ಮನುಜ ಕುಲವನ್ನು ನರಕಯಾತನೆಯಿಂದ ರಕ್ಷಿಸಿದ ಆ ಮಗು
Team Udayavani, Dec 25, 2019, 7:30 AM IST
ಬಹುಶಃ ದೇವರ ರೂಪ ಧರಿಸಿ ಭೂಮಿಗೆ ಇಳಿದರೆ ಸಾಮಾನ್ಯ ಜನರು ನಂಬಲಾರರು, ನಂಬಿದರೂ ದೇವರಿಂದ ದೂರವೇ ಉಳಿಯುವರು ಎನ್ನುವ ಕಾರಣದಿಂದಾಗಿ ಮನುಷ್ಯ ರೂಪದಲ್ಲಿ ಹುಟ್ಟಿ, ಮನುಷ್ಯರ ಹಾಗೆ ಬಾಳಿ, ಅವರೊಂದಿಗೆ ಬೆರೆತು, ಅವರು ಪಡುವಂತಹ ಕಷ್ಟಗಳಲ್ಲಿ ಭಾಗಿಯಾಗಿ, ಅವರು ಉಣ್ಣುವುದನ್ನು ಉಂಡು, ಅವರು ಉಡುವುದನ್ನು ಉಟ್ಟು ಸನ್ಮಾರ್ಗದೆಡೆಗೆ ಅವರ ಮನ ಪರಿವರ್ತನೆ ಮಾಡಿ ಸ್ವರ್ಗದ ದಾರಿಯನ್ನು ತೋರಿಸುವುದು ದೇವರ ನಿರ್ಧಾರವಾಗಿತ್ತು.
ಮಗು ಸಾಕ್ಷಾತ್ ದೇವರ ಸ್ವರೂಪವೆಂದು ನಂಬಿಕೊಂಡು ಬಂದವರು ನಾವು. ಮಗುವಿನ ಹೃದಯ ನಿರ್ಮಲ, ಮನಸ್ಸು ನಿಷ್ಕಳಂಕ, ಆಲೋಚನೆ ಶುದ್ಧ. ಮಗುವಿಗಿಲ್ಲ ಅಹಂಕಾರ. ಮಗುವಿನ ಮಾತು ಅಷ್ಟೇ ಪರಿಶುದ್ಧ. ಮಗುವಿನೊಡನೆ ಪ್ರತಿಯೊಬ್ಬರ ಸಂಬಂಧ ಅದು ದೈವದರ್ಶನವೇ ಸರಿ. ಮಗುವಿನೊಡನೆ ಒಡನಾಟ ಅದು ಸ್ವರ್ಗಿಯ ಅನುಭವ. ಮಗುವಿನ ಮಮತೆ, ಪ್ರೀತಿಗಿಲ್ಲ ಕೀಳು ಮೇಲೆಂಬ ಭಾವನೆ. ಅದರ ನಿಷ್ಕಳಂಕ ಮನಸ್ಸಿಗಿಲ್ಲ ಶ್ರೀಮಂತ ಬಡವನೆಂಬ ಧೋರಣೆ. ಅದರ ನೋಟಕ್ಕೆ ಎಲ್ಲವೂ ಸಮಾನ ಹಾಗೂ ಎಲ್ಲವೂ ಸ್ವಚ್ಛಂದ.
ಎರಡು ಸಾವಿರ ವರ್ಷಗಳ ಹಿಂದೆ ಮಾತೆ ಕನ್ಯಾ ಮರಿಯಮ್ಮ ಹಾಗೂ ಜೋಸೆಫ್ರಿಗೆ ಹುಟ್ಟಿದ ಮಗು ಯೇಸು ಕೂಡ ಇಂತದ್ದೇ ಸ್ವಭಾವವನ್ನು ಹೊತ್ತುಕೊಂಡು ತಾಯಿಯ ಗರ್ಭದಿಂದ ಭೂಮಿಗೆ ಬಂದವನು. ಆದರೆ ಈ ಮಗು ಇನ್ನೂ ಹೆಚ್ಚಿನ ವಿಶೇಷತೆಯನ್ನು ಹುಟ್ಟಿನಿಂದಲೇ ಹೊಂದಿತ್ತು. ಆ ಮಗು ದೈವಶಕ್ತಿಯಿಂದ ಕೂಡಿತ್ತು. ಇದಕ್ಕೆ ಕಾರಣ ದೇವರಿಗೆ ಮನುಷ್ಯರ ಮೇಲಿದ್ದ ಪ್ರೀತಿ. ತಾನು ಸೃಷ್ಟಿಸಿದ ಮಾನವರು ಭೂಲೋಕದಲ್ಲಿ ಅನಾಚಾರ, ಸ್ವೇಚ್ಛಾಚಾರ, ಭೋಗ, ಪಾಪ ಹಾಗೂ ಇನ್ನಿತರ ಚಟುವಟಿಕೆಗಳಿಂದ ನರಕದ ಹಾದಿಯನ್ನು ಹಿಡಿಯುತ್ತಿರುವುದು ಅವನಿಗೆ ಸಹಿಸಲ ಸಾಧ್ಯವಾಯಿತು. ದೈವಶಕ್ತಿಯೊಂದೇ ಅವರನ್ನು ಪಾಪದ ಕೂಪದಿಂದ ರಕ್ಷಿಸಲು ಸಾಧ್ಯ ಎಂಬುದರ ಅರಿವು ಅವನಿಗಿತ್ತು. ಆದುದರಿಂದ ತಾನೇ ಸ್ವತಃ ಭೂಮಿಗಿಳಿದು ಮನುಜ ಕುಲವನ್ನು ನರಕ ಯಾತನೆಯಿಂದ ರಕ್ಷಿಸುವ ಕೆಲಸವನ್ನು ಆರಂಭಿಸಿದ. ಬಹುಶಃ ದೇವರ ರೂಪ ಧರಿಸಿ ಭೂಮಿಗೆ ಇಳಿದರೆ ಸಾಮಾನ್ಯ ಜನರು ನಂಬಲಾರರು, ನಂಬಿದರೂ ದೇವರಿಂದ ದೂರವೇ ಉಳಿಯುವರು ಎನ್ನುವ ಕಾರಣದಿಂದಾಗಿ ಮನುಷ್ಯ ರೂಪದಲ್ಲಿ ಹುಟ್ಟಿ, ಮನುಷ್ಯರ ಹಾಗೆ ಬಾಳಿ, ಅವರೊಂದಿಗೆ ಬೆರೆತು, ಅವರು ಪಡುವಂತಹ ಕಷ್ಟಗಳಲ್ಲಿ ಭಾಗಿಯಾಗಿ, ಅವರು ಉಣ್ಣುವುದನ್ನು ಉಂಡು, ಅವರು ಉಡುವುದನ್ನು ಉಟ್ಟು ಸನ್ಮಾರ್ಗದೆಡೆಗೆ ಅವರ ಮನ ಪರಿವರ್ತನೆ ಮಾಡಿ ಸ್ವರ್ಗದ ದಾರಿಯನ್ನು ತೋರಿಸುವುದು ದೇವರ ನಿರ್ಧಾರವಾಗಿತ್ತು.
ಅಂತೆಯೇ ಆಯಿತು. ಇದೊಂದು ಪವಾಡ. ಪವಾಡ ಪವಾಡವಾಗಿಯೇ ಉಳಿಯುತ್ತದೆ. ಏಕೆಂದರೆ ಅದು ಕಲ್ಪನಾತೀತ. ಹಲವಾರು ವ್ಯಕ್ತಿಗಳು ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ. “ಅದು ಹೇಗೆ ಸಾಧ್ಯ. ಗಂಡ ಹೆಂಡತಿ ಸಂಧಿಸದೆ ಮಗು ಹುಟ್ಟಲು ಸಾಧ್ಯವೇ?’ ಇನ್ನೊಂದು ಕಡೆ ದೇವರಿಗೆ ಅಸಾಧ್ಯವಾದುದು ಏನೂ ಇಲ್ಲ ಎಂಬುದನ್ನ ನಂಬಿಕೊಂಡು ಬಂದವರು ನಾವು. ಆದುದರಿಂದ ಪವಿತ್ರಾತ್ಮನ ಶಕ್ತಿಯಿಂದ ಮಾತೆ ಮೇರಿಯಮ್ಮ ಗರ್ಭಿಣಿಯಾದಳು. ಗೋದಲಿಯಲ್ಲಿ ಪ್ರಸವ ವೇದನೆಯನ್ನು ಅನುಭವಿಸಿ ಗಂಡು ಮಗುವಿಗೆ ಜನ್ಮ ನೀಡಿದಳು ಹಾಗೂ ಆ ಮಗುವಿಗೆ ಏಸು ಎಂದು ಹೆಸರಿಟ್ಟರು. ಆ ಜನನದಿಂದ ದೇವರಿಗೆ ಮನುಕುಲದ ಮೇಲಿರುವ ಪ್ರೀತಿ ರುಜುವಾಯಿತು. ಜಗತ್ತಿನಾದ್ಯಂತ ಈ ಪವಾಡದ ಜನನವನ್ನು ಕ್ರಿಸ್ಮಸ್ ಹಬ್ಬವಾಗಿ ಆಚರಿಸಿ ಏಸು ಕ್ರಿಸ್ತನ ಜನನವನ್ನು ಸಂಭ್ರಮಿಸುತ್ತೇವೆ.
ದೇವರು ಕನ್ಯಾ ಮರಿಯಮ್ಮಳನ್ನು ಏಸುವಿನ ತಾಯಿಯಾಗಿ ಆಯ್ಕೆ ಮಾಡಿದ ರೀತಿಯೇ ಒಂದು ಅದ್ಭುತ ಸನ್ನಿವೇಶ. ತನ್ನ ಸ್ಥಾನದಲ್ಲಿ ತನ್ನ ಮಗನನ್ನು ಭೂಮಿಗೆ ಕಳುಹಿಸುವ ಸಂದೇಶವನ್ನು ಕನ್ಯಾ ಮರಿಯಮ್ಮಳಿಗೆ ನೀಡುವ ಸಲುವಾಗಿ ದೇವರು ಅವನ ದೂತನನ್ನು ನಿಯೋಜಿಸಿದರು. ಆ ದೂತ ಕನ್ಯಾ ಮರಿಯಮ್ಮಳಿಗೆ ಪ್ರತ್ಯಕ್ಷವಾಗಿ ದೇವರ ಸಂದೇಶವನ್ನು ಸಾರುತ್ತಾನೆ. “ನೀನು ಭಾಗ್ಯವಂತಳು. ಪವಿತ್ರಾತ್ಮನ ಶಕ್ತಿಯಿಂದ ನೀನು ಒಂದು ಗಂಡು ಮಗುವಿಗೆ ಜನ್ಮ ನೀಡುವಿ. ಆತನಿಗೆ ಏಸು ಎಂದು ನಾಮಕರಣ ಮಾಡುವಿಯಂತೆ’. ಈ ಸಂದೇಶದಿಂದ ಒಮ್ಮೆ ವಿಚಲಿತಳಾದ ಕನ್ಯಾ ಮರಿಯಮ್ಮ ತನ್ನನ್ನೇ ದೇವರ ಅಪೇಕ್ಷೆಗೆ ಅರ್ಪಿಸಿ ಅವನ ಇಷ್ಟದಂತೆ ಆಗಲಿ ಎಂದು ಮನುಕುಲವನ್ನು ರಕ್ಷಿಸಲು ಹುಟ್ಟುವ ಮಗುವಿನ ತಾಯಿಯಾಗಲು ಒಪ್ಪುತ್ತಾಳೆ.
ಅ ಮಗು ಏಸು ತನ್ನ ದೈವಾತ್ಮವನ್ನು ಹುಟ್ಟಿನಿಂದಲೇ ತೋರಿಸಿ ಕೊಡುತ್ತಾನೆ. ಅವನು ಹುಟ್ಟುವಾಗ ಮೂವರು ಶ್ರೀಮಂತ ರಾಜರು ಅವನನ್ನು ನೋಡಲು ಹೋಗುವಾಗ ಅವರಿಗೆ ದಾರಿ ತೋರಿಸಿದ್ದು ಆಕಾಶದಲ್ಲಿ ಹೊಳೆಯುತ್ತಿದ್ದ ಒಂದು ನಕ್ಷತ್ರ. ಬಾಲಕ ಏಸುವನ್ನು ದೇವಾಲಯಕ್ಕೆ ಅರ್ಪಣೆ ಮಾಡಿದಂತಹ ಸಂದರ್ಭದಲ್ಲಿ ಬಾಲ ಏಸು ತನ್ನ ಹೆತ್ತವರಿಂದ ದೂರವಾಗುತ್ತಾನೆ. ಹೆತ್ತವರು ಆತಂಕಗೊಂಡು ಬಾಲಕನನ್ನು ಅರಸಿ ದೇವಾಲಯಕ್ಕೆ ಹಿಂತಿರುಗಿದಾಗ ಬಾಲಕ ಏಸು ಆ ದೇವಾಲಯದಲ್ಲಿ ಹಿರಿಯರೊಡನೆ ದೇವರ ರಾಜ್ಯದ ಬಗ್ಗೆ ಗಹನ ಚರ್ಚೆಯಲ್ಲಿ ತೊಡಗಿದ್ದ. ಅನಂತರ ಆತನಿಗೆ ಮೂವತೂರು ವರ್ಷಗಳು ತುಂಬುವ ತನಕ ಕುಟುಂಬದೊಂದಿಗೆ ಖಾಸಗಿ ಬದುಕು. ಮೂವತೂ¾ರು ವರ್ಷ ತುಂಬುತ್ತಲೇ ಸಾರ್ವಜನಿಕ ಬದುಕು ಆರಂಭಿಸಿ ದೇವರು ಅವನಿಗೋಸ್ಕರ ನಿರ್ಧರಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡತೊಡಗಿದ. ಮನುಷ್ಯರಿಗೆ ಸ್ವರ್ಗದ ದಾರಿಯನ್ನು ತೋರಿಸುವ ಕೆಲಸವನ್ನು ಕೈಗೆತ್ತಿಕೊಂಡು ತನ್ನವರಿಂದಲೇ ದ್ವೇಷಕ್ಕೊಳಗಾದ. ಶಿಲುಬೆಯ ಮರಣದೊಂದಿಗೆ ಅವನ ಜೀವನ ಅಂತ್ಯಗೊಂಡಿತು. ಆದರೆ ಅವನ ಸಾವು ಮನುಕುಲಕ್ಕೆ ಹೊಸ ಹುರುಪು ನೀಡಿತು. ಇದಕ್ಕಿಂತಲೂ ಮಿಗಿಲಾಗಿ ಅವನ ಹುಟ್ಟು ಮನುಕುಲಕ್ಕೆ ಹೊಸ ಆಶಾಕಿರಣ ನೀಡಿತು. ಇನ್ನೇನೊ ಕತ್ತಲಲ್ಲಿ ನಾವು ಮುಳುಗುತ್ತೇವೆ ಎನ್ನುವಾಗ ಅ ಮಗುವಿನ ಕೂಗು ನಮಗೆಲ್ಲರಿಗೆ ಪುನರ್ಜನ್ಮವನ್ನು ನೀಡಿತು. ಆ ಮಗು ಕ್ರೆçಸ್ತರು ಆರಾಧಿಸುವಂತಹ ಏಸು ಕ್ರಿಸ್ತ.
ಕ್ರಿಸ್ಮಸ್ ಹಬ್ಬವು ಪ್ರೀತಿ, ಮಮತೆ, ಸಂತೋಷ ಹಾಗೂ ಸಹೋದರತ್ವ ಸಾರುವ ಹಬ್ಬವಾಗಿದೆ. ಇಡೀ ವಿಶ್ವವೇ ಈ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಏಸು ಸಾರಿದ ಪ್ರೀತಿಯ ಸಂದೇಶ ನೆಲೆಮಾಡಲಿ ಎಂಬ ಹಾರೈಕೆ.
ಡಾ| ವಿನ್ಸೆಂಟ್ ಆಳ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.