ಕೃಷಿಯಲ್ಲಿ ವೈವಿಧ್ಯಮಯ ಬೆಳೆ ಅಳವಡಿಕೆ ಅನಿವಾರ್ಯ

Team Udayavani, Dec 17, 2021, 6:10 AM IST

ಕೃಷಿಯಲ್ಲಿ ವೈವಿಧ್ಯಮಯ ಬೆಳೆ ಅಳವಡಿಕೆ ಅನಿವಾರ್ಯ

ಹಿಂದೆಲ್ಲ ಮಳೆಗಾಲ ಸೇರಿದಂತೆ ಋತುವಿಗೆ ಅನುಗುಣವಾಗಿ ಮಳೆ­ಯಾ­ಗು­­ತ್ತಿದ್ದರಿಂದ ರೈತರು ಆಯಾ ದಿನಮಾನಗಳಿಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಳೆಗಾಲ ಸೇರಿದಂತೆ ಯಾವುದೇ ಋತುಗನುಗುಣವಾಗಿ ಮಳೆ ಆಗದಿರುವುದರಿಂದ ಬಿತ್ತನೆ ಮಾಡಿದ ರೈತರು ನಷ್ಟಕ್ಕೊಳಗಾಗುವ ನಿದರ್ಶನಗಳು ಒಂದೆಡೆಯಾದರೆ, ಬಿತ್ತನೆ ಮಾಡಬೇಕೋ ಬೇಡವೋ ಎಂಬ ತ್ರಿಶಂಕು ಸ್ಥಿತಿ ಇನ್ನು ಕೆಲವು ರೈತರದ್ದಾಗಿದೆ.

ಈಗಲೂ ಋತುಗನುಗುಣವಾಗಿ ಮಳೆ ಬರುತ್ತದೆ ಎನ್ನುವುದು ಸಾಧ್ಯವಿಲ್ಲ. ಋತುಮಾನ ಬದಲಿಸುವುದು ಸಾಧ್ಯವಿಲ್ಲ. ಇಡೀ ಜಗತ್ತೇ ಮಾಲಿನ್ಯದಿಂದ ಬಳಲುತ್ತಿದ್ದು, ಹವಾಮಾನ ಬದಲಾವಣೆಗೆ ನಾವೇ ಹೊಂದಿಕೊಳ್ಳುವುದು ಅನಿವಾರ್ಯವಾಗಿದ್ದು, ಕೃಷಿಯಲ್ಲಿ ಪರಿವರ್ತ ನೆಗೆ ಮುಂದಾಗಬೇಕಿದೆ.

ರೈತರು ಕೃಷಿಯಲ್ಲಿ ಬೆಳೆಗಳನ್ನು ಬೆಳೆಯುವ ವಿಧಾನ, ಕಾಲಕ್ಕೆ ತಕ್ಕಂತೆ ಆದ್ಯತೆಗೆ ಅನುಗುಣವಾಗಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ರೈತರು ಒಂದೇ ಬೆಳೆಗೆ ಹೊಂದಿಕೊಳ್ಳುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಸದ್ಯ ಕಲಬುರಗಿಯಲ್ಲಿ ತೊಗರಿ ಬೆಳೆದಿದ್ದು, ಹೊಲದಲ್ಲಿ ನೀರು ನಿಂತು ತೊಗರಿ ಹಳದಿ ಆಗಿದೆ. ಹತ್ತಿ ಬೆಳೆಗೆ ಜಾಸ್ತಿ ವåಳೆಯಾದರೆ ಕೆಳಗಿನ ಕಾಯಿ ಕೊಳೆಯಲು ಶುರುವಾಗುತ್ತದೆ. ಇದರಿಂದ ಕೊಳೆರೋಗ, ಫ‌ಂಗಸ್‌ ರೋಗಗಳು ಹರಡುತ್ತವೆ. ಇವುಗಳನ್ನು ತಡೆಗಟ್ಟಲು ವೈಜ್ಞಾನಿಕ ಪರಿಹಾರಗಳಿವೆ. ಜತೆಗೆ ಯೋಜನೆಗಳನ್ನು ಬದಲಿಸಿಕೊಳ್ಳಬೇಕು.

ಋತುಮಾನದನ್ವಯ ಮಳೆ ಆಗುವುದೇ ವಿರಳ ಆಗಿರುವಂತಹ ಸನ್ನಿವೇಶದಲ್ಲಿ ರೈತರು ಬಹು ವೈವಿಧ್ಯದ ಬೆಳೆಗಳನ್ನು ಹಾಕುವುದರಿಂದ ಒಂದೆರೆಡು ನಾಶವಾದರೂ ಇನ್ನುಳಿದವು ಕೈಹಿಡಿಯಲಿರುವುದರಿಂದ ಬಹು ವೈವಿಧ್ಯದ ಬೆಳೆ ಪದ್ಧತಿ ಅನುಸರಿಸುವುದು ಪ್ರಸ್ತುತ ದಿನಗಳಲ್ಲಿ ಅವಶ್ಯ ಎನಿಸಿದೆ.

ಜಮೀನುಗಳಲ್ಲಿ ನೀರು ಅವಲಂಬಿಸದಿರುವ ಹುಣಸೆ, ಹಲಸು, ಗೋಡಂಬಿ, ಮಾವು, ಸಾಗುವಾನಿ ಗಿಡ ಇತ್ಯಾದಿಗಳನ್ನು ನೆಡುವುದ­ರಿಂದ ರೈತರಿಗೆ ಎಂತಹ ಸಂದರ್ಭದಲ್ಲೂ ಫಿಕ್ಸೆಡ್‌ ಡಿಪಾಸಿಟ್‌ ಇದ್ದಂತೆ. ಪ್ರಕೃತಿ ವಿಕೋಪದ ಹಾನಿಯಿಂದ ತಪ್ಪಿಸಿಕೊಳ್ಳಬೇಕಾದರೆ ಒಕ್ಕಲುತನ­ದಲ್ಲಿ ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ.

ಜಮೀನಿನಲ್ಲಿ ಭತ್ತ ಬೆಳೆದರೂ ಜಮೀನಿನ ಸುತ್ತಮುತ್ತ ಗಿಡಗಳನ್ನು ನೆಡುವುದರಿಂದ ಹಲವು ವರ್ಷಗಳ ಬಳಿಕ ಲಕ್ಷಾಂತರ ರೂ. ಆದಾಯ ಗಳಿಸಬಹುದು. ಉದಾ: ತೊಗರಿ ಬೆಳೆಯಲ್ಲಿ ಸೋಯಾಬಿನ್‌ ಹಾಕಬಹುದು. ಮಳೆ ಬಂದರೂ ಕಾಯಿ ಸಿಡಿಯದಿರುವುದರಿಂದ ಅಲ್ಲಿಯೂ ಲಾಭದ ನಿರೀಕ್ಷೆ ಹೊಂದಬಹುದು.

ಒಕ್ಕಲುತನದಲ್ಲಿ ವೈವಿಧ್ಯತೆ ಎಂದರೆ ಕೃಷಿ ಜತೆಗೆ ಕೋಳಿ, ಕುರಿ, ಹೈನುಗಾರಿಕೆ, ಜೇನು ಸಾಕಣೆ ಸೇರಿದಂತೆ ಒಕ್ಕಲುತನಕ್ಕೆ ಸಂಬಂಧಿ­ಸಿದ ಬಹು ವಿಧದ ಕೆಲಸ ಕಾರ್ಯಕ್ಕೆ ಮುಂದಾಗುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಲಾಭ ಗಳಿಸಬಹುದು.

ಕನ್ನೇರಿ ಮಠದಲ್ಲಿ ಪ್ರಾಯೋಗಿಕವಾಗಿ ಪ್ರಯೋಗ ಮಾಡಿದ್ದು, ಒಂದು ಎಕರೆಯಲ್ಲಿ ನೂರು ಬೆಳೆ ಹಾಕಿದ್ದೇವೆ. ಸ್ವಲ್ಪ ಜಮೀನು ಇರುವ­ ವರು ಈ ಪ್ರಯೋಗ ಮಾಡಿ ವೈವಿಧ್ಯಮಯ ಬೆಳೆ ಹಾಕಬಹುದು. ಸರಕಾರ ಕೃಷಿ ಇಲಾಖೆ ಮೂಲಕ ರೈತರ ಜಮೀನುಗಳಲ್ಲಿ ಹಾಗೂ ಜಮೀನಿನ ತಗ್ಗು ಪ್ರದೇಶಗಳಲ್ಲಿ ಲಂಬಾಂತರ ಬಾವಿಗಳನ್ನು ತೆಗೆಸುವ ಕಾರ್ಯಕ್ಕೆ ಮುಂದಾಗಬೇಕು. ಇದರಿಂದ ನೀರು ಬಾವಿಯಲ್ಲಿ ಇಂಗುವುದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಬೋರ್‌ವೆಲ್‌ ಕೊರೆಸಿದರೂ ಮೂರ್ನಾಲ್ಕು ಇಂಚು ನೀರು ಬೀಳುವುದರಿಂದ ರೈತರು ಪರಿಪೂರ್ಣವಾಗಿ ಕೃಷಿ ಮಾಡಬಹುದು.

ಕೃಷಿ ವಿವಿ ಸಂದರ್ಭಕ್ಕೆ ತಕ್ಕಂತೆ ಸರಕಾರ ಹಾಗೂ ಕೃಷಿ ಇಲಾಖೆಗೆ ಅನೇಕ ಸಂಶೋಧನೆಗಳ ವಾಸ್ತವತೆ, ಸಲಹೆ, ಸೂಚನೆ ನೀಡಿದ್ದು, ಹವಾಮಾನ ವೈಪರೀತ್ಯವಾದಾಗ ಯಾವ ರೀತಿ ಬೆಳೆಗಳಲ್ಲಿ ಪರಿವರ್ತನೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಒಂದು ಪುಸ್ತಕವನ್ನೇ ನೀಡಿದೆ.

ಮಳೆಗಾಲದಲ್ಲಿ ಮಳೆ ಚೆನ್ನಾಗಿ ಆಗುತ್ತಿದ್ದರೆ ರೈತರು ಸೂಪರ್‌ ನೇಪಿಯರ್‌ ಹುಲ್ಲು ಬೆಳೆದರೆ ಎಕರೆಗೆ 70ರಿಂದ 80 ಸಾವಿರ ರೂ. ಗಳಿಸಬಹುದು. ರೈತರು ಒಂದೇ ಬೆಳೆಗೆ ಅಂಟಿಕೊಂಡು ಅದರಲ್ಲೇ ಮುಳುಗಿರುತ್ತಾರೆ. ಕೃಷಿ ಇಲಾಖೆ, ಕೃಷಿ ವಿವಿಗಳಿಗೆ ಭೇಟಿ ನೀಡದಿರುವುದರಿಂದ ಹೊಸ ಹೊಸ ಸಂಶೋಧನೆ, ಯೋಜನೆ, ಸಲಹೆ, ಸೂಚನೆ, ಸಹಾಯಧನ, ಬಿತ್ತನೆ ಬೀಜ, ಬಹು ವೈವಿಧ್ಯತೆಯ ಬೆಳೆಗಳ ಪದ್ಧತಿ ಬಗ್ಗೆ ಅವರಿಗೆ ಮಾಹಿತಿಯೇ ಇರುವುದಿಲ್ಲ.

ಈಗಿನ ಪರಿಸ್ಥಿತಿಯಲ್ಲಿ ಜೋಳ ಬಿತ್ತನೆ ಮಾಡುವುದರಿಂದ ಖರ್ಚುವೆಚ್ಚ, ಕೂಲಿ ಆಳುಗಳ ಅಭಾವ ಹಿನ್ನೆಲೆ ಕಲ್ಯಾಣ ಕರ್ನಾಟಕದ ಪ್ರದೇಶಗಳ ರೈತರು ಜೋಳ ಬಿತ್ತನೆ ಕಡಿಮೆ ಮಾಡಿ­ದ್ದಾರೆ. ತೊಗರಿ, ಹತ್ತಿಗೆ ಉತ್ತಮ ಬೆಲೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿರುವುದನ್ನು ಕಾಣಬಹುದು. ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ಸರಕಾರ, ಕೃಷಿ ವಿವಿಗಳು ಆಗಾಗ ಸಲಹೆ ಸೂಚನೆ, ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿರುತ್ತವೆ. ಅದರಂತೆ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ.

ರೈತರು ಕೃಷಿಯಲ್ಲಿ ನಷ್ಟದಿಂದ ಹೊರ ಬರಬೇಕಾದರೆ ಜಮೀನು­ಗಳಲ್ಲಿ ನೀರು ಹರಿದು ಹೋಗುವಂತಿರಬೇಕು. ಚೊಕ್ಕವಾಗಿ ಇಟ್ಟು­ಕೊಂಡು ಅಭಿವೃದ್ಧಿಪಡಿಸಿಕೊಳ್ಳಬೇಕು. ಹೊಲದ ಫ‌ಲವತ್ತತೆ ಹೆಚ್ಚಿಸಿ­ಕೊಳ್ಳಬೇಕು ಎಂದರೆ ದನಗಳನ್ನು ಕಟ್ಟುವುದು, ಸಾಕಣೆ ಮಾಡು­­­ವುದಲ್ಲ. ಸೆಣಬು, ಹಸುರು ಎಲೆಗಳ ಗೊಬ್ಬರದಿಂದ, ಕಾಲು­ಗಾಯಿ­ಗಳಿಂದ 2 ವರ್ಷದಲ್ಲಿ ಭೂಮಿಯನ್ನು ಸದೃಢ ಮಾಡಿಕೊಳ್ಳ­ಬಹುದು. ಆಗ ಒಂದು ಬೆಳೆ ಬದಲು ನಾಲ್ಕೈದು ಬೆಳೆ ಬೆಳೆಯಬಹುದು.

ಪ್ರತಿಯೊಬ್ಬ ರೈತರಿಗೂ 10 ಗುಂಟೆಗಾದರೂ ನೀರು ಲಭ್ಯ ವಾಗುವಂತಾಗಬೇಕು. ಈ ಸಂಬಂಧ 2015ರಲ್ಲಿ ಶ್ರಮ ವಹಿಸಿ ಜಾರಿಗೆ ತಂದ ಕೃಷಿಭಾಗ್ಯ ಯೋಜನೆ ದೇಶಕ್ಕೆ ಮಾದರಿಯಾ­ಯಿತು. ಕೃಷಿಭಾಗ್ಯ ಎಂದರೆ ಜಮೀನಿನಲ್ಲಿ ಸಣ್ಣದಾಗಿ ಬಾವಿ ನಿರ್ಮಾಣ ಮಾಡಿಕೊಳ್ಳುವ ಯೋಜನೆ­ಯಾಗಿತ್ತು. ಪಾಲಿ­ಹೌಸ್‌, ಕೃಷಿಹೊಂಡ, ಪಂಪ್‌ಸೆಟ್‌ ಇತ್ಯಾದಿ ನಿರ್ಮಾಣ ಮಾಡಿಕೊಂಡರೆ ತೋಟಗಾರಿಕೆ ಹಾಗೂ ಒಕ್ಕಲುತನ ಕೃಷಿಗೆ ಪ್ರತ್ಯೇಕವಾಗಿ ಸರಕಾರದಿಂದ ಸಹಾಯಧನ ನೀಡುವುದಾಗಿತ್ತು.

2013-14ರಲ್ಲಿ ನಾನು ಕೃಷಿ ಮಿಷನ್‌ ಅಧ್ಯಕ್ಷನಾಗಿದ್ದಾಗ ಯೋಜನೆ ರೂಪಿಸಿದ್ದು, 2015ರ ಕಾಂಗ್ರೆಸ್‌ ಸರಕಾರದಲ್ಲಿ ಜಾರಿ ಮಾಡಲಾಗಿತ್ತು. ನಮ್ಮನ್ನು ನೋಡಿ ಮಹಾರಾಷ್ಟ್ರದವರು ಇದನ್ನು ಅಳವಡಿಸಿ ಕೊಂಡರು. ಈಗ ಅದನ್ನು ಕೈಬಿಡಲಾಗಿದೆ.

ಧಾರವಾಡ ಕೃಷಿ ವಿವಿ ಮಾಜಿ ಕುಲಪತಿಯಾಗಿ ಸೇವೆ, 2009ರಿಂದ 14ರ ವರೆಗೆ ಕರ್ನಾಟಕ ಕೃಷಿ ಮಿಷನ್‌ ಛೇರ್ಮೇನ್‌ ಆಗಿದ್ದ ವೇಳೆ, ದಿಲ್ಲಿಯಲ್ಲಿರುವ ದೇಶದ ಏಕೈಕ ಇಂಡಿಯನ್‌ ಅಗ್ರಿಕಲ್ಟರ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕನಾಗಿ ಕಾರ್ಯನಿರ್ವ­ಹಣೆಯ ಹಲವಾರು ಸಂಶೋಧನೆ, ರೈತರಿಗೆ ಅನುಕೂಲವಾಗಲು ಹಲವಾರು ಯೋಜನೆಗಳ ಜಾರಿ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಸದ್ಯ ರೈತರು ಎದುರಿಸುವ ಸಮಸ್ಯೆ, ತೊಂದರೆ ಹೇಗೆ ನಿವಾರಿಸಬಹುದು ಎನ್ನುವ ಉದ್ದೇಶಕ್ಕಾಗಿ 50, 60 ಎಕರೆ ಪ್ರದೇಶದಲ್ಲಿ ಪ್ರಯೋಗ ಮಾಡಲು ರೀಸರ್ಚ್‌ ಅಂಡ್‌ ಸೋರ್ಸ್‌ ಸೆಂಟರ್‌ ಫಾರ್‌ ವೆಲ್‌ಫೇರ್‌ ಆಫ್ ಫಾರ್ಮರ್‌ ಸಂಸ್ಥೆ ಪ್ರಾರಂಭದ ಹಂತದಲ್ಲಿದ್ದು, ಈ ಸಂಸ್ಥೆಗೆ ನಾನು ಸಲಹೆಗಾರನಾಗಿದ್ದೇನೆ. ವಿವಿಧೆಡೆ ಪ್ರಾಯೋಗಿಕವಾಗಿ ಹಾಗೂ ಜಾಗೃತಿ ಮೂಡಿಸುತ್ತಿದ್ದೇವೆ. ನಾವು ಮಾಡಿರುವ ಪ್ರಯೋಗದಲ್ಲಿ ರೈತರು ಸಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡಿದರೂ ಲಾಭ ಗಳಿಸಬಹುದು.

-ಡಾ| ಎಸ್‌. ಎ.ಪಾಟೀಲ್‌,  ಧಾರಾವಾಡ ಕೃಷಿ ವಿವಿ ನಿವೃತ್ತ ಕುಲಪತಿ

ಟಾಪ್ ನ್ಯೂಸ್

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

Karnataka Govt.,: ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.