ಇಂದು ಟೂತ್ ಬ್ರಷ್ ಹುಟ್ಟಿದ ದಿನ
Team Udayavani, Jul 4, 2021, 9:06 PM IST
ಅನೇಕ ವಿಸ್ಮಯ, ವಿವಿಧತೆಗಳನ್ನು ಹೊಂದಿರುವ ಏಕೈಕ ಗ್ರಹ ಭೂಮಿ. ಇಲ್ಲಿ ಅತಿ ವಿಶಿಷ್ಟವಾದದ್ದು ಅಗಾಧ ಜೀವಸಂಕುಲ. ಅದೆಷ್ಟೋ ಬಗೆಯ ವಿವಿಧ ಸಸ್ಯಗಳು ಮತ್ತು ಪ್ರಾಣಿಗಳು ಇಲ್ಲುಂಟು. ಭಾರತೀಯ ತಣ್ತೀಶಾಸ್ತ್ರದ ಪ್ರಕಾರ ಮನುಷ್ಯನನ್ನು ಸೇರಿಸಿ 84 ಲಕ್ಷ ಪ್ರಭೇದದ ಜೀವಿಗಳು ಭೂಮಿ ಮೇಲಿದೆ. ಇವುಗಳಲ್ಲಿ ಮನುಷ್ಯ ಪ್ರಾಣಿಯ ಸಂಖ್ಯೆಯೇ ಬರೋಬ್ಬರಿ 700 ಕೋಟಿಗೂ ಹೆಚ್ಚು.
ಒಂದೊಂದು ಪ್ರಾಣಿಗೂ ಒಂದೊಂದು ವಿಶೇಷ ದೈಹಿಕ ರಚನೆಯಿದೆ. ಕೆಲವು ಪ್ರಾಣಿಗಳು ಮೂಗಿನಿಂದ, ಇನ್ನು ಕೆಲವು ಚರ್ಮದಿಂದ ಉಸಿರಾಡುತ್ತವೆ. ಕಾಲಿನಿಂದ ನಡೆಯುವ ಪ್ರಾಣಿಗಳು ಕೆಲವಾದರೆ ತೆವಳುತ್ತ ಸಾಗುವ ಜೀವಿಗಳು ಇನ್ನು ಹಲವು. ಕೆಲವು ಪ್ರಾಣಿಗಳಿಗೆ ಕಣ್ಣಿಲ್ಲ, ಇನ್ನು ಕೆಲವಕ್ಕೆ ಕಿವಿಯೇ ಇಲ್ಲ. ಹೀಗೆ ಅದೆಷ್ಟೋ ರೀತಿಯ ವೈವಿಧ್ಯಮಯವಾದ ದೇಹರಚನೆ ಹೊಂದಿದಂತಹ ಪ್ರಾಣಿಗಳಿದ್ದರೂ ಎಲ್ಲ ಪ್ರಾಣಿ ಸಂಕುಲವನ್ನೂ ಒಟ್ಟಾರೆಯಾಗಿ ಸೇರಿಸಿ ನೋಡುವುದಾದರೆ ಅರ್ಧಕ್ಕೂ ಹೆಚ್ಚು ಪ್ರಾಣಿಗಳ ದೇಹರಚನೆ ಒಂದೇ ರೀತಿ ಇವೆ. ಅಂದರೆ ಬಹುತೇಕ ಪ್ರಾಣಿಗಳು ಕಣ್ಣಿನಿಂದಲೇ ನೋಡುತ್ತವೆ, ಮೂಗಿನಿಂದಲೇ ಉಸಿರಾಡುತ್ತವೆ, ಕಾಲಿನಿಂದಲೇ ನಡೆಯುತ್ತವೆ. ಕಣ್ಣು ಕಿವಿ ಸೇರಿದಂತೆ ಪ್ರಾಣಿಗಳ ಎಲ್ಲ ಅಂಗಗಳ ಪೈಕಿ ಅತಿ ಪ್ರಮುಖ ಸ್ಥಾನ ಮೂಗಿಗೆ. ಕೆಲವು ಸೆಕೆಂಡುಗಳ ಕಾಲ ಮೂಗು ಉಸಿರಾಡುವುದನ್ನು ನಿಲ್ಲಿಸಿದರೂ ಕೂಡ ಆ ಪ್ರಾಣಿಯ ಕತೆ ಮುಗಿದಂತೆಯೇ. ಮೂಗಿನ ಅನಂತರ ಎರಡನೇ ಸ್ಥಾನ ಹಲ್ಲುಗಳಿಗೆ !
ಮೀನಿನಿಂದ ಮನುಷ್ಯನವರೆಗೆ ಶೇ. 70ರಷ್ಟು ಪ್ರಾಣಿಗಳು ಆಹಾರವನ್ನು ಜಗಿದು ತಿನ್ನುವ ದೇಹರಚನೆಯನ್ನು ಹೊಂದಿರುತ್ತವೆ. ಆಯಾ ಪ್ರಾಣಿಯ ಆಹಾರ ಪದ್ಧತಿಗೆ ಅನುಗುಣವಾದ ಶೈಲಿಯಲ್ಲಿ ಹಲ್ಲಿನ ರಚನೆಯಾಗಿದೆ. ಹಲ್ಲುಗಳ ಆಕಾರ ಗಾತ್ರ ಅಥವಾ ರಚನೆಯಲ್ಲಿ ವ್ಯತ್ಯಾಸವಿರಬಹುದು. ಆದರೆ ಬಹುತೇಕ ಪ್ರಾಣಿಗಳಲ್ಲೂ ಹಲ್ಲು ಮಾಡುವ ಕೆಲಸ ಒಂದೇ ಆಗಿದೆ. ಅದುವೇ ಆಹಾರವನ್ನು ಅಗಿಯುವುದು. ಮನುಷ್ಯ ಕೂಡ ಆಹಾರವನ್ನು ಅಗಿದು ತಿನ್ನುವ ಜಾತಿಗೆ ಸೇರಿದ ಪ್ರಾಣಿ. ಹಾಗಾಗಿ ಹಲ್ಲುಗಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಅವನಿಗೆ ತುಂಬಾ ಅವಶ್ಯಕ. ಆಹಾರದಲ್ಲಿನ ಅನೇಕ ಬ್ಯಾಕ್ಟೀರಿಯಾಗಳು ಹಲ್ಲಿನ ಸಂದುಗಳಲ್ಲಿ ಉಳಿದುಹೋಗಿ ಕಾಲಕ್ರಮೇಣ ರೋಗ ತಂದೊಡ್ಡುವ ಸಾಧ್ಯತೆಗಳೂ ಉಂಟು. ಹಾಗಾಗಿ ಹಲ್ಲನ್ನು ಶುಚಿಯಾಗಿ ಆರೋಗ್ಯವಾಗಿಟ್ಟುಕೊಳ್ಳಲು ನಮಗೆ ಪ್ರತಿದಿನ ಸಹಾಯ ಮಾಡುವ ಸ್ನೇಹಿತನೇ ಈ ಟೂತ್ ಬ್ರಷ್.
ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಬೀಚಿ ಪ್ರಾಣೇಶ್ ಅವರು ಹೇಳುವಂತೆ ಕರ್ನಾಟಕದ ಪ್ರತಿ ಹತ್ತು ಇಪ್ಪತ್ತು ಕಿಲೋ ಮೀಟರಿಗೂ ಒಂದೊಂದು ರೀತಿಯ ಸಂಸ್ಕೃತಿ, ಜೀವನಶೈಲಿ ಇದೆ. ಅಂದರೆ ಇಡೀ ಕರ್ನಾಟಕದಲ್ಲಿ ಎಷ್ಟು ವಿಧದ ಜೀವನಶೈಲಿ ಇರಬಹುದು, ಹಾಗಾದರೆ ಆ ಸಂಖ್ಯೆ ಇಡೀ ಭಾರತದಲ್ಲಿ ಎಷ್ಟು? ಇಡೀ ವಿಶ್ವ¨ಲ್ಲೆಷ್ಟು? ಲಕ್ಷ ಲಕ್ಷ ವಿಭಿನ್ನ ಸಂಸ್ಕೃತಿ, ಜೀವನಶೈಲಿ ಇರಬಹುದು ಎಂದು ಒಮ್ಮೆ ಯೋಚಿಸಿ. ಆಹಾರ ಪದ್ಧತಿ, ವೇಷ, ಭಾಷೆ, ಆಚಾರ… ಈ ರೀತಿ ಅದೆಷ್ಟು ಲಕ್ಷಗಟ್ಟಲೆ ವೈವಿಧ್ಯತೆಯಿದ್ದರೂ ಕೂಡ ಪ್ರಪಂಚದ ಶೇ. 70ಕ್ಕೂ ಹೆಚ್ಚು ಜನರ ಒಂದು ಜೀವನಶೈಲಿ ಮಾತ್ರ ಒಂದೇ ಆಗಿದೆ. ಅದೇನೆಂದರೆ ಬೆಳಗ್ಗೆ ಹಾಸಿಗೆಯಿಂದ ಎದ್ದ ಕೂಡಲೇ ಹಲ್ಲುಜ್ಜುವುದು. ಹೌದು ವಿಶ್ವದ ಅತಿ ಹೆಚ್ಚು ಜನ ಪಾಲಿಸುತ್ತಿರುವ ಒಂದೇ ರೀತಿಯ ಜೀವನಶೈಲಿ ಇದು ಎಂದರೂ ತಪ್ಪಾಗೋದಿಲ್ಲ. ಅಂತಹ ಟೂತ್ ಬ್ರಷ್ ಹುಟ್ಟಿ ಇಂದಿಗೆ ಅಂದರೆ ಜೂನ್ 26ಕ್ಕೆ ಭರ್ತಿ 523 ವರ್ಷಗಳು.
ಇತಿಹಾಸ
ಟೂತ್ ಬ್ರಷ್‌ನ ಇತಿಹಾಸ ಕೆದಕುತ್ತಾ ಹೋದರೆ ಅದು ನಮ್ಮನ್ನು ನೇರ ಕ್ರಿಸ್ತ ಪೂರ್ವ 3000ದ ಸಮೀಪಕ್ಕೆ ಕೊಂಡೊಯ್ಯುತ್ತದೆ. ಅತಿ ಪುರಾತನ ನಾಗರಿಕತೆಯ ಕಾಲದಲ್ಲಿ ಮರದ ಕಡ್ಡಿಗಳನ್ನು ಬಳಸಿ ಹಲ್ಲುಜ್ಜುವ ಪದ್ಧತಿ ಇತ್ತೆಂದು ತಿಳಿದುಬರುತ್ತದೆ. ಸಿಂಧೂ ನದಿಯ ನಾಗರಿಕತೆ ಸಮಯದಲ್ಲಿ ಕೂಡ ಈ ರೀತಿ ಬೇವು ಸೇರಿದಂತೆ ಇತರ ಮರದ ಕಡ್ಡಿಗಳನ್ನು ಉಪಯೋಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಬೇವಿನ ಕಡ್ಡಿಯನ್ನು ಬಳಸಿ ಹಲ್ಲುಜ್ಜುವ ಈ ವಿಧಾನ ಅತಿ ಪುರಾತನವಾದರೂ ಇಂದಿಗೂ ಕೂಡ ಕೆಲವು ಪ್ರದೇಶಗಳಲ್ಲಿ ಜೀವಂತವಾಗಿದೆ.
ಕ್ರಿಸ್ತ ಪೂರ್ವ 3500ರಲ್ಲಿ ಬ್ಯಾಬಿಲೋನಿಯಾ ದಲ್ಲಿ ಚೂ ಸ್ಟಿಕÕ… ಅನ್ನುವ ಹೆಸರಿನಲ್ಲಿ ಹಲ್ಲುಜ್ಜುವ ಕಡ್ಡಿಗಳನ್ನು ಉಪಯೋಗಿಸುತ್ತಿದ್ದರು. 5ನೇ ಶತಮಾನದ ಬೌದ್ಧರ ಶಾಸನಗಳಲ್ಲಿ ಕೂಡ ಈ ಚೂಸ್ಟಿಕ್ಸ್‌ಗಳ ಬಳಕೆ ಇದ್ದದ್ದು ಉಲ್ಲೇಖವಾಗಿದೆ.
ಆಫ್ರಿಕಾ ಮತ್ತು ಅರಬ್ ದೇಶಗಳಲ್ಲಿ ಮಿಸ್ವಾಕ್ ಎಂಬ ಗಿಡದ ತೊಗಟೆಯಿಂದ ಮಾಡಿದಂತಹ ಕಡ್ಡಿಗಳನ್ನು ಬಳಸುತ್ತಿದ್ದರು. ಈ ಮಿಸ್ವಾಕ್ ಅನ್ನು ಇಂಗ್ಲಿಷ್‌ನಲ್ಲಿ ಟೂತ್ ಬ್ರಷ್ ಟ್ರೀ (ಟೂತ್ ಬ್ರಷ್ ಗಿಡ) ಎಂದೇ ಕರೆಯುತ್ತಾರೆ. ಸನ್ಯಾಸಿಗಳ ಜೀವನಕ್ರಮ ಹೇಗಿರಬೇಕೆಂದು ಹೇಳುವಾಗ ಚೀನಾದ ಸಿಜಿಂಗ್ ಎಂಬ ಸನ್ಯಾಸಿ ಸನ್ಯಾಸಿಗಳು ಪ್ರತಿದಿನ ಬೆಳಗ್ಗೆ ಎದ್ದ ತತ್‌ಕ್ಷಣ ಹಲ್ಲುಜ್ಜಬೇಕು ಎಂದು ಹೇಳಿರುವುದು ಇತಿಹಾಸದಲ್ಲಿದೆ.
ನಾಲ್ಕನೇ ಶತಮಾನದಲ್ಲಿ ಭಾರತದಲ್ಲಿ ಕೂಡ ಇದರ ಬಳಕೆ ಇತ್ತೆಂದು ಉಲ್ಲೇಖೀತವಾಗಿದೆ. ಸಂಸ್ಕೃತದಲ್ಲಿ ಇದನ್ನು ದಂತಕಾಷ್ಠ ಎಂದು ಕರೆದಿದ್ದಾರೆ. ದಂತ ಎಂದರೆ ಹಲ್ಲು. ಕಾಷ್ಠ ಎಂದರೆ ಕಡ್ಡಿ. ದಂತಕಾಷ್ಠಕ್ಕೆ ಇರಬೇಕಾದ ಉದ್ದ-ಅಗಲಗಳ ಬಗ್ಗೆಯೂ ಕೂಡ ಸ್ಪಷ್ಟವಾಗಿ ಉಲ್ಲೇಖೀತವಾಗಿದೆ. ದಂತಕಾಷ್ಠವು ಮನುಷ್ಯನ ಕಿರುಬೆರಳಿನ ಉದ್ದದ ಎಂಟರಷ್ಟು ಕನಿಷ್ಠ ಉದ್ದ ಹಾಗೂ ಹನ್ನೆರಡರಷ್ಟು ಗರಿಷ್ಠ ಉದ್ದ ಇರಬೇಕು ಎಂದು ಉಲ್ಲೇಖೀಸಲಾಗಿದೆ.
ಅಷ್ಟೇ ಅಲ್ಲದೆ ಯಾವ ವಿಧದ ಯಾವ ಗಿಡದ ಕಡ್ಡಿಗಳನ್ನು ದಂತಕಾಷ್ಠವಾಗಿ ಬಳಸಬಹುದು ಎಂದೂ ಹೇಳಲಾಗಿದ್ದು, ಅವುಗಳಲ್ಲಿ ಕೆಲವು ಗಿಡಗಳನ್ನು ಹೆಸರಿಸುವುದಾದರೆ- ಅಪಮರ್ಗ, ಅರ್ಜುನ, ಬೇಲ, ಮಾವು, ಬೇವು, ಮಿಸ್ವಾಕ್, ತೇಜೋವಟಿ, ಪಿಪಲಿ, ಬಬೂಲ್‌ಗಳಂತಹ ಗಿಡದ ಕಡ್ಡಿಗಳು.
ಇಂದಿಗೆ ಸರಿಯಾಗಿ 523 ವರ್ಷಗಳ ಹಿಂದೆ ಅಂದರೆ ಜೂನ್ 26, 1498 ರಂದು ಚೀನಾದ ಚಕ್ರವರ್ತಿ ಮೊದಲ ಬಾರಿಗೆ ಅಧಿಕೃತವಾಗಿ ಟೂತ್ ಬ್ರಷ್ ಅನ್ನು ಬಿಡುಗಡೆಗೊಳಿಸಿದರು. ಮೂಳೆ ಅಥವಾ ಬಿದಿರಿನ ಕಡ್ಡಿಯೊಂದಕ್ಕೆ ಹಂದಿ ಅಥವಾ ಕರಡಿಯ ಕೂದಲುಗಳಿಂದ ಮಾಡಿದ ಬ್ರಿಸಲ್‌ಗಳನ್ನು ಸಿಕ್ಕಿಸಿ ಮಾಡಿದ ಟೂತ್ ಬ್ರಷ್ ಅದಾಗಿದ್ದು, ಅದಕ್ಕೆ ಪೇಟೆಂಟ್ ಕೂಡ ನೀಡಿದರು. ಹಾಗಾಗಿ 26 ಜೂನ್ 1498 ಅನ್ನು ಜಗತ್ತಿನ ಮೊತ್ತ ಮೊದಲ ಟೂತ್ ಬ್ರಷ್ ಹುಟ್ಟಿದ ದಿನವೆಂದು ಅಧಿಕೃತವಾಗಿ ಕರೆಯಲಾಗಿದೆ. ಅದಕ್ಕಾಗಿಯೇ ಈಗಲೂ ಬ್ರಿಸಲ… ಪದದ ಅರ್ಥವನ್ನು ಗೂಗಲ್‌ನಲ್ಲಿ ಹುಡುಕಾಡಿದರೆ ಪ್ರಾಣಿಯ ಚರ್ಮದ ಮೇಲಿನ ಕೂದಲು ಎಂಬ ಅರ್ಥವನ್ನೇ ತೋರಿಸುತ್ತದೆ. ಅದೇ ರೀತಿ ಬ್ರಿಸಲ್ ಪದದ ಕನ್ನಡದ ಅರ್ಥವನ್ನು ಗೂಗಲ್‌ನಲ್ಲಿ ಹುಡುಕಿದರಂತೂ ಹಂದಿಯ ಕೂದಲು ಎಂದೇ ಬರುತ್ತದೆ.
ಕಾಲ ಕಳೆದಂತೆಲ್ಲ ಟೂತ್ ಬ್ರಷ್‌ನ ಬಳಕೆ ಯುರೋಪ್ ದೇಶಗಳಲ್ಲಿ ವಿಸ್ತಾರವಾಗಿ ಹರಡಿತು. ಟೂತ್ ಬ್ರಷ್ ಬಗ್ಗೆ ಯೂರೋಪ್ ದೇಶಗಳಲ್ಲಿ ಹೊಸ ಹೊಸ ಆವಿಷ್ಕಾರಗಳು ಬೆಳೆದು ಪ್ಲಾಸ್ಟಿಕ್ ಅಥವಾ ನೈಲಾನ್ ಬ್ರಿಸಲ್ ಹೊಂದಿದ ಟೂತ್ ಬ್ರಷ್‌ಗಳು, ಎಲೆಕ್ಟ್ರಿಕ್ ಟೂತ್ ಬ್ರಷ್‌ಗಳು, ಚಿಕ್ಕ ಮಕ್ಕಳಿಗೆ ವಿಶೇಷವಾದ ಟೂತ್ ಬ್ರಷ್ ಗಳು… ಹೀಗೆ ಅನೇಕ ಮಾದರಿಗಳು ಅವಿಷ್ಕಾರಗೊಳ್ಳುತ್ತಲೇ ಇದೆ. ಇಂದು ನವೀನ ಶೈಲಿಯ ಟೂತ್ ಬ್ರಷ್‌ಗಳು ನಮ್ಮ ಜೀವದ ಅವಿಭಾಜ್ಯ ಅಂಗವೇ ಆಗಿಹೋಗಿವೆ.
ಟಿಎನ್ನೆಸ್,
ಮಲೇಷ್ಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.