ವಿದ್ಯಾರ್ಥಿ ಜೀವನದಲ್ಲಿ ಬಹುಪಾತ್ರದಾರಿ ಶಿಕ್ಷಕ..!


Team Udayavani, Sep 5, 2021, 1:00 PM IST

htrhgsdfsdaDSd

ಶಾಲಾ ಕಾಲೇಜು ದಿನಗಳಲ್ಲಿ ಕೇವಲ ಯಾಂತ್ರಿಕವಾಗಿ ಪಾಠ ಬೋಧಿಸುವ ಶಿಕ್ಷಕರಿಗಿಂತ, ವಿದ್ಯಾರ್ಥಿಗಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಭವದ ಬಂಧನವನ್ನು ನೀಗಿಸಿ, ವಿದ್ಯಾರ್ಥಿಗಳ ಕಷ್ಟದಲ್ಲಿ ಭಾಗಿಯಾಗಿ ಸಹಾಯಮಾಡುವ ಸ್ನೇಹಿತರಾಗಿ, ಜೀವನದ ನಿಜವಾದ ಮಾರ್ಗ ಕಂಡುಕೊಳ್ಳಲು ಸಹಾಯ ಮಾಡುವ ಮಾರ್ಗದರ್ಶಕರಾಗಿ, ಪ್ರಪಂಚದ ವಿವಿಧ ಆಯಾಮಗಳ ಬಗ್ಗೆ ತಿಳುವಳಿಕೆ ನೀಡುವ ತತ್ವಜ್ಞಾನಿಯಾಗವ ಮೂಲಕ  ವಿದ್ಯಾರ್ಥಿ ಜೀವನದಲ್ಲಿ ವಿವಿಧ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.

ಶಿಕ್ಷಕ ಸ್ನೇಹಿತರಾದರೆ ಗೌರವ ತಗ್ಗುವ ಕಾರ್ಯವಲ್ಲ, ಗೌರವವು ಪರಸ್ಪರ ಸಂಪಾದಿಸುವ ಸದ್ಗುಣವಾಗಿರುತ್ತದೆ. ಅಧಿಕಾರಕ್ಕಿಂತ ಸ್ನೇಹದಲ್ಲಿ ಗೌರವ ಬೆಳೆಸುವುದು ಸುಲಭ, ಶ್ರೇಷ್ಠತೆಗಾಗಿ ಗೌರವವನ್ನು ಗೌರವಿಸುವ ಬದಲು ಸ್ನೇಹದಲ್ಲಿ ಪರಸ್ಪರ ಗೌರವ ಸಾಧಿಸುವ ಶಿಕ್ಷಕರ ಪ್ರಭಾವ ಕೇವಲ ತರಗತಿಗೆ ಸೀಮಿತವಾಗದೆ ವಿದ್ಯಾರ್ಥಿಗಳ  ಹೊರ ಜೀವನದಲ್ಲಿಯು ಪ್ರಭಾವಿತವಾಗುತ್ತದೆ.

ಯಾವುದೇ ವ್ಯಕ್ತಿಯಾಗಲಿ ತನಗೆ ಬೇಕಾದ ಸಲಹೆ ಸಂದೇಶಗಳನ್ನು ಒಬ್ಬ ಸ್ನೇಹಿತನಿಂದ ಪಡೆಯಲು ಬಯಸುತ್ತಾರೆ.  ಹಾಗೆಯೇ ಶಿಕ್ಷಕ ಸ್ನೇಹಿತನಾಗುವ ಮೂಲಕ ಶೈಕ್ಷಣಿಕ ಜೀವನದಲ್ಲಿ ಸಕಾರಾತ್ಮಕ ದೃಷ್ಟಿಕೋನವನ್ನು ನೀಡಿ, ಕಲಿಕೆಯ ಫಲಿತಾಂಶವನ್ನು ಸುಧಾರಿಸುತ್ತರೆ.

ವಿದ್ಯಾರ್ಥಿಗಳಲ್ಲಿನ ಚಿಂತನಶೀಲತೆಯನ್ನು ಬೆಳೆಸಿ, ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನವನ್ನು ಜಾಗೃತಿಗೊಳಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ. ಇದರ ಫಲಿತಾಂಶ ನಮ್ಮ ಜೀವನದ ಪ್ರತಿ ಹೆಜ್ಜೆ, ತೀರ್ಮಾನದಲ್ಲೂ ಪ್ರತಿಫಲಿಸಿ ಉತ್ತಮ ಮಾರ್ಗ ಕಂಡುಕೊಳ್ಳುವಲ್ಲಿ  ಸಹಾಯಕವಾಗುತ್ತದೆ.

ತರಗತಿಗಳೆಂದರೆ  ವಿಭಿನ್ನ ಮನಸ್ಥಿತಿಯ ವಿದ್ಯಾರ್ಥಿಗಳು ಕಾಣುತ್ತಾರೆ.ಕೇವಲ ವಿದ್ಯಾರ್ಥಿಗಳು ದುರ್ಬಲವಾಗಿರುವ ವಿಷಯ ಮತ್ತು ಕ್ಷೇತ್ರಗಳ ಬಗ್ಗೆ ಪ್ರತಿಕ್ರಿಯಿಸದೆ ಅವರಲ್ಲಿರುವ ಸಾಮರ್ಥ್ಯ, ಆಸಕ್ತಿ ಕ್ಷೇತ್ರಗಳನ್ನು ಅರಿತು ಹುರಿದುಂಬಿಸುವ ಗುಣ ಅವಿಸ್ಮರಣೀಯ.ಇಂತಹ ಶಿಕ್ಷಕರು ಸದೃಢ ಸಮಾಜ ನಿರ್ಮಿಸುವಲ್ಲಿ ಮೌಲ್ಯಯುತವಾದ ಪರಿಶ್ರಮದ ಅಡಿಪಾಯದ ಅಗತ್ಯವನ್ನು ಮಕ್ಕಳಲ್ಲಿ ಮೂಡಿಸಿ, ಬೆಳೆಸುವ ಕಾರ್ಯದೊಂದಿಗೆ, ವಿದ್ಯಾರ್ಥಿಗಳಿಗೆ ನೀತಿಯುತ ಪ್ರಜ್ಞೆ , ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುತ್ತಾರೆ.

ಈ ಶಿಕ್ಷಕರು ಶೇಕ್ಷಣಿಕ ಸಂಸ್ಥೆಗಳಲ್ಲಿ ಬೋಧನೆ ಮಾಡಿದರೆ…ತಪ್ಪು ಮಾಡಿದಾಗ ಪಶ್ಚಾತಾಪ ಪಡುವಂತೆ ಮಾಡುವ ಆತ್ಮಸಾಕ್ಷಿಯ ಅರಿವು , ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸಲು ಕಲಿಸುವ ಜೀವನ, ಕಷ್ಟದಲ್ಲಿದ್ದಾಗ ಹೆಗಲಿಗೆ ಹೆಗಲು ಕೊಡುವ ಸ್ನೇಹಿತರು, ಮುಗುಳುನಗುತ್ತಾ ಒಳ ಸಂಚು ರೂಪಿಸುವ ಸಮಯಸಾಧಕರು..ಇವೆರೆಲ್ಲರು ಸಂದರ್ಭಾನುಸಾರ ಬೋಧಿಸುತ್ತಾರೆ. 

ಸಚಿನ ಕೋಮಾರ

ಎಸ್ ಡಿ ಎಂ ಕಾಲೇಜ್, ಉಜಿರೆ

ಟಾಪ್ ನ್ಯೂಸ್

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asssaa

ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

4-ed

Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

arrested

Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

1-idpp

Actor; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಟಿ ಡಿಂಪಲ್‌ ಕಪಾಡಿಯಾ

1-kukke

Kukke Subrahmanya: ಕಿರುಷಷ್ಠಿ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.