ಅಭ್ಯುದಯ ಪತ್ರಿಕೋದ್ಯಮ ಜಿಲ್ಲೆಯ ಅಭಿವೃದ್ಧಿಯ ವೇಗವರ್ಧಕ
ಉದಯವಾಣಿಯ ಕುಗ್ರಾಮ ಗುರುತಿಸಿ ಯೋಜನೆ
Team Udayavani, Jan 1, 2020, 7:34 AM IST
ಈ ಐವತ್ತು ವರ್ಷಗಳಲ್ಲಿ ಉದಯವಾಣಿ ತನ್ನ ಸಾಮಾಜಿಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಅಭಿವೃದ್ಧಿ ಮತ್ತು ಪ್ರಗತಿಗೆ ಬೆಂಗಾವಲಾಗಿದೆ. 80ರ ದಶಕದಲ್ಲಿ ನಡೆದ “ಕುಗ್ರಾಮ ಗುರುತಿಸಿ’ ಅಭಿಯಾನ ಪತ್ರಿಕೋದ್ಯಮದಲ್ಲಿ ಇಂದಿಗೂ ಒಂದು ಮೈಲುಗಲ್ಲು.
ಉ ದಯವಾಣಿ ಪತ್ರಿಕೆಯ ಜತೆಜತೆಗೇ ನಿರಂತರವಾಗಿ ಗುರುತಿಸಿಕೊಳ್ಳುತ್ತಿದೆ ಉದಯವಾಣಿಯ “ಕುಗ್ರಾಮ ಗುರುತಿಸಿ’ ಯೋಜನೆ. ಅಭ್ಯುದಯ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯವನ್ನು ಬರೆದ ಈ ಅಭಿಯಾನಕ್ಕೆ ರಾಜ್ಯ, ರಾಷ್ಟ್ರ ಮಾತ್ರವಲ್ಲ; ಅಂತಾರಾಷ್ಟ್ರೀಯ ಮನ್ನಣೆಯೂ ಲಭಿಸಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆಮೂಲೆಗೂ ತಲುಪಿದ ಈ ಅಭಿಯಾನ ಜಿಲ್ಲೆಯ ಸಮಗ್ರ- ವಿಶೇಷವಾಗಿ, ಯಾವುದೇ ಮೂಲ ಸೌಕರ್ಯಗಳು ಇಲ್ಲದಿದ್ದ ಗ್ರಾಮೀಣ ಪ್ರದೇಶಗಳ ಪ್ರಗತಿಗೆ ಮುನ್ನುಡಿ ಬರೆಯಿತು. ಜಿಲ್ಲೆ ದ. ಕನ್ನಡ ಮತ್ತು ಉಡುಪಿ ಜಿಲ್ಲೆಗಳಾಗಿ ವಿಭಜನೆ ಗೊಂಡಿದೆ. ಆದರೆ, ಕುಗ್ರಾಮ ಗುರುತಿಸಿಗೆ ಸಂಬಂಧಿಸಿ ಉಭಯ ಜಿಲ್ಲೆಗಳು ಇಂದಿಗೂ ಫಲಾನುಭವಿಗಳಾಗಿವೆ.
ವಿಶೇಷವೆಂದರೆ, ಇದು
ಗ್ರಾಮೀಣ ಪ್ರದೇಶ ಮತ್ತು ಆಡಳಿತ ವ್ಯವಸ್ಥೆಯ ನಡು ವಣ ಸೇತುವೆಯಾಯಿತು. ಜನತೆ ತಮ್ಮ ಅಗತ್ಯಗಳ ಬಗ್ಗೆ ಸ್ಪಂದಿಸುವಂತಾಯಿತು. ಗ್ರಾಮೀಣ ಜನತೆ, ಸಂಘ ಸಂಸ್ಥೆಗಳು, ಸರಕಾರದ ವಿವಿಧ ಇಲಾಖೆಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಹಿತ ಹಣಕಾಸು ಸಂಸ್ಥೆಗಳು, ವಿವಿಧ ಸ್ತರಗಳ ಚುನಾಯಿತ ಜನಪ್ರತಿನಿಧಿ ಗಳು, ವಿದ್ಯಾರ್ಥಿಗಳು, ರಾಜಕೀಯ ಪಕ್ಷಗಳು, ಸಾರಿಗೆ ಸಹಿತ ಉದ್ಯಮ ಸಂಸ್ಥೆಗಳು ಮುಂತಾದವುಗಳೆಲ್ಲ ಒಟ್ಟಾಗಿ ಸ್ಪಂದಿಸಿದರು. ಸಮಾಜದ ಅತ್ಯಂತ ತುರ್ತಾದ ಅಗತ್ಯಗಳಿಗೆ ಅವರೆಲ್ಲರನ್ನು ಜತೆಯಾಗಿಸಿದ ವೇಗವರ್ಧಕ ಮತ್ತು ಸ್ಫೂರ್ತಿಯ ಶಕ್ತಿ ಎಂಬ ಮನ್ನಣೆಗೆ ಉದಯವಾಣಿ ಪಾತ್ರವಾಯಿತು.
80ರ ದಶಕದ ಕ್ರಾಂತಿ
ಕುಗ್ರಾಮ ಗುರುತಿಸಿ ಎಂಬ ಪರಿಕಲ್ಪನೆ ಸೃಷ್ಟಿಯಾದದ್ದು ಮತ್ತು ಯಶಸ್ವಿಯಾಗಿ ಅನುಷ್ಠಾನಗೊಂಡದ್ದು 80ರ ದಶಕದಲ್ಲಿ. ಪತ್ರಿಕೆಯ ಸ್ಥಾಪಕ ವ್ಯವಸ್ಥಾಪಕ ಸಂಪಾದಕ ಟಿ. ಮೋಹನದಾಸ ಪೈ ಅವರು ಮಾರ್ಗದರ್ಶಕರಾಗಿದ್ದರು. ಸ್ಥಾಪಕ ಸಂಪಾದಕ ಟಿ. ಸತೀಶ್ ಪೈ ಸಹಕಾರವಿತ್ತರು. ಆಗಿನ ಬೆಂಗಳೂರಿನ ಸುದ್ದಿ ವಿಭಾಗ ಮುಖ್ಯಸ್ಥ ಈಶ್ವರ ದೈತೋಟ (ಬಳಿಕ ಈ ಬಗ್ಗೆ ಕೃತಿಯನ್ನೂ ಪ್ರಕಟಿಸಿದ್ದಾರೆ) ಅವರು ಸಮಗ್ರ ಸಮನ್ವಯಕಾರರಾಗಿದ್ದರು.
ಈ ಯೋಜನೆಯ ಮೂಲ ಆಶಯದ ಉಲ್ಲೇಖೀತ ಸಾರಾಂಶ: ಸ್ವಾತಂತ್ರ್ಯಾನಂತರ ಈ ದೇಶದಲ್ಲಿ ರಾಜ್ಯ ಅಥವಾ ಕೇಂದ್ರ ಸರಕಾರಗಳ ಪ್ರಾಯೋಜಿತ ಅನೇಕ ಅಭಿವೃದ್ಧಿ ಯೋಜನೆಗಳನ್ನು ಪರಿಕಲ್ಪಿಸಲಾಗಿದೆ. ಆದರೆ, ಈ ಯೋಜನೆಗಳು ಜನತೆಗೆ- ವಿಶೇಷವಾಗಿ ಗ್ರಾಮೀಣ ಜನತೆಯ ಜೀವನ ವಿಧಾನದ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬ ಪ್ರಶ್ನೆ ಆಗಾಗ ಉದ್ಭವಿಸುತ್ತಿರುತ್ತದೆ. ಆಶ್ವಾಸನೆಗಳಿಗೂ ಅನುಷ್ಠಾನಕ್ಕೂ ಅಜಗಜಾಂತರವಿದೆ. ಈ ಅಂತರ ನಿವಾರಣೆಗೆ ಅಥವಾ ಕಡಿಮೆಗೊಳಿಸಲು ಜನತೆ ತಮ್ಮ ಮೂಲ ಸೌಕರ್ಯ ಗಳ ಬಗ್ಗೆ ತಿಳುವಳಿಕೆ ಹೊಂದಿರಬೇಕು ಮತ್ತು ಅದನ್ನು ಪರಿಹರಿಸಿ ಕೊಳ್ಳಲು ಮುಂದಾಗಬೇಕು. ಮಣಿಪಾಲದಿಂದ ಪ್ರಕಟವಾದ ಉದಯವಾಣಿ ದಿನಪತ್ರಿಕೆ ಈ ಹಿನ್ನೆಲೆಯಲ್ಲಿ ಕುಗ್ರಾಮ ಗುರುತಿಸಿ ಎಂಬ ಯೋಜನೆಯ ಅನುಷ್ಠಾನಕ್ಕೆ ಮುಂದಾಯಿತು.
ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ 2-1-1981ರಂದು ಯೋಜನೆಯ ಸ್ವರೂಪದ ಕುರಿತಾದ ಜಾಹೀರಾತು ಪ್ರಕಟವಾಯಿತು: ವಿವಿಧ ಸರಕಾರೀ ಸವಲತ್ತು, ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಉದಯವಾಣಿಯು ಕುಗ್ರಾಮ ಗುರುತಿಸಿ ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ. ಇದರಲ್ಲಿ ಪತ್ರಿಕೆಯ ಓದುಗರ ಪಾತ್ರವೇ ನಿರ್ಣಾಯಕ. ಓದುಗರು 1) ತಮ್ಮ ಜಿಲ್ಲೆಯಲ್ಲಿ 2) ತಮ್ಮ ತಾಲೂಕಿನಲ್ಲಿ ಅತ್ಯಂತ ಹಿಂದುಳಿದ ಹಳ್ಳಿಗಳನ್ನು ಗುರುತಿಸಿ ಉದಯವಾಣಿಗೆ ತಿಳಿಸಬೇಕು. ಆಯ್ಕೆಯಾದ ವಿಜೇತರಿಗೆ ನಗದು ಬಹುಮಾನಗಳಿರುತ್ತವೆ.
ನಿರಂತರ ಮಾಹಿತಿ
ಎಲ್ಲ ಕುಗ್ರಾಮಗಳ ಅಭಿವೃದ್ಧಿ ಕಾರ್ಯಗಳ ನಿರಂತರ ಮಾಹಿತಿಯನ್ನು ಉದಯವಾಣಿ ಓದುಗರಿಗೆ ನೀಡುತ್ತಾ ಬಂತು. 1984ರಲ್ಲಿ ಈ ಅಭಿಯಾನ ಅದ್ಭುತವಾಗಿ ಸಾಕಾರಗೊಂಡ ಬಳಿಕದ ಎರಡು ವರ್ಷಗಳಲ್ಲಿ ಮತ್ತೆ ಇದೇ ರೀತಿಯ ಪ್ರಯತ್ನವನ್ನು ಮುಂದುವರಿದ ಭಾಗವಾಗಿ ನಡೆಸಿ, ಜನಜಾಗೃತಿಯನ್ನು ನಿರಂತರವಾಗಿರಿಸಲಾಯಿತು. ಈ ವೇಳೆಗೆ ಬಹುತೇಕ ಎಲ್ಲ ಕುಗ್ರಾಮಗಳ ಸಹಿತ ಜಿಲ್ಲೆಯ ಹಳ್ಳಿಗಳು ಸೌಲಭ್ಯಗಳನ್ನು ಪಡೆಯುವಂತಾಗಿತ್ತು. ಆ ಬಳಿಕ, ಉದಯವಾಣಿಯ 40ರ ಸಂದರ್ಭದಲ್ಲಿ ಪತ್ರಿಕೆಯ ವರದಿಗಾರರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸಂಘಸಂಸ್ಥೆಗಳ ಸಹಯೋಗದಲ್ಲಿ ಅಗತ್ಯ ಸೌಲಭ್ಯಗಳ ಬಗ್ಗೆ ಒದಗಿಸಿದ ಮಾಹಿತಿಯನ್ನು ಪತ್ರಿಕೆ ಪ್ರಕಟಿಸಿ, ಸಂಬಂಧಿಸಿದವರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಅಪೂರ್ವ ಸ್ಪಂದನೆ
ಈ ಪ್ರಸ್ತಾವಕ್ಕೆ ಉದಯವಾಣಿ ಓದುಗರು ಅಪೂರ್ವ ಎಂಬ ರೀತಿಯಲ್ಲಿ ಸ್ಪಂದಿಸಿದರು. ಕುಗ್ರಾಮವೆಂದು ಗುರುತಿಸಲು ಆಯಾ ಪ್ರದೇಶದ 10 ಕೊರತೆಗಳ ಮಾನದಂಡವನ್ನು ಓದುಗರಿಗೆ ನೀಡಲಾಯಿತು: ಪ್ರಾಥಮಿಕ ಶಾಲೆ, ಮಾಧ್ಯಮಿಕ ಶಾಲೆ, ವಿದ್ಯುತ್, ಅಂಚೆ ಕಚೇರಿ, ದೂರವಾಣಿ, ವೈದ್ಯರು, ಆಸ್ಪತ್ರೆ, ಕುಡಿಯುವ ನೀರು, ರಸ್ತೆ, ಬಸ್ ಸೌಲಭ್ಯ. 35 + 15 ದಿನಗಳ ಅವಧಿ ಓದುಗರಿಗೆ ದೊರೆಯಿತು. 456 ಮಂದಿ ಓದುಗರು 417 ಹಳ್ಳಿಗಳು ಮತ್ತು ಹ್ಯಾಮ್ಲೆಟ್‌ಗಳನ್ನು ಅತ್ಯಂತ ಹಿಂದುಳಿದ ಕುಗ್ರಾಮಗಳೆಂದು ತಮ್ಮ ಅಭಿಪ್ರಾಯ ಬರೆದು ತಿಳಿಸಿದರು. 107 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಆಗ ಅವಿಭಜಿತ ಜಿಲ್ಲೆಯಲ್ಲಿ 8 ತಾಲೂಕುಗಳಿದ್ದವು. ಇಲ್ಲಿ ಮುಂದಿನ ಹಂತದ ಆಯ್ಕೆಗೆ ಶಾಸಕರ ಸಹಕಾರ ಕೋರಲಾಯಿತು. ಆಗ 15 ಶಾಸಕರಿದ್ದರು. ಹೀಗೆ, ಮುಂದಿನ ಹಂತದಲ್ಲಿ ಆರಿಸಲಾದ 30 ಹಳ್ಳಿಗಳಿಗೆ ಸಮನ್ವಯಕಾರರು ಭೇಟಿ ನೀಡಿದರು. ಮಾಹಿತಿ ಸಂಗ್ರಹಿಸಿದರು. ಆಲಂತಾಯ, ಬೆಳ್ಳರ್ಪಾಡಿ, ಬೊಳ್ಮನೆ, ದಿಡುಪೆ, ಕೆಮೂ¤ರು, ಕುದ್ಯಾಡಿ, ಮಾಳಚೌಕಿ, ಮಂಡೆಕೋಲು, ಮಾಣಿಲ, ನಾವುರಗಳನ್ನು ಗುರುತಿಸಲಾಯಿತು.
ಬೆಳ್ತಂಗಡಿಯ ದಿಡುಪೆ
ಅಂತಿಮವಾಗಿ, ಬೆಳ್ತಂಗಡಿ ತಾಲೂಕಿನ ದಿಡುಪೆ ಎಂಬ ಹಳ್ಳಿಯನ್ನು ಜಿಲ್ಲೆಯ ಅತ್ಯಂತ ಹಿಂದುಳಿದ ಪ್ರದೇಶವಾಗಿ -ಕುಗ್ರಾಮವೆಂದು ಗುರುತಿಸಿ, ಘೋಷಿಸಲಾಯಿತು. ಅದರ ವಿವರಗಳ ಜತೆ ಇತರ ಹಿಂದುಳಿದ ಹಳ್ಳಿಗಳ ಮಾಹಿತಿಯನ್ನೂ ಪ್ರಕಟಿಸಲಾಯಿತು. ಪಶ್ಚಿಮ ಘಟ್ಟದ ಬುಡದಲ್ಲಿನ ದಿಡುಪೆ ಪ್ರಕೃತಿ ಸೌಂದರ್ಯ-ಚಿಕ್ಕಪುಟ್ಟ ಅನೇಕ ಝರಿಗಳ ಸಹಿತವಾದ ಪ್ರದೇಶವಾಗಿತ್ತು. ಆಗ 1,300 ಜನಸಂಖ್ಯೆ. ದಟ್ಟ ಕಾನನದ ನಡುವಣ ಕಚ್ಚಾರಸ್ತೆಯಷ್ಟೇ ಸಂಪರ್ಕ ಮಾಧ್ಯಮ. ವೈದ್ಯಕೀಯ ಸೌಲಭ್ಯಕ್ಕೆ ಕನಿಷ್ಠ 11 ಕಿ.ಮೀ. ಕಾಲ್ನಡಿಗೆ. ಇದರ ಮುಂದಿನ ಹಂತ ಸ್ವಾರಸ್ಯಕರವಾಗಿತ್ತು. ಬಹುತೇಕ ಎಲ್ಲ ಇಲಾಖೆಗಳವರೂ ಸ್ಪಂದಿಸಿದರು. ರಸ್ತೆ ಮುಂತಾದ ಎಲ್ಲ ಮೂಲಸೌಕರ್ಯ ಆ ಊರಿಗೆ ಲಭಿಸಿತು. ಇದೇ ರೀತಿಯಲ್ಲಿ ಉದಯವಾಣಿ ಕುಗ್ರಾಮವೆಂದು ಗುರುತಿಸಿದ ವಸ್ತುಶಃ ಎಲ್ಲ ಪ್ರದೇಶಗಳಿಗೂ ಮೂಲಸೌಕರ್ಯ ದೊರೆಯಲಾರಂಭಿಸಿತು. ಮಾಣಿಲ ಮುಂತಾದ ಪ್ರದೇಶಗಳಿಗೆ ಬ್ಯಾಂಕ್ ಶಾಖೆಗಳೂ ದೊರೆತವು.ಉದಯವಾಣಿಯ ಈ ಯೋಜನೆಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಿತು. ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಕೆಲವು ದೇಶಗಳ ಪ್ರತಿನಿಧಿಗಳೂ ಅಧ್ಯಯನಕ್ಕೆ ಬಂದರು ಅನ್ನುವುದು ಈ ಪ್ರಸಿದ್ಧಿಗೆ ಸಾಕ್ಷಿ.
- ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.