ಆಯೋಗ ಕೆಲಸ ಮಾಡೋದು ಹೀಗೆ


Team Udayavani, Apr 10, 2019, 6:00 AM IST

g-25

ನಾಲ್ವರು ಹಿರಿಯ ಐಪಿಎಸ್‌ ಅಧಿಕಾರಿಗಳನ್ನು ಕೆಲ ದಿನಗಳ ಹಿಂದೆ ಚುನಾವಣಾ ಆಯೋಗ ವರ್ಗಾವಣೆ ಮಾಡಿತ್ತು. ಈ ಕ್ರಮ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಚುನಾವಣಾ ಆಯೋಗದ ನಡುವೆ ನಿಯಮ ಜಾರಿ ಬಗ್ಗೆ ವಾಗ್ವಾದ ಉಂಟಾಗಿತ್ತು. ಹೀಗಾಗಿ ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಆಯೋಗದ ಕೆಲಸದ ಬಗ್ಗೆ ಪ್ರಶ್ನೋತ್ತರ ಮಾಹಿತಿ

ಚುನಾವಣೆ ನಡೆಸುವ ನಿಟ್ಟಿನಲ್ಲಿ ಆಯೋಗಕ್ಕೆ ತನ್ನದೇ ಆದ ಅಧಿಕಾರಿಗಳ ತಂಡವಿದೆಯೇ?
ನವದೆಹಲಿಯಲ್ಲಿ ಅದಕ್ಕೆ ಪ್ರತ್ಯೇಕ ಕಾರ್ಯಾಲಯ ಮತ್ತು ಪ್ರಧಾನ ಕಚೇರಿಯೂ ಇದೆ. ಅದು ಲೋಕಸಭೆ ಚುನಾವಣೆ ನಡೆಸಲು ಬೇಕಾದ ವ್ಯವಸ್ಥೆಗಳನ್ನು ಹೊಂದಿಲ್ಲ. ಚುನಾವಣಾ ಆಯೋಗದ ಕಾರ್ಯಾಲಯದಲ್ಲಿ ಸುಮಾರು ಚುನಾವಣಾ ಆಯುಕ್ತರು, ಮಹಾನಿರ್ದೇಶಕರು, ನಿರ್ದೇಶಕರು, ಹಿರಿಯ ಪ್ರಧಾನ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಸೆಕ್ಷನ್‌ ಆಫೀಸರ್‌ ಸೇರಿದಂತೆ 400 ಮಂದಿ ಅಧಿಕಾರಿಗಳು ಇದ್ದಾರೆ. ಉಪ ಚುನಾವಣಾ ಆಯುಕ್ತರು, ಮಹಾ ನಿರ್ದೇಶಕರು ಮತ್ತು ನಿರ್ದೇಶಕರ ಹುದ್ದೆಗಳಿಗೆ ಸರಕಾರದ ಇತರ ಇಲಾಖೆಯ ಅಧಿಕಾರಿ ಗಳನ್ನು (ಸಾಮಾನ್ಯವಾಗಿ ಐಎಎಸ್‌) ನಿಯೋಜನೆ ಮೇರೆಗೆ ನಿಯುಕ್ತಿಗೊಳಿಸಲಾಗುತ್ತದೆ. ಇತರ ಹುದ್ದೆಗಳಿಗೆ ಖಾಯಂ ಅಧಿಕಾರಿಗಳನ್ನು ನೇಮಿಸಲಾಗುತ್ತದೆ.

ಆಯೋಗಕ್ಕೆ ಸಿಬಂದಿ ವ್ಯವಸ್ಥೆ ಹೇಗಾಗುತ್ತದೆ?
ಚುನಾವಣೆ ಘೋಷಣೆಗೆ ಮುನ್ನ ನಡೆಯುವ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಪ್ರಕ್ರಿಯೆ ನಡೆಸುವುದಕ್ಕೆ, ಅತ್ಯಂತ ತಳ ಮಟ್ಟವಾಗಿರುವ ಬೂತ್‌ ಮಟ್ಟದಲ್ಲಿನ ಕರ್ತವ್ಯ ಗಳಿಗೆ ಚುನಾವಣಾ ಆಯೋಗ ರಾಜ್ಯ ಸರಕಾರಗಳ ನೆರವು ಪಡೆಯ ಬೇಕಾಗುತ್ತದೆ. ಸಂವಿಧಾನದ 324ನೇ ವಿಧಿ ಪ್ರಕಾರ ರಾಷ್ಟ್ರಪತಿ ಅಥವಾ ರಾಜ್ಯದ ರಾಜ್ಯಪಾಲರು ಆಯೋಗಕ್ಕೆ ಅಗತ್ಯ ವಾಗಿರುವ ನೆರವು ನೀಡಲು ಬದ್ಧರಾಗಿರುತ್ತಾರೆ. ರಾಜ್ಯಗಳ ವ್ಯಾಪ್ತಿ ಯಲ್ಲಿ ಮುಖ್ಯ ಚುನಾವಣಾ ಅಧಿಕಾರಿ (ಸರಕಾರದ ಹಿರಿಯ ಅಧಿಕಾರಿ) ಚುನಾವಣಾ ಆಯೋಗದ ನೇತೃತ್ವ ವಹಿಸಿಕೊಳ್ಳುತ್ತಾರೆ. ಜತೆಗೆ ಆಯಾ ಜಿಲ್ಲಾಧಿಕಾರಿಗಳೇ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಚುನಾವಣಾ ನೋಂದಣಾಧಿಕಾರಿಗಳ(ಎಲೆಕ್ಟೋರಲ್‌ ರಿಜಿಸ್ಟ್ರೇಷನ್‌ ಆಫೀ ಸರ್ಸ್‌) ಕರ್ತವ್ಯವನ್ನು ಉಪ ವಿಭಾಗಾಧಿಕಾರಿ ನೋಡಿಕೊಳ್ಳುತ್ತಾರೆ.

ಸಹಾಯಕ ಚುನಾವಣಾ ನೋಂದಣಾಧಿಕಾರಿ ಹುದ್ದೆಯನ್ನು ತಹ  ಶೀಲ್ದಾರ್‌ ವಹಿಸುತ್ತಾರೆ. ರಿಟರ್ನಿಂಗ್‌ ಆಫೀಸರ್‌ (ಚುನಾವಣಾ ಧಿಕಾರಿ) ಕರ್ತವ್ಯವನ್ನು ಜಿಲ್ಲಾಧಿಕಾರಿ, ಸಹಾಯಕ ಚುನಾವಣಾ ಅಧಿಕಾರಿ ಕರ್ತವ್ಯವನ್ನು ಉಪ ವಿಭಾಗಾಧಿಕಾರಿ ಅಥವಾ ತಹಸೀಲ್ದಾರ್‌ ನಿರ್ವಹಿಸುತ್ತಾರೆ. ಬೂತ್‌ ಮಟ್ಟದ ಅಧಿಕಾರಿಗಳ ಕರ್ತವ್ಯಕ್ಕೆ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಅಂಚೆ ಇಲಾಖೆ ಸಿಬಂದಿ ನಿಯೋಜಿಸಲಾಗುತ್ತದೆ.

ಚುನಾವಣೆ ದಿನ ಸಮೀಪಿಸುತ್ತಿರುವಂತೆಯೇ ಮತದಾರರ ಪಟ್ಟಿ ಪರಿಷ್ಕರಣೆಗೆ ಸರಕಾರದ ವಿವಿಧ ಅಧಿಕಾರಿ, ಉದ್ಯೋಗಿಗಳನ್ನು ಅದಕ್ಕೆ ನಿಯೋಜಿಸಲಾಗುತ್ತದೆ. ನಮೂದಿಸುವವರು (ಎನ್ಯುಮರೇಟರ್‌), ಪ್ರಿಸೈಡಿಂಗ್‌ ಆಫೀಸರ್‌ಗಳು, ಚುನಾ ವಣಾಧಿ ಕಾರಿ (ಪೋಲಿಂಗ್‌ ಆಫೀಸರ್‌), ಎಣಿಕೆ ಸಹಾಯಕರು (ಕೌಂಟಿಂಗ್‌ ಅಸಿಸ್ಟೆಂಟ್ಸ್‌) ಮತ್ತು ಇತರರು ಬೇಕಾಗುತ್ತಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಸ್ಥಳೀಯ ಪೊಲೀಸರು, ಕೇಂದ್ರ ಅರೆಸೇನಾ ಸಿಬಂದಿ ಸೇರಿದಂತೆ 1 ಕೋಟಿ ಮಂದಿ ಚುನಾವಣಾ ಪ್ರಕ್ರಿಯೆ ನಿರ್ವಹಣೆಯಲ್ಲಿ ಭಾಗವಹಿಸಿದ್ದರು.

ಯಾರನ್ನು ಚುನಾವಣಾ ಕರ್ತವ್ಯದಿಂದ ಹೊರಗಿಡಬೇಕೆಂಬ ನಿಯಮ ಇದೆಯೇ?
ಸರಕಾರದ ಹತ್ತು ವಿಭಾಗದ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗುತ್ತದೆ. ಭಾರತೀಯ ಅರಣ್ಯ ಸೇವೆ (ಐಎಫ್ಎಸ್‌)ಅಧಿಕಾರಿಗಳು, ಪಶು ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ಕಂಪೌಂಡರ್‌ಗಳು, ಪಶು ಆಸ್ಪತ್ರೆಗಳಲ್ಲಿರುವ ಬಿ ಗ್ರೇಡ್‌ ಅಧಿಕಾರಿಗಳು, ವೈದ್ಯರು ಮತ್ತು ನರ್ಸ್‌ಗಳು, ಅರಣ್ಯ ಇಲಾ ಖೆಯ ತಾತ್ಕಾಲಿಕ ಸಿಬಂದಿ, ಆಕಾಶವಾಣಿ, ದೂರದರ್ಶನ ಉದ್ಯೋಗಿಗಳು, ಯುಪಿಎಸ್‌ಸಿಯ ತಾಂತ್ರಿಕ ಮತ್ತು ನಿರ್ವ ಹಣಾ ವಿಭಾಗದ ಉದ್ಯೋಗಿಗಳು, ಬಿಎಸ್‌ಎನ್‌ಎಲ್‌ ಮತ್ತು ಶೈಕ್ಷಣಿಕ ಸಂಸ್ಥೆ, ಗ್ರಾಮೀಣ ಪ್ರದೇಶದಲ್ಲಿರುವ ವಾಣಿಜ್ಯ ಬ್ಯಾಂಕ್‌ಗಳ ಅಧಿಕಾರಿಗಳು ಮತ್ತು ಸಿಬಂದಿ- ವಿಶೇಷವಾಗಿ ಒಬ್ಬನೇ ಸಿಬಂದಿಯಿಂದ ನಿರ್ವಹಿಸುತ್ತಿರುವ ಶಾಖೆಗಳ ಸಿಬಂದಿ. ಆರು ತಿಂಗಳ ಅವಧಿಯಲ್ಲಿ ಸೇವಾ ನಿವೃತ್ತಿಯಾಗುವವರು.

ಚುನಾವಣಾ ವ್ಯವಸ್ಥೆಯನ್ನು ನಿರ್ವಹಿಸಲು ಚುನಾವಣಾ ಆಯೋಗ ಯಾವ ರೀತಿಯ ಶಿಸ್ತು ಕ್ರಮ ಕೈಗೊಳ್ಳಬಹುದು?
ಜನ ಪ್ರಾತಿನಿಧ್ಯ ಕಾಯ್ದೆ ಪ್ರಕಾರ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡವರೆಲ್ಲ ಆಯೋಗದ ಸೂಚನೆಯನ್ನು ಕಡ್ಡಾಯ ಪಾಲಿಸಬೇಕು. ಉದಾಹರಣೆಗೆ ಹೇಳುವುದಿದ್ದರೆ ರಾಜ್ಯದ ಪೊಲೀಸ್‌ ಅಧಿಕಾರಿ ಚುನಾವಣಾ ಕರ್ತವ್ಯಕ್ಕೆ ನಿಯುಕ್ತಿ ಗೊಂಡ ಬಳಿಕ ಫ‌ಲಿತಾಂಶ ಪ್ರಕಟವಾಗುವ ವರೆಗೆ ಚುನಾವಣಾ ಆಯೋಗದ ಕೈಕೆಳಗೇ ಕೆಲಸ ಮಾಡಬೇಕಾಗುತ್ತದೆ. ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಗೃಹ ಕಾರ್ಯದರ್ಶಿಗಳು, ಪೊಲೀಸ್‌ ಮಹಾ ನಿರ್ದೇಶಕರೂ ಕೂಡ ಆಯೋಗದ ವ್ಯಾಪ್ತಿಯಲ್ಲಿಯೇ ಬರುತ್ತಾರೆ.

ಯಾವ ಅಂಶಗಳ ಆಧಾರದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದನ್ನೂ ಸ್ಪಷ್ಟಪಡಿಸಲಾಗಿದೆ?
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ, ಪೊಲೀಸ್‌ ಅಧಿಕಾರಿ ಕರ್ತವ್ಯ ನಿರ್ಲಕ್ಷ್ಯ ತೋರಿದರೆ ಅಥವಾ ಅವಿಧೇಯ ವರ್ತನೆ ತೋರಿಸಿದರೆ ಸಸ್ಪೆಂಡ್‌ ಮಾಡುವುದು

ಅಂಥ ಅಧಿಕಾರಿ, ಪೊಲೀಸ್‌ ಸಿಬಂದಿಯ ಬದಲಾಗಿ ಮತ್ತೂಬ್ಬರ ನಿಯೋಜನೆ ಹಾಗೂ ಶಿಸ್ತು ಕ್ರಮಕ್ಕೆ ಒಳಗಾದವರನ್ನು ಮರಳಿ ಮಾತೃ ಇಲಾಖೆಗೆ ಅವರ ವಿರುದ್ಧ ಸೂಕ್ತ ವರದಿಯ ಸಹಿತ ಕಳುಹಿಸಿ ಕೊಡಲಾಗುತ್ತದೆ.

ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸೂಕ್ತ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ಜತೆಗೆ ಅಧಿಕಾರಿ ವಿರುದ್ಧ ನಿಗದಿತ ಪ್ರಾಧಿಕಾರ ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ಆರು ತಿಂಗಳ ಒಳಗಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.

ಚುನಾವಣಾ ಕರ್ತವ್ಯದಲ್ಲಿ ರಾಜ್ಯ ಸರಕಾರಿ ಅಧಿಕಾರಿಗಳು ನಿಯೋಜನೆಗೊಳ್ಳುವುದರಿಂದ ರಾಜ್ಯ ಸರಕಾರಗಳು ಚುನಾ ವಣಾ ಆಯೋಗದ ಆದೇಶಗಳನ್ನು ಪಾಲಿಸುವಂತೆ ಕೇಂದ್ರ ಸರಕಾರವೂ ಸೂಚನೆ ಹೊರಡಿಸುತ್ತವೆ.

ಕೊಟ್ಟರೂ ತಗೊಳ್ಳಿಲ್ಲ
ಪಕ್ಷದಿಂದ ಟಿಕೆಟ್‌ ಕೊಡಿಸ್ತೀನಿ. ಬಾರೋ ಎಂದು ಹೇಳಿದರೆ ಯಾರಾದರೂ ಕಣಕ್ಕೆ ಇಳಿಯಲು ಸಿದ್ಧರಾಗಿರುವ ಈ ಕಾಲದಲ್ಲಿ ಅದನ್ನೂ ಬೇಡ ಅನ್ನುತ್ತಾರಾ? ಒಡಿಶಾದಲ್ಲಿನ ಬೆಳವಣಿಗೆ ನೋಡಿದರೆ ಹೌದು ಎನಿಸುತ್ತದೆ. ಪಕ್ಷದ ಹಿರಿಯ ನಾಯಕ ಸೀತಾಕಾಂತ್‌ ಮಹಾಪಾತ್ರ ಸೇರಿದಂತೆ ಹಲವಾರು ಮಂದಿ ನಾಯಕರು ಪಕ್ಷ ನೀಡಿದ ಟಿಕೆಟ್‌ ಬೇಡ ಎಂದು ಹೇಳುತ್ತಿದ್ದಾರೆ. ಅದಕ್ಕೆಲ್ಲ ಕಾರಣ ಏನೆಂದು ವಿಚಾರಿಸಿದರೆ, ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರ ವಿರುದ್ಧ ಬಂಡಾಯವೇ ಕಾರಣ ಎಂದು ಗೊತ್ತಾಗಿದೆ.

ಎಲೆಕ್ಷನ್‌ ಅಂದ್ರೆ ಭಯ
ಚುನಾವಣೆ ಬಂದರೆ ರಾಜ್‌ಕೋಟ್‌ನ ಚಿನ್ನಾಭರಣ ವರ್ತಕರಿಗೆ ಭಾರೀ ಭಯ. ಅಲ್ಲಿ ದೇಶದ ಶೇ.35ರಷ್ಟು ಚಿನ್ನದ ಆಭರಣ ಸಿದ್ಧಗೊಳ್ಳುತ್ತವೆ. ಮನುಷ್ಯರೇ ಚಿನ್ನಾಭರಣ ಸಾಗಿಸುವ ವ್ಯವಸ್ಥೆ ಇರುವುದರಿಂದ ಪೊಲೀಸರು, ಆದಾಯ ತೆರಿಗೆ ಅಧಿಕಾರಿಗಳು ಅವರ ಮೇಲೆ ದಾಳಿ ನಡೆಸುವುದರಿಂದ ಚಿನ್ನಾಭರಣ ಸಾಗಿಸುವುದನ್ನೇ ಎ.1ರಿಂದ ಚುನಾವಣೆ ಮುಗಿಯುವ ವರೆಗೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ಉದ್ದಿಮೆ ಮೇಲೆ ಭಾರೀ ಪ್ರತಿಕೂಲ ಪರಿಣಾಮ ಉಂಟಾಗಿದೆಯಂತೆ.

ಪ್ರಚಾರಕ್ಕೆ ಭಾರತ ಮಾದರಿ
ಭಾರತದ ಜತೆಗೆ ಇಸ್ರೇಲ್‌ನಲ್ಲಿಯೂ ಚುನಾವಣೆ ನಡೆಯುತ್ತಿದೆ. ಬಿಜೆಪಿ ನೇತೃತ್ವದ ಮೈತ್ರಿಕೂಟ 2ನೇ ಅವಧಿಗೆ ಮತ ಯಾಚನೆ ಮಾಡುವಂತೆ ಇಸ್ರೇಲ್‌ ನಲ್ಲಿ ಬೆಂಜಮಿನ್‌ ನೆತನ್ಯಾಹು ನೇತೃತ್ವದ ಸರಕಾರ 3ನೇ ಬಾರಿಗೆ ಚುನಾವಣೆ ಎದುರಿಸುತ್ತಿದೆ. ನಮ್ಮಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ವಿಪಕ್ಷಗಳ ಮಹಾಮೈತ್ರಿಕೂಟವಿದ್ದಂತೆ ಅಲ್ಲಿ, ಆಡಳಿತಾರೂಢ ಲಿಕುಡ್‌ ಪಕ್ಷ ಮತ್ತು 2 ಪ್ರಧಾನ ವಿಪಕ್ಷಗಳ ಒಕ್ಕೂಟ ಗಳ ನಡುವೆ ಹೋರಾಟವಿದೆ. ಎರಡೂ ಮೈತ್ರಿಕೂಟ ಗಳ ನಡುವೆ ಬಿರುಸಿನ ಪ್ರಚಾರವೂ ನಡೆದಿತ್ತು.

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.