ಬಾಲ್ಯದಲ್ಲೇ ಓದುವ ತುಡಿತ
ಓದುಗರ ಭಾವನಾತ್ಮಕ ಸಂಬಂಧ ತಿಳಿಸುವ ಪತ್ರಗಳ ಸರಣಿ
Team Udayavani, Jan 17, 2020, 6:08 AM IST
ನನಗೆ ಪತ್ರಿಕೆ ಎಂದರೆ ನೆನಪಾಗುವುದೇ ಉದಯವಾಣಿ. ಶಾಲಾ ದಿನಗಳಲ್ಲಿ ಪತ್ರಿಕೆ ನೋಡಿದಿದ್ದರೆ ಅದು ಉದಯವಾಣಿ. ಆ ಸಮ ಯದಲ್ಲಿ ಕಾರ್ಕಳದ ನಮ್ಮ ಮನೆಯ ಅಕ್ಕಪಕ್ಕ ಯಾರೂ ದುಡ್ಡು ಕೊಟ್ಟು ಪ್ರತಿದಿನ ಪತ್ರಿಕೆ ತರಿಸು ವವರು ಯಾರೂ ಇರಲಿಲ್ಲ. ನಮ್ಮ ಮನೆ ಆರ್ಥಿಕ ಪರಿಸ್ಥಿತಿ ಕೂಡ ಇದಕ್ಕೆ ಹೊರತಾಗಿರಲಿಲ್ಲ. ನನಗೆ ಮಾತ್ರ ತುಂಬಾನೇ ಓದುವ ಹುಚ್ಚು.
ಆಂದೆಲ್ಲಾ ಶಾಲೆಗೆ ನಡೆದೇ ಹೋಗುವ ಅನಿವಾರ್ಯತೆ. ಹಾಗೆ ಹೋಗುವ ದಾರಿಯಲ್ಲಿ ಇದ್ದದ್ದೇ ಬಾಬಣ್ಣನ ಕುಚ್ಚಿ ತೆಗೆಯುವ ಅಂಗಡಿ. ಹೌದು, ಬಾಬಣ್ಣ ಕ್ಷೌರಿಕರು ಮತ್ತು ಆ ಕಾಲಕ್ಕೇ ಅವರೊಬ್ಬರದ್ದೇ ಅಂಗಡಿ ಇದ್ದದ್ದು. ಅವರು ಪ್ರತಿದಿನ ಉದಯವಾಣಿ ತರಿಸುತ್ತಿದ್ದರು. ನಾನು ಪ್ರತಿದಿನ ಓದಲು ಹೋಗತ್ತಿರಲ್ಲಿಲ್ಲ. ಆದರೆ ನನಗೆ ರವಿವಾರ ಮತ್ತು ಶುಕ್ರವಾರದ ಪುರವಣಿ ಓದುವ ವಿಶೇಷ ಅಕ್ಕರೆ ಇತ್ತು. ತಿಂಗಳಿಗೂಮ್ಮೆ ಅವರ ಅಂಗಡಿಗೆ ಹೋಗಿ ಶುಕ್ರವಾರ ಮತ್ತು ರವಿವಾ ರದ ಪತ್ರಿಕೆ ಆಯ್ದು ಮನೆಗೆ ತರುತ್ತಿದ್ದೆ. ಅವರೂ ಉದಾರ ಮನಸ್ಸಿನಿಂದ ನನಗೆ ಅದನ್ನು ಉಚಿತವಾಗಿ ಕೊಡುತ್ತಿದ್ದರು. ಅಂದೆಲ್ಲಾ ಪ್ಲಾಸ್ಟಿಕ್ ಚೀಲ ಇರಲಿಲ್ಲ. ಅಂಗಡಿಗಳಲ್ಲಿ ಸಾಮಗ್ರಿಗಳನ್ನು ಕಟ್ಟಿ ಕಟ್ಟಿ ಕೊಡುತ್ತಿದ್ದುದೇ ಕಾಗದದಲ್ಲಿ. ಅಂದು ರದ್ದಿ ಪತ್ರಿಕೆಗೂ ಬೇಡಿಕೆಯಿದ್ದ ಕಾಲ.
ಅದರಲ್ಲಿನ ಕತೆ, ಲೇಖನ ಎರಡೆರಡು ಬಾರಿ ಓದಿ, ಅದರಲ್ಲಿದ್ದ ಸುಂದರ ಚಿತ್ರಗಳು ಕತ್ತರಿಸ ಲ್ಪಟ್ಟು ನನ್ನ ಚಿತ್ರ ಸಂಗ್ರಹಕ್ಕೆ ಹೋಗುತ್ತಿತ್ತು. ಮತ್ತೆ ಉಳಿದ ಪತ್ರಿಕೆ ಶಾಲಾ ಪುಸ್ತಕಕ್ಕೆ ಬೈಂಡ್ ಆಗತ್ತಿತ್ತು. ನನ್ನ ಓದುವ ಹವ್ಯಾಸಈ ರೀತಿ ಪರೋಕ್ಷವಾಗಿ ನೆರವಾದ ಬಾಬಣ್ಣನ್ನಿಗೆ ನನ್ನ ಹೃದಯಪೂರ್ವಕ ಧನ್ಯವಾದ. ಮುಂದೆ ದುಡಿಯಲು ತೊಡಗಿ ಪತ್ರಿಕೆ ಕೊಳ್ಳುವ ಸಾಮರ್ಥ್ಯವಿದ್ದಾಗಲೂ ನಾನಿದ್ದ ಪ್ರದೇಶದಲ್ಲಿ ಕನ್ನಡ ಪತ್ರಿಕೆಗಳೇ ಸಿಗುತ್ತಿರಲಿಲ್ಲ. ತುಂಬಾ ಮರು ಕಪಟ್ಟಿದ್ದೆ. ಅಲ್ಲಿ ಆಂಗ್ಲ ಪತ್ರಿಕೆ ಓದುತ್ತಿದ್ದರೂ ನಮ್ಮ ಕನ್ನಡ ಪತ್ರಿಕೆ ಓದಿದಂತೆ ಆಗುತ್ತಿರಲಿಲ್ಲ. ಈಗ ಪುನಃ ಕೆಲವು ವರ್ಷಗಳಿಂದ ಕಾರ್ಕಳದ ಲ್ಲಿದ್ದೇನೆ. ಈಗ ಪ್ರತಿದಿನ ಓದುತ್ತೇನೆ. ಈಗಲೂ ನನಗೆ ಶುಕ್ರ ವಾರ ಮತ್ತು ರವಿವಾರದ ವಿಶೇಷ ಪುರವಣಿ ಗಳೆಂದರೆ ಅಚ್ಚುಮೆಚ್ಚು. ಜತೆಗೆ ಉದಯವಾಣಿ ಓದಿದಂತೆ ಬೇರೆ ಪತ್ರಿಕೆ ಓದಿದರೂ ಆಗುವುದಿಲ್ಲ.
1970ರ ಸಂಚಿಕೆ ಈಗಲೂ ಇದೆ
1970ರ ದಶಕದಲ್ಲಿ ಪ್ರಾರಂಭಗೊಂಡ “ಉದಯವಾಣಿ’ಯನ್ನು ಮೀರಿಸುವ ಕನ್ನಡ ದಿನಪತ್ರಿಕೆ ಮತ್ತೂಂದಿಲ್ಲ. ಆಗ ನಾವು ಸುಳ್ಯದ ಲ್ಲಿದ್ದೆವು, 1970ರ ಜನವರಿ 1ರಂದು ನಮ್ಮ ಕೈಗೆ ಮೊದಲ ಸಂಚಿಕೆ ಸೇರಿತ್ತು. ಅದೂ 10 ಪೈಸೆಗೆ. ಆಗಿನ ಪತ್ರಿಕೆ ಈಗಲೂ ನನ್ನ ಬಳಿ ಇದೆ. ಮೊನ್ನೆ 50ರ ಸಂಭ್ರಮಾಚರಣೆ ವೇಳೆ ಹಳೆಯ ಪತ್ರಿಕೆ ಯನ್ನು ನೋಡಿ ಖುಷಿಯಾಯಿತು. ಅಂದಿ ನಿಂದ ಇಂದಿನ ವರೆಗೆ ಉದಯ ವಾಣಿಯೇ ನಮ್ಮ ನೆಚ್ಚಿನ ಪತ್ರಿಕೆಯಾಗಿದೆ. ಯಾಕೆಂದರೆ ಉದಯವಾಣಿಯ ಮುದ್ರಣವೇ ಸೂಪರ್.
ಸುದ್ದಿಗಳನ್ನು ಆಧರಿಸಿ ಅದಕ್ಕೆ ಪುಟ ನೀಡಲಾಗುತ್ತಿದ್ದು, ನಾನು ಮೆಚ್ಚಿಕೊಂಡ ಹಲವು ಅಂಶಗಳಲ್ಲಿ ಒಂದು. ಕ್ರೀಡೆ, ರಾಜ್ಯ, ಸಂಪಾದಕೀಯ, ದೇಶ-ವಿದೇಶ, ಅಪರಾಧ, ಕರಾವಳಿ ಹೀಗೆ ಪ್ರತಿ ಸುದ್ದಿಗಳಿಗೂ ಸರಿಯಾದ ನ್ಯಾಯವನ್ನು ಒದಗಿಸಿದ್ದೀರಿ. ಇಷ್ಟೊಂದು ಸುಲಭವಾಗಿ ಸುದ್ದಿಯನ್ನು ವಿಭಾಗಿಸಿದ್ದು ಉದಯವಾಣಿಯಲ್ಲಿ ಮಾತ್ರ. ಕಲಾವಿಹಾರ, ಸಾಪ್ತಾಹಿಕ, ಸುದಿನ ಎಲ್ಲವೂ ಚೆನ್ನಾಗಿ ಮೂಡಿ ಬರುತ್ತಿದೆ. ಬೆಳಗ್ಗಿನ ಜಾವ ಉದಯವಾಣಿ ಯನ್ನು ಓದುವುದು ಒಂದು ಖುಷಿಯ ವಿಚಾ ರವಾಗಿದೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ನಾನು ಉದಯವಾಣಿ ಬರುವಿಕೆಗಾಗಿ ಕಾಯು ತ್ತಿರುತ್ತೇನೆ. ಸುವರ್ಣ ಸಂಭ್ರಮಾಚರಣೆಯಲ್ಲಿ ರುವ ನೆಚ್ಚಿನ ಪತ್ರಿಕೆಗೆ ನನ್ನ ಅಭಿನಂದನೆಗಳು.
ಕೆ. ಹರೀಶ್ ಕುಮಾರ್, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Story Of Generations: ಪೀಳಿಗೆಗಳ ವೃತ್ತಾಂತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.