ಬಿಜೆಪಿಗೆ ಸೋಲು, ಗೆಲುವಿನ ಸಂಗಮ


Team Udayavani, Dec 19, 2017, 2:10 AM IST

bjp.jpg

ಎರಡನೆಯ ವಿಶ್ವಯುದ್ಧದ ಅಂತ್ಯದಲ್ಲಿ, ಅಂದಿನ ಬ್ರಿಟಿಷ್‌ ಪ್ರಧಾನಿ ಸರ್‌ ವಿನ್‌ಸ್ಟನ್‌ ಚರ್ಚಿಲ್‌ ಅತ್ಯಂತ ಯಥಾರ್ಥತೆಯಿಂದ ಹೇಳಿದ್ದರು- “”ಗೆಲುವಿನಲ್ಲಿ ಸೋತೆವು”. ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೂ ಈ ಮಾತನ್ನು ಅನ್ವಯಿಸಬಹುದು. ಬಿಜೆಪಿ ಚುನಾವಣೆಗಳನ್ನು ಗೆದ್ದಿದೆ, ಜೊತೆಗೆ ಸೋತಿದೆ ಕೂಡ. 
ಕಾಂಗ್ರೆಸ್‌ನೊಂದಿಗೆ ತೀವ್ರ ಹತ್ತಿರದ ಸ್ಪರ್ಧೆ ನಡೆಸಿ ಬಿಜೆಪಿ ಗೆಲುವು ಸಾಧಿಸಿದೆಯಾದರೂ, ಅದಕ್ಕಿ ದಕ್ಕಿರುವ ಸ್ಥಾನಗಳ

ಆಧಾರದಲ್ಲಿ ಹೇಳುವುದಾದರೆ ಒಳಗೊಳಗೆ ಬಿಜೆಪಿಯ ನಾಯಕರಿಗೆ ಈ ಫ‌ಲಿ ತಾಂಶದಿಂದೇನೂ ಸಂತೋಷವಾಗಿರಲಿಕ್ಕಿಲ್ಲ. ಹಾಗೆ ನೋಡುವು ದಾದರೆ ಗುಜರಾತ್‌ ಪ್ರಧಾನಿ ಮೋದಿಯವರ ತವರು ರಾಜ್ಯವಾಗಿರುವುದರಿಂದ ಮತ್ತು ಉತ್ತರಪ್ರದೇಶ-ಉತ್ತರಾಖಂಡ ವಿಧಾನಸಭಾ ಚುನಾವಣೆಗಳ ಅದ್ಭುತ ಗೆಲುವಿನ 9 ತಿಂಗಳ ನಂತರ ಗುಜರಾತ್‌ನ ವಿಧಾನಸಭಾ ಚುನಾವಣೆಗಳು ನಡೆದಿರುವು ದರಿಂದ,  ಬಿಜೆಪಿ ಉತ್ತಮ ಪ್ರದರ್ಶನ ನೀಡಬೇಕಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗುಜರಾತ್‌ನಲ್ಲಿ ಎಲ್ಲಾ 26 ಸ್ಥಾನಗಳನ್ನೂ ವಶಪಡಿಸಿಕೊಳ್ಳಲು ಸಫ‌ಲವಾಗಿತ್ತು. ಆ ಫ‌ಲಿತಾಂಶಕ್ಕೂ ಈಗಿನ ಪ್ರದರ್ಶನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. 

ಅದಾಗ್ಯೂ ಮೋದಿ ಮತ್ತು ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರಿಗೆ ಈ ಬಾರಿ ಗುಜರಾತ್‌ನಲ್ಲಿ ಎದುರಾಗಲಿದ್ದ ಸವಾಲುಗಳ ಅರಿವಿರಲಿಲ್ಲ ಎಂದೇನೂ ಅಲ್ಲ. ಬಹುಶಃ ಪಕ್ಷದ ಮನೋಬಲವನ್ನು ಹಿಡದಿಡುವುದಕ್ಕಾಗಿಯೇ ಅಮಿತ್‌ ಶಾ, “ನಾವು 150 ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂದು ಹೇಳಿದ್ದರೇನೋ. 

ಉತ್ತರಪ್ರದೇಶದ ವಿಷಯದಲ್ಲಿ ನೋಡುವುದಾದರೆ, ಅಲ್ಲಿ ಇಬಾ^ಗವಾಗಿದ್ದ, ಸ್ಥೈರ್ಯಕಳೆ ದುಕೊಂಡಿದ್ದ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಸಮಾಜವಾದಿ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ಎದುರಾಗಿತ್ತು. ಆ ಅಲೆಯಿಂದ ಬಿಜೆಪಿಗೆ ಬಹಳ ಪ್ರಯೋಜನವಾಯಿತು.  ಇನ್ನು ಆಗ ಬಿಜೆಪಿಗೆ ಪ್ರಮುಖ ಎದುರಾಳಿಯಾಗಿದ್ದ ಮಾಯಾವತಿ ನೇತೃತ್ವದ ಬಿಎಸ್‌ಪಿಯೂ ಇದ್ದಬದ್ದ ಆಕರ್ಷಣೆಯನ್ನು ಕಳೆದುಕೊಂಡಿತ್ತು. ಕಾಂಗ್ರೆಸ್‌ ಅಂತೂ ತನ್ನ ಹಿಂದಿನ ರೂಪದ ಪ್ರೇತದಂತಾಗಿತ್ತು. ಆದರೆ ಗುಜರಾತ್‌ ವಿಷಯಕ್ಕೆ ಬಂದರೆ, ಬಿಜೆಪಿ ಎದುರಿಸಿದ್ದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯ ಉತ್ಸಾಹಭರಿತ ಸವಾಲು ಮತ್ತು ಅದಕ್ಕಿಂತಲೂ ಹೆಚ್ಚಾಗಿ ಹಾರ್ದಿಕ್‌ ಪಟೇಲ್‌ ನೇತೃತ್ವದ ಪಾಟೀದಾರ್‌(ಸಮುದಾಯದ) ಒಂದು ವರ್ಗದಿಂದ ಎದುರಾದ ಬಂಡಾಯವನ್ನು. ಕಾಂಗ್ರೆಸ್‌ನ ಜಾತ್ಯತೀತ ಮುಖವಾಡ ವನ್ನು ಕಳಚಿಟ್ಟ ರಾಹುಲ್‌ ಗಾಂಧಿ, ಮತದಾರರನ್ನು ಓಲೈಸಲು ಹಿಂದೂ ಕಾರ್ಡ್‌ ಅನ್ನು ಬಳಸಿದರು. ತಮ್ಮನ್ನು ಮಂದಿರಗಳಿಗೆ ಭೇಟಿಕೊಡುವ ಶ್ರದ್ಧಾವಂತ ಹಿಂದೂವಾಗಿ ಬಿಂಬಿಸಿಕೊಂಡರು. 

ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗದ ಸ್ಥಾನಮಾನದ ಭರವಸೆ ಪಡೆದಿರುವ ಪಾಟೀದಾರರೊಂದಿಗೆ ಈಗ ಬಿಜೆಪಿ ಹೇಗೆ ವ್ಯವಹರಿಸುವುದೋ ನೋಡಬೇಕಾಗಿದೆ. ಬಿಜೆಪಿ ಸರ್ಕಾರ ಏಪ್ರಿಲ್‌ 2016ರಲ್ಲಿ ಪಾಟೀದಾರರಿಗೆ ಆರ್ಥಿಕವಾಗಿ ಹಿಂದುಳಿದ ವರ್ಗದಡಿಯಲ್ಲಿ 10 ಪ್ರತಿಶತ ಮೀಸಲಾತಿ ನೀಡಿತ್ತಾದರೂ, ಆ ಸಮುದಾಯಕ್ಕೆ ಸಮಾಧಾನ ತಂದಿರಲಿಲ್ಲ. ಏಕೆಂದರೆ ಸಂವಿಧಾನದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಕ್ಕೆ ಇಂಥದ್ದೊಂದು ಮೀಸಲಾತಿ ಯೋಜನೆಯೇ ಇಲ್ಲವಾದ್ದರಿಂದ ಆಗಸ್ಟ್‌ 2016ರಲ್ಲಿ ಗುಜರಾತ್‌ ಹೈಕೋರ್ಟ್‌ ಪಾಟೀದಾರರ ಮೀಸಲಾತಿ ಕೋಟಾವನ್ನು ಬರ್ಖಾಸ್ತುಗೊಳಿಸಿತ್ತು.

ಗುಜರಾತ್‌ನ ಜನಸಂಖ್ಯೆಯಲ್ಲಿ 12.5 ಪ್ರತಿಶತದಷ್ಟಿರುವ ಪಾಟೀದಾರರದ್ದು ರಾಜಕೀಯ, ಶಿಕ್ಷಣ, ವ್ಯಾಪಾರ, ಉದ್ಯಮ ಮತ್ತು ಕೃಷಿಯಲ್ಲೂ ಸಹ ಪ್ರಾಬಲ್ಯ ಮೆರೆದಿರುವ ಜಾತಿ. ರಾಜಸ್ಥಾನದಲ್ಲಿ ಗುಜ್ಜರ್‌ಗಳು ಮತ್ತು ಹರ್ಯಾಣದಲ್ಲಿ ಜಾಟ್‌ಗಳು ನಡೆಸಿದ ಪ್ರತಿಭಟನೆಯಿಂದ ಸ್ಫೂರ್ತಿ ಪಡೆದಿದ್ದಾರೆ ಪಾಟೀದಾರರು. ಕೃಷಿ ಕ್ಷೇತ್ರದಲ್ಲಿನ ಬಿಕ್ಕಟ್ಟು ಇವರನ್ನು ಹೋರಾಟದ ಹಾದಿಗೆ ಇಳಿಸಿತು. ಪಾಟೀದಾರರು 1930ರ ದಶಕದಲ್ಲಿ ಸರ್ದಾರ್‌ ಪಟೇಲ್‌ ನೇತೃತ್ವದ “ಬಡೋìಲಿ ನೋ ಟ್ಯಾಕ್ಸ್‌ ಕ್ಯಾಂಪೇನ್‌’ನ ಬೆನ್ನೆಲುಬಾಗಿದ್ದವರು. 

ಆದಾಗ್ಯೂ ಕಿರಿದಾದ ಬಹುಮತದ ಹೊರತಾಗಿಯೂ ಗುಜರಾತ್‌ನ ಮುಂದಿನ ಬಿಜೆಪಿ ಸರ್ಕಾರಕ್ಕೆ ಅಸ್ತಿತ್ವದ ಸಮಸ್ಯೆ ಎದುರಾಗುವುದಿಲ್ಲ. ಏಕೆಂದರೆ ಕೇಂದ್ರದಲ್ಲಿ ಇದೇ ಪಕ್ಷವೇ ಅಧಿಕಾರದಲ್ಲಿದೆ ಮತ್ತು ಪûಾಂತರ ವಿರೋಧಿ ಕಾನೂನು ಅಸ್ತಿತ್ವದಲ್ಲಿದೆ. ಹೀಗಾಗಿ ಗುಜರಾತ್‌ನಲ್ಲಿ “ಆಪರೇಷನ್‌ ಕಮಲ’ದ ಅಗತ್ಯ ಎದುರಾಗಲಿಕ್ಕಿಲ್ಲ. 

ಬಿಜೆಪಿ ಅದಾಗಲೇ ಗುಜರಾತ್‌ ಚುನಾವಣಾ ಪ್ರಚಾರದಿಂದ ಅನೇಕ ಪಾಠಗಳನ್ನು ಕಲಿತಿರಬಹುದು. ಪ್ರಚಾರದ ಆರಂಭದಲ್ಲಿ ನರೇಂದ್ರ ಮೋದಿಯವರ ವರ್ಚಸ್ಸು ಮತ್ತು ಅವರ ವಿಕಾಸದ ಮಾತುಗಳಿಗೆ, ಕಚ್ಚಾ ಜಾತೀಯತೆ ಮತ್ತು ರಾಹುಲ್‌ ಗಾಂಧಿಯವರ ಧರ್ಮ ಓಲೈಕೆಯ ಪ್ರವಾಹವನ್ನು ಎದುರಾಯಿತು. 

ರಾಜ್ಯದ ಸೌರಾಷ್ಟ್ರ ಪ್ರದೇಶವಂತೂ ಸ್ಪಷ್ಟವಾಗಿ ಕಾಂಗ್ರೆಸ್‌ಗೆ ಮತ ನೀಡಿದೆ. ಆದಾಗ್ಯೂ ಈಗ ಬಿಜೆಪಿ ಗುಜರಾತ್‌ನಲ್ಲಿ ಗೆಲುವು ಸಾಧಿಸಿದೆ ಯಾದರೂ, ಮೋದಿಯವರು ಪ್ರಧಾನಿಯಾಗಿ ತಮ್ಮ ಕಾರ್ಯಶೈಲಿಯನ್ನು ಬದಲಿಸಿಕೊಳ್ಳ ಬೇಕಿದೆ. ಅವರು ಸರ್ಕಾರದಲ್ಲಿನ ತಮ್ಮ “ಕೇಂದ್ರೀಕೃತ’ ಅಧಿಕಾರವನ್ನು ತ್ಯಜಿಸಬೇಕಿದೆ ಮತ್ತು ಹಿರಿಯ ಸಹೋದ್ಯೋಗಿಗಳನ್ನು, ಜೊತೆಗೆ ಪಕ್ಷದ ಮಾರ್ಗದರ್ಶಕರಾದ ಎಲ್‌.ಕೆ. ಆಡ್ವಾಣಿ ಮತ್ತು ಡಾ. ಮುರಳಿಮನೋಹರ ಜೋಷಿಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕಿದೆ. ನೋಟ್‌ಬಂದಿ, ಜಿಎಸ್‌ಟಿಯಂಥ ಏಕಪಕ್ಷೀಯ ನಿರ್ಧಾರಗಳಿಂದ ಅವರು ದೂರ ಉಳಿಯಬೇಕು ಮತ್ತು ಸುಷ್ಮಾ ಸ್ವರಾಜ್‌ರನ್ನು ಹಿಂದೆ ತಳ್ಳಿ ಜವಾಹರಲಾಲ್‌ ನೆಹರೂರಂತೆ ವಿದೇಶಾಂಗ ಸಚಿವಾಲಯವನ್ನು ತಾವೇ ನಡೆಸುವುದನ್ನು ನಿಲ್ಲಿಸಬೇಕು. 

ಇತ್ತ ಕಾಂಗ್ರೆಸ್‌ ತನ್ನ ಸಾಂಪ್ರದಾಯಿಕ ಮತಗಳಾದ ಕ್ಷತ್ರಿಯರು, ಹರಿಜನರು, ಆದಿವಾಸಿಗಳು ಮತ್ತು ಮುಸಲ್ಮಾನರನ್ನು (ಕೆಎಚ್‌ಎಎಮ್‌) ಕಡೆಗಣಿಸಿ, ಪಾಟೀದಾರ್‌ ಕಾರ್ಡನ್ನೇ ಅತಿಯಾಗಿ ಬಳಸಿ ತಪ್ಪುಮಾಡಿತು. 1985ರಲ್ಲಿ ಕಾಂಗ್ರೆಸ್‌ ನಾಯಕ, ಮುಖ್ಯಮಂತ್ರಿ ಮಾಧವಸಿಂಹ ಸೋಲಂಕಿ ಈ ನಾಲ್ಕು ಗುಂಪುಗಳನ್ನು ಒಗ್ಗೂಡಿಸಿ ದಾಖಲೆಯ 149 ಸ್ಥಾನಗಳನ್ನು ಗೆದ್ದಿದ್ದರು.

ಗುಜರಾತ್‌ನ ಈ ಜಾತಿ ಸಮೀಕರಣ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಯೋಜಿತ ಅಹಿಂದ ಗುಂಪಿಗಿಂತ ಭಿನ್ನವಾಗೇನೂ ಇರಲಿಲ್ಲ. ಕಾಂಗ್ರೆಸ್‌ ಈಗ ದಕ್ಷಿಣ ಗುಜರಾತ್‌ನ ಬುಡಕಟ್ಟು ಪ್ರದೇಶಗಳಲ್ಲೂ ಕಳಪೆ ಪ್ರದರ್ಶನ ನೀಡಿದೆ.

ಗುಜರಾತ್‌ನಲ್ಲಿ ಪರಿಶಿಷ್ಟ ಜಾತಿಗಳಿಗಿಂತ ಪರಿಶಿಷ್ಟ ಪಂಗಡಗಳ ಮತ ಪ್ರಮುಖವಾಗಿದೆ. ಗುಜರಾತ್‌ ಎಂದರೆ ಕೇವಲ “ಪಟೇಲರು, ಶಾಗಳು ಮತ್ತು ದೇಸಾಯಿ’ಗಳಲ್ಲ. ಈಗ ರಾಜ್ಯದ ಭಾಗವಾಗಿರುವ ಅನೇಕ ಪ್ರದೇಶಗಳು ಹಿಂದೆ ಕ್ಷತ್ರೀಯರ ರಾಜಾಡಳಿತ ಪ್ರದೇಶಗಳಾಗಿದ್ದವು. ಬರೋಡಾಕ್ಕೆ ಮರಾಠಾ ಮಹಾರಾಜನಿದ್ದ(ಗಾಯಕ್‌ವಾಡ್‌).

ಇನ್ನು ಗುಜರಾತ್‌ ಚುನಾವಣೆಯ ಅಬ್ಬರದಲ್ಲಿ ಹಿನ್ನೆಲೆಗೆ ಸರಿದ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಲೋಲಕವು ಬಿಜೆಪಿಯತ್ತ ವಾಲಿದೆ. 1983ರಿಂದಲೂ ಆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಕಾಂಗ್ರೆಸ್‌ನ ವೀರಭದ್ರ ಸಿಂಗ್‌ ಮತ್ತು ಬಿಜೆಪಿಯ ಪ್ರೇಮಕುಮಾರ್‌ ಧುಮಲ್‌ ನಡುವೆ ಬದಲಾಗುತ್ತಾ ಬಂದಿದೆ. ಇಲ್ಲಿ ಪರಿಗಣಿಸಲೇಬೇಕಾದ ಮತ್ತೂಬ್ಬರೆಂದರೆ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಶಾಂತಾ ಕುಮಾರ್‌. 

ಗುಜರಾತ್‌ ಫ‌ಲಿತಾಂಶ ಮುಂಬರಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟುಮಾ ಡಲಿದೆ ಎನ್ನುವ ಬಗ್ಗೆ ಈಗಾಗಲೇ ಚರ್ಚೆಗಳು ನಡೆದಿವೆ. ಅತ್ತ ಗುಜರಾತ್‌ನಲ್ಲಿ ಪಾಟೀದಾರ ಹೋರಾಟ ಬಿಜೆಪಿಯ ಮೇಲೆ ಪರಿಣಾಮ ಬೀರಿದೆ ಎನ್ನುವುದಾದರೆ, ಇತ್ತ ರಾಜ್ಯದಲ್ಲಿ ವೀರಶೈವ-ಲಿಂಗಾಯತ ಭಿನ್ನಾಭಿಪ್ರಾ ಯವನ್ನು, ಅದರಲ್ಲೂ ಪತ್ಯೇಕ ಅಲ್ಪಸಂಖ್ಯಾತ ಸ್ಥಾನಮಾನ ವನ್ನು ಬಯಸುತ್ತಿರುವ ಲಿಂಗಾಯತರ ಬೇಡಿಕೆಯನ್ನು ಅದು ತಳ್ಳಿಹಾಕುವಂತಿಲ್ಲ.

ಟಾಪ್ ನ್ಯೂಸ್

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.