Teachers’ Day: ಸಂತೋಷ ಕಲಿಸಿದ ಸಂವೇದನೆಯ ಪಾಠಗಳು

Team Udayavani, Sep 5, 2023, 9:30 AM IST

Teachers’ Day: ಸಂತೋಷ ಕಲಿಸಿದ ಸಂವೇದನೆಯ ಪಾಠಗಳು

ಮಹಾಚುರುಕಿನ, ನಗು ಹೊತ್ತೇ ಹುಟ್ಟಿದವನಂತಿರುವ ಹುಡುಗ ಸಂತೋಷ. ಎರಡನೇ ತರಗತಿ ಓದುತ್ತಿರುವ ಈತ, ನಾಲ್ಕು ವರ್ಷದ ತನ್ನ ತಂಗಿಯನ್ನ ತುಂಬಾ ಹಚ್ಚಿಕೊಂಡಿದ್ದಾನೆ. ಅವನು ಮಾತನಾಡುವಾಗಲೆಲ್ಲ ಅಕ್ಕ, ಅಣ್ಣ, ತಮ್ಮ, ತಂಗಿ, ಅಪ್ಪ, ಅಮ್ಮ, ಅಜ್ಜಿಯೇ ತುಂಬಿರುತ್ತಾರೆ. ಪ್ರಾಣಿ ಪಕ್ಷಿ ಗಿಡಮರಕ್ಕೂ ಅವನು ಹೀಗೆಯೇ ಕರೆಯುವುದು. ಪಟಪಟ ಮಾತನಾಡುವ ಸಂತೋಷ ಅನೇಕ ಸಂಗತಿಗಳನ್ನ ಹೇಳುತ್ತಿರುತ್ತಾನೆ. “ಸರ್‌, ನಮ್‌ ಗಿಡದ ಕೈ ಮುರದರ್ರಿ, ನಮ್‌ ಗಿಡದ್ರೀ ಕಾಲಿಗೆ ಗಾಯ ಮಾಡ್ಯರ್ರಿ… ಸರ್‌, ಇಂವ ರ್ರಿ ಗಿಡದ ತಲಿ ಒಡದಾನ್ರೀ’ ಎನ್ನುವಾಗಲೆಲ್ಲ ಈ ಮಗು ನನಗೇನೋ ಕಲಿಸುತ್ತಿದೆ ಎಂಬ ಭಾವ ನನ್ನದು.

ಮೊನ್ನೆ ಏನೋ ಗುಟ್ಟು ಹೇಳುವವನಂತೆ ಬಳಿ ಬಂದು- “ಸರ್‌, ಸೀತಾಫ‌ಲದಾಗ ಒಬ್ಬ ತಮ್ಮ- ಒಂದು ಪುಟ್ಟ ತಂಗೀನು ಬಂದೈತ್ರಿ’ ಎಂದ. “ತೋರಿಸು ನಡಿ’ ಅಂತ ಅವನೊಂದಿಗೆ ಹೋದರೆ, ಸೀತಾಫ‌ಲ ಗಿಡದಲ್ಲಿ ಎರಡು ಪುಟ್ಟ ಕಾಯಿ ಬಿಟ್ಟಿದ್ದನ್ನ ತೋರಿಸಿ- “ಇದು ತಮ್ಮಾರಿ, ಇದು ತಂಗೀರಿ’ ಎಂದ. ಮತ್ತೂಂದು ದಿನ “ಬುಲ್‌ ಬುಲ್‌ ಹಕ್ಕಿ ಗೂಡಿನ್ಯಾಗ ಎರಡು ತಮ್ಮಾ, ಒಂದು ತಂಗಿ ಬಂದಾವ್ರಿà’ ಎಂದ. ಹೋಗಿ ನೋಡಿದೆ. ಆ ಪುಟ್ಟ ಗೂಡಲ್ಲಿ ಮೂರು ಪುಟ್ಟ ತತ್ತಿಗಳಿದ್ದವು. ಈ ಮಾನವೀಯ ಭಾಷೆಯನ್ನ ಅವನ ಬಾಯಿಂದ ಕೇಳುತ್ತಿದ್ದರೆ, ಸಂಗೀತದ ವಾದ್ಯ ನುಡಿದಂತಿರುತ್ತದೆ.

ಒಂದು ದಿನ ಗಾಬರಿಯಿಂದ ಓಡಿ ಬಂದ. “ಏನು ಸಂತೋಷ?’ ಅಂದೆ. “ಗುಬ್ಬಿ ಅವ್ವ ಅಳಾಕತ್ತಾಳ ರ್ರಿ, ಅದರ ಅಪ್ಪಾನೂ ಅಳಾಕತ್ತಾನ್ರೀ’ ಅಂತ ನನ್ನನ್ನು ಎಳೆದುಕೊಂಡು ಗುಬ್ಬಿ ಗೂಡಿನ ಕಡೆ ಕರೆದುಕೊಂಡು ಹೋದ. ಶಾಲೆಯ ವರಾಂಡದಲ್ಲಿ ಹಾಕಿರುವ ದೊಡ್ಡ ಬಲ್ಬ್ ಹಿಂದೆ ಗುಬ್ಬಿಗಳು ಗೂಡು ಕಟ್ಟಿವೆ. ಅಲ್ಲಿ ಮರಿಯೊಂದು ಹೇಗೋ ಉರುಲು ಬಿದ್ದು ಸತ್ತಿದೆ. ಅದಕ್ಕೆ ಅದರ ತಂದೆ ತಾಯಿ ಕಿರುಚುತ್ತಿದ್ದವು. ಅವುಗಳ ಸಂಕಟ ಕೇಳಿಸಿದಾಕ್ಷಣ ಈತ ಓಡಿ ಬಂದಿದ್ದ. ಮೆಲ್ಲಗೆ ಆ ಮರಿಯನ್ನ ಇಳಿಸಿ, ಅದರ ಶವ ಸಂಸ್ಕಾರ ಮಾಡಿದೆವು. ನಾನು ಏಕಾಂತದಲ್ಲಿದ್ದಾಗಲೆಲ್ಲ ಸಂತೋಷ ಕಲಿಸಿದ ಸಂವೇದನೆಯ ಪಾಠಗಳು ನೆನಪಾಗಿ ಎದೆ ತೇವಗೊಳ್ಳುತ್ತದೆ.

-ವೀರಣ್ಣ ಮಡಿವಾಳರ,

ಶಿಕ್ಷಕರು, ಅಂಬೇಡ್ಕರ್‌ ನಗರ,

ನಿಡಗುಂದಿ, ಬೆಳಗಾವಿ ಜಿಲ್ಲೆ 

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.