ಅಮರಾವತಿಯ ಜಗನ್ನಾಟಕ!

Team Udayavani, Jun 28, 2019, 5:00 AM IST

34

ಆಂಧ್ರ ರಾಜಕೀಯ ಇದೀಗ ತೆಲುಗು ಸಿನಿಮಾದಂತೆ ಜಿದ್ದಾಜಿದ್ದಿನಿಂದ ಕೂಡಿದೆ. ಜಗನ್‌ ಮೋಹನ್‌ ರೆಡ್ಡಿ ಹಾಗೂ ಚಂದ್ರಬಾಬು ನಾಯ್ಡು ನಡುವಿನ ಹಗೆತನ ಇದೀಗ ತಾರಕಕ್ಕೇರಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ನಾಯ್ಡು ಹೀನಾಯವಾಗಿ ಸೋತು ಭಾರೀ ಮುಖಭಂಗ ಅನುಭವಿಸುತ್ತಿರುವ ನಡುವೆಯೇ ಅವರಿಗೆ ನೂತನ ಮುಖ್ಯಮಂತ್ರಿ ಜಗನ್‌ ಒಂದರ ಮೇಲೊಂದು ಶಾಕ್‌ ನೀಡುತ್ತಿದ್ದಾರೆ. ಟಿಡಿಪಿ ಸರ್ಕಾರದ ಅವಧಿಯಲ್ಲಿನ ಪ್ರತಿಯೊಂದು ಯೋಜನೆಗಳ ಮೇಲೆ ಕಣ್ಣಿಟ್ಟಿರುವ ಜಗನ್‌ ಅದರಲ್ಲೂ ನಾಯ್ಡು ಮಹತ್ವಾಕಾಂಕ್ಷೆಯ ಆಂಧ್ರ ರಾಜಧಾನಿ ಅಮರಾವತಿ ನಗರ ನಿರ್ಮಾಣದ ಮೇಲೆ ಹದ್ದಿನಕಣ್ಣಿಟ್ಟಿದ್ದಾರೆ. ದೇಶದಲ್ಲೇ ಅತ್ಯಂತ ವಿನೂತನ ನಗರಿ ಎಂಬ ಗರಿಮೆಗೆ ಪಾತ್ರವಾಗಬೇಕಿದ್ದ ಅಮರಾವತಿ ಆರಂಭದಿಂದಲೂ ವಿವಾದದ ಗೂಡಾಗಿದೆ. ಈ ಯೋಜನೆಯಲ್ಲಿ ಅತಿ ದೊಡ್ಡ ಭೂ ಹಗರಣ ನಡೆದಿದೆ ಎನ್ನುತ್ತಿದ್ದಾರೆ ಜಗನ್‌, ಆಂಧ್ರ ಪ್ರದೇಶ, ನಾಯ್ಡು ಮತ್ತು ಅಮರಾವತಿಯ ಕಥೆ ಏನಾಗಲಿದೆಯೋ ಎಂಬ ಕುತೂಹಲ ಈಗ ಎಲ್ಲರಿಗೆ…

ಅತಿ ದೊಡ್ಡ ಭೂ ಹಗರಣ?
ಆಂಧ್ರಪ್ರದೇಶದಲ್ಲಿ ವಿಶ್ವವೇ ತಲೆ ಎತ್ತಿ ನೋಡುವಂತೆ ಅಮರಾವತಿ ಸಿಟಿ ನಿರ್ಮಿಸಿ ರಾಜಧಾನಿಯನ್ನಾಗಿಸುವ ಮಹತ್ವಾಕಾಂಕ್ಷೆ ಹೊಂದಿದ್ದ ಚಂದ್ರಬಾಬು ನಾಯ್ಡು ಕಾನೂನಿನ ಕುಣಿಕೆಯಲ್ಲಿ ಸಿಲುಕುವ ಸಾಧ್ಯತೆ ಇದೆ. ಅಮರಾವತಿ ನಿರ್ಮಾಣ ಯೋಜನೆಗೆ ರೈತರಿಂದ ಭಾರೀ ಪ್ರಮಾಣದ ಭೂಮಿ ಪಡೆದಿದ್ದು, ಇದೊಂದು ದೊಡ್ಡ ಭೂಮಿ ಹಗರಣವಾಗಿದೆ, ಈ ಯೋಜನೆಯಲ್ಲಿ ನಾಯ್ಡು ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ, ಅನಧಿಕೃತವಾಗಿರುವ ಕಾಮಗಾರಿಗಳನ್ನು ರದ್ದು ಪಡಿಸುವುದಾಗಿ ಜಗನ್‌ ಹೇಳುತ್ತಿದ್ದಾರೆ.

ನಾಯ್ಡು ಕನಸಿನ ಅಮರಾವತಿ
ರಾಜಧಾನಿ ಅಮರಾವತಿ ನಗರವನ್ನು 45 ಸಾವಿರ ಕೋಟಿ ರೂ.ವೆಚ್ಚದ ನಿರ್ಮಿಸಲಾಗುತ್ತಿದೆ. ಈಗಾಗಲೇ ಇದಕ್ಕೆ 24 ಸಾವಿರ ಕೋಟಿ ರೂ. ವ್ಯಯಿಸಲಾಗಿದೆ. ಅತ್ಯಾಧುನಿಕ ಆಸ್ಪತ್ರೆ, ಹೋಟೆಲ್‌, ಶಿಕ್ಷಣ ಸಂಸ್ಥೆಗಳನ್ನು ಅಮರಾವತಿ ನಗರ ಒಳಗೊಂಡಿರಲಿದೆ. ಭಾರತೀಯ ಸಂಸ್ಕೃತಿಯ ಮೇಳೈಕೆಯ ಜತೆಗೆ, ಸಿಂಗಾಪುರ ಮಾದರಿಯ ಟೌನ್‌ಶಿಪ್‌ ನಿರ್ಮಾಣಕ್ಕಾಗಿ 58,000 ಎಕರೆ ಭೂಮಿಯನ್ನು ಬಳಸಲಾಗುತ್ತಿದೆ. ಈಗಾಗಲೇ 33 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಳಿದ 22 ಸಾವಿರ ಎಕರೆ ಸರ್ಕಾರಿ ಜಮೀನನ್ನು ಬಳಸಿಕೊಳ್ಳಲಾಗುತ್ತಿದೆ. ಈ ಯೋಜನೆಯಲ್ಲಿ ಯಾವುದೊಂದು ಕಟ್ಟಡವನ್ನು ಸರಿಯಾಗಿ ನಿರ್ಮಿಸಿಲ್ಲ ಎಂದು ಜಗನ್‌ ಚುನಾವಣೆಗೆ ಮುನ್ನವೇ ದೂರುತ್ತಿದ್ದರು. ಇದೀಗ ಅವರ ಸರ್ಕಾರವೇ ಇದ್ದು, ಅಮರಾವತಿ ನಿರ್ಮಾಣದ ಜವಾಬ್ದಾರಿಯೀಗ ಅವರ ಹೆಗಲಿಗೆ ಏರಿದೆ.

ಹೇಗಿದೆ ಅಮರಾವತಿ?
ಗುಂಟೂರು ಜಿಲ್ಲೆಯ ಕೃಷ್ಣನದಿ ದಂಡೆ ಬಳಿಕ 58 ಸಾವಿರ ಎಕರೆಯಲ್ಲಿ ಅಮರಾವತಿ ನಗರ ನಿರ್ಮಿಸಲಾಗುತ್ತಿದೆ. ಶಾತವಾಹನರ ಕಾಲದಲ್ಲಿ ಅಮರಾವತಿ ರಾಜಧಾನಿಯಾಗಿತ್ತು. ಹೀಗಾಗಿ ಈ ಪ್ರದೇಶ ಅಮರಾವತಿ ಎಂದೇ ಖ್ಯಾತವಾಗಿದೆ. ಅಮರಾವತಿ ಶೇ.51ರಷ್ಟು ಹಸಿರಿನಿಂದ ಕೂಡಿದ್ದು, ಶೇ.10ರಷ್ಟು ಭಾಗದಲ್ಲಿ ನೀರಿದೆ.

ಅಮರಾವತಿ ಕ್ರೆಡಿಟ್‌ ಜಗನ್‌ಗೊ, ನಾಯ್ಡುಗೋ
ಅಮರಾವತಿ ನಗರ ನಿರ್ಮಾಣದ ಕಾರ್ಯಗಳನ್ನು ಚಂದ್ರಬಾಬು ನಾಯ್ಡು ಮುಂದೆ ನಿಂತು ನೆರವೇರಿಸುತ್ತಿದ್ದರು. ಇದೀಗ ನಾಯ್ಡು ಸರ್ಕಾರ ಬಿದ್ದು ಹೋಗಿ ಜಗನ್‌ ಸರ್ಕಾರ ಬಂದಿದೆ. ರಾಜಧಾನಿ ನಿರ್ಮಾಣದ ಕ್ರೆಡಿಟ್‌ ಜಗನ್‌ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಟಿಡಿಪಿ ಆರೋಪ. ಬಲವಂತವಾಗಿ ರೈತರಿಂದ ಭೂಮಿ ಪಡೆದು, ನಾಯ್ಡು ಸಂಬಂಧಿಕರಿಗೆ ಹಂಚಲಾಗಿದೆ. ಇದೊಂದು ದೊಡ್ಡ ಭೂಮಿ ಹಗರಣವಾಗಿದ್ದು, ತನಿಖೆ ನಡೆಸಿ, ಅರ್ಹ ರೈತರಿಗೆ ಭೂಮಿ ವಾಪಸ್‌ ನೀಡುವುದಾಗಿ ಜಗನ್‌ ತಿಳಿಸಿದ್ದಾರೆ. ಹೀಗಾಗಿ ನಗರ ನಿರ್ಮಾಣ ಕಾರ್ಯ ವಿಳಂಬವಾಗುವ ಸಾಧ್ಯತೆ ಇದೆ. ಜಗನ್‌ ಬೆನ್ನಿಗೆ ನರೇಂದ್ರ ಮೋದಿಯಿದ್ದಾರೆ ಎನ್ನುವ ಆರೋಪ ನಾಯ್ಡು ಅವರದ್ದು.

2024ಕ್ಕೆ ಅಮರಾವತಿ ರಾಜಧಾನಿ ಗುರಿ
ಅಖಂಡ ಆಂಧ್ರ ಪ್ರದೇಶ 2014ರಲ್ಲಿ ವಿಭಜನೆಯಾದ ಬಳಿಕ ಹೈದರಾಬಾದ್‌ 10 ವರ್ಷ ಕಾಲ ಎರಡೂ ರಾಜ್ಯಗಳಿಗೂ ರಾಜಧಾನಿಯಾಗಿದೆ. ಬಳಿಕ ಅದನ್ನು ತೆಲಂಗಾಣಕ್ಕೆ ಬಿಟ್ಟುಕೊಡಬೇಕಾಗಿದೆ. ಹೀಗಾಗಿ ಮುಂದೆ ಆಂಧ್ರ ರಾಜಧಾನಿಯಾಗಿ ಅಮರಾವತಿ ನಿರ್ಮಿಸಲಾಗುತ್ತಿದೆ. 2015ರಲ್ಲಿ ಪ್ರಧಾನಿ ಮೋದಿ ಅಮರಾವತಿಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. 2024ರೊಳಗೆ ನಗರ ಪೂರ್ಣಗೊಂಡು ರಾಜಧಾನಿಯಾಗಬೇಕಿದೆ.

ನಾಯ್ಡು ಕಟ್ಟಿದ್ದ ಭವನ ನೆಲಸಮ
ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಕಟ್ಟಿದ್ದ ಭವನವು ಅನಧಿಕೃತವಾಗಿ ನಿರ್ಮಾಣವಾಗಿದೆ ಎಂದು ನೆಲಸಮ ಮಾಡಿದೆ ಜಗನ್‌ ಸರ್ಕಾರ. ಕೃಷ್ಣಾನದಿಯ ದಂಡೆಯ ಮೇಲೆ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಪ್ರಜಾ ವೇದಿಕೆ ಎಂಬ ಹೆಸರಿನ ಭವನವನ್ನು ಜಗನ್‌ ಸರ್ಕಾರ ಉರುಳಿಸಿದೆ. ಈ ಕಟ್ಟಡದ ಸನಿಹದಲ್ಲಿರುವ ನಾಯ್ಡು ನಿವಾಸ ಕೂಡ ಅಕ್ರಮ ಎಂದು ಸರ್ಕಾರ ಗುರುತಿಸಿದ್ದು, ಈ ನಿವಾಸ ಕೂಡ ನೆಲಕಚ್ಚುವ ಸಾಧ್ಯತೆ ಎದುರಾಗಿದೆ.

2,636 ಕೋಟಿ ಹಗರಣ?
ಚಂದ್ರಬಾಬು ನಾಯ್ದು ಸರ್ಕಾರದಲ್ಲಿ ಅಮರಾವತಿ ನಿರ್ಮಾಣ ಸೇರಿದಂತೆ ಸೋಲಾರ್‌, ಪವನ ವಿದ್ಯುತ್‌ ಮತ್ತಿತರ ಯೋಜನೆಗಳಲ್ಲಿ ಬರೋಬ್ಬರಿ 2,636 ಕೋಟಿ ರೂ. ಭಾರೀ ಅವ್ಯವಹಾರ ನಡೆದಿದೆ. ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಹಣ ಮಂಜೂರು ಮಾಡಿರುವ 30 ಯೋಜನೆಗಳನ್ನು ಗುರುತಿಸಲಾಗಿದೆ ಎನ್ನಲಾಗುತ್ತಿದ್ದು ಈ ಕುರಿತು ತನಿಖೆಗೆ ಜಗನ್‌ ಆದೇಶಿಸಿದ್ದಾರೆ.

ಮುಗಿಯಿತೇ ನಾಯ್ಡು ಯುಗ?
175 ಸದಸ್ಯ ಬಲದ ಆಂಧ್ರ ವಿಧಾನಸಭೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ(ಟಿಡಿಪಿ) 23 ಸ್ಥಾನ ಪಡೆದು ವಿರೋಧ ಪಕ್ಷದ ಸ್ಥಾನ ಪಡೆಯುವಲ್ಲಿಯೂ ವಿಫ‌ಲವಾಗಿದೆ. ಏತನ್ಮಧ್ಯೆ, ಟಿಡಿಪಿಯ ಆರು ರಾಜ್ಯಸಭಾ ಸದಸ್ಯರ ಪೈಕಿ ನಾಲ್ವರು ಬಿಜೆಪಿಗೆ ಸೇರುತ್ತಿದ್ದಾರೆ. ಸಂಸತ್‌ನಲ್ಲಿ ಟಿಡಿಪಿ ಸಂಖ್ಯೆಯನ್ನು ಕ್ಷೀಣಿಸುವ ಮೂಲಕ ನಾಯ್ಡುಗೆ ಬಿಜೆಪಿ ಅಘಾತ ನೀಡಿದೆ.

ರಿಲ್ಯಾಕ್ಸ್‌ ಮುಗಿದದ್ದೇ ಟೆನ್ಶನ್‌
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ರಿಲ್ಯಾಕ್ಸ್‌ ಮಾಡಲು ಕುಟುಂಬದೊಂದಿಗೆ ಯುರೋಪ್‌ಗೆ ತೆರಳಿದ್ದ ನಾಯ್ಡುಗೆ ವಾಪಸ್‌ ತವರಿಗೆ ಮರುಳುತ್ತಿದ್ದಂತೆ ರಾಜ್ಯದಲ್ಲಿ ಜಗನ್‌ ಸರ್ಕಾರ ತಮ್ಮ ವಿರುದ್ಧ ಮುಗಿಬಿದ್ದಿರುವುದಕ್ಕೆ ಹೇಗೆ ಪ್ರತಿತಂತ್ರ ಹೂಡಬೇಕು ಎಂದು ತಿಳಿಯದೇ ಪರದಾಡುತ್ತಿದ್ದಾರೆ.

2024 ಕ್ಕೆ ಅಮರಾವತಿ ರಾಜಧಾನಿ ಗುರಿ
45,000ಕೋಟಿ ರೂ. ವೆಚ್ಚದ ಯೋಜನೆ
58,000 ಎಕರೆ ಭೂಮಿ ಟೌನ್‌ಶಿಪ್‌ಗೆ ಬಳಕೆ
36,000 ಎಕರೆ ಫ‌ಲವತ್ತಾದ ಕೃಷಿ ಜಮೀನು ಸ್ವಾಧೀನ
22,000 ಎಕರೆ ಸರ್ಕಾರಿ ಭೂಮಿ ಬಳಕೆ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.