ದೈವದ ಅಸ್ತಿತ್ವ ಪ್ರಶ್ನಿಸುತ್ತಲೇ ಬದುಕಿದ ವಿಶ್ವವಿಜ್ಞಾನಿ
Team Udayavani, Mar 15, 2018, 12:30 AM IST
ಇಡೀ ವಿಶ್ವದ ಸೃಷ್ಟಿಯ ಹುಟ್ಟಿನ ಬಗ್ಗೆ ಹಾಕಿಂಗ್ ತಲೆಕೆಡಿಸಿಕೊಂಡು ಸಂಶೋಧನೆಯಲ್ಲಿ ತಲ್ಲೀನವಾಗಿರುತ್ತಿದ್ದರೆ, ಹಾಕಿಂಗ್ ಮನೆಯಲ್ಲೇ ಅಂಥ ಎರಡು ವಿರುದ್ಧ ಧ್ರುವಗಳ ವಿಶ್ವ ಸೃಷ್ಟಿಯಾಗಿತ್ತು. ಒಂದು ಧ್ರುವ ಪತ್ನಿ ಜೇನ್‌ಳದ್ದು. ಎಲ್ಲದ್ದಕ್ಕೂ ದೇವರೇ ಕಾರಣ ಎನ್ನುವ ದೈವಭೀರು ಆಕೆ!
ಈ ಭೂಮಿಯ ಹುಟ್ಟಿಗೆ ಯಾರು ಕಾರಣ? ಒಬ್ಬೊಬ್ಬರು ಒಂದೊಂದು ಕಾರಣ ಹೇಳಬಹುದು. ಬಹುಜನರು ಇದಕ್ಕೆಲ್ಲ ದೇವರೇ ಕಾರಣ ಎಂದು ಹೇಳಿ ಮುಗುಮ್ಮಾಗಬಹುದು. ಈ ಬಗ್ಗೆ ವಿಜಾnನಿಗಳಲ್ಲೂ ಗೊಂದಲ ಇದೆ. ದೇವರ ಅಸ್ತಿತ್ವ ಇದೆಯೇ ಇಲ್ಲವೇ ಎಂದು ಯಾರೂ ಸ್ಪಷ್ಟವಾಗಿ ಹೇಳುವ ಸ್ಥಿತಿಯಲ್ಲಿಲ್ಲ. ಎಲ್ಲವೂ ಅವರವರ ನಂಬಿಕೆ ಎಂದು ಹೇಳಿ ಕೈತೊಳೆದುಕೊಂಡು ಬಿಡುತ್ತಾರೆ.
“ತಿರುಪತಿ ತಿಮ್ಮಪ್ಪ’ನಲ್ಲಿಗೆ ಉಪಗ್ರಹದ ಮಾದರಿಯನ್ನು ಕೊಂಡೊಯ್ದು ಪೂಜೆ ಮಾಡಿ ಅಂತರಿಕ್ಷಕ್ಕೆ ಹಾರಿಬಿಡುವ ವಿಜಾnನಿಗಳು ಸಹ ದೇವರನ್ನು ನಂಬುತ್ತೇವೆ ಎಂದು ಗಟ್ಟಿಯಾಗಿ ಹೇಳಲು ಹೆದರುತ್ತಾರೆ. ಆದರೆ 2010ರಲ್ಲಿ ಹೊಸ ಪುಸ್ತಕ ಬಿಡುಗಡೆ ಮಾಡಿದ ವೈಜಾnನಿಕ ಜೀವನ ದಂತಕಥೆ ಡಾ. ಸ್ಟೀಫನ್ ಹಾಕಿಂಗ್, ಈ ವಿಶ್ವದ ಉಗಮ ಮತ್ತು ದೇವರ ಬಗ್ಗೆ ತಮ್ಮ ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ವಿಶ್ವ ಹುಟ್ಟಲು ದೇವರು ಕಾರಣ ಅಲ್ಲ. ಇದಕ್ಕೆ ಕಾರಣ ಭೌತವಿಜಾnನ. ಅವರು ತಮ್ಮ “ದಿ ಗ್ರಾಂಡ್ ಡಿಸೈನ್’ ಕೃತಿಯಲ್ಲೂ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.
“ವಿಶ್ವ ಏಕೆ ಉಗಮವಾಯಿತು ಎಂದು ವಿವರಿಸಲು ಯಾವ ದೈವಿಕ ಶಕ್ತಿಯ ಸಹಾಯವೂ ಬೇಕಾಗಿಲ್ಲ. ಭೌತವಿಜಾnನದ ನಿಯಮದ ಪ್ರಕಾರ, ವಿಶ್ವ ಶೂನ್ಯದಿಂದ ಏನನ್ನೂ ಸೃಷ್ಟಿಸಲಾರದು ಮತ್ತು ಏನನ್ನೂ ಸೃಷ್ಟಿಸಲಾಗದು. ವಿಶ್ವ ತನ್ನಿಂದ ತಾನೇ ಸೃಷ್ಟಿಯಾಗಿದ್ದರಿಂದ ಈ ವಿಶ್ವ ಇಲ್ಲಿದೆ. ದೇವರೇನು ಇಲ್ಲಿಗೆ ಬಂದು ವಿಶ್ವವನ್ನು ಸೃಷ್ಟಿಸಿಲ್ಲ’ ಎಂದು ಹೇಳಿದ್ದಾರೆ. ಆದರೆ 1980ರ ದಶಕದಲ್ಲಿ ಬಿಡುಗಡೆಯಾದ ತಮ್ಮದೇ “ಎ ಬ್ರಿàಫ್ ಹಿಸ್ಟರಿ ಆಫ್ ಟೈಮ್’ ಕೃತಿಯಲ್ಲಿ ಮಾತ್ರ ಅವರು ವಿಭಿನ್ನವಾದ ಅಭಿಪ್ರಾಯ ಮಂಡಿಸಿದ್ದರು. ಈ ವಿಶ್ವದ ಸೃಷ್ಟಿಯಲ್ಲಿ ದೇವರ ಪಾತ್ರವನ್ನು ಅವರು ತಳ್ಳಿಹಾಕಿರಲಿಲ್ಲ ಎನ್ನುವುದು ವಿಶೇಷ.
ಎಂ ಸಿದ್ದಾಂತ
ಇದರ ಜತೆಗೆ ಅವರು ಎಂ- ಸಿದ್ಧಾಂತವನ್ನು ಮುಂದಿಟ್ಟುಕೊಂಡು ವಿಶ್ವ ಉಗಮದ ಬಗ್ಗೆ ಚರ್ಚಿಸಲು ಮುಂದಾದರು. ಇಲ್ಲಿ ಎಂ ಸಿದ್ಧಾಂತವನ್ನು ಸ್ಟ್ರಿಂಗ್ (ತಂತು) ಸಿದ್ಧಾಂತದ ವಿಸ್ತತ ಭಾಗ. ಅಂದರೆ, ವಿಶ್ವದ ಅಸ್ತಿತ್ವದ ಬಗ್ಗೆ ವಿವರಣೆ ನೀಡುವ ಎಲ್ಲದರ ಸಿದ್ಧಾಂತ. ವಿಶ್ವದ ನಾಲ್ಕು ಮೂಲಶಕ್ತಿಗಳನ್ನು ಒಂದುಗೂಡಿಸುವುದೇ ಎಲ್ಲದರ ಸಿದ್ದಾಂತ. ಎಂ ಸಿದ್ಧಾಂತದ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾದರೆ ತಂತು ಸಿದ್ಧಾಂತದ ಪರಿಜಾnನ ಬೇಕಾಗುತ್ತದೆ. ವಿಶ್ವದಲ್ಲಿನ ಅತ್ಯಂತ ಸರಳವಾದ ವಸ್ತು ಬಿಂದು ಅಥವಾ ಚುಕ್ಕಿ ಎಂದು ನೂರಾರು ವರ್ಷಗಳಿಂದ ವಿಜಾnನಿಗಳು ತಿಳಿದುಕೊಂಡಿದ್ದಾರೆ. ಆದರೆ ತಂತು ಸಿದ್ಧಾಂತ ಇದನ್ನು ಅಲ್ಲಗಳೆಯುತ್ತದೆ. ಸರಳವಾದ ವಸ್ತು, ತಂತುವಿನ ಮಾದರಿಯಲ್ಲಿ ಇರುತ್ತದೆ. ಈ ತಂತು ಸೃಷ್ಟಿಸಿದ ಅತ್ಯಂತ ಕಣಗಳು ಸದಾ ಕಂಪಿಸುತ್ತಿರುತ್ತವೆ ಎಂದು ವಿಶ್ಲೇಷಿಸಿತು. ಒಂದರ್ಥದಲ್ಲಿ ವಿಶ್ವವನ್ನು ದೊಡ್ಡ ಮಟ್ಟದಲ್ಲಿ ವಿಶ್ಲೇಷಿಸಿರುವ ಐನ್‌ಸ್ಟಿàನ್‌ನ ಸಾಪೇಕ್ಷ ಸಿದ್ಧಾಂತ ಹಾಗೂ ಅದೇ ವಿಶ್ವವನ್ನು ಚಿಕ್ಕಮಟ್ಟದಲ್ಲಿ ವಿಶ್ಲೇಷಿಸಿರುವ ಕ್ವಾಂಟಂ ಸಿದ್ಧಾಂತಗಳ ಏಕೀಭವ ರೂಪವೇ ಈ ತಂತು ಸಿದ್ಧಾಂತ.
ನಮ್ಮ ಸಾಮಾನ್ಯ ಊಹೆಯ ಪ್ರಕಾರ ನಾಲ್ಕು ಆಯಾಮಗಳಿವೆ. ಮೇಲೆ-ಕೆಳಗೆ, ಮುಂದೆ-ಹಿಂದೆ, ಎಡ-ಬಲ ಹಾಗೂ ನಾಲ್ಕನೇಯದ್ದು ಕಾಲದ ಆಯಾಮ. ಆದರೆ ತಂತು ಸಿದ್ಧಾಂತದ ಪ್ರಕಾರ, 10 ಆಯಾಮಗಳಿವೆ. ಉಳಿದ ಆರು ಆಯಾಮಗಳು ನೋಡಲು ಸಾಧ್ಯವಿಲ್ಲದ್ದು. ಅತ್ಯಂತ ಚಿಕ್ಕ ಸುರುಳಿಯಾಕಾರದ್ದು.
ಹಾಗೆಯೇ ಈ ತಂತು ಸಿದ್ಧಾಂತದಲ್ಲಿ ಐದು ವಿಭಿನ್ನ ಬಗೆಗಳಿವೆ. ಹೀಗಾಗಿ, ತಂತು ಸಿದ್ಧಾಂತದ ವಿಶ್ಲೇಷಣೆ ಸುಲಭವಾಗಿರಲಿಲ್ಲ.
ಈ ಸಮಸ್ಯೆಯನ್ನು ಬಗೆಹರಿಸಲಿಕ್ಕಾಗಿಯೇ 1995ರಲ್ಲಿ ಎಡ್ವರ್ಡ್ ವಿಟನ್ ಹೊಸ ಸಿದ್ಧಾಂತ ಮಂಡಿಸಿದ. ಅದುವೇ ಎಂ ಸಿದ್ಧಾಂತ. ಇದರಲ್ಲಿ ಸಾಪೇಕ್ಷ ಸಿದ್ಧಾಂತ ಹಾಗೂ ಕ್ವಾಂಟಂ ಸಿದ್ಧಾಂತಗಳೆರಡೂ ಜತೆಗೂಡಿದೆಯಲ್ಲದೆ, ತಂತು ಸಿದ್ಧಾಂತದ ಐದು ಬಗೆಗಳನ್ನೂ ಒಗ್ಗೂಡಿಸಲಾಗಿದೆ. ಹೀಗಾಗಿ, ಇಲ್ಲಿ ವಿಶ್ವದ ಆಯಾಮ 11 ಆಗಿದೆ.
ಈ ಬಗ್ಗೆ ವೈಜಾnನಿಕ ವಲಯದಲ್ಲಿ ಸಾಕಷ್ಟು ಕುತೂಹಲ ಗರಿಗೆದರಿದೆ. ಇನ್ನೂ ಇದು ಸ್ಪಷ್ಟ ರೂಪ ತಳೆಯದ ಕಾರಣ ಸಂಶೋಧನೆಗೂ ಅವಕಾಶ ಇದೆ. ಇದನ್ನೇ ಹಾಕಿಂಗ್ ಸಹ ಪ್ರತಿಪಾದಿಸಿದ್ದರು. ವಿಶ್ವದ ಉಗಮಕ್ಕೆ ಅರ್ಥ ಹುಡುಕಲು ಈ ಎಂ ಸಿದ್ಧಾಂತ ಹೊಸ ಮಾರ್ಗದರ್ಶಿಯಾಗಲಿದೆ ಎನ್ನುವುದು ಅವರ ಜಿಜಾnಸೆಯಾಗಿತ್ತು.
70ನೇ ವಯಸ್ಸಿಗಾಗಲೇ ಹಾಕಿಂಗ್ ವೃತ್ತಿ ಜವಾಬ್ದಾರಿಗಳಿಂದ ಅಜಮಾಸು ನಿವೃತ್ತರಾಗಿದ್ದರು. ಆದರೆ ಅವರೊಳಗಿನ ವಿಜಾnನಿಗೆ ಮಾತ್ರ ಕೊನೆಯವರೆಗೂ ನಿವೃತ್ತಿ ಇರಲಿಲ್ಲ. ತಾವು ನಂಬದ ಆ ದೇವರಿಂದ ಹೆಚ್ಚುವರಿ 55 ವರ್ಷ ಎರವಲು ಪಡೆದುಕೊಂಡಂತೆ ಬದುಕಿದ್ದ ಹಾಕಿಂಗ್‌ರ ತಲೆಯಲ್ಲಿ ಸದಾ ವಿಶ್ವ ತುಂಬಿಕೊಂಡಿತ್ತು. ಕಾಲಚಕ್ರವನ್ನು ಹಿಂದಕ್ಕೊಯ್ದು ವಿಶ್ವದ ಹುಟ್ಟಿನ ರಹಸ್ಯವನ್ನು ಕೆದಕುತ್ತಲೇ ಇದ್ದರು. ಯಾಂತ್ರೀಕೃತ ಕುರ್ಚಿಯಲ್ಲಿ ತಲೆ ಆನಿಸಿ ಕೂತುಕೊಂಡರೂ ಈ ವಿಜ್ಞಾನಿ ಮನಸ್ಸು ಭುವಿಯಲ್ಲಿರಲಿಲ್ಲ; ಅದನ್ನು ದಾಟಿ ಅಂತರಿಕ್ಷಕ್ಕೆ ಜಿಗಿದು ಇನ್ನೊಂದು ನಕ್ಷತ್ರವ್ಯೂಹವನ್ನು ಮೀಟಿ… ಇನ್ನೆಲ್ಲೋ ಇರುವ ಮನುಷ್ಯರಂಥ ಪ್ರಾಣಿಗಳ ಹುಡುಕಾಟದಲ್ಲಿ ತೊಡಗಿರುತ್ತಿತ್ತು..
ವಿಶೇಷವೆಂದರೆ, ಇಡೀ ವಿಶ್ವದ ಸೃಷ್ಟಿಯ ಹುಟ್ಟಿನ ಬಗ್ಗೆ ಹಾಕಿಂಗ್ ತಲೆಕೆಡಿಸಿಕೊಂಡು ಸಂಶೋಧನೆಯಲ್ಲಿ ತಲ್ಲೀನವಾಗಿರುತ್ತಿದ್ದರೆ, ಹಾಕಿಂಗ್ ಮನೆಯಲ್ಲೇ ಅಂಥ ಎರಡು ವಿರುದ್ಧ ಧ್ರುವಗಳ ವಿಶ್ವ ಸೃಷ್ಟಿಯಾಗಿತ್ತು. ಒಂದು ಧ್ರುವ ಪತ್ನಿ ಜೇನ್‌ಳದ್ದು. ಆಕೆ ಎಲ್ಲದ್ದಕ್ಕೂ ದೇವರೇ ಕಾರಣ ಎನ್ನುವ ದೈವಭೀರು. ಇನ್ನೊಂದೆಡೆ ದೇವರ ಅಸ್ತಿತ್ವವನ್ನು ಒಪ್ಪದ ಹಾಕಿಂಗ್!
ಜೇನ್ ಸದಾ ಪ್ರಾರ್ಥನೆಯಲ್ಲಿ ಮುಳುಗಿರುತ್ತಿದ್ದಳು. “ದೇವರನ್ನು ನಂಬಿರುವುದರಿಂದಲೇ ನನಗೆ ಈ ಮನೆಯನ್ನು ನಿಭಾಯಿಸುವ ಶಕ್ತಿ ಬಂದಿದೆ’ ಎಂದು ಹೇಳುತ್ತಿದ್ದಳು. ಅದರೆ ಜೇನ್ ಈ ವಾದಲಹರಿ ಕೇಳಿದರೆ ಸಾಕು ವಿಶ್ವವಿಜಾnನಿ ಉರಿದು ಬೀಳುತ್ತಿದ್ದರು. “”ಈ ವಿಶ್ವದಲ್ಲಿರುವ ಲಕ್ಷಾಂತರ ನೀಹಾರಿಕೆಗಳಲ್ಲಿ ಯಾವುದೋ ಒಂದು ನಿಹಾರಿಕೆಯಲ್ಲಿರುವ ಒಂದು ನಕ್ಷತ್ರ ಸುತ್ತ ಬರುವ ಹಲವು ಗ್ರಹಗಳ ಪೈಕಿ ಒಂದಾಗಿರುವ ಕೋಟಿಗಟ್ಟಲೆ ಜನರಲ್ಲಿ ಒಬ್ಬಳಾಗಿರುವ ನಿನ್ನ ಬಗ್ಗೆ ಯೋಚಿಸುವಷ್ಟು ಪುರುಸೊತ್ತು ದೇವರಿಗೆ ಇದೆಯೇ? ಈ ದೇವರೆಂಬ ನಂಬಿಕೆಯನ್ನು ನಂಬುವುದು ಕಷ್ಟ” ಎಂದು ಕಟುವಾಗಿ ಹೇಳಿಬಿಡುತ್ತಿದ್ದರು. ಅದಕ್ಕೆ ಜೇನ್ ಹತ್ತಿರ ಉತ್ತರ ಸಿದ್ಧವಿರುತ್ತಿತ್ತು.
“”ಅಕಾರಣವಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಿಮಗೆ ದೇವರ ಬಗ್ಗೆ ಹೀಗೆ ಅನ್ನಿಸುವುದು ಸಹಜ” ಎಂದು ಹೇಳುತ್ತಿದ್ದರು. ದೇವರು ಎಂಬ ಬಗ್ಗೆ ಹಾಕಿಂಗ್‌ಗೆ ತನ್ನದೇ ಆದ ಒಂದು ಕಲ್ಪನೆ ಇತ್ತು. ಅವರಿಗೆ ಈ ಬ್ರಹ್ಮಾಂಡದ ಅಗಾಧ ವ್ಯಾಪ್ತಿಯ ಬಗ್ಗೆ ಮತ್ತು ಮನುಷ್ಯನೆಂಬ ತೃಣರೂಪಿ ಬಗ್ಗೆ ಸ್ಪಷ್ಟ ಅರಿವಿದೆ. ಈ ಭೂಮಿಯ ಸೌಂದರ್ಯದಲ್ಲೇ ದೇವರನ್ನು ಹುಡುಕಬೇಕು ಎಂದು ಹೇಳುತ್ತಿದ್ದರು. ಈ ಇಬ್ಬರೂ ಸಮಯ ಸಿಕ್ಕಾಗಲೆಲ್ಲ ವಿಶ್ವದ ಹುಟ್ಟಿನ ಬಗ್ಗೆ ಚರ್ಚೆ ಮಾಡುತ್ತಿದ್ದರು. ಒಮ್ಮೊಮ್ಮೆ ಸಮರ್ಪಕ ಉತ್ತರ ಕೊಡದೆ ಹಾಕಿಂಗ್ ವೇದಾಂತ ಮಾತನಾಡುತ್ತಿದ್ದರು.
“”ಈ ವಿಶ್ವವನ್ನು ದೇವರು ಸೃಷ್ಟಿಸಿದ್ದಾನೆ ಎನ್ನುವ ವಾದಕ್ಕೂ ಈ ವಿಶ್ವಕ್ಕೆ ಆದಿ ಮತ್ತು ಅಂತ್ಯ ಇದೆ ಎಂಬ ವಾದಕ್ಕೂ ಪರಸ್ಪರ ಸಂಬಂಧ ಇಲ್ಲ. ವೃತ್ತಕ್ಕೆ ಆದಿ ಮತ್ತು ಅಂತ್ಯ ಇಲ್ಲ ಎಂಬ ವಾದಕ್ಕೂ ಅದರ ರಚನೆಗೂ ಸಂಬಂಧ ಇದೆಯೇ? ವೃತ್ತ ರಚಿಸುವಾಗ ಆದಿ ಮತ್ತು ಅಂತ್ಯ ಇದೆ. ಆದರೆ ಅದನ್ನು ರಚಿಸಿದ ಮೇಲೆ..?” ಹೀಗೆ ಹಾಕಿಂಗ್ ಪ್ರಶ್ನೆಗಳ ಸುರಿಮಳೆಗೈದು ಎಲ್ಲರನ್ನೂ ಕಕ್ಕಾಬಿಕ್ಕಿ ಮಾಡುತ್ತಿದ್ದರು. ಜೇನ್ ಗಪ್‌ಚುಪ್.
ಒಂದು ವಿಶೇಷ ಗೊತ್ತೇ? ದೇವರ ಬಗ್ಗೆ ಅಷ್ಟೊಂದು ನಂಬಿಕೆ ಇಟ್ಟುಕೊಳ್ಳದ ಹಾಕಿಂಗ್ ಬಗ್ಗೆ ರೋಮನ್ ಕ್ಯಾಥೊಲಿಕ್ ಚರ್ಚ್‌ಗೆ ಮಾತ್ರ ಎಲ್ಲಿಲ್ಲದ ನಂಬಿಕೆ. ಇದಕ್ಕೆ ಕಾರಣವೂ ಇದೆ. ಈ ವಿಶ್ವ ಸೃಷ್ಟಿಯಾಗಿದೆ ಎನ್ನುವ ನಂಬಿಕೆಯನ್ನು ಚರ್ಚ್‌ನ ಆಸ್ತಿಕ ವರ್ಗ ತಲೆತಲೆಮಾರುಗಳಿಂದ ಇರಿಸಿಕೊಂಡಿದೆ. ಇದಕ್ಕೆ ಪೂರಕವಾಗಿಯೇ ಹಾಕಿಂಗ್ ಸಹ ಈ ವಿಶ್ವದ ಸೃಷ್ಟಿಯನ್ನು ಪ್ರಚುರಪಡಿಸುವ ಬಿಗ್‌ಬ್ಯಾಂಗ್ ಪ್ರಕ್ರಿಯೆಯನ್ನು ಸಮರ್ಥಿಕೊಂಡಿದ್ದರಲ್ಲವೇ? ಹೀಗಾಗಿ, ವಿಜಾnನಿಗಳೆಂದರೆ ಅನುಮಾನದಿಂದ ನೋಡುವ ವ್ಯಾಟಿಕನ್ ಕೂಡ ಹಾಕಿಂಗ್‌ರನ್ನು ಗೌರವದಿಂದ ನೋಡುತ್ತಿತ್ತು. ಈ ಕಾರಣಕ್ಕಾಗಿ ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸ್ ಹಾಕಿಂಗ್ ಅವರನ್ನು ಪೋಪ್ ಪಿಯುಸ್ 11ನೇ ಪದಕಕ್ಕೆ ಆಯ್ಕೆ ಮಾಡಿತು.
ಬಿ.ಕೆ. ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.