ಬೆಳಕು ಹರಿಯಿತು, ತೆರೆ ಸರಿಯಿತು
ಯಂತ್ರ ಲೋಕದಲ್ಲಿ ಕಣ್ಣಿನ ಮಸೂರ
Team Udayavani, Apr 3, 2022, 11:50 AM IST
ಇಂದು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳಾಗಿವೆ. ಹೀಗಾಗಿ ಕಣ್ಣುಗಳಿಗೆ ಆವರಿಸುವ ಪೊರೆಯನ್ನು ತೆಗೆದು ದೃಷ್ಟಿ ದೋಷವನ್ನು ನಿವಾರಿಸುವುದು ಅತ್ಯಂತ ಸುಲಭ. ಆದರೂ ಈ ಬಗ್ಗೆ ಆತಂಕ ಸಾಮಾನ್ಯ. ಕಣ್ಣಿನ ಪೊರೆಯಿಂದ ಪೀಡಿತವಾದ ಕಣ್ಣಿನ ಮಸೂರಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಅಲ್ಲಿ ಹೊಸ ಕೃತಕ ಮಸೂರಗಳನ್ನು ಜೋಡಿಸುವುದು ಈ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಯಾಗಿದೆ.
ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಧಾನಗಳಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ವಿಶ್ವದಾದ್ಯಂತ ಪ್ರತಿ ವರ್ಷ 9.5 ದಶ ಲಕ್ಷಕ್ಕೂ ಹೆಚ್ಚು ಮಂದಿಗೆ ನಡೆಸಲಾಗುತ್ತದೆ. ಭಾರತದಲ್ಲಿ 60 ವರ್ಷ ಮೇಲ್ಪಟ್ಟವರಲ್ಲಿ ಸುಮಾರು ಶೇ.74ರಷ್ಟು ಮಂದಿಗೆ ಕಣ್ಣಿನ ಪೊರೆ ಸಮಸ್ಯೆ ಅಥವಾ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುತ್ತಾರೆ. ಕಣ್ಣಿನ ಪೊರೆಯ ಸಮಸ್ಯೆ ಹೆಚ್ಚಾಗಿ ಮಹಿಳೆಯರನ್ನೇ ಬಾಧಿಸುತ್ತಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯು ಮೂರು ಹಂತಗಳನ್ನು ಹೊಂದಿರುತ್ತದೆ. ಮೊದಲನೆಯದ್ದು ರೆಟಿನಾ(ಅಕ್ಷಿಪಟ)ದ ಒಂದು ಸಣ್ಣ ಛೇದನ (3.0 ಮಿಮೀ), ಎರಡನೆಯದ್ದು ಶಬ್ಧ ವೇಗೋತ್ತರದಲ್ಲಿ (ಅಲ್ಟ್ರಾಸೋನಿಕ್ ವೇಗದಲ್ಲಿ) ಓಡುವ ರಂಧ್ರ ಕೊರೆಯುವ ಯಂತ್ರವನ್ನು ಉಪಯೋಗಿಸಿ ಕಣ್ಣಿನ ಅಪಾರದರ್ಶಕ ಪೊರೆಯನ್ನು ತೆಗೆದುಹಾಕುವುದು ಮತ್ತು ಮೂರನೆಯದ್ದು ಪೊರೆ ಹೊಂದಿರುವ ಕಣ್ಣಿನ ಮಸೂರವನ್ನು ಪುಡಿ ಮಾಡಿ ಹೊರತೆಗೆದು, ಶಾಶ್ವತವಾಗಿ ಕೃತಕ ಮಸೂರವನ್ನು ಹಾಕುವುದು.
ಈ ಚಿಕಿತ್ಸೆ ವೇಳೆ ರೋಗಿ ಎಚ್ಚರವಾಗಿರುತ್ತಾನೆ. ಕಣ್ಣುಗಳನ್ನಷ್ಟೇ ನಿಶ್ಚೇಷ್ಟಿತಗೊಳಿಸಲಾಗುತ್ತದೆ. ಹೀಗಾಗಿ ನೋವಿನ ಅನುಭವವಾಗುವುದಿಲ್ಲ. ಶಸ್ತ್ರ ಚಿಕಿತ್ಸೆ ಸಾಮಾನ್ಯವಾಗಿ ಒಂದು ಗಂಟೆಯೊಳಗೆ ನಡೆಯುತ್ತದೆ. ಶಸ್ತ್ರವೈದ್ಯರು ಕಣ್ಣಿನ ಮುಂಭಾಗದಲ್ಲಿ ಸಣ್ಣ ಕಡಿತ ಮಾಡಿ ಲೇಸರ್ ಸಹಾಯದಿಂದ ಪೊರೆಯನ್ನು ಒಡೆಯಲು ಸಣ್ಣ ಉಪಕರಣವನ್ನು ಹಾಕಲಾಗುತ್ತದೆ. ಬಳಿಕ ಪ್ಲಾಸ್ಟಿಕ್, ಸಿಲಿಕಾನ್ ಅಥವಾ ಏಕ್ರಿಲಿಕ್‌ನಿಂದ ಮಾಡಿದ ಹೊಸ ಕೃತಕ ಮಸೂರವನ್ನು ಹಾಕಿ ಕಡಿದ ರಂಧ್ರವನ್ನು ಮುಚ್ಚಲಾಗುವುದು.
ಈ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಉಳಿಯಬೇಕಾಗಿಲ್ಲ. ರೋಗಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಲು ಯಾರಾದರೂ ಜತೆ ಬರಬೇಕಾಗುತ್ತದೆ. ಎರಡೂ ಕಣ್ಣುಗಳಲ್ಲಿ ಪೊರೆ ಇದ್ದರೆ ಎರಡು ವಾರಗಳ ಅಂತರದಲ್ಲಿ ಪ್ರತ್ಯೇಕ ಶಸ್ತ್ರ ಚಿಕಿತ್ಸೆಗಳನ್ನು ಮಾಡಬೇಕಾಗುತ್ತದೆ. ಇದರಿಂದ ಮೊದಲ ಕಣ್ಣಿನ ಆರೋಗ್ಯ ಸುಧಾರಿಸಲು ಅವಕಾಶ ನೀಡಲಾಗುತ್ತದೆ. ಈ ಶಸ್ತ್ರ ಚಿಕಿತ್ಸೆಯಿಂದ ಅಡ್ಡ ಪರಿಣಾಮಗಳು ಅಪರೂಪ. ಆದರೂ ಕಣ್ಣಿನ ಸೋಂಕು ಅಥವಾ ಊತ, ರಕ್ತಸ್ರಾವ, ರೆಟಿನಾದ ಬೇರ್ಪಡುವಿಕೆ (ಬೆಳಕನ್ನು ಗ್ರಹಿಸುವ ಕಣ್ಣಿನ ಹಿಂಭಾಗದಲ್ಲಿರುವ ಅಂಗಾಂಶದ ಪದರ ಒಡೆಯುವುದು), ಶಸ್ತ್ರ ಚಿಕಿತ್ಸೆಯ 12-24 ಗಂಟೆಗಳ ಅನಂತರ ಕಣ್ಣಿನ ಒತ್ತಡದಲ್ಲಿ ತಾತ್ಕಾಲಿಕ ಏರಿಕೆ ಉಂಟಾಗುವ ಸಾಧ್ಯತೆಗಳಿರುತ್ತವೆ.
ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯ ಅನಂತರ ರೋಗಿಗಳಿಗೆ ಸಮೀಪದ ದೃಷ್ಟಿಗೆ ಕನ್ನಡಕದ ಅಗತ್ಯವಿರುತ್ತದೆ. ಸಾಂಪ್ರದಾಯಿಕ ಕೃತಕ ಇಂಟ್ರಾಓಕ್ಯುಲರ್ ಮಸೂರಗಳು ಈಗ ಸಾಮಾನ್ಯವಾಗಿ ಅಕ್ರಿಲಿಕ್ ಪಾಲಿಮರ್‌ಗಳಿಂದ ಮಾಡಲ್ಪಡುತ್ತಿವೆ. ಆದರೂ ಮನುಷ್ಯರ ಮಸೂರಗಳಂತೆ ವಿಭಿನ್ನ ದೂರದಲ್ಲಿ ಸ್ಪಷ್ಟ ದೃಷ್ಟಿಗೆ ಅನುವು ಮಾಡಿಕೊಡಲು ಆಕಾರವನ್ನು ಬದಲಾಯಿಸಲು ಇವುಗಳಿಗೆ ಸಾಧ್ಯವಾಗಿಲ್ಲ. ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಅನಂತರ ದೃಷ್ಟಿಯು ಸಹಜ ಸ್ಥಿತಿಗೆ ಬರಲು ಹಲವು ವಾರಗಳು ಬೇಕಾಗುತ್ತವೆ. ಈ ಅವಧಿಯಲ್ಲಿ ಕಣ್ಣಿನಿಂದ ನಿರ್ದಿಷ್ಟ ದೂರದಲ್ಲಿ ಸ್ಪಷ್ಟವಾದ ಚಿತ್ರವನ್ನು ಆಯ್ಕೆ ಮಾಡಲು ಮತ್ತು ಇನ್ನೊಂದು ಕಣ್ಣಿನಿಂದ ಚಿತ್ರವನ್ನು ದೂರವಾಗಿಸಲು ಮೆದುಳು ಕಲಿಯುತ್ತದೆ.
ಇತಿಹಾಸ: ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಕ್ರಿಸ್ತ ಪೂರ್ವ 600 ರಿಂದ 800ರಲ್ಲಿ ಸುಶ್ರುತ ಎಂಬಾತ ಮಾಡಿದ್ದನು ಎನ್ನಲಾಗುತ್ತದೆ. ಅವನು ಕಣ್ಣಿನ ಪೊರೆಯ ಚಿಕಿತ್ಸೆಯನ್ನು ಮಾಡಿ, ಅದರ ಬಗ್ಗೆ ಬರೆದಿದ್ದಾನೆ ಎಂದು ಪ್ರಾಚೀನ ಭಾರತೀಯ ಶಾಸ್ತ್ರದಲ್ಲಿನ ನೇತ್ರ ಸಾಹಿತ್ಯವು ಹೇಳುತ್ತದೆ.
ನೇತ್ರ ವಿಜ್ಞಾನಿ, ಜೂಲಿಯಸ್ ಹಿರ್ಶ್ ಬರ್ಗ್ ಪ್ರಕಾರ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಯಾರು ಮೊದಲು ನಡೆಸಿದ್ದಾರೆ ಎಂಬುದನ್ನು ಇಲ್ಲಿಯವರೆಗೆ ಖಚಿತಪಡಿಸಲು ಸಾಧ್ಯವಾಗಿಲ್ಲ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯು ಒಂದೇ ಸ್ಥಳದಲ್ಲಿ ಪ್ರಾರಂಭವಾಯಿತು ಮತ್ತು ಪ್ರಪಂಚದಾದ್ಯಂತ ಹರಡಿತು ಎನ್ನುವುದಕ್ಕಿಂತ ಇದು ಸ್ವತಂತ್ರವಾಗಿ ಅನೇಕ ಬಾರಿ ಮತ್ತು ಅನೇಕ ಸ್ಥಳಗಳಲ್ಲಿ ನಡೆದಿದೆ ಎನ್ನಲಾಗುತ್ತದೆ.
ಕಣ್ಣಿನ ಮಸೂರ ಒಂದು ಯಾಂತ್ರಿಕ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಮಸೂರವು ಕಂಪಿಸುವ ದ್ರವ್ಯರಾಶಿಯಾದರೆ ಅದನ್ನು ಆಧರಿಸುವ ಸಣ್ಣ ಸ್ನಾಯುಗಳು ವ್ಯವಸ್ಥೆಯ ಬಿಗಿತವನ್ನು ನಿರ್ಧರಿಸುತ್ತವೆ ಮತ್ತು ಜತೆಯಲ್ಲಿ ಕಂಪಿಸುವ ಜೈವಿಕ ಕಂಪನ ವ್ಯವಸ್ಥೆಯಾಗುತ್ತದೆ. ಈ ವ್ಯವಸ್ಥೆಯ ವಿಶ್ಲೇಷಣೆಯಿಂದ ಇದರ ಗುಣಗಳನ್ನು ತಿಳಿಯಬಹುದು.
-ರಾಮ ಭಟ್, ಕೆನಡಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.