ಥ್ಯಾಂಕ್ ಯೂ… ನ್ಯಾಶನಲ್ ಜಿಯೋಗ್ರಾಫಿಕ್, ಡಿಸ್ಕವರಿ
ತಾಯ್ನುಡಿಯಲ್ಲಿ ಜ್ಞಾನ-ಮನರಂಜನೆ ಅವಲೋಕನ
Team Udayavani, Apr 3, 2021, 10:37 AM IST
ಸಾಂದರ್ಭಿಕ ಚಿತ್ರ
ಮನುಷ್ಯ ಎಷ್ಟು ಭಾಷಾ ಪ್ರಾವಿಣ್ಯತೆಯನ್ನು ಹೊಂದಿದ್ದರೂ ಕೂಡ ಆತ ಮಾತೃಭಾಷೆಯನ್ನು ಗೌರವಿಸಿದಷ್ಟು ಮತ್ಯಾವ ಭಾಷೆಯನ್ನೂ ಗೌರವಿಸಲಾರ. ಹೆಚ್ಚಿನವರಿಗೆ ಜ್ಞಾನ-ಮನರಂಜನೆ ಪ್ರತೀಯೊಬ್ಬನಿಗೂ ಮಾತೃಭಾಷೆಯಲ್ಲೇ ಪಡೆಯುವ ಆಸೆ… ಜಗತ್ತಿನ ಕುತೂಹಲ, ವಿಜ್ಞಾನ-ಪರಿಸರ, ಸಮುದ್ರದೊಳಗಿನ ಜೀವಿಗಳು, ದಟ್ಟ ಕಾಡು ವನ್ಯಜೀವಿಗಳ ಜೀವನ ಶೈಲಿ… ಡಿಸ್ಕವರಿ ಚಾನೆಲ್… ನ್ಯಾಶನಲ್ ಜಿಯೋಗ್ರಾಫಿಕ್ ವಾಹಿನಿಗಳಲ್ಲಿ ಪ್ರತೀ ಎಪಿಸೋಡ್ ಗಳನ್ನು ಕಣ್ತುಂಬಿಕೊಳ್ಳುವುದೇ ಆನಂದ… ಈ ರೀತಿ ಪರಿಸರ ವಿಜ್ಞಾನ ಜ್ಞಾನ ಉಣಬಡಿಸುವ ಚಾನೆಲ್ ಗಳಲ್ಲಿ ಆಂಗ್ಲ ಭಾಷೆಯ ವಿವರಣೆ ಬದಲು ನನ್ನ ಕನ್ನಡ ನುಡಿಯಲ್ಲಿ ವಿವರಿಸಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು ಎಂದು ಮನಸ್ಸಿನಲ್ಲೇ ಹಲವು ಸಲ ಭಾವಿಸಿಕೊಂಡಿದ್ದಿದೆ.
ಓದಿ : ಒಂದು ಅಪರೂಪದ ಸಂದರ್ಶನ; ಯುವ ಧೋನಿ ವರ್ಸಸ್ ನಿವೃತ್ತ ಧೋನಿ!
ಕಳೆದ ಹತ್ತುಹದಿನೈದು ವರ್ಷಗಳಿಂದ ಡಿಸ್ಕವರಿ, ನ್ಯಾಶನಲ್ ಜಿಯೋಗ್ರಫಿ ಚಾನೆಲ್‌ಗಳಲ್ಲಿ ತಮಿಳು, ತೆಲುಗು, ಮಲೆಯಾಳಂ, ಬೆಂಗಾಲಿ, ಹಿಂದಿ, ಗುಜರಾತಿ ಭಾಷೆಗಳಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದ್ದವು. ಆದರೆ ಕನ್ನಡಕ್ಕೆ ಮಾತ್ರ ಈ ಭಾಗ್ಯ ಇರಲಿಲ್ಲ. ಕಾರಣ ಇಲ್ಲಿನ ಡಬ್ಬಿಂಗ್ ವಿರೋಧಿ ನೀತಿ. ಕಳೆದ ಎರಡು ವರ್ಷಗಳಲ್ಲಿ ಡಬ್ಬಿಂಗ್ ಕುರಿತಾಗಿ ಸಾಕಷ್ಟು ಬದಲಾವಣೆಗಳು ಆಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಖ್ಯಾತ ಪರಿಸರ ಸಾಹಸಿಗ ಬೀರ್ ಗ್ರಿಲ್ಸ್ ಜಂಟಿ ಪರಿಸರ ಅನ್ವೇಷಣೆ ಕಾರ್ಯಕ್ರಮವನ್ನು ಡಿಸ್ಕವರಿ ಚಾನೆಲ್ ನಲ್ಲಿ ಕನ್ನಡದಲ್ಲಿಯೂ ಪ್ರಸಾರ ಮಾಡುವ ಮೂಲಕ ಕೋಟ್ಯಾಂತರ ಕನ್ನಡಿಗರನ್ನು ಮನಮುಟ್ಟುವಂತೆ ಮಾಡಿತ್ತು. ಸದ್ಯ ಡಿಸ್ಕವರಿ ಚಾನೆಲ್ ಕನ್ನಡ ಆಡಿಯೋ ಫೀಡ್ ಒದಗಿಸಿದೆ ಎನ್ನುವುದು ಸಂತೋಷದ ಸಂಗತಿ.
ಕಳೆದ ವಾರ ನ್ಯಾಶನಲ್ ಜಿಯೋಗ್ರಫಿ ವಾಹಿನಿ ಸಹ ಕನ್ನಡ ಆಡಿಯೋ ಫೀಡ್ ನೀಡಿದ್ದು, ಭಾರತೀಯ ಎಲ್ಲಾ ಪ್ರಾದೇಶಿಕ ಭಾಷೆ, ಸಂಸ್ಕೃತಿಯನ್ನು ಗೌರವಿಸುವುದಕ್ಕೆ ಮುಂದಾಗಿರುವುದು ಹೆಮ್ಮೆಯ ವಿಚಾರ. ಜಗತ್ತಿನ ಜ್ಞಾನ, ಹೊಸ ಪರಿಸರ ಅನ್ವೇಷಣೆಯನ್ನು ಕನ್ನಡದಲ್ಲೆ ಆನಂದಿಸಬಹುದು ಎಂದು ಪ್ರಕಟಣೆ ಕೊಡುವ ಮೂಲಕ ಕೋಟ್ಯಾಂತರ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ…. ನಿಮಗಿದೋ ಧನ್ಯವಾದ.
ಓದಿ : ಮತ್ತೆ ಆತಂಕದಲ್ಲಿ ಕನ್ನಡ ಚಿತ್ರರಂಗ: ಸಿನಿಮಾ ಬಿಡುಗಡೆಯಲ್ಲಿ ಆಗಲಿದೆ ವ್ಯತ್ಯಯ
ಟೆಲಿವಿಷನ್ ಮತ್ತು ಸಿನಿಮ ಜಗತ್ತಿನಲ್ಲಿ ಡಬ್ಬಿಂಗ್ ಎನ್ನುವುದು ಬಹುಮುಖ್ಯ ಅಂಗವಾಗಿ ಗುರುತಿಸಿಕೊಂಡಿದೆ. ಕನ್ನಡದಲ್ಲಿ ಡಬ್ಬಿಂಗ್ ಅವಶ್ಯಕತೆ ಕುರಿತಾಗಿ ಈಗಾಗಲೆ ಹಲವು ವರ್ಷಗಳಿಂದ ಪರ-ವಿರೋಧ ಚರ್ಚೆಗಳು ಸಾಕಷ್ಟು ನಡೆದಿವೆ ಹಾಗೂ ಇಂದಿಗೂ ನಡೆಯುತ್ತಲೇ ಇದೆ. ಕಳೆದ ಹತ್ತು ವರ್ಷಗಳಲ್ಲಿ ಈ ಬಗ್ಗೆ ಪರಿಣಾಮಕಾರಿ ಹೋರಾಟಗಳು ನಡೆದು ಕನ್ನಡದಲ್ಲಿ ಡಬ್ಬಿಂಗ್ ಸಂಸ್ಕೃತಿ ಮೆಲ್ಲನೆ ಆವರಿಸಿಕೊಳ್ಳುತ್ತಿದೆ. ಕನ್ನಡ ಭಾಷೆಗೆ ಡಬ್ಬಿಂಗ್ ಅಗತ್ಯ ಎಷ್ಟರ ಮಟ್ಟಿಗೆ ಯಾವ ಬಗೆಯಲ್ಲಿ ಬೇಕೆಂಬ ಬಗ್ಗೆ ಅವಲೋಕನ ಮಾಡಿಕೊಳ್ಳುವ ಕಾಲ ಬಂದೊದಗಿದೆ.
ಇತ್ತೀಚಿನ ದಿನಗಳಲ್ಲಿ ಕನ್ನಡದ ಒಂದೆರಡು ಖಾಸಗಿ ಚಾನೆಲ್ ಗಳಲ್ಲಿ ಪ್ರತೀ ವಾರದ ಅಂತ್ಯದಲ್ಲಿ ಪಕ್ಕದ ರಾಜ್ಯದ ತೆಲುಗು, ತಮಿಳು ಚಿತ್ರರಂಗದ ಪರಭಾಷೆಯ ಸಿನೆಮಾಗಳನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಒಂದು ಹಂತದಲ್ಲಿ ಅನ್ಯ ಭಾಷಾ ಚಿತ್ರಗಳನ್ನು ಕನ್ನಡ ಭಾಷೆಯಲ್ಲಿಯೇ ನೋಡಬೇಕು ಎಂದು ಡಬ್ಬಿಂಗ್ ಗಾಗಿ ಹಂಬಲಿಸುತ್ತಿದ್ದ ಪ್ರೇಕ್ಷಕ ವರ್ಗಕ್ಕೆ ಇದು ಹಬ್ಬದಂತಾಗಿದೆ.
ತೀರ ಮನರಂಜನೆ, ವಾಣಿಜ್ಯ ಸಿನೆಮಾಗಳು ಡಬ್ಬಿಂಗ್ ಮೂಲಕ ಕನ್ನಡದ ಮುಖವಾಡ ಹೊತ್ತು ನಮ್ಮ ರಾಜ್ಯದಲ್ಲಿ ಹೆಸರು ಮಾಡುತ್ತಿದೆ.
ಅಷ್ಟೇ ಅಲ್ಲದೆ ಅನ್ಯ ಭಾಷೆಯ ಧಾರವಾಹಿಗಳು ಕನ್ನಡ ಭಾಷೆಗೆ ಅನುವಾದಗೊಂಡು ಪ್ರಸಾರವಾಗುತ್ತಿದೆ. ಈ ಬಗ್ಗೆ ಟಿ ಆರ್ ಪಿ ಹೆಚ್ಚಳವಾಗಿದ್ದು ಅರಿತು, ಇನ್ನಷ್ಟು ಧಾರವಾಹಿ ಸಿನೆಮಾಗಳು ಕನ್ನಡಕ್ಕೆ ಡಬ್ಬಿಂಗ್ ಆಗುವ ಹೊಸ್ತಿಲಿನಲ್ಲಿವೆ. ಕನ್ನಡಕ್ಕೆ ಡಬ್ಬಿಂಗ್‌ನ್ನು ವಿರೋಧಿಸಿ ಈ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದವರಿಗೆ ಪ್ರೇಕ್ಷಕರ ಆಯ್ಕೆಯನ್ನು ಕಿತ್ತುಕೊಳ್ಳಲಾಗದು ಎಂದು ತೀರ್ಪು ನೀಡಿದೆ. ಇನ್ನೂ ಹೇಗಿದ್ದರೂ ಡಬ್ಬಿಂಗ್ ನ್ನು ತಡೆಯಲು ಅಸಾಧ್ಯ. ಮಾತೃ ಭಾಷೆಯಲ್ಲಿ ಜಗತ್ತಿನ ಜ್ಞಾನ ಮನರಂಜನೆಯನ್ನು ಪಡೆಯುವುದು ಪ್ರತೀಯೊಬ್ಬ ಪ್ರಜೆಯ ಹಕ್ಕು ಎಂದು ಯುನೆಸ್ಕೊ ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಬೇಕಾಬಿಟ್ಟಿ ಡಬ್ಬಿಂಗ್ ಹೇರುವ ಮೂಲಕ ಪ್ರೇಕ್ಷಕ ವರ್ಗಕ್ಕೆ ವಾಕರಿಕೆ ಬರದಂತೆ ಮಾಡದೇ ಉತ್ತಮ ಗುಣಮಟ್ಟದ ಸಿನೆಮಾ ಧಾರವಾಹಿ, ಕಂಟೆಂಟ್ಗ ಳು ಬರಲಿ ಎಂಬುದು ನಮ್ಮ ಸದಾಶಯವಾಗಿದೆ.
ಅನುಪ ಎಂ. ಶೆಟ್ಟಿ
ಆಳ್ವಾಸ್ ಕಾಲೇಜು, ಮೂಡುಬಿದಿರೆ
ಓದಿ : ಕುಡಿದ ಅಮಲಿನಲ್ಲಿ ತನ್ನ ಮನೆಗೆ ಬೆಂಕಿ ಹಚ್ಚಿದ! ಆರು ವರ್ಷದ ಮಗು ಸೇರಿ ಮೂವರು ಸಜೀವ ದಹನ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.