5G ನೆಟ್‌ವರ್ಕ್‌ ಕೊನೆಗೂ ಈಡೇರಲಿದೆ ದೇಶದ ಇಂಟರ್‌ನೆಟ್‌ ಗ್ರಾಹಕರ ನಿರೀಕ್ಷೆ


Team Udayavani, Jan 30, 2022, 7:35 AM IST

5G ನೆಟ್‌ವರ್ಕ್‌ ಕೊನೆಗೂ ಈಡೇರಲಿದೆ ದೇಶದ ಇಂಟರ್‌ನೆಟ್‌ ಗ್ರಾಹಕರ ನಿರೀಕ್ಷೆ

ದೇಶದ ಇಂಟರ್‌ನೆಟ್‌ ಗ್ರಾಹಕರು ಅದರಲ್ಲೂ ಮೊಬೈಲ್‌ ಬಳಕೆದಾರರು ಬಲು ಕಾತರದಿಂದ ನಿರೀಕ್ಷಿಸುತ್ತಿದ್ದ 5ಜಿ ಇಂಟರ್‌ನೆಟ್‌ ಸೇವೆ ಈ ವರ್ಷ ಆರಂಭಗೊಳ್ಳುವುದು ಬಹುತೇಕ ಖಚಿತ. ಕಳೆದೆರಡು ವರ್ಷಗಳಿಂದ ಚಾತಕಪಕ್ಷಿಗಳಂತೆ ಕಾಯುತ್ತಿದ್ದ ಗ್ರಾಹಕರಿಗೆ ದೂರ ಸಂಪರ್ಕ ಇಲಾಖೆ ಮತ್ತು ವಿವಿಧ ಟೆಲಿಕಾಂ ಕಂಪೆನಿಗಳು ಈ ಶುಭ ಸುದ್ದಿಯನ್ನು ನೀಡಿವೆ. ದೇಶದಲ್ಲಿ 5ಜಿ ನೆಟ್‌ ವರ್ಕ್‌ಗೆ ಚಾಲನೆ ನೀಡಲು ಈಗಾಗಲೇ ಟೆಲಿಕಾಂ ಕಂಪೆನಿಗಳು ಸಜ್ಜಾಗಿವೆ. ತರಾಂಗಾಂತರಗಳ ಬಿಡ್ಡಿಂಗ್‌, ಹಂಚಿಕೆ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ದೇಶದ ಮೆಟ್ರೋ ನಗರಗಳಲ್ಲಿ ಮುಂದಿನ ಕೆಲವೇ ತಿಂಗಳುಗಳಲ್ಲಿ ಈ ಸುಧಾರಿತ ತಂತ್ರಜ್ಞಾನವನ್ನು ಗ್ರಾಹಕರಿಗೆ ಪರಿಚಯಿಸಲಿವೆ.

4ಜಿಗಿಂತ 10ಪಟ್ಟು ಹೆಚ್ಚು ವೇಗ
ದೂರಸಂಪರ್ಕ ಕಂಪೆನಿಗಳು ದೇಶದಲ್ಲಿ 5ಜಿ ತಂತ್ರಜ್ಞಾನ ಸೇವೆಗೆ ಚಾಲನೆ ನೀಡಲು ಸಜ್ಜುಗೊಂಡಿವೆ. ಎಲ್ಲವೂ ನಿರೀಕ್ಷೆಯಂತೆಯೇ ನಡೆದದ್ದೇ ಆದಲ್ಲಿ ಮುಂದಿನ ಆರ್ಥಿಕ ವರ್ಷದ ಎರಡನೇ ತ್ತೈಮಾಸಿಕದ ಅಂತ್ಯಕ್ಕೆ ದೇಶದ ಇಂಟರ್‌ನೆಟ್‌ ಬಳಕೆದಾರರಿಗೆ 5ಜಿ ಸೇವೆ ಲಭ್ಯವಾಗಲಿದೆ. ಈ ಸುಧಾರಿತ ನೆಟ್‌ವರ್ಕ್‌ ತಂತ್ರಜ್ಞಾನ ಸೇವೆಯನ್ನು ಪ್ರಾಥಮಿಕ ಹಂತದಲ್ಲಿ 13 ಮೆಟ್ರೋ ನಗರಗಳಲ್ಲಿ ಆರಂಭಿಸಲು ಟೆಲಿಕಾಂ ಕಂಪೆನಿಗಳು ನಿರ್ಧರಿಸಿದ್ದು ಈ ನಗರಗಳ ಬಹುತೇಕ ಕಡೆಗಳಲ್ಲಿ ಇದಕ್ಕಾಗಿ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. 5ಜಿ ಇಂಟರ್ನೆಟ್‌ ವೇಗವು ಹಾಲಿ ಲಭ್ಯವಿರುವ 4ಜಿ ಗಿಂತ 10 ಪಟ್ಟು ಹೆಚ್ಚಾಗಿರುತ್ತದೆ. ಇದರಿಂದ ವಾಟ್ಸ್‌ಆ್ಯಪ್‌ ಕರೆ, ಎಚ್‌ಡಿ ಚಲನಚಿತ್ರ ಡೌನ್‌ಲೋಡ್‌ ಸಹಿತ ಇಂಟರ್‌ನೆಟ್‌ ಆಧಾರಿತ ಎಲ್ಲ ಮೊಬೈಲ್‌ ಕೆಲಸಕಾರ್ಯಗಳು ತುಂಬಾ ಸುಲಲಿತವಾಗಲಿವೆ.

5ಜಿ ಡೇಟಾ ಪ್ಯಾಕ್‌ನ ದರ ಎಷ್ಟಿರಲಿದೆ?
ಸದ್ಯ ದೇಶದಲ್ಲಿ ಜಿಯೋ, ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಕಂಪೆನಿಗಳು 5ಜಿ ಅನ್ನು ಮಾರುಕಟ್ಟೆಗೆ ಪರಿಚಯಿಸಲಿವೆ. ಇದರ ಡೇಟಾ ಯೋಜನೆಗಳ ದರಗಳ ಬಗ್ಗೆ ಈ ಕಂಪೆನಿಗಳು ಈವರೆಗೆ ಯಾವುದೇ ಮಾಹಿತಿಯನ್ನು  ಬಹಿರಂಗಪಡಿಸಿಲ್ಲ. ಹೀಗಾಗಿ 5ಜಿ ಡಾಟಾ ದರ ಎಷ್ಟಿರಲಿದೆ ಎಂದು ಸದ್ಯ ನಿಖರವಾಗಿ ಹೇಳಲು ಅಸಾಧ್ಯ. ಆದರೆ ಈಗಾಗಲೇ 5ಜಿ ಸೇವೆ ಪ್ರಾರಂಭಿಸಿರುವ ಇತರ ದೇಶಗಳಲ್ಲಿ ಇದರ ಶುಲ್ಕವನ್ನು ಪರಿಗಣಿಸಿ ಭಾರತದಲ್ಲಿ 5ಜಿ ಸೇವೆಗೆ ಟೆಲಿಕಾಂ ಕಂಪೆನಿಗಳು ಎಷ್ಟು ದರವನ್ನು ನಿಗದಿಪಡಿಸಬಹುದು ಎಂದು ಅಂದಾಜಿಸಿಕೊಳ್ಳಬಹುದು. ಆ ಪ್ರಕಾರ ಸದ್ಯ ದೇಶದಲ್ಲಿ ಟೆಲಿಕಾಂ ಕಂಪೆನಿಗಳು 4ಜಿ ಸೇವೆಗೆ ವಿಧಿಸುತ್ತಿರುವ ದರಕ್ಕಿಂತ ಹೆಚ್ಚಿನ ದರವನ್ನು ನಿಗದಿಪಡಿಸಬಹುದು. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವಾಗಿ ಕೆಲವೊಂದು ಟೆಲಿಕಾಂ ಕಂಪೆನಿಗಳು ಆರಂಭಿಕವಾಗಿ ಕಡಿಮೆ ಪ್ರಮಾಣದ ಶುಲ್ಕವನ್ನು ನಿಗದಿಪಡಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.

ದಕ್ಷಿಣ ಕೊರಿಯಾವು ಮೊದಲ ಬಾರಿಗೆ 2018ರ ಡಿಸೆಂಬರ್‌ನಲ್ಲಿ 5ಜಿ ಸೇವೆಯನ್ನು ಪ್ರಾರಂಭಿಸಿತ್ತು. ಅನಂತರ ಸ್ವಿಟ್ಸರ್ಲೆಂಡ್‌, ಯುಕೆ ಮತ್ತು ಯುಎಸ್‌ನಲ್ಲಿ 2019ರ ಮೇಯಲ್ಲಿ 5ಜಿ ಪ್ರಾರಂಭಗೊಂಡಿತ್ತು. ಪ್ರಸ್ತುತ ವಿಶ್ವದ ಸುಮಾರು 61ಕ್ಕೂ ಹೆಚ್ಚು ದೇಶಗಳಲ್ಲಿ 5 ಜಿ ಸೇವೆ ಲಭ್ಯವಿದೆ.

ವಿಶ್ವದ ದೊಡ್ಡ ಟೆಲಿಕಾಂ ಕಂಪೆನಿಗಳ ಅನಿಯಮಿತ 5ಜಿ ಯೋಜನೆಗಳು 4ಜಿ ಗಿಂತ ದುಬಾರಿಯಾಗಿವೆ. ಸರಾಸರಿ ದರ ಶೇ. 10- 40ರಷ್ಟು ಹೆಚ್ಚಾಗಿದೆ. ಭಾರತದಲ್ಲಿ 5ಜಿ ಸೇವೆ ಪ್ರಾರಂಭವಾದರೆ ಇಲ್ಲಿಯೂ ಇದು 4ಜಿ ದರಕ್ಕಿಂತ ಶೇ. 10- 40ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.

ಇಂಟರ್‌ನೆಟ್‌ ಸಂಪರ್ಕ ಒದಗಿಸುವ ಲಾಂಗ್‌ಟರ್ಮ್ ಎವೆಲ್ಯೂಶನ್‌(ಎಲ್‌ಟಿಇ)ನ ಸುಧಾರಿತ ತಂತ್ರಜ್ಞಾನ ವಾಗಿರುವ 5ಜಿ ಸಾಮಾನ್ಯ ಇಂಟರ್ನೆಟ್‌ ಬಳಕೆದಾರರಿಗೆ ಅತ್ಯಂತ ಸೂಕ್ತವಾದ ತಂತ್ರಜ್ಞಾನವಾಗಿದೆ. ವೇಗದಿಂದ ಕೂಡಿದ ತಂತ್ರಜ್ಞಾನ ಇದಾಗಿದ್ದು ಮೂರು ಬ್ಯಾಂಡ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ತಂತ್ರಜ್ಞಾನವು ಗರಿಷ್ಠ ಫ್ರೀಕ್ವೆನ್ಸಿಯಲ್ಲಿ 20ಜಿಬಿಪಿಎಸ್‌ ವರೆಗೆ ವೇಗವನ್ನು ಹೊಂದಿರುತ್ತದೆ. ಇದರಿಂದ ಗ್ರಾಹಕರು ಮೊಬೈಲ್‌ ಆ್ಯಪ್‌ಗ್ಳಲ್ಲಿ ಸಿನೆಮಾವನ್ನು ಯಾವುದೇ ಅಡಚಣೆ ಇಲ್ಲದೆ ವೀಕ್ಷಿಸಬಹುದಾಗಿದೆ.

ಅಗ್ಗವಾಗಲಿದೆ ಡೇಟಾ
ದೇಶದಲ್ಲಿ  ಟೆಲಿಕಾಂ ಕಂಪೆನಿಗಳು 2ಜಿ ತಂತ್ರಜ್ಞಾನವನ್ನು ಪರಿಚಯಿಸಿದಾಗ ತಿಂಗಳು ಪೂರ್ತಿ 1 ಜಿಬಿ ಡೇಟಾ ಬಳಕೆ ಮಾಡಬೇಕಿತ್ತು. 3ಜಿ ಬಂದ ಅನಂತರ ಡೇಟಾ ಬಳಕೆ ಹೆಚ್ಚಾಯಿತು. ಇನ್ನು 4 ಜಿ ಬಂದ ಬಳಿಕ ಪ್ರತೀದಿನ 1ರಿಂದ 2ಜಿಬಿ ಡೇಟಾ ಬಳಕೆಯಾಗುತ್ತಿದೆ. ಹೀಗಾಗಿ 5ಜಿ ಆಗಮನದ ಬಳಿಕ ಡೇಟಾ ಬಳಕೆ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಇಂಡಿಯಾ ಮೊಬೈಲ್‌ ಬ್ರಾಡ್‌ಬ್ಯಾಂಡ್‌ ಸೂಚ್ಯಂಕ 2021ರ ಪ್ರಕಾರ ಭಾರತದಲ್ಲಿ ಡೇಟಾ ಬಳಕೆ 2020ರಲ್ಲಿ ಶೇ.36ರಷ್ಟು ಬೆಳೆದಿದ್ದು, ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ 5ಜಿ ಅನಿಯಮಿತ ಯೋಜನೆ ದುಬಾರಿಯಾಗಬಹುದು. 1ಜಿಬಿಯ 5ಜಿ ಡೇಟಾದ ಸರಾಸರಿ ಬೆಲೆ 4ಜಿಗಿಂತ ಕಡಿಮೆಯಾಗುವ ನಿರೀಕ್ಷೆ ಇದೆ.

6ಜಿ ತಂತ್ರಜ್ಞಾನ
5ಜಿ ಸೇವೆಗೆ ದೇಶದಲ್ಲಿ  ಜನರಿಂದ ಯಾವ ರೀತಿಯ ಸ್ಪಂದನೆ ದೊರೆಯಲಿದೆ ಎನ್ನುವ ಕುರಿತಂತೆ ಚರ್ಚೆಗಳು ನಡೆಯುತ್ತಿರುವಾಗಲೇ ಟೆಕ್ನಾಲಜಿ ಇನೋವೇಶನ್‌ ಗ್ರೂಪ್‌ 6ಜಿ ತಂತ್ರಜ್ಞಾನದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿದೆ. ಜಪಾನ್‌, ದಕ್ಷಿಣ ಕೊರಿಯಾ, ಚೀನ, ಫಿನ್ಲಂಡ್‌ 6ಜಿ ಸೇವೆಯನ್ನು ಪರಿಚಯಿಸಲು ನಿರಂತರ ಪ್ರಯೋಗಗಳನ್ನು ನಡೆಸುತ್ತಿವೆ. ಇದಕ್ಕಾಗಿ ಯುರೋಪಿಯನ್‌ ಯೂನಿಯನ್‌ ರಾಷ್ಟ್ರಗಳು ಕೋಟ್ಯಂತರ ರೂ.ಗಳನ್ನು ವೆಚ್ಚ ಮಾಡುತ್ತಿವೆ. 2030ರ ವೇಳೆಗೆ ಜಪಾನ್‌ 6ಜಿ ಪರಿಚಯಿಸುವ ಸಾಧ್ಯತೆ ಇದೆ. ಸದ್ಯದ ಅಂದಾಜಿನ ಪ್ರಕಾರ 6ಜಿ ನೆಟ್‌ವರ್ಕ್‌ 5ಜಿಗಿಂತ 50 ಪಟ್ಟು ಹೆಚ್ಚಿನ ವೇಗವನ್ನು ಹೊಂದಿರಲಿದೆ.

ಎಲ್ಲಿ ಮೊದಲು?
ದೇಶದ 13 ನಗರಗಳಲ್ಲಿ ಮೊದಲು 5ಜಿ ಸೇವೆಯನ್ನು ಪ್ರಾರಂಭಿಸಲು ಟೆಲಿಕಾಂ ಕಂಪೆನಿಗಳು ಉದ್ದೇಶಿಸಿವೆ. ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ಮುಂಬಯಿ, ಚಂಡೀಗಢ, ಹೊಸದಿಲ್ಲಿ, ಜಾಮ್‌ನಗರ್‌, ಅಹ್ಮದಾಬಾದ್‌, ಚೆನ್ನೈ, ಹೈದರಾಬಾದ್‌, ಲಕ್ನೋ, ಪುಣೆ ಮತ್ತು ಗಾಂಧಿನಗರ.

ಇನ್ನಷ್ಟು ಹೆಚ್ಚಲಿದೆ ಇಂಟರ್‌ನೆಟ್‌ ದರ
ಭಾರತದ ಟೆಲಿಕಾಂ ಕಂಪೆನಿಗಳು ಇತ್ತೀಚೆಗೆ ತಮ್ಮ ಇಂಟರ್‌ನೆಟ್‌ ದರವನ್ನು ಶೇ. 20- 25ರಷ್ಟು ಹೆಚ್ಚಿಸಿವೆ. 5 ಜಿ ತರಂಗಾಂತರ ಅತ್ಯಂತ ದುಬಾರಿಯಾಗಿದ್ದು ಇದರ ಖರೀದಿಗೆ ಭಾರೀ ಪ್ರಮಾಣದ ಹಣದ ಆವಶ್ಯಕತೆ ಇರುವುದರಿಂದ ಮತ್ತು ಟೆಲಿಕಾಂ ಕಂಪೆನಿಗಳ ಸಾಲದ ಪ್ರಮಾಣ ಅಧಿಕವಾಗಿರುವುದರಿಂದ ಇಂಟರ್‌ನೆಟ್‌ ದರವನ್ನು ಶೀಘ್ರದಲ್ಲಿಯೇ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.

ಅಮೆರಿಕ, ಚೀನ, ದಕ್ಷಿಣ ಕೊರಿಯಾ ದೇಶಗಳಲ್ಲಿ 1 ಜಿಬಿ ಡೇಟಾದ ಬೆಲೆ ಸುಮಾರು 8 ರಿಂದ 10 ಡಾಲರ್‌ ಇದೆ. ಆದರೆ ಭಾರತದಲ್ಲಿ ಇದು 1 ಡಾಲರ್‌ಗಿಂತಲೂ ಕಡಿಮೆ ಇದೆ. ವಿದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿನ ಇಂಟರ್‌ನೆಟ್‌ ದರ ಪ್ರಮಾಣ ತೀರಾ ಅತ್ಯಲ್ಪ. ಇದನ್ನು ಮುಂದಿಟ್ಟು ಮತ್ತು 5ಜಿ ಸಹಿತ ಅತ್ಯಾಧುನಿಕ ತಂತ್ರಜ್ಞಾನ, ಸೇವೆಗಳನ್ನು ನೀಡುವ ಭರವಸೆಯೊಂದಿಗೆ ಟೆಲಿಕಾಂ ಕಂಪೆನಿಗಳು ಇಂಟರ್‌ನೆಟ್‌ ದರವನ್ನು ಹೆಚ್ಚಿಸುವ ಸಾಧ್ಯತೆ ಅಧಿಕವಾಗಿದೆ.

5ಜಿ ಪ್ರಯೋಗಕ್ಕೆ ಸಿದ್ಧತೆ ಪೂರ್ಣ
ಮಾರ್ಚ್‌- ಎಪ್ರಿಲ್‌ ವೇಳೆಗೆ 5ಜಿ ಇಂಟರ್ನೆಟ್‌ ತರಂಗಾಂತರದ ಬಿಡ್ಡಿಂಗ್‌ ನಡೆಯಲಿದೆ ಎಂದು ಕೇಂದ್ರ ಸರಕಾರ ಈಗಾಗಲೇ ತಿಳಿಸಿದೆ. 5ಜಿ ತಂತ್ರಜ್ಞಾನವನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿರುವ ಟೆಲಿಕಾಂ ಕಂಪೆನಿಗಳು ಈಗಾಗಲೇ ಪರೀಕ್ಷೆ ಮತ್ತು ಪ್ರಯೋಗಗಳನ್ನು ಪೂರ್ಣಗೊಳಿಸಿವೆ. ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು ದೇಶದಲ್ಲಿ 5ಜಿ ಇಂಟರ್ನೆಟ್‌ ಸೇವೆ ಪ್ರಾರಂಭಿಸುವ ಕುರಿತಂತೆ ಇನ್ನಷ್ಟೇ ಅಂತಿಮ ನಿರ್ಧಾರವನ್ನು ಕೈಗೊಳ್ಳಬೇಕಿದೆ. ಭಾರ್ತಿ ಏರ್‌ಟೆಲ್‌ ಈಗಾಗಲೇ ಎರಿಕ್ಸನ್‌ ಸಹಯೋಗದೊಂದಿಗೆ ಹೈದರಾಬಾದ್‌ನಲ್ಲಿ ವಾಣಿಜ್ಯ 5ಜಿ ಇಂಟರ್ನೆಟ್‌ ಸೇವೆಯ ಪೂರ್ವ ಪರೀಕ್ಷೆಯನ್ನು ನಡೆಸಿದೆ.  ಇನ್ನು ಜಿಯೋ 2019ರಲ್ಲಿಯೇ 5ಜಿ ನೆಟ್‌ವರ್ಕ್‌ ಸೇವೆ ಒದಗಿಸಲು ದೇಶಾದ್ಯಂತ ತನ್ನ ಇಂಟರ್ನೆಟ್‌ ನೆಟ್‌ವರ್ಕ್‌ ವಿಸ್ತರಣೆ ಕಾರ್ಯವನ್ನು  ಪ್ರಾರಂಭಿಸಿತ್ತು.

ಬಳಕೆದಾರರ ಸಂಖ್ಯೆ ಹೆಚ್ಚಳ
ಭಾರತದ ಗ್ರಾಮೀಣ ಭಾಗದಲ್ಲಿ 2014ರಲ್ಲಿ ಶೇ. 44ರಷ್ಟು ಇದ್ದ ಮೊಬೈಲ್‌ ಬಳಕೆದಾರರ ಸಂಖ್ಯೆ 2021ರ ಸೆಪ್ಟಂಬರ್‌ ವೇಳೆ ಶೇ. 59ರಷ್ಟು ಹೆಚ್ಚಾಗಿದೆ. ಬ್ರಾಡ್‌ಬ್ಯಾಂಡ್‌ಗಳ ಸಂಪರ್ಕಗಳು 2014ರಲ್ಲಿ 6.1 ಕೋಟಿ ಇದ್ದದ್ದು 2021ರ ಜೂನ್‌ಗೆ 79 ಕೋಟಿಗಳಿಗೆ ಏರಿಕೆಯಾಗಿದೆ.

-ವಿದ್ಯಾ ಇರ್ವತ್ತೂರು

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.