ವಾಯುಸೇನೆ ಏರ್ ಕವರ್ ದೊರೆಯದಿದ್ದರೆ ಬದುಕುತ್ತಿರಲಿಲ್ಲ
Team Udayavani, Dec 21, 2021, 6:40 AM IST
ಸಾಂದರ್ಭಿಕ ಚಿತ್ರ
ಭದ್ರಪ್ಪ ಶಿವಪ್ಪ ಅಸುಂಡಿ,ನಿವೃತ್ತ ಹವಾಲ್ದಾರ್, ಗದಗ
1971ರಲ್ಲಿ ಭಾರತ-ಪಾಕಿಸ್ಥಾನ ನಡುವೆ 13 ದಿನಗಳ ಕಾಲ ನಡೆದ ಯುದ್ಧದಲ್ಲಿ ಪಾಲ್ಗೊಂಡಿದ್ದ ಇವರು, ಆರ್ಟಿಲರಿ ಗನ್ ಫೈರಿಂಗ್ ತಂಡದಲ್ಲಿ 2 ಮತ್ತು 3ನೇ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿದ್ದರು.
ರಣಾಂಗಣದಲ್ಲಿ ಆರ್ಟಿಲರಿ ಗನ್ ಫೈರಿಂಗ್ ವೇಳೆ ಶತ್ರುಗಳನ್ನು ನಾಶಪಡಿಸುವುದರ ಜತೆಗೆ ನಮ್ಮವರೇ ಆದ ಆಪರೇಷನ್ ಪೋಸ್ಟ್ ಸದಸ್ಯರನ್ನು ಕಾಪಾಡಿಕೊಳ್ಳುವುದೇ ಸವಾಲಾಗಿತ್ತು. ಅಲ್ಲದೇ ಪಾಕ್‌ನ 13 ಟ್ಯಾಂಕರ್‌ಗಳು ಎದುರಾದಾಗ ಭಾರತೀಯ ವಾಯುಸೇನೆಯ ಏರ್ ಕವರ್ ದೊರೆಯದಿದ್ದರೆ ಏನಾಗುತ್ತಿತ್ತೋ? ಒಪಿ ಟೀಂನಿಂದ ದೊರೆಯುತ್ತಿದ್ದ ಮಾಹಿತಿ ಆಧರಿಸಿ ಕಮಾಂಡಿಂಗ್ ಅಧಿಕಾರಿಗಳ ಆದೇಶದಂತೆ ಟಾರ್ಗೆಟ್ ಫಿಕ್ಸ್ ಮಾಡಲಾಗುತ್ತಿತ್ತು. ಆದರೆ ಈ ವೇಳೆ ನಮ್ಮ ಒಪಿ ತಂಡ ಸಮೀಪದಿಂದಲೇ ಶತ್ರುಗಳ ಚಲನವಲನ ಗಮನಿಸಿ, ನಮಗೆ ಮಾಹಿತಿ ನೀಡುತ್ತಿತ್ತು. ಟಾರ್ಗೆಟ್ ಕೊಂಚ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. 80 ಪೌಂಡ್ ತೂಕದ ಆರ್ಟಿಲರಿ ಶೆಲ್ ಬಹುತೇಕ ಗಾಳಿಯಲ್ಲಿ ಸ್ಫೋಟಗೊಂಡಿದ್ದು ಇದೊಂದೇ ಯುದ್ಧದಲ್ಲಿ. ಇನ್ನುಳಿದಂತೆ ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿವೆ. ಗಾಳಿಯಲ್ಲಿ ಸ್ಫೋಟಗೊಳ್ಳುವುದರಿಂದ ಅದರ ಧೂಳಿನ ಕಣಗಳು ಮೈಮೇಲೆ ಬಿದ್ದರೂ ಕೊಳೆಯುತ್ತದೆ. ಹೀಗಾಗಿ ಶತ್ರು ರಾಷ್ಟ್ರಕ್ಕೆ ಹೆಚ್ಚಿನ ಹಾನಿಗೆ ಕಾರಣವಾಯಿತು.
ಯುದ್ಧದ 13-14ನೇ ದಿನದಂದು ಹಾಡಹಗಲೇ ಸುಮಾರು 5- 6 ಕಿ.ಮೀ. ದೂರದಲ್ಲಿ ಪಾಕ್ ಸೇನಾ ಟ್ಯಾಂಕರ್‌ಗಳು ದಟ್ಟ ಧೂಳೆಬ್ಬೆಸುತ್ತಾ ರಾಕ್ಷಸನಂತೆ ನಮ್ಮತ್ತ ನುಗ್ಗುತ್ತಿದ್ದವು. ಆಗ ಒಪಿ ಪೋಸ್ಟ್‌ನಿಂದಲೂ ಯಾವುದೇ ನಿರ್ದೇಶನಗಳು ಬರುತ್ತಿರಲಿಲ್ಲ. ನಾವು ಆರ್ಟಿಲರಿ ಫೈರಿಂಗ್ ಮಾಡಿದರೂ ನಿಖರವಾಗಿ ಟಾರ್ಗೆಟ್ ಫಿಕ್ಸಾಗುತ್ತಿರಲಿಲ್ಲ. ಇನ್ನೇನು ಪಾಕ್ ಸೇನೆ ನಮ್ಮನ್ನು ತಲುತ್ತವೆ ಎನ್ನುವಷ್ಟರಲ್ಲಿ ಭಾರತೀಯ ವಾಯು ಸೇನೆ ನಮಗೆ ಏರ್ ಕವರ್ ನೀಡುವ ಮೂಲಕ ಪಾಕ್ ಟ್ಯಾಂಕರ್‌ಗಳನ್ನು ಹಿಮ್ಮೆಟ್ಟಿಸಿದವು. ಅಸುಂಡಿ ಅವರ ತಂಡ ಢಾಕಾವರೆಗೆ ಮುನ್ನಡೆಯಿತು. ಇದಾದ ಒಂದೆರೆಡು ದಿನಗಳಲ್ಲಿ ಯುದ್ಧದಲ್ಲಿ ಭಾರತ ವಿಜಯಶಾಲಿಯಾಯಿತು.
ಇದನ್ನೂ ಓದಿ:ಆಲಪ್ಪುಳ ಅವಳಿ ಕೊಲೆ ಪ್ರಕರಣ : ಪೊಲೀಸರಿಂದ ಇಬ್ಬರ ಬಂಧನ
ಈ ನಡುವೆ ನಮ್ಮ ತಂಡದ 11 ಸದಸ್ಯರಲ್ಲಿ ಒಬ್ಬನ ಮೇಲೆ ಪಾಕ್ ಮದ್ದುಗುಂಡು ತಗಲಿ ಗಾಯಗೊಂಡರು. ಅವರ ಕೆಲಸವನ್ನೂ ನಾನೇ ನಿರ್ವಹಿಸಿದ್ದೆ. ರಾತ್ರಿ ವೇಳೆ ತಂಡವನ್ನು ಮುನ್ನಡೆಸುವಾಗ ಆರ್ಟಿಲರಿಯ ಕಬ್ಬಿಣದ ಕೀಲು ಬಡಿದು ತಲೆಗೆ ಪೆಟ್ಟಾಗಿ 13 ಹೊಲಿಗೆ ಬಿದ್ದವು. ವಿಶ್ರಾಂತಿ ಪಡೆಯುವಂತೆ ತಿಳಿಸಿದ ಅಧಿಕಾರಿಗಳ ಸಲಹೆ ಒಪ್ಪದೇ ಯುದ್ಧದಲ್ಲಿ ಮುಂದುವರಿದಿದ್ದೆ. ಅದನ್ನು ಗುರುತಿಸಿ ನನಗೆ ಸಿಒಕಾ ಪೂಲ್(ಕಮಾಂಡಿಂಗ್ ಆಫೀಸರ್ ಗಿಫ್ಟ್) ರೂಪದಲ್ಲಿ ಲಾನ್ಸ್ ನಾಯಕ ಪದವಿ ಒಲಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.