ಭಲೇ ಭಗವದ್ಗೀತೆ
Team Udayavani, Nov 17, 2018, 2:38 AM IST
ಪಾಕಿಸ್ತಾನಿ ಪ್ರಜೆ ಜಲಾಲುದ್ದೀನ್ ಭಾರತೀಯರಿಗಿತ್ತ ದೀಪಾವಳಿಯ ಉಡುಗೊರೆ ಅತ್ಯದ್ಭುತವಾಗಿದೆ. ಮೊದಲು ಭಗವದ್ಗೀತೆಯನ್ನು ತಿರಸ್ಕರಿಸುತ್ತಿದ್ದ ಸಹೋದರ ಜಲಾಲುದ್ದೀನ್ ಅನಂತರ ಕ್ರಮೇಣ ಗೀತೆಯೆಡೆ ಆಕರ್ಷಿತರಾದದ್ದು, ಗೀತೆ ಆತನ ಬದುಕನ್ನೇ ಬದಲಿಸಿದ್ದು ಒಂದು ರೋಚಕ ಸಂಗತಿ.
ನಾವು “ಧರ್ಮಗ್ರಂಥ’ ಎಂದು ನಂಬಿಕೊಂಡು ಬಂದಿರುವ ಭಗವದ್ಗೀತೆಗೆ ಸಮಾಜವನ್ನೇ ಪರಿವರ್ತಿಸುವ ಶಕ್ತಿ ಇದೆ. ಆದರೆ ಅದರ ಆಧ್ಯಾತ್ಮಿಕ ಮೌಲ್ಯಗಳು ಸಮಾಜದ ಮುಖ್ಯವಾಹಿನಿಯಲ್ಲಿ ಹರಿದು ಬಾರದಿರುವುದು ದುರದೃಷ್ಟ. ಕೇವಲ ಪೂಜೆಮಾಡಿ ಸಂತೃಪ್ತಿಗೊಳ್ಳುವವರು ಮತ್ತು ಭಗವದ್ಗೀತೆಯನ್ನು ಸಾರಾಸಗಟಾಗಿ ತಿರಸ್ಕರಿಸುವವರ ಮಧ್ಯೆ ಆ ಗ್ರಂಥದ ಮಹತ್ವ ಜನಸಾಮಾನ್ಯರಿಂದ ದೂರವಾಗಿಯೇ ಉಳಿದಿದೆ. ಭಾರತಕ್ಕೆ ಆಮದು ಆಧ್ಯಾತ್ಮದ ಅಗತ್ಯವಿಲ್ಲ. ಭಗವದ್ಗೀತೆಯ ತತ್ವ ಮತ್ತು ಸತ್ವ ಮನಸ್ಸು ಮನಸ್ಸುಗಳ ಒಳಗಿಳಿದರೆ ಇಡೀ ದೇಶವೇ ಬದಲಾಗಬಹುದು.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಡಿ.ವಿ.ಜಿ ಅವರ ಭಗವದ್ಗೀತೆ. ಹೆಚ್ಚಿನ ಧಾರ್ಮಿಕ ನಾಯಕರಿಗೆ ಭಗವದ್ಗೀತೆ ಮೋಕ್ಷಶಾಸ್ತ್ರವಾದರೆ ಡಿ.ವಿ.ಜಿ ಅವರಿಗೆ ಅದು ಜೀವನ ಧರ್ಮಯೋಗ. ಮತತ್ರಯ ವಿಚಾರಗಳನ್ನೂ ಅವರು ಆ ಗ್ರಂಥದಲ್ಲಿ ಪರಾಮರ್ಶಿಸಿದ್ದಾರೆ. ಆದರೆ ಇಡೀ ಕರ್ನಾಟಕದ ಪ್ರಜೆಗಳಿಗೆ ಆ ಗ್ರಂಥ ತಲುಪಲಿಲ್ಲವೆಂಬುದೇ ವಿಷಾದನೀಯ ವಿಚಾರ. ಸಂಸ್ಕೃತಿ ಇಲಾಖೆ ಆ ಪುಸ್ತಕ ಕಡಿಮೆ ಬೆಲೆಗೆ ಸಿಗುವಂತೆ ಮಾಡಿದೆ. ಅಷ್ಟೇ ಸಾಲದು ಅವರ “ಜೀವನಧರ್ಮಯೋಗ’ದ ಎರಡೆರಡು ಅಧ್ಯಾಯಗಳು ಕ್ರಮವಾಗಿ ಆರನೇ ತರಗತಿಯಿಂದ ಪದವಿಪೂರ್ವ ಶಿಕ್ಷಣದ ತನಕ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು. ವಿಜ್ಞಾನದ ವಿದ್ಯಾರ್ಥಿಗಳಿಗೆ ಅನಾವಶ್ಯಕವಾಗಿ ಕನ್ನಡದ ಇತರ ಪಾಠಗಳನ್ನು ತುರುಕುವುದಕ್ಕಿಂತ ಡಿ.ವಿ.ಜಿ ಅವರ ಜೀವನಧರ್ಮಯೋಗ ಮತ್ತು ಮಂಕುತಿಮ್ಮನ ಕಗ್ಗವನ್ನು ಓದಿಸಿ ಅರ್ಥ ಮಾಡಿಸಿದರೆ ಸಾಕು ಇಡೀ ಕರ್ನಾಟಕವೇ ಬದಲಾಗಬಹುದು.
ಭಾರತೀಯ ಆಡಳಿತ ಸೇವಾಧಿಕಾರಿಯಾಗಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡುವುದು ಅನಿವಾರ್ಯ. ಕಾರಣ ಆತನಿಗೆ ಆಡಳಿತಾತ್ಮಕವಾದ ಎಲ್ಲಾ ವಿಚಾರಗಳ ಪರಿಚಯಬೇಕಾಗುತ್ತದೆ. ಈ ನಿಯಮ ನಮ್ಮ ಧರ್ಮಬೋಧಕರಿಗೂ ಅನ್ವಯವಾಗಬೇಕು. ಅವರಿಗೆ ಎಲ್ಲಾ ಧರ್ಮಗಳ ವಿಷಯದಲ್ಲಿ ಅರಿವು ಇರುವುದನ್ನು ತಿಳಿಯಲು ಕಡ್ಡಾಯ ಪರೀಕ್ಷೆಯ ವ್ಯವಸ್ಥೆ ಮತ್ತು ಪದವಿ ಪ್ರಮಾಣಪತ್ರದ ವ್ಯವಸ್ಥೆಯಾಗಬೇಕು. ಧರ್ಮಬೋಧಕನು ಭಾರತದ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡದಿದ್ದರೆ ಮನಸ್ಸು-ಮನಸ್ಸುಗಳ ನಡುವಣ ಕಂದಕ ದೊಡ್ಡದಾಗುತ್ತಾ ಹೋಗಬಹುದು. ಏಕೆಂದರೆ ಆಧ್ಯಾತ್ಮ ಮನಸ್ಸಿಗೆ ಸಂಬಂಧಿಸಿದ ವಿಜ್ಞಾನ. ಮನಸ್ಸು ಸರಿ ಇದ್ದರೆ ಎಲ್ಲವೂ ಸರಿ ಇರುತ್ತದೆ. ಮನಸ್ಸೆಂದರೆ ಏನೆಂಬುದನ್ನು ತಿಳಿಯಲು ಮನಶಾÏಸ್ತ್ರಜ್ಞರೂ ಸಂಪೂರ್ಣ ಯಶಸ್ವಿಯಾಗಲಿಲ್ಲ. ಮನಸ್ಸನ್ನು ಪಳಗಿಸುವ ಶಕ್ತಿ ಆಧ್ಯಾತ್ಮಿಕತೆಗೆ ಮಾತ್ರ ಇದೆ. ಆ ಶಕ್ತಿ ಬೆಳಗಬೇಕು. ಆಗ ಮಾತ್ರ ಸಮಾಜದಲ್ಲಿ ಕೋಮು ಸಾಮರಸ್ಯ ಕಾಪಾಡಲು ಸಾಧ್ಯ. ಅರ್ಜುನನ ಮನಸ್ಸನ್ನು ಬದಲಿಸಿದ ಭಗವದ್ಗೀತೆ ಪಾಕಿಸ್ತಾನಿ ಪ್ರಜೆ ಜಲಾಲುದ್ದೀನ್‌ನ ಮನಸ್ಸನ್ನು ಬದಲಿಸಿತು. ಅದು ಇನ್ನಷ್ಟು ಜನರ ಮನಃಪರಿವರ್ತನೆ ಮಾಡಲಿ.
ತಾರಾನಾಥ ವರ್ಕಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.