಇದೆ ಎಂಬುದು ತೋರಿಸುತ್ತದೆ. ಲಸಿಕೆ ಕುರಿತು ಹಲವು ಹಿಂಜರಿಕೆಗಳ ನಡುವೆ ನಮ್ಮ ರಾಜ್ಯದ ಬಹುತೇಕ ಶಿಕ್ಷಕರು ಲಸಿಕೆ ಪಡೆದು ತರಗತಿಗಳಿಗೆ ಆಗಮಿಸಿದರು,

ಪ್ರೌಢಶಾಲೆ ಮತ್ತು ಪಿಯು ತರಗತಿಗಳ ಆರಂಭದ ಮೊದಲ ದಿನವನ್ನು ಹಬ್ಬದಂತೆ ಸಂಭ್ರಮಿಸಿದರು. ಶಾಲೆ, ಕಾಲೇಜುಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಸುರಕ್ಷತ ಕ್ರಮಗಳನ್ನು ಪಾಲಿಸಿಕೊಂಡು ಮಕ್ಕಳು ಕೋವಿಡ್‌ ನಿಯಮಗಳನ್ನು ಪಾಲಿ ಸುವಂತೆ ನೋಡಿಕೊಳ್ಳುತ್ತಿದ್ದಾರೆ. ಶಿಕ್ಷಕರ ಉತ್ಸಾಹ ನೋಡಿ ಲಕ್ಷಾಂತರ ಪಾಲಕರು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಗೈರು ಹಾಜರಾಗಿರುವ ಮಕ್ಕಳನ್ನು ಶಾಲೆಗೆ ಕರೆತರಲು ಶಿಕ್ಷಕರು ಸ್ವತಃ ಮನೆಗಳಿಗೆ ಹೋಗುತ್ತಿದ್ದಾರೆ. ಶೈಕ್ಷಣಿಕ ಭವಿಷ್ಯ, ದೇಶದ ಭವಿಷ್ಯದ ಪ್ರಜೆಗಳನ್ನು ರೂಪಿಸಲು ಕೊರೊ ನಾ ಸಂಕಷ್ಟದ ಸಂದ ರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಭಾರತ ರತ್ನ ಡಾ| ಎಸ್‌. ರಾಧಾಕೃಷ್ಣನ್‌ ಅವರ ಜನ್ಮ ದಿನದಂದು ನೆನೆಯುವುದಕ್ಕಿಂತ ಬೇರೆ ಸುಸಂದರ್ಭವಿಲ್ಲ.

ಶಿಕ್ಷಣ ಇಲಾಖೆ, ಶಿಕ್ಷಕರ ಶ್ರಮ, ಪ್ರಯತ್ನದಿಂದ ಸರಕಾರಿ ಶಾಲೆಗಳ ಭೌತಿಕ ತರಗತಿಗಳಿಗೆ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಹಾಜರಾಗುತ್ತಿದ್ದಾರೆ. ಪ್ರವೇಶಗಳು ಕೂಡ ಗಣನೀಯವಾಗಿ ಹೆಚ್ಚುತ್ತಿವೆ.

ಪ್ರಸಕ್ತ ಸಾಲಿನಲ್ಲಿ (2021-22) 45.63 ಲಕ್ಷಕ್ಕೂ ಹೆಚ್ಚು ಮಕ್ಕಳು ಸರಕಾರಿ ಶಾಲೆಗಳ ತರಗತಿಗಳಿಗೆ ಪ್ರವೇಶ ಪಡೆದಿದ್ದಾರೆ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯಗಳ ಲಭ್ಯತೆ ಸೇರಿದಂತೆ ಒಟ್ಟಾರೆಯಾಗಿ ಸರಕಾರಿ ಶಾಲೆಗಳು ಸುಧಾರಣೆಯಾಗುತ್ತಿರುವ ಸಂಕೇತವಾಗಿದೆ.

ಸರಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಒಟ್ಟಾರೆ ದಾಖಲಾತಿ 1.01 ಕೋಟಿಗೂ ಹೆಚ್ಚಿದೆ. ಒಂದನೇ ತರಗತಿಗೆ ಅಕ್ಟೋಬರ್‌ ಅಂತ್ಯದವ ರೆಗೂ ದಾಖಲಾತಿಗೆ ಅವಕಾಶವಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಂದನೇ ತರಗತಿ ಹಾಗೂ ಇನ್ನಿತರ ತರಗತಿಗಳಿಗೆ ದಾಖಲಾತಿ ಗಳು ಆಗುವ ವಿಶ್ವಾಸವಿದೆ.

ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಹೋಲಿಸಿದರೆ ಸರಕಾರಿ ಶಾಲೆಗಳಲ್ಲಿ ಅತೀ ಹೆಚ್ಚಿನ ದಾಖಲಾತಿಗಳು ಆಗಿರುವುದು ಸಂತೋಷದ ಸಂಗತಿ. ಇನ್ನು ಮುಂದೆ ಸರಕಾರ ಮತ್ತು ಸರಕಾರಿ ಶಾಲೆಗಳ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಒಂದೂವರೆ ವರ್ಷದಿಂದ ಭೌತಿಕ ತರಗತಿಗಳಿಂದ ದೂರ ಉಳಿದಿರುವ ಮಕ್ಕಳು ಶಾಲೆಗೆ ಬಂದಿದ್ದಾರೆ.

ಹಿಂದಿನ ತರಗತಿಗಳ ಪಾಠಗಳನ್ನು ತೆಗೆದ ಕೊಳ್ಳುವ ಮೂಲಕ ಮಕ್ಕಳ ನೆನಪಿನ ಶಕ್ತಿಗೆ ಚುರುಕು ಮುಟ್ಟಿಸುವ ಜತೆಗೆ ಈ ಸಾಲಿನ ಪಠ್ಯಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣ ಗೊಳಿಸುವ ಮಹತ್ವದ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ಪೂರ್ಣ ವಿಶ್ವಾಸ ನನಗಿದೆ.

ಮತ್ತೂಮ್ಮೆ ನಿಮ್ಮೆಲ್ಲರಿಗೂ ಶಿಕ್ಷಕರ ದಿನಾಚರಣೆ ಶುಭಾಶಯಗಳು.

-ಬಿ.ಸಿ ನಾಗೇಶ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು

ಟಾಪ್ ನ್ಯೂಸ್

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

KLE Technological University: Awarded Honorary Doctorate to Murugesh Nirani

KLE Technological University: ಮುರುಗೇಶ್‌ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.